ಭಾರತ-ವೆಸ್ಟ್‌ ಇಂಡೀಸ್ ಇಂದಿನ ಐದನೇ ಟಿ20 ಮ್ಯಾಚ್ ಫ್ರೀ ಆಗಿ ವೀಕ್ಷಿಸೋದು ಹೇಗೆ? ಬೆಂಗಳೂರು ಮ್ಯಾಚ್ ಎಷ್ಟು ಗಂಟೆಯಿಂದ ಆರಂಭ?

Published : Oct 17, 2026, 12:59 PM IST
Team India vs West Indies

ಸಾರಾಂಶ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಿರ್ಣಾಯಕ 5ನೇ ಟಿ20 ಪಂದ್ಯ ನಡೆಯಲಿದೆ. ಸರಣಿಯಲ್ಲಿ ಎರಡೂ ತಂಡಗಳು ತಲಾ 2 ಪಂದ್ಯ ಗೆದ್ದಿದ್ದು, ಇಂದಿನ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್ ಮತ್ತು ಡಿಡಿ ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದು.

ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದನೇ ಹಾಗೂ ನಿರ್ಣಾಯಕ ಟಿ20 ಪಂದ್ಯವು ಇಂದು ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಎರಡೂ ತಂಡಗಳು ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದು, ಮೊದಲ 4 ಪಂದ್ಯಗಳು ಅಂತ್ಯದ ವೇಳೆಗೆ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಜಯಿಸಿವೆ. ಹೀಗಾಗಿ ಐದನೇ ಪಂದ್ಯವನ್ನು ಜಯಿಸುವ ತಂಡವು ಟಿ20 ಸರಣಿ ಗೆದ್ದು ಬೀಗಲಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಕಣ್ಣು ನೆಟ್ಟಿದೆ. ಬನ್ನಿ ನಾವಿಂದು ಈ ಹೈವೋಲ್ಟೇಜ್ ಪಂದ್ಯವು ಎಷ್ಟು ಗಂಟೆಗೆ ಆರಂಭವಾಗಲಿದೆ. ಎಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದು ಹಾಗೂ ಉಚಿತವಾಗಿ ಯಾವ ಚಾನೆಲ್‌ನಲ್ಲಿ ವೀಕ್ಷಿಸಬಹುದು ಎನ್ನುವುದನ್ನು ನೋಡೋಣ.

ಭಾರತ-ವೆಸ್ಟ್ ಇಂಡೀಸ್ ನಡುವಿನ ಐದನೇ ಟಿ20 ಪಂದ್ಯ ಎಷ್ಟು ಗಂಟೆಯಿಂದ ಆರಂಭ?

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದನೇ ಹಾಗೂ ನಿರ್ಣಾಯಕ ಟಿ20 ಪಂದ್ಯವು ಬೆಂಗಳೂರಿನಲ್ಲಿಂದು ಸಂಜೆ 7 ಗಂಟೆಗೆ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಇದಕ್ಕೂ ಮೊದಲು ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಇಂದು ಸಂಜೆ 6.30ಕ್ಕೆ ಟಾಸ್ ಪ್ರಕ್ರಿಯೆ ಪೂರೈಸಲು ಮೈದಾನಕ್ಕಿಳಿಯಲಿದ್ದಾರೆ.

ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಟಿವಿ ಚಾನೆಲ್ ಪಡೆದುಕೊಂಡಿದೆ. ಹೀಗಾಗಿ ಸ್ಟಾರ್ ಸ್ಪೋರ್ಟ್ ಟಿವಿ ಚಾನೆಲ್‌ನಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಮ್ಯಾಚ್ ವೀಕ್ಷಿಸಬಹುದು. ಇನ್ನು ಜಿಯೋ ಹಾಟ್‌ಸ್ಟಾರ್ ಮೂಲಕವೂ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನ ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ಆದರೆ ಇದನ್ನು ವೀಕ್ಷಿಸಲು ನೀವು ಸಬ್‌ಸ್ಕ್ರಿಪ್ಷನ್ ಪಡೆದುಕೊಂಡಿರಬೇಕು.

ಉಚಿತವಾಗಿ ಭಾರತ-ವೆಸ್ಟ್ ಇಂಡೀಸ್ ಮ್ಯಾಚ್ ವೀಕ್ಷಿಸೋದು ಹೇಗೆ?

ಇನ್ನು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದನೇ ಟಿ20 ಪಂದ್ಯವನ್ನು ಯಾವುದೇ ಖರ್ಚಿಲ್ಲದೇ ಉಚಿತವಾಗಿಯೂ ವೀಕ್ಷಿಸಬಹುದು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಫ್ರೀ ಡಿಷ್ ಡಿಟಿಎಚ್ ಹೊಂದಿರುವವರು ಡಿಡಿ ಸ್ಪೋರ್ಟ್ಸ್ ಚಾನೆಲ್ ಮೂಲಕ ಉಚಿತವಾಗಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದನೇ ಟಿ20 ಮ್ಯಾಚ್ ವೀಕ್ಷಿಸಬಹುದು.

ಇಲ್ಲಿವರೆಗಿನ ಭಾರತ-ವೆಸ್ಟ್ ಇಂಡೀಸ್ ಟಿ20 ಸರಣಿಯ ಫಲಿತಾಂಶ ಹೀಗಿದೆ:

1. ಲಖನೌದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 8 ವಿಕೆಟ್‌ಗಳ ಜಯ

2. ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ಗೆ 6 ವಿಕೆಟ್‌ಗಳ ಜಯ

3. ಇಂದೋರ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 14 ರನ್‌ಗಳ ಜಯ

4. ಹೈದರಾಬಾದ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ಗೆ 24 ರನ್‌ಗಳ ಜಯ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ವೆಸ್ಟ್‌ಇಂಡೀಸ್‌ 5ನೇ ಟಿ20ಗೆ ಮಳೆ ಕಾಟ? ಬೆಂಗಳೂರಿನ ಹವಾಮಾನ ವರದಿ ಏನು ಹೇಳುತ್ತೆ?
ಡಿವೋರ್ಸ್ ಬಳಿಕ ಮದ್ಯದ ಚಟಕ್ಕೆ ಬಿದ್ದಿದ್ರಾ RCB ಮಾಜಿ ಕ್ರಿಕೆಟಿಗ? ರಿಹ್ಯಾಬ್ ಕರಾಳ ಕಥೆ ಬಿಚ್ಚಿಟ್ಟ ಸ್ಟಾರ್ ಆಟಗಾರ