ಐಪಿಎಲ್‌ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಹಣ ಬರುತ್ತೆ, ಹೋಗುತ್ತೆ: ಭಾರತದ ಪ್ಲೇಯರ್ಸ್‌ಗೆ ಕೆಣಕಿದ ಸ್ಟಾರ್ಕ್‌!

Published : Jun 12, 2023, 10:17 PM ISTUpdated : Jun 12, 2023, 10:18 PM IST
 ಐಪಿಎಲ್‌ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಹಣ ಬರುತ್ತೆ, ಹೋಗುತ್ತೆ: ಭಾರತದ ಪ್ಲೇಯರ್ಸ್‌ಗೆ ಕೆಣಕಿದ ಸ್ಟಾರ್ಕ್‌!

ಸಾರಾಂಶ

Mitchell Starc On IPL: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ನಾಲ್ಕು ವಿಕೆಟ್‌ ಉರುಳಿಸಿ ಮಿಂಚಿದ ಮಿಚೆಲ್‌ ಸ್ಟಾರ್ಕ್‌, ಹಣಕ್ಕಾಗಿ ಐಪಿಎಲ್‌ ಆಡೋದಕ್ಕಿಂತ ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ ಆಡೋದೆ ಖುಷಿ ಎಂದು ಹೇಳಿದ್ದಾರೆ.  

ನವದೆಹಲಿ (ಜೂ.12): ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ದಿ ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೋಲು ಕಂಡ ಬೆನ್ನಲ್ಲಿಯೇ ಐಪಿಎಲ್‌ ಹಾಗೂ ಐಪಿಎಲ್‌ನ ವೇಳಾಪಟ್ಟಿಯ ಬಗ್ಗೆ ಟೀಕೆಗಳು ಆರಂಭವಾಗಿದೆ. ಭಾರತಕ್ಕೆ ಇದು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ 2ನೇ ಸೋಲು. ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ಯಾಟ್‌ ಕಮ್ಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ತಂಡ 209 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿತು. ಇದರ ಬೆನ್ನಲ್ಲಿಯೇ ಭಾರತದ ಸೋಲಿಗೆ ಐಪಿಎಲ್‌ ಕಾರಣ ಎಂದು ಹೇಳಲಾಗುತ್ತಿದೆ. ಐಪಿಎಲ್‌ ಮುಗಿದ ಒಂದೇ ವಾರದಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ನಡೆದ ಕಾರಣಕ್ಕೆ ಭಾರತ ತಂಡದ ಆಟಗಾರರಿಗೆ ಟೆಸ್ಟ್‌ ಮಾದರಿಯ ಕ್ರಿಕೆಟ್‌ಗೆ ಒಗ್ಗಿಕೊಳ್ಳಲು ಹೆಚ್ಚಿನ ಸಮಯ ಸಿಕ್ಕಿರಲಿಲ್ಲ ಎಂದು ಹೇಳಲಾಗುತ್ತಿದೆ. ಇದು ಒಂದು ಕಾರಣ ಎಂದು ಹೇಳಲಾಗುತ್ತಿದ್ದರೂ, ಫೈನಲ್‌ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಸಾಧನೆ ಮಾಡಿದ ಆಸೀಸ್‌ ವೇಗಿ ಮಿಚೆಲ್‌ ಸ್ಟಾರ್ಕ್ ಸಂದರ್ಶನವೊಂದರಲ್ಲಿ ತಾವು ಹಣಕ್ಕಾಗಿ ಐಪಿಎಲ್‌ನಲ್ಲಿ ಆಡೋದಕ್ಕಿತ ಆಸ್ಟ್ರೇಲಿಯಾ ಪರವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಹೆಚ್ಚಿನ ಮನ್ನಣೆ ನೀಡೋದಾಗಿ ತಿಳಿಸಿದ್ದಾರೆ. ಆಸ್ಟ್ರೇಲಿಯಾ ಪರವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡುವುದು ತಮಗೆ ಅತ್ಯಂತ ಶ್ರೇಷ್ಠ ಅನುಭವ ಎಂದಿರುವ ಮಿಚೆಲ್‌ ಸ್ಟಾರ್ಕ್,‌ ದೀರ್ಘಕಾಲದವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಬೇಕಾದರೆ ಅತ್ಯುತ್ತಮ ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕಾಗುತ್ತದೆ. ಆ ಮೂಲಕ ಆಸೀಸ್‌ನ ಮುಂದಿನ ಯುಗಕ್ಕೆ ಸ್ಫೂರ್ತಿ ತುಂಬಲು ತಾವು ಬಯಸೋದಾಗಿ ತಿಳಿಸಿದ್ದಾರೆ.

