Ind Vs Pak: ಮೊದಲು ದೇಶದ ಮಗ, ಆಮೇಲೆ ನನ್ನ ಮಗ; ಕಣ್ಣೀರು ತರಿಸಿದ ಪಾಕ್ ಬಗ್ಗುಬಡಿದ ಹೀರೋ ಮನಲ್ ಅಮ್ಮನ ಮಾತು!

Published : Nov 16, 2026, 10:17 AM IST
Ind Vs Pak

ಸಾರಾಂಶ

ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟ ಮನಲ್ ಚೌಹಾಣ್ ತಾಯಿ "ಮೊದಲು ದೇಶದ ಮಗ, ಆಮೇಲೆ ನನ್ನ ಮಗ" ಎಂದು ಭಾವುಕರಾಗಿ ನುಡಿದಿದ್ದಾರೆ. ಸಂಪೂರ್ಣ ವರದಿ ಇಲ್ಲಿದೆ.

ಇಂಡಿಯಾ ಪಾಕ್‌ ನಡುವಿನ್ ಅಂಡರ್-19 ಏಷ್ಯಾಕಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿತು. ಕೊನೆಯ ವಿಕೆಟ್‌ ಜೊತೆಯಾಟ ನೋಡುವಾಗಲಂತು ಅಭಿಮಾನಿಗಳ ಕಣ್ಣು ತುಂಬಿ ಬಂದಿತ್ತು. ಮನಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ ಕೊನೆ ವಿಕೆಟ್‌ಗೆ ಜತೆಯಾಟ ನಡೆಸಿ ಭಾರತಕ್ಕೆ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಉಲ್ವಾ ಅವರನ್ನು ಹೊಗಳಲಾಗಿದ್ದರೂ, ಮನಲ್ ಚೌಹಾಣ್ ಅವರ ತಾಳ್ಮೆ ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ. ಅಲ್ಲದೇ ಮಗ ಕೂಲ್‌ ಆಗಿ ಧೋನಿ ಶೈಲಿಯಲ್ಲಿ ಪಾಕಿಸ್ತಾನದ ಎದುರಿಸಿದ್ದಾನೆ. ಈ ನಿಟ್ಟಿನಲ್ಲಿ ಮನಲ್ ತಾಯಿ ಭಾವುಕರಾಗಿ ಮಾತನಾಡಿದ ಮಾತನ್ನು ಎಲ್ಲರ ಕಣ್ಣು ತುಂಬಿ ಬರುತ್ತವೆ.

ಮೊದಲು ದೇಶದ ಮಗ!

ಮನಾಲ್‌ಗೆ ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಪಂಚಪ್ರಾಣ. ಓದಿನ ಕಡೆಗೆ ಎಂದಿಗೂ ಅವನ ಮನಸ್ಸು ವಾಲಲಿಲ್ಲ, ಇದಕ್ಕಾಗಿ ಆತ ಎಷ್ಟೋ ಕಷ್ಟಗಳನ್ನು ಎದುರಿಸಿದ್ದಾನೆ. ಆದರೆ ಇಂದು ಆತ ದೇಶಕ್ಕಾಗಿ ನೀಡಿದ ಕೊಡುಗೆಯನ್ನು ಇಡೀ ಭಾರತವೇ ಕೊಂಡಾಡುತ್ತಿದೆ. ನಮ್ಮ ಪೂರ್ವಜರ ಆಶೀರ್ವಾದ ಸದಾ ಅವನ ಮೇಲಿದೆ. ನನ್ನ ಪಾಲಿಗೆ ಅವನು ಮೊದಲು ಈ ದೇಶದ ಮಗ, ಆಮೇಲಷ್ಟೇ ನನ್ನ ಮಗ" ಎಂದು ಮನಾಲ್ ತಾಯಿ ಗದ್ಗದಿತರಾಗಿ ನುಡಿದರು. ಈ ಮಾತುಗಳನ್ನಾಡುವಾಗ ಆ ತಾಯಿಯ ಕಣ್ಣಂಚು ಆನಂದಭಾಷ್ಪದಿಂದ ಒದ್ದೆಯಾಗಿತ್ತು. ಕಣ್ಣಲ್ಲಿ ನೀರಿದ್ದರೂ, ಮಗನ ಸಾಧನೆಯ ಹೆಮ್ಮೆ ಮತ್ತು ಸಂತೋಷ ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಮನಾಲ್‌ ಬಗ್ಗೆ ನಮಗೆ ಹೆಮ್ಮೆ ಇದೆ!

