
ಮುಂಬೈ(ಮಾ.09): ಕನ್ನಡಿಗ ಸುನಿಲ್ ಜೋಶಿ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಸಮಿತಿ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ತಂಡ ಆಯ್ಕೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಬೆನ್ನಲ್ಲೇ ಹಿರಿಯ ಕ್ರಿಕೆಟಿಗ ಧೋನಿ ಆಯ್ಕೆ ಕುರಿತು ಸ್ಪಷ್ಟ ನಿಲುವನ್ನೂ ಹೊಂದಿದೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
ಇದನ್ನೂ ಓದಿ: ಧೋನಿ ಅಭ್ಯಾಸ ನೋಡಲು ಕ್ರೀಡಾಂಗಣ ಫುಲ್, ಬ್ಯಾರಿಕೇಡ್ ಹಾರಿದ ಅಭಿಮಾನಿ!.
ಐಪಿಎಲ್ 2020ರಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಧೋನಿ ಟೀಂ ಇಂಡಿಯಾಗೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ ಎಂದು ನೂತನ ಆಯ್ಕೆ ಸಮಿತಿ ಹೇಳಿದೆ. ಇದೇ ಮಾತನ್ನು ಈ ಹಿಂದಿನ ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಕೂಡ ಹೇಳಿತ್ತು. ಇದೀಗ ಅಭಿಮಾನಿಗಳು ಐಪಿಎಲ್ ಟೂರ್ನಿ ಎದುರುನೋಡುತ್ತಿದ್ದಾರೆ.
ಇದನ್ನೂ ಓದಿ:6,6,6,6,6 ಧೋನಿ ಸುನಾಮಿ, CSK ಅಭ್ಯಾಸದ MSD ಸಿಕ್ಸರ್ ಸುರಿಮಳೆ!...
13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಧೋನಿ ಅಬ್ಬರಿಸಲಿದ್ದಾರೆ ಅನ್ನೋ ವಿಶ್ವಾಸ ಅಭಿಮಾನಿಗಳದ್ದು. ಕಾರಣ ಈಗಾಗಲೇ ಅಭ್ಯಾಸದಲ್ಲಿ ಧೋನಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಒಂದೇ ಓವರ್‌ನ 5 ಎಸೆತಗಳನ್ನೂ ಸಿಕ್ಸರ್ ಸಿಡಿಸಿ ಧೋನಿ ತಮ್ಮಲ್ಲಿನ್ನು ಕ್ರಿಕೆಟ್ ಬಾಕಿ ಇದೆ ಅನ್ನೋದನ್ನು ಸಾಬೀತು ಮಾಡಿದ್ದರು.
ಧೋನಿ ಮತ್ತೆ ಟೀಂ ಇಂಡಿಯಾದಲ್ಲಿ ಆಡಲಿದ್ದಾರೆ ಅನ್ನೋ ಕುರಿತು ಅಭಿಮಾನಿಗಳಲ್ಲಿ ಗೊಂದಲವಿಲ್ಲ. ಆದರೆ ಈ ಬಾರಿಯ ಐಪಿಎಲ್ ಟೂರ್ನಿ ನಡೆಯುತ್ತಾ ಅನ್ನೋ ಅನುಮಾನಗಳು ಅಭಿಮಾನಿಗಳನ್ನುಕಾಡತೊಡಗಿದೆ. ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಮಾರ್ಚ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.