Women's T20 World Cup: ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಚಾಂಪಿಯನ್‌..!

By Kannadaprabha NewsFirst Published Feb 27, 2023, 8:27 AM IST
Highlights

ಮತ್ತೊಮ್ಮೆ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ
ಆತಿಥೇಯ ದಕ್ಷಿಣ ಆಫ್ರಿಕಾ ಎದುರು 19 ರನ್ ಗೆಲುವು ಸಾಧಿಸಿದ ಮೆಗ್‌ ಲ್ಯಾನಿಂಗ್ ಪಡೆ
ಆರನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ ಕಾಂಗರೂ ಪಡೆ

ಕೇಪ್‌ಟೌನ್‌(ಫೆ.27): ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಪ್ರೇಲಿಯಾದ ಪ್ರಾಬಲ್ಯಕ್ಕೆ ತಡೆಯೇ ಇಲ್ಲವೆನಿಸಿದೆ. 6ನೇ ಬಾರಿಗೆ ತಂಡ ಟಿ20 ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2010, 2012, 2014, 2018, 2020ರಲ್ಲೂ ತಂಡ ಟಿ20 ವಿಶ್ವಕಪ್‌ ಜಯಿಸಿತ್ತು. ಮಹಿಳಾ ಏಕದಿನ ವಿಶ್ವಕಪ್‌ ಟ್ರೋಫಿಯನ್ನು ಆಸೀಸ್‌ 7 ಬಾರಿ ಗೆದ್ದಿದೆ.

ಭಾನುವಾರ ನಡೆದ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸೀಸ್‌ 19 ರನ್‌ ಗೆಲುವು ಸಾಧಿಸಿತು. ಇದರೊಂದಿಗೆ ತನ್ನ ದೇಶದ ಕ್ರಿಕೆಟ್‌ ಇತಿಹಾಸದಲ್ಲೇ ಚೊಚ್ಚಲ ವಿಶ್ವಕಪ್‌ ಗೆಲ್ಲುವ ದ.ಆಫ್ರಿಕಾದ ಕನಸು ಭಗ್ನಗೊಂಡಿತು.

Latest Videos

ಮೊದಲು ಬ್ಯಾಟ್‌ ಮಾಡಿ ಅನುಭವಿ ಬೆಥ್‌ ಮೂನಿ ಅವರ ಅರ್ಧಶತಕದ ನೆರವಿನಿಂದ 20 ಓವರಲ್ಲಿ 6 ವಿಕೆಟ್‌ಗೆ 156 ರನ್‌ ಕಲೆಹಾಕಿದ ಆಸ್ಪ್ರೇಲಿಯಾ, ಬೌಲಿಂಗ್‌ನಲ್ಲಿ ಪವರ್‌-ಪ್ಲೇನಲ್ಲೇ ದ.ಆಫ್ರಿಕಾವನ್ನು ಕಟ್ಟಿಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತುವ ವೇಳೆ ದ.ಆಫ್ರಿಕಾ ಮೊದಲ 6 ಓವರಲ್ಲಿ ಕೇವಲ 22 ರನ್‌ ಗಳಿಸಿ, ತಜ್ಮಿನ್‌ ಬ್ರಿಟ್ಸ್‌ರ ವಿಕೆಟ್‌ ಸಹ ಕಳೆದುಕೊಂಡಿತು.

Brilliance with bat and ball ✨

How Australia beat South Africa to win their sixth Women’s title ⬇️ |

— T20 World Cup (@T20WorldCup)

ಕೊನೆ 10 ಓವರಲ್ಲಿ ದ.ಆಫ್ರಿಕಾಕ್ಕೆ ಗೆಲ್ಲಲು 105 ರನ್‌ಗಳು ಬೇಕಿದ್ದವು. ಹೀಗಾಗಿ ಲಾರಾ ವೂಲ್ವಾರ್ಚ್‌ ಸ್ಫೋಟಕ ಆಟಕ್ಕಿಳಿಯಬೇಕಾಯಿತು. 12ನೇ ಓವರ್‌ ಬಳಿಕ ದ.ಆಫ್ರಿಕಾ ಆಕ್ರಮಣಕಾರಿ ಆಟ ಆರಂಭಿಸಿತು. ಮುಂದಿನ 2 ಓವರಲ್ಲಿ 29 ರನ್‌ ಕಲೆಹಾಕಿತು. 48 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ನೊಂದಿಗೆ 61 ರನ್‌ ಸಿಡಿಸಿ ಹೋರಾಡಿದ 23ರ ವೂಲ್ವಾರ್ಚ್‌ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. 17ನೇ ಓವರಲ್ಲಿ ಅವರು ಔಟಾಗುತ್ತಿದ್ದಂತೆ ತಂಡ ಸೋಲಿನತ್ತ ಮುಖ ಮಾಡಿತು. ಚೋಲ್‌ ಟ್ರಯನ್‌(25) ಸಹ ಯಾವುದೇ ಪವಾಡ ನಡೆಸಲು ಆಗಲಿಲ್ಲ. ಆಸ್ಪ್ರೇಲಿಯಾ ಕೊನೆ 5 ಓವರಲ್ಲಿ ಕೇವಲ 39 ರನ್‌ ಬಿಟ್ಟುಕೊಟ್ಟು ಪಂದ್ಯ ತನ್ನ ಕೈಜಾರದಂತೆ ನೋಡಿಕೊಂಡಿತು.

