ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಎಂಎಸ್ ಧೋನಿ ನಿವೃತ್ತಿಯಾಗಿ ವರ್ಷಗಳೇ ಕಳೆದಿದ್ದರೂ, ಇದು ಅವರ ಆದಾಯದ ಮೇಲೆ ಒಂಚೂರೂ ಪರಿಣಾಮ ಬೀರಿಲ್ಲ. ಅದರ ಬದಲು ವರ್ಷದಿಂದ ವರ್ಷಕ್ಕೆ ಅವರ ಆದಾಯದಲ್ಲಿ ಏರಿಕೆ ಆಗುತ್ತಿದೆ. ಈ ಬಾರಿ ಅವರು ಕಟ್ಟಿರುವ ಮುಂಗಡ ತೆರಿಗೆಯಿಂದ ಈ ವಿಚಾರ ಬಹಿರಂಗವಾಗಿದೆ.
ರಾಂಚಿ (ನ.9): ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ, ಬೆಸ್ಟ್ ಫಿನಿಶರ್ ಎಂಎಸ್ ಧೋನಿ ಕ್ರೀಡಾಕ್ಷೇತ್ರದಲ್ಲಿ ಮಾತ್ರವಲ್ಲ. ಹಣಕಾಸಿನ ವಿಚಾರದಲ್ಲೂ ಶ್ರೀಮಂತ ವ್ಯಕ್ತಿ. ಮಹೇಂದ್ರ ಸಿಂಗ್ ಧೋನಿ ಅವರ ಅದಾಯ ತೆರಿಗೆ ರಿಟರ್ನ್ಸ್ ಪ್ರತಿ ವರ್ಷವೂ ಉತ್ತಮವಾಗಿ ಏರಿಕೆ ಕಾಣುತ್ತಿದೆ. ವರ್ಷದಿಂದ ವರ್ಷಕ್ಕೆ ಅವರು ಉದ್ಯಮ ಕ್ಷೇತ್ರದಲ್ಲಿ ಮಿಂಚುತ್ತಿದ್ದು, ಇಲ್ಲಿಯವರೆಗೂ ಕ್ರಿಕೆಟ್‌ನಿಮದ ಮಾಡುತ್ತಿದ್ದ ಹಣವನ್ನು ಅವರೀಗ ಉದ್ಯಮಗಳಿಂದ ಮಾಡಲು ಆರಂಭಿಸಿದ್ದಾರೆ. ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ನಂತರ ವ್ಯಾಪಾರ ಜಗತ್ತಿನಲ್ಲಿ ಯಶಸ್ಸಿನ ಹೊಸ ಮೆಟ್ಟಿಲು ಏರುತ್ತಿದ್ದಾರೆ. ವ್ಯಾಪಾರ ಉದ್ಯಮದ ವಿಸ್ತರಣೆಯೊಂದಿಗೆ, ಅವರ ವೈಯಕ್ತಿಕ ಆದಾಯವು ನಿರಂತರವಾಗಿ ಹೆಚ್ಚುತ್ತಿದೆ. ಆದಾಯ ತೆರಿಗೆ ಇಲಾಖೆಯ ದಾಖಲೆಗಳು ಇದನ್ನು ಖಚಿತಪಡಿಸಿವೆ.
ಆದಾಯ ತೆರಿಗೆ ಇಲಾಖೆಯಲ್ಲಿ 17 ಕೋಟಿ ಮುಂಗಡ ತೆರಿಗೆ ಠೇವಣಿ: ಎಂಎಸ್ ಧೋನಿ ಅವರು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಅಂದರೆ ಏಪ್ರಿಲ್ ನಿಂದ ಅಕ್ಟೋಬರ್ 2022 ರವರೆಗೆ ಆದಾಯ ತೆರಿಗೆ ಇಲಾಖೆಯಲ್ಲಿ ಮುಂಗಡ ತೆರಿಗೆಯಾಗಿ 17 ಕೋಟಿ ರೂ.ಗಳನ್ನು ಠೇವಣಿ ಮಾಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಅವರು ಈ ಅವಧಿಗೆ ಮುಂಗಡ ತೆರಿಗೆಯಾಗಿ 13 ಕೋಟಿ ರೂ. ಪಾವತಿ ಮಾಡಿದ್ದರು. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಅವರ ಆದಾಯದಲ್ಲಿ ಶೇಕಡ ಮೂವತ್ತರಷ್ಟು ಏರಿಕೆಯಾಗಲಿದೆ ಎನ್ನುವುದು ಅವರು ಕಟ್ಟಿರುವ ಮುಂಗಡ ತೆರಿಗೆಯಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ.
