Ranji Trophy ಕರ್ನಾಟಕಕ್ಕೆ ಇನ್ನಿಂಗ್‌್ಸ ಮುನ್ನಡೆ

Published : Dec 16, 2022, 08:53 AM IST
Ranji Trophy ಕರ್ನಾಟಕಕ್ಕೆ ಇನ್ನಿಂಗ್‌್ಸ ಮುನ್ನಡೆ

ಸಾರಾಂಶ

ರಣಜಿ ಟ್ರೋಫಿ ಮೊದಲ ಪಂದ್ಯದಲ್ಲಿ ಕರ್ನಾಟಕಕ್ಕೆ ಸರ್ವೀಸಸ್ ಎದುರು ಮೊದಲ ಇನಿಂಗ್ಸ್ ಮುನ್ನಡೆ ಮೂರನೇ ದಿನದಾಟದಂತ್ಯಕ್ಕೆ 133 ರನ್‌ಗಳ ಮುನ್ನಡೆ ಗಳಿಸಿದ ಕರ್ನಾಟಕ ಬೌಲಿಂಗ್‌ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ ವಿದ್ವತ್ ಕಾವೇರಪ್ಪ

ಬೆಂಗಳೂರು(ಡಿ.16): ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಸರ್ವಿಸಸ್‌ ವಿರುದ್ಧ ಕರ್ನಾಟಕ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ನಾಯಕ ರಜತ್‌ ಪಲಿವಾಲ್‌ ಶತಕದ ಹೊರತಾಗಿಯೂ ಸರ್ವಿಸಸ್‌ 261ಕ್ಕೆ ಆಲೌಟ್‌ ಆಗಿದ್ದು, 43 ರನ್‌ ಮುನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ ಕರ್ನಾಟಕ 3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 90 ರನ್‌ ಗಳಿಸಿದೆ.

ಕರ್ನಾಟಕದ ಮೊದಲ ಇನ್ನಿಂಗ್‌್ಸನ 304 ರನ್‌ಗೆ ಉತ್ತರವಾಗಿ 2ನೇ ದಿನ 4 ವಿಕೆಟ್‌ಗೆ 96 ರನ್‌ ಗಳಿಸಿದ್ದ ಸರ್ವಿಸಸ್‌ ಗುರುವಾರ ಎಚ್ಚರಿಕೆಯ ಆಟವಾಡಿತು. ಕ್ರೀಸ್‌ ಕಾಯ್ದುಕೊಂಡಿದ್ದ ರಜತ್‌ ಹಾಗೂ ರವಿ ಚೌಹಾಣ್‌ ತಂಡ ಕಡಿಮೆ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ರವಿ 56ಕ್ಕೆ ಔಟಾದ ಬಳಿಕ ರಜತ್‌-ರಾಹುಲ್‌ ಸಿಂಗ್‌(36) ಜೋಡಿ 7ನೇ ವಿಕೆಟ್‌ಗೆ 80 ರನ್‌ ಸೇರಿಸಿತು. ರಜತ್‌ 217 ಎಸೆತಗಳಲ್ಲಿ 124 ರನ್‌ ಸಿಡಿಸಿ ಶ್ರೇಯಸ್‌ಗೆ ವಿಕೆಟ್‌ ಒಪ್ಪಿಸಿದರು. ವಿದ್ವತ್‌ ಕಾವೇರಪ್ಪ 4, ರೋನಿತ್‌ ಮೋರೆ 3 ವಿಕೆಟ್‌ ಕಿತ್ತರು.

