ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿ 70 ರನ್ ಸಿಡಿಸಿದ ಆಲ್ರೌಂಡರ್, ಬೌಲಿಂಗ್ ವೇಳೆ ತೀವ್ರ ಹೃದಯಾಘಾತದಿಂದ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಆಟದ ನಡುವೆ ನಡೆದ ಈ ಬೆಚ್ಚಿಬೀಳಿಸುವ ಘಟನೆಯಿಂದ ಪಂದ್ಯ ರದ್ದಾಗಿದೆ.
ಭೋಪಾಲ್(ಡಿ.31) ಟೀಂ ಇಂಡಿಯಾ ಪರ ಆಡಿ, ವಿಶ್ವಕಪ್ ಗೆಲ್ಲಿಸಿಕೊಡಬೇಕು ಅನ್ನೋ ಕನಸು ಕಟ್ಟಿಕೊಂಡಿದ್ದ ಯುವ ಕ್ರಿಕೆಟಿಗನ ಬದುಕು ಮೈದಾನದಲ್ಲೇ ಅಂತ್ಯವಾದ ವಿದ್ರಾವಕ ಘಟನೆ ಮಧ್ಯಪ್ರದೇಶ ಖರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. 22 ವರ್ಷದ ಇಂದಲ್ ಸಿಂಗ್ ಜಾದವ್ ಬಂಜಾರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ದಿಢೀರ್ ವಿಕೆಟ್ ಪತನವಾದರೂ ಬಂಜಾರ 70 ರನ್ ಸಿಡಿಸಿ ಆಸರೆಯಾಗಿದ್ದರು. ಆಲ್ರೌಂಡರ್ ಆಗಿದ್ದ ಜಾದವ್ ಬಂಜಾರ ಬೌಲಿಂಗ್ ವೇಳೆ ಎದೆನೋವು ಕಾಣಿಸಿಕೊಂಡಿದೆ. ಬೌಲಿಂಗ್ ಮಾಡಲು ರನ್ನಪ್ ಆರಂಭಿಸುತ್ತಿದ್ದಂತೆ ಮೈದಾನದಲ್ಲೇ ಕುಸಿದು ಬಿದ್ದ ಬಂಜಾರ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ.
ಬರ್ಖಾಡ್ ತಾಂಡ ಗ್ರಾಮದಲ್ಲಿ ಅದ್ಭುತ ಕ್ರಿಕೆಟಿಗನಾಗಿ ಹೊರಹೊಮ್ಮಿದ ಬಂಜಾರ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮಿಂಚಿದ್ದಾನೆ. ಮಧ್ಯಪ್ರದೇಶ ರಣಜಿ ತಂಡಕ್ಕೂ ಆಯ್ಕೆಯಾಗುವ ವಿಶ್ವಾಸವಿಟ್ಟಿದ್ದ ಯುವ ಕ್ರಿಕೆಟಿಗ ಬಂಜಾರ ಇದೀಗ ಮೃತಪಟ್ಟಿದ್ದಾನೆ. ಬರ್ಖಾಡ್ ತಾಂಡ ಗ್ರಾಮ ಪರ ಆಡಿದ್ದ ಬಂಜಾರ, ಬ್ಯಾಟಿಂಗ್ ವೇಳೆ 70 ರನ್ ಸಿಡಿಸಿದ್ದ. ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಕೆಟ್ ಕೈಚೆಲ್ಲಿದ್ದರು.
ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಇನ್ನಿಲ್ಲ
ದಿಟ್ಟ ಹೋರಾಟ ನೀಡುವ ಬಂಜಾರ 70 ರನ್ ಸಿಡಿಸಿ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದ್ದರು. ಇಷ್ಟೇ ಅಲ್ಲ ಸ್ಪರ್ಧಾತ್ಮ ಮೊತ್ತ ಟಾರ್ಗೆಟ್ ನೀಡುವಲ್ಲೂ ಯಶಸ್ವಿಯಾಗಿದ್ದರು. ಬ್ಯಾಟಿಂಗ್ ಬಳಿಕ ಬರ್ಖಾಡ್ ತಾಂಡ ಗ್ರಾಮ ಟಾರ್ಗೆಟ್ ಡಿಫೆಂಡ್ ಮಾಡಿಕೊಳ್ಳಲು ಕಣಕ್ಕಿಳಿದಿತ್ತು. ಆಲ್ರೌಂಡರ್ ಬಂಜಾರ ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲೂ ಕಮಾಲ್ ಮಾಡಲು ರೆಡಿಯಾಗಿದ್ದ.
ಬೌಲಿಂಗ್ ಮಾಡಲು ರನ್ನಅಪ್ ಆರಂಭಿಸುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಆದರೆ ಸಾಮಾನ್ಯ ನೋವು ಎಂದುಕೊಂಡ ಬೌಲಿಂಗ್ ರನ್ನಪ್ ಮುಂದುವರಿಸಿದ ಬಂಜಾರ, ಕ್ರೀಸ್ ಬಳಿ ಬರುತ್ತಿದ್ದಂತೆ ಕುಸಿದು ಬಿದ್ದಿದ್ದಾನೆ. ಎಲ್ಲರೂ ಸ್ಲಿಪ್ ಆಗಿ ಬಿದ್ದಿರುವ ಸಾಧ್ಯತೆ ಇದೆ ಎಂದು ಸುಮ್ಮನಾಗಿದ್ದರು. ಆದರೆ ನಿಮಿಷ ಕಳೆದರು ಬಂಜಾರ ಏಳಲೇ ಇಲ್ಲ. ತಕ್ಷಣವೇ ಓಡೋಡಿ ಬಂದ ಸಹ ಆಟಗಾರರ ಬಂಜಾರ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
Breaking Teacher death: ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಹೃದಯಾಘಾತಕ್ಕೆ ಬಲಿಯಾದ ಮುಖ್ಯ ಶಿಕ್ಷಕ
ಆತಂಕಗೊಂಡ ಸಹ ಆಟಗಾರರು ನೆರವಿಗೆ ಕೋರಿದ್ದಾರೆ. ಆಯೋಜಕರು ಆಗಮಿಸಿ ಬಂಜಾರ ಎತ್ತಿಕೊಂಡು ವಾಹನದ ಮೂಲಕ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆ ಮಾರ್ಗಮಧ್ಯೆ ಬಂಜಾರ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ. ಈ ಘಟನೆಯಿಂದ ಪಂದ್ಯ ರದ್ದಾಗಿದೆ. ಸಹ ಆಟಗಾರರು ಆಘಾತಕ್ಕೊಳಗಾಗಿದ್ದಾರೆ.