
ರಾಂಚಿ(ಜೂ.06): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ತಂಡಕ್ಕೆ ಕಮ್‌ಬ್ಯಾಕ್ ಮತ್ತಷ್ಟು ಕಷ್ಟವಾಗಿದೆ. ಐಪಿಎಲ್ ಟೂರ್ನಿ ಮೂಲಕ ಟೀಂ ಇಂಡಿಯಾಗೆ ವಾಪಸ್ ಆಗಲು ನಿರ್ಧರಿಸಿದ್ದ ಧೋನಿ ಪ್ಲಾನ್‌ಗೆ ಕೊರೋನಾ ವೈರಸ್ ಅಡ್ಡಿಯಾಗಿದೆ. 2019ರ ವಿಶ್ವಕಪ್ ಬಳಿಕ, ಸರಿಸುಮಾರು 1 ವರ್ಷಗಳಿಂದ ಟೀಂ ಇಂಡಿಯಾ ಹಾಗೂ ಎಲ್ಲಾ ಕ್ರಿಕೆಟ್‌ನಿಂದ ದೂರವಿರುವ ಧೋನಿ ಇದೀಗ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
#DhoniRetires vs #DhoniNeverTires: ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್..!..
ಲಾಕ್‌ಡೌನ್ ಸಮಯದಲ್ಲಿ ಧೋನಿ, ಪುತ್ರಿ ಝಿವಾ, ಪತ್ನಿ ಸಾಕ್ಷಿ ಧೋನಿ ಜೊತೆ ಹಾಯಾಗಿ ಕಳೆಯುತ್ತಿದ್ದಾರೆ. ಇಷ್ಟೇ ಅಲ್ಲ ತಮ್ಮ ಫಾರ್ಮ್ ಹೌಸ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ತಮ್ಮ ಹಳೇ 2 ಸ್ಟ್ರೋಕ್ ರಾಜದೂತ್ ಬೈಕ್‌ನಿಂದ ಹಿಡಿದು ನೂತನ ಬೈಕ್ ಕಾರುಗಳನ್ನು ರೈಡ್ ಮಾಡುತ್ತಿದ್ದಾರೆ. ಧೋನಿ ಹಾಗೂ ಪುತ್ರಿ ಝಿವಾ ಬೈಕ್ ರೈಡಿಂಗ್ ಮಾಡುತ್ತಿರುವ ಹಲವು ವಿಡಿಯೋಗಳನ್ನು ಸಾಕ್ಷಿ ಧೋನಿ ಬಹಿರಂಗ ಪಡಿಸಿದ್ದರು. ಇದೀಗ ಧೋನಿ ಸ್ವರಾಜ್ ಟ್ರಾಕ್ಟರ್ ಚಲಾಯಿಸಿ ಗಮನಸೆಳೆದಿದ್ದಾರೆ.
ಸ್ವರಾಜ್ ಟ್ರಾಕ್ಟರ್ ಚಲಾಯಿಸುತ್ತಾ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧೋನಿ ಡ್ರೈವಿಂಗ್ ಮಾಡುತ್ತಿದ್ದರೆ, ಪಕ್ಕದಲ್ಲಿ ಓರ್ವ ವ್ಯಕ್ತಿ ಕುಳಿತಿದ್ದಾರೆ. ಧೋನಿ ಸಲೀಸಾಗಿ ಟ್ರಾಕ್ಟರ್ ಡ್ರೈವಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಧೋನಿ ರೈತನಾಗಿ ವಿಶ್ರಾಂತಿ ಜೀವನ ನಡೆಸಲಿದ್ದಾರೆ ಅನ್ನೋ ಅನುಮಾನ ಹುಟ್ಟುಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.