IPL 2022: ಲಖನೌ ತಂಡಕ್ಕೆ ಆ್ಯಂಡಿ ಫ್ಲವರ್ ಹೆಡ್‌ ಕೋಚ್‌..?

By Suvarna NewsFirst Published Dec 17, 2021, 4:12 PM IST
Highlights

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರ್ಜರಿ ಸಿದ್ದತೆ

* 2022ರ ಐಪಿಎಲ್‌ನಲ್ಲಿ 10 ತಂಡಗಳು ಪ್ರಶಸ್ತಿಗಾಗಿ ಕಾದಾಟ

* ಲಖನೌ ತಂಡಕ್ಕೆ ಆ್ಯಂಡಿ ಫ್ಲವರ್ ಕೋಚ್ ಸಾಧ್ಯತೆ

ಲಖನೌ(ಡಿ.17): ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಗೆ ಎಲ್ಲಾ ಫ್ರಾಂಚೈಸಿಗಳು ಈಗಿನಿಂದಲೇ ಸಿದ್ದತೆಗಳು ಆರಂಭವಾಗಿವೆ. 2022ರ ಐಪಿಎಲ್ ಟೂರ್ನಿಯಲ್ಲಿ ಹೊಸದಾಗಿ ಲಖನೌ (Lucknow franchise) ಹಾಗೂ ಅಹಮದಾಬಾದ್‌ (Ahmedabad) ತಂಡಗಳು ಸೇರ್ಪಡೆಯಾಗಿದ್ದು, 10 ತಂಡಗಳು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಇದೀಗ ಐಪಿಎಲ್‌ನ ಹೊಸ ಬೆಳವಣಿಗೆ ಎನ್ನುವಂತೆ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಆ್ಯಂಡಿ ಫ್ಲವರ್ (Andy Flower) ಅವರನ್ನು ಲಖನೌ ತನ್ನ ಹೆಡ್ ಕೋಚ್ ಆಗಿ ನೇಮಿಸಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಮೊದಲು ಆ್ಯಂಡಿ ಫ್ಲವರ್, ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

ಹೊಸ ಎರಡು ತಂಡಗಳ ಹೆಸರು ಇನ್ನೂ ಅಧಿಕೃತವಾಗಿಲ್ಲ. ಹೀಗಿರುವಾಗಲೇ ಲಖನೌ ಹಾಗೂ ಅಹಮದಾಬಾದ್‌ ಫ್ರಾಂಚೈಸಿಗಳು ಮೆಗಾ ಹರಾಜಿಗೂ ಮುನ್ನ ಸಿದ್ದತೆಗಳನ್ನು ಆರಂಭಿಸಿದೆ. ಇದರ ಭಾಗವಾಗಿ ಲಖನೌ ಫ್ರಾಂಚೈಸಿಯು ಆ್ಯಂಡಿ ಫ್ಲವರ್ ಅವರನ್ನು ತನ್ನ ಹೆಡ್‌ ಕೋಚ್ ಆಗಿ ನೇಮಿಸಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಮೊದಲು ನ್ಯೂಜಿಲೆಂಡ್‌ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ (Daniel Vettory) ಹಾಗೂ ಆ್ಯಂಡಿ ಫ್ಲವರ್‌ ನಡುವೆ ಲಖನೌ ತಂಡದ ಕೋಚ್ ಆಗಲು ಸಾಕಷ್ಟು ಪೈಪೋಟಿಯಿದೆ ಎಂದು ವರದಿಯಾಗಿತ್ತು. 

ಇದೀಗ ಆ್ಯಂಡಿ ಫ್ಲವರ್ ಕೋಚ್ ಆಗಿ ಆಯ್ಕೆಯಾಗಿರುವ ಬಗ್ಗೆ ಖ್ಯಾತ ಪತ್ರಕರ್ತ ಕೆ. ಶ್ರೀನಿವಾಸ್ ರಾವ್ ಟ್ವೀಟ್ ಮಾಡಿದ್ದು, ಲಖನೌ ತಂಡಕ್ಕೆ ಆ್ಯಂಡಿ ಫ್ಲವರ್ ಕೋಚ್ ಆಗಲಿದ್ದಾರೆ. ಮುಂದಿನ ವಾರದೊಳಗಾಗಿ ಅಹಮದಾಬಾದ್‌ ಕುರಿತಂತೆ ಹೆಚ್ಚಿನ ಮಾಹಿತಿ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಈಗಾಗಲೇ ಹಲವು ಮಾಧ್ಯಮಗಳು ಕನ್ನಡಿಗ ಕೆ.ಎಲ್. ರಾಹುಲ್ (KL Rahul) ಅವರನ್ನು ಲಖನೌ ಫ್ರಾಂಚೈಸಿಯು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಿದೆ ಎಂದು ವರದಿ ಮಾಡಿವೆ