ಕಳೆದ ಕೆಲವು ವರ್ಷಗಳಿಂದ ಎಂಎಸ್ ಧೋನಿ ಕಟ್ಟುತ್ತಿರುವ ತೆರಿಗೆ: ಎಂಎಸ್ ಧೋನಿ 2021-22ರಲ್ಲಿ ಆದಾಯ ತೆರಿಗೆ ಇಲಾಖೆಗೆ 38 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದರು. ಅದರ ಅರ್ಥ ಆ ಒಂದಿಡೀ ವರ್ಷದಲ್ಲಿ ಅವರ ಆಆದಾಯ ಸರಿಸುಮಾರಿ 130 ಕೋಟಿ ರೂಪಾಯಿ ಆಗಿರಬಹುದು ಎನ್ನಲಾಗಿದೆ. ಇದಕ್ಕೂ ಮುನ್ನ ಅಂದರೆ, 2020-21ರಲ್ಲಿ ಎಂಎಸ್ ಧೋನಿ 30 ಕೋಟ ರೂಪಾಯಿ ತೆರಿಗೆ ಕಟ್ಟಿದ್ದರು. ಅದಕ್ಕೂ ಹಿಂದೆ ಹೋಗುವುದಾದರೆ, 2019-20 ಹಾಗೂ 2018-19ರಲ್ಲಿ ಕ್ರಮವಾಗಿ ಎಂಎಸ್ ಧೋನಿ ತಲಾ 28 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದರು. ಆದಾಯ ತೆರಿಗೆ ಇಲಾಖೆಯ ದಾಖಲೆಯ ಪ್ರಕಾರ ಎಂಎಸ್ ಧೋನಿ 2017-18ರಲ್ಲಿ 12.17 ಕೊಟಿ ರೂಪಾಯಿ ಹಾಗೂ 2016-17ರಲ್ಲಿ 10.93 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದರು.ಆದಾಯ ತೆರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ಧೋನಿ ಅವರು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದ ನಿರಂತರವಾಗಿ ಜಾರ್ಖಂಡ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಅತಿದೊಡ್ಡ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ.
IPL 2023 ಸಿಎಸ್‌ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್, ಜಡೇಜಾರನ್ನು ಉಳಿಸಿಕೊಂಡ ಧೋನಿ!
ಉದ್ಯಮದಲ್ಲಿ ಪ್ರಗತಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಎಂಎಸ್ ಧೋನಿ ತಮ್ಮ ಸಂಪೂರ್ಣ ಗಮನವನ್ನು ಕ್ರಿಕೆಟ್‌ನತ್ತ ಕೇಂದ್ರೀಕರಿಸಿದ್ದಾರೆ. ಐಪಿಎಲ್‌ನಲ್ಲಿ ಆಡುವುದನ್ನು ಅವರು ಮುಂದುವರಿಸಿದ್ದರೂ, ಹೆಚ್ಚಿನ ಸಮಯವನ್ನು ಅವರ ಬ್ಯುಸಿನೆಸ್‌ಗಾಗಿಯೇ ಮೀಸಲಿದ್ದಾರೆ. ಭಾರತದ ಮಾಜಿ ನಾಯಕ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ಸ್ಪೋರ್ಟ್ಸ್ ವೇರ್, ಹೋಮ್ ಇಂಟೀರಿಯರ್ ಕಂಪನಿ ಹೋಮ್ಲೇನ್, ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಕಂಪನಿ ಕಾರ್ಸ್ 24, ಸ್ಟಾರ್ಟ್ಅಪ್ ಕಂಪನಿ ಖಾತಾಬುಕ್, ಬೈಕ್ ರೇಸಿಂಗ್ ಕಂಪನಿ, ಸ್ಪೋರ್ಟ್ಸ್ ಕಂಪನಿ ರನ್ ಆಡಮ್, ಕ್ರಿಕೆಟ್ ಕೋಚಿಂಗ್ ಮತ್ತು ಸಾವಯವ ಕೃಷಿಯಲ್ಲಿ ಹೂಡಿಕೆ ಮಾಡಿದ್ದಾರೆ. ರಾಂಚಿಯಲ್ಲಿ ಸುಮಾರು 43 ಎಕರೆ ಜಮೀನಿನಲ್ಲಿ ಧೋನಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಇತ್ತೀಚೆಗೆ, ಅವರು ಗರುಡ ಏರೋಸ್ಪೇಸ್ ಸಹಭಾಗಿತ್ವದಲ್ಲಿ ಡ್ರೋನ್ ಉತ್ಪಾದನೆಗಾಗಿ ದ್ರೋಣಿ ಎಂಬ ಸಾಹಸವನ್ನು ಪ್ರಾರಂಭಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕನ ಜೊತೆ ಲಿಂಕ್ ಆಗಿದ್ದ ನಟಿಯ ಹಾಟ್ ಫೋಟೋಗಳು ವೈರಲ್
ಚಿತ್ರ ನಿರ್ಮಾಣ ಸಂಸ್ಥೆ ಕೂಡ ಆರಂಭ: ಬೆಂಗಳೂರಿನಲ್ಲಿ ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್ ಕೂಡ ಈ ವರ್ಷ ಆರಂಭವಾಗಿದೆ. ಇದಲ್ಲದೆ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರು ಧೋನಿ ಎಂಟರ್‌ಟೈನ್‌ಮೆಂಟ್ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಸಹ ಪ್ರಾರಂಭಿಸಿದ್ದಾರೆ. ಈ ಕಂಪನಿಯು ತಮಿಳು ಭಾಷೆಯಲ್ಲಿ ಮೊದಲ ಚಲನಚಿತ್ರವನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದು, ರಮೇಶ್ ತಮಿಳ್ಮಣಿ ಇದನ್ನು ನಿರ್ದೇಶನ ಮಾಡಲಿದ್ದಾರೆ.