ನಾನು ಐಪಿಎಲ್‌ಅನ್ನು ಎಂಜಾಯ್‌ ಮಾಡಿದ್ದೇನೆ. 10 ವರ್ಷಗಳ ಹಿಂದೆ ಯಾರ್ಕ್‌ಷೈರ್‌ನಲ್ಲಿ ಇದ್ದ ದಿನಗಳನ್ನೂ ಕೂಡ ಆನಂದಿಸಿದ್ದೇನೆ. ಆದರೆ, ಆಸೀಸ್‌ ಪರ ಆಡೋದು ಮಾತ್ರ ಎಲ್ಲಕ್ಕಿಂತ ಮುಖ್ಯವಾದದ್ದು. ಇದಕ್ಕಾಗಿ ಯಾವುದೇ ತ್ಯಾಗಕ್ಕಾದರೂ ನಾನು ಸಿದ್ಧ. ಹಣ ಬರುತ್ತದೆ ಹೋಗುತ್ತದೆ. ಆದರೆ, ನನಗೆ ಸಿಕ್ಕಿರುವ ಅವಕಾಶದ ಬಗ್ಗೆ ನಾನು ಬಹಳ ಆಭಾರಿಯಾಗಿದ್ದೇನೆ' ಎಂದು ತಿಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ 100ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಆದರೆ, ಆಸೀಸ್‌ ಪರವಾಗಿ ಟೆಸ್ಟ್‌ ಕ್ರಿಕೆಟ್‌ ಆಡಿದವರು 500ಕ್ಕಿಂತ ಕಡಿಮೆ ಮಂದಿ. ಈ ಅಂಶವೇ ನಾವು ಬಹಳ ವಿಶೇಷ ಎನ್ನುವುದನ್ನು ತಿಳಿಸುತ್ತದೆ ಎಂದಿದ್ದಾರೆ.

"ನನ್ನಲ್ಲಿರುವ ಸಂಪ್ರದಾಯವಾದಿ ಇನ್ನೂ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಬಯಸುವ ಹುಡುಗರು ಮತ್ತು ಹುಡುಗಿಯರ ಪೀಳಿಗೆಯಿದೆ ಎಂದು ಭಾವಿಸುತ್ತಾರೆ. ಆದರೆ ಸುಲಭವಾಗಿ ಹಣವು ಫ್ರಾಂಚೈಸಿ ಕ್ರಿಕೆಟ್‌ನಲ್ಲಿದೆ, ಇದು ಕುಖ್ಯಾತಿಗೆ ವೇಗದ ಹಾದಿಯಾಗಿದೆ" ಎಂದು ಅವರು ಹೇಳಿದರು.

ಹಾಗಂತ ಮಿಚೆಲ್‌ ಸ್ಟಾರ್ಕ್ ಐಪಿಎಲ್‌ನಲ್ಲಿ ಅಡಿಲ್ಲವೆಂದಲ್ಲ. 2015ರಲ್ಲಿ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪ್ರಮುಖ ಬೌಲರ್‌ ಆಗಿದ್ದರು. ಆದರೆ, ವರ್ಷಗಳು ಕಳೆದ ಹಾಗೆ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡುವುದೇ ಪ್ರಮುಖ ವಿಚಾರ ಎಂದು ಭಾವಿಸಿದ್ದು, ಟಿ20 ಮಾದರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

WTC Final: ಅಂಪೈರ್‌ ತೀರ್ಮಾನ ಟೀಕಿಸಿದ ಗಿಲ್‌ಗೆ ಬಿತ್ತು ಭಾರೀ ದಂಡ..!

ನನಗೆ ಮತ್ತೊಮ್ಮೆ ಐಪಿಎಲ್‌ನಲ್ಲಿ ಆಡಬೇಕೆನ್ನುವ ಬಯಕೆಯಿದೆ. ಆದರೆ, ನನ್ನ ಗುರಿ ಇರುವುದು, ಆಸ್ಟ್ರೇಲಿಯಾ ಪಾಲಿಗೆ ಆದಷ್ಟು ದೀರ್ಘ ಅವಧಿಯ ಕಾಲ ನನ್ನ ಶ್ರೇಷ್ಠ ಆಟವಾಡುವುದಾಗಿ. ಅದು ಯಾವುದೇ ಮಾದರಿಯ ಕ್ರಿಕೆಟ್‌ ಬೇಕಾದರೂ ಆಗಿರಬಹುದು ಎಂದು ಸ್ಟಾರ್ಕ್‌ ಹೇಳಿದ್ದಾರೆ.

ಭಾರತದಲ್ಲಿ ತಂಡಕ್ಕಿಂತ ವ್ಯಕ್ತಿಯೇ ಮೇಲು: WTC Final ಸೋಲಿನ ಬೆನ್ನಲ್ಲೇ ಗಂಭೀರ್ ಸಿಡಿಮಿಡಿ

ಫ್ರಾಂಚೈಸಿ ಕ್ರಿಕೆಟ್‌ ಅದ್ಬುತ. ಆದರೆ, 12 ತಿಂಗಳ ಅವಧಿಯಲ್ಲಿ ಯಾವ ತಂಡ ಬೇಕಾದರೂ ಖರೀದಿಸಬಹುದು, ಯಾವ ತಂಡಕ್ಕೆ ಬೇಕಾದರೂ ಮಾರಾಟವಾಗಬಹುದು. ಆದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಾಗಲ್ಲ. 10 ವರ್ಷಗಳ ಕಾಲ  ಬ್ಯಾಗಿ ಗ್ರೀನ್‌ ಧರಿಸಿ ಒಂದೇ ತಂಡದ ಪಾಲಿಗೆ ಆಡುತ್ತಿದ್ದೇನೆ. ಈ ತಂಡದೊಂದಿಗೆ ಇಲ್ಲಿನ ಆಟಗಾರರೊಂದಿಗೆ ನಾನೂ ಕೂಡ ಬೆಳೆದಿದ್ದೇನೆ ಎಂದು ಸ್ಟಾರ್ಕ್ ತಿಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!