ಉತ್ತಮ ಆರಂಭ: 2ನೇ ಇನ್ನಿಂಗ್‌್ಸನಲ್ಲಿ ಕರ್ನಾಟಕ ಉತ್ತಮ ಆರಂಭ ಪಡೆಯಿತು. ಮೊದಲ ಇನ್ನಿಂಗ್‌್ಸನಲ್ಲಿ ವಿಫಲವಾಗಿದ್ದ ಆರ್‌.ಸಮರ್ಥ್(40) ಹಾಗೂ ಮಯಾಂಕ್‌ ಅಗರ್‌ವಾಲ್(47) ಇಬ್ಬರೂ ಸರ್ವಿಸಸ್‌ ಬೌಲರ್‌ಗಳ ದಿಟ್ಟವಾಗಿ ಎದುರಿಸಿದರು. ತಂಡ ಸದ್ಯ 133 ರನ್‌ ಮುನ್ನಡೆಯಲ್ಲಿದ್ದು, ಅಂತಿಮ ದಿನವಾದ ಶುಕ್ರವಾರ ಸರ್ವಿಸಸ್‌ಗೆ ದೊಡ್ಡ ಗುರಿ ನಿಗದಿ ಪಡಿಸಿ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದೆ.

ಸ್ಕೋರ್‌: ಕರ್ನಾಟಕ 304/10, ಮತ್ತು 90/0(ಮಯಾಂಕ್‌ 47*, ಸಮರ್ಥ್ 40*) 
ಸವೀರ್‍ಸಸ್‌ 261/10 (ರಜತ್‌ 124, ರವಿ 56, ವಿಧ್ವತ್‌ 4-64)

(*3ನೇ ದಿನದಾಟದಂತ್ಯದ ವೇಳೆಗೆ)

ಶತಕದ ಬಳಿಕ ಬೌಲಿಂಗಲ್ಲೂ ಸಚಿನ್‌ ಪುತ್ರ ಮಿಂಚು

ಗೋವಾ: ಪಾದಾರ್ಪಣಾ ಪಂದ್ಯದಲ್ಲೇ ಶತಕ ಬಾರಿಸಿದ್ದ ಸಚಿನ್‌ ತೆಂಡುಲ್ಕರ್‌ರ ಪುತ್ರ ಅಜುನ್‌, ಬೌಲಿಂಗ್‌ನಲ್ಲೂ ಗಮನ ಸೆಳೆದಿದ್ದಾರೆ. ರಾಜಸ್ಥಾನ ವಿರುದ್ಧದ ರಣಜಿ ಪಂದ್ಯದ 3ನೇ ದಿನವಾದ ಗುರುವಾರ ಗೋವಾದ ಎಡಗೈ ವೇಗಿ ಅರ್ಜುನ್‌ 77 ರನ್‌ಗೆ 2 ವಿಕೆಟ್‌ ಕಿತ್ತರು. ಮಹಿಪಾಲ್‌ ಲೊಮ್ರಾರ್‌ ಹಾಗೂ ಸಲ್ಮಾನ್‌ ಖಾನ್‌ ವಿಕೆಟನ್ನು ಪಡೆದರು.

ಪ್ರಥಮ ದರ್ಜೆ ಪಾದಾರ್ಪಣೆ ಪಂದ್ಯದಲ್ಲೇ 9 ವಿಕೆಟ್ ಕಬಳಿಸಿದ 16 ವರ್ಷದ ಫೀರೋಯಿಜಾಂ ಸಿಂಗ್‌..!

ಈ ವರ್ಷ ಗೋವಾ ಪರ ಆಡುತ್ತಿರುವ ಅರ್ಜುನ್‌, ಬುಧವಾರ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದರು. 7ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅವರು 2 ಸಿಕ್ಸರ್‌, 16 ಬೌಂಡರಿ ಒಳಗೊಂಡ 120 ರನ್‌ ಸಿಡಿಸಿದರು. 1988ರಲ್ಲಿ ಸಚಿನ್‌ ಕೂಡಾ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಎಡಗೈ ವೇಗಿಯಾಗಿದ್ದರೂ ಅರ್ಜುನ್‌ ಪಾದಾರ್ಪಣೆಯಲ್ಲೇ ಶತಕ ಸಿಡಿಸುವ ಮೂಲಕ ತಂದೆಯಂತೆಯೇ ಬ್ಯಾಟಿಂಗ್‌ನಲ್ಲಿ ಸದ್ದು ಮಾಡುವ ಮುನ್ಸೂಚನೆ ನೀಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?