ಮನಾಲ್ ಯಶಸ್ಸಿನ ಬಗ್ಗೆ ತುಂಬಾ ಹೆಮ್ಮೆ ಇದೆ. ನಮ್ಮ ಕುಟುಂಬ, ಗ್ರಾಮಸ್ಥರು ಮತ್ತು ಇಡೀ ಜಿಲ್ಲೆ ಅವರ ಯಶಸ್ಸಿನ ಬಗ್ಗೆ ತುಂಬಾ ಹೆಮ್ಮೆಪಡುತ್ತಿದೆ. ಭಾರತ-ಪಾಕ್‌ ಫೈನಲ್‌ನಲ್ಲಿ ಅವರ ಪ್ರದರ್ಶನದ ಬಗ್ಗೆ ಎಲ್ಲರೂ ತುಂಬಾ ಹೆಮ್ಮೆಪಡುತ್ತಿದ್ದಾರೆ. ಬಾಲ್ಯದಿಂದಲೂ ಕ್ರಿಕೆಟ್ ತುಂಬಾ ಇಷ್ಟಪಡುತ್ತಿದ್ದ. ಕ್ರಿಕೆಟ್ ಅನ್ನು ಬಹಳಷ್ಟು ಆಡುತ್ತಿದ್ದರು. ಅವರು ಮುಖ್ಯವಾಗಿ ಇತರ ಕ್ರೀಡೆಗಳಿಗಿಂತ ಕ್ರಿಕೆಟ್ ಆಡುತ್ತಿದ್ದ, ಆದ್ದರಿಂದ ನಾನು ಅವನನ್ನು ಅಕಾಡೆಮಿಗೆ ಸೇರಿಸಿದೆ. ಅದರ ನಂತರ, ಅಂಡರ್ -14, ಅಂಡರ್ -16 ನಂತಹ ವಿವಿಧ ಹಂತಗಳಲ್ಲಿ ಆಡಿ, ಇಂದು ಅಂಡರ್ -19 ತಂಡದಲ್ಲಿ ಆಡುತ್ತಿದ್ದಾನೆ ಎಂದು ಮನಾಲ್ ತಂದೆ ಹೇಳಿದ್ದಾರೆ.

ಮನಾಲ್‌ ಅಜ್ಜಿ ಹೇಳಿದ್ದೇನು?

ಈ ಮಧ್ಯೆ, ಇದು ಎಲ್ಲರಿಗೂ, ಇಡೀ ಕುಟುಂಬಕ್ಕೆ ಮತ್ತು ಎಲ್ಲಾ ಜನರಿಗೆ ತುಂಬಾ ಸಂತೋಷದ ದಿನವಾಗಿದೆ. ನಾವು ಹೇಗೆ ಭಾವಿಸುತ್ತಿದ್ದೇವೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಆದರೆ ಈ ದಿನ ಮರೆಯಲು ಸಾಧ್ಯವಿಲ್ಲ. ಅವನ ಆಟ ನಮ್ಮ ಹೃದಯ ಮಾತ್ರವಲ್ಲ, ಇಡೀ ದೇಶದ ಹೃದಯ ಗೆದ್ದಿದೆ”ಎಂದು ಮನಾಲ್ ಅವರ ಅಜ್ಜಿ ಹೇಳಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸರ್ ನನ್ನ ಮಗನನ್ನ ಹಿಡ್ಕೊಳ್ಳಿ: ಫಸ್ಟ್ ಮ್ಯಾಚ್‌ಲ್ಲಿ ಟೀಂ ಇಂಡಿಯಾ ವೇಗಿ ಯಶ್‌ ಠಾಕೂರ್‌ಗೆ ಆಗಿದ್ದೇನು?
Ind Vs NZ: IPL ಸೇಡಿಗೆ ವೇದಿಕೆ ಬಳಸಿಕೊಂಡ್ರಾ ಅಯ್ಯರ್? ಕೊಹ್ಲಿ-ಶ್ರೆಯಸ್‌ ನಡುವೆ ಭುಗಿಲೆದ್ದ ಭಿನ್ನಾಬಿಪ್ರಾಯ!