ICC Women's T20 World Cup: ಟಿ20 ವಿಶ್ವಕಪ್‌ ಕಿರೀಟಕ್ಕೆ ಆಸೀಸ್‌ vs ಆಫ್ರಿಕಾ ಫೈಟ್‌

ಮೂನಿ ಆಸರೆ: ಆಸ್ಪ್ರೇಲಿಯಾಗೆ ತನ್ನಿಬ್ಬರು ಪ್ರಮುಖ ಆಟಗಾರ್ತಿಯರಾದ ಬೆಥ್‌ ಮೂನಿ ಹಾಗೂ ಆಶ್ಲೆ ಗಾಡ್ರ್ನರ್‌ ಆಸರೆಯಾದರು. ಮೂನಿ 53 ಎಸೆತದಲ್ಲಿ 9 ಬೌಂಡರಿ, 1 ಸಿಕ್ಸರ್‌ನೊಂದಿಗೆ 74 ರನ್‌ ಗಳಿಸಿದರೆ, ಗಾಡ್ರ್ನರ್‌ 21 ಎಸೆತದಲ್ಲಿ 2 ಬೌಂಡರಿ, 2 ಸಿಕ್ಸರ್‌ನೊಂದಿಗೆ 29 ರನ್‌ ಸಿಡಿಸಿದರು. ಇನ್ನಿಂಗ್‌್ಸ ಮಧ್ಯದಲ್ಲಿ ತುಸು ಲಯ ಕಳೆದುಕೊಂಡರೂ, ಕೊನೆ 5 ಓವರಲ್ಲಿ 46 ರನ್‌ ಚಚ್ಚಿದ ಆಸ್ಪ್ರೇಲಿಯಾ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಯಶಸ್ವಿಯಾಯಿತು.

ಸ್ಕೋರ್‌: 
ಆಸ್ಪ್ರೇಲಿಯಾ 20 ಓವರಲ್ಲಿ 156/6(ಮೂನಿ 74, ಗಾಡ್ರ್ನರ್‌ 29, ಶಬ್ನಿಮ್‌ 2-26)
ದಕ್ಷಿಣ ಆಫ್ರಿಕಾ 20 ಓವರಲ್ಲಿ 137/6(ವೂಲ್ವಾರ್ಚ್‌ 61, ಟ್ರಯನ್‌ 25, ಗಾಡ್ರ್ನರ್‌ 1-20) 
ಪಂದ್ಯಶ್ರೇಷ್ಠ: ಬೆಥ್‌ ಮೂನಿ
ಟೂರ್ನಿಯ ಶ್ರೇಷ್ಠ ಆಟಗಾರ್ತಿ: ಆಶ್ಲೆ ಗಾಡ್ರ್ನರ್‌

ನಾಯಕಿಯಾಗಿ 5 ವಿಶ್ವಕಪ್‌ ಗೆಲುವು: ಲ್ಯಾನಿಂಗ್‌ ದಾಖಲೆ!

ಮೆಗ್‌ ಲ್ಯಾನಿಂಗ್‌ ನಾಯಕತ್ವದಲ್ಲಿ ಆಸ್ಪ್ರೇಲಿಯಾ 5ನೇ ವಿಶ್ವಕಪ್‌ ಗೆದ್ದಿದೆ. ಅತಿಹೆಚ್ಚು ಐಸಿಸಿ ಟ್ರೋಫಿಗಳನ್ನು ಗೆದ್ದ ನಾಯಕ/ನಾಯಕಿಯರ ಪಟ್ಟಿಯಲ್ಲಿ ಲ್ಯಾನಿಂಗ್‌ ಮೊದಲ ಸ್ಥಾನಕ್ಕೇರಿದ್ದಾರೆ. ಲ್ಯಾನಿಂಗ್‌ ನಾಯಕಿಯಾಗಿ 4 ಟಿ20, 1 ಏಕದಿನ ವಿಶ್ವಕಪ್‌ ಗೆದ್ದಿದ್ದಾರೆ. ರಿಕಿ ಪಾಂಟಿಂಗ್‌ ನಾಯಕತ್ವದಲ್ಲಿ ಆಸ್ಪ್ರೇಲಿಯಾ 4 ಟ್ರೋಫಿಗಳನ್ನು ಗೆದ್ದಿತ್ತು. 2003, 2007ರಲ್ಲಿ ಏಕದಿನ ವಿಶ್ವಕಪ್‌, 2006, 2009ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿತ್ತು. ಎಂ.ಎಸ್‌.ಧೋನಿ ನಾಯಕತ್ವದಲ್ಲಿ ಭಾರತ 3 ಐಸಿಸಿ ಟ್ರೋಫಿ ಗೆದ್ದಿದೆ. 2007ರಲ್ಲಿ ಟಿ20 ವಿಶ್ವಕಪ್‌, 2011ರಲ್ಲಿ ಏಕದಿನ ವಿಶ್ವಕಪ್‌, 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಎತ್ತಿ ಹಿಡಿದಿತ್ತು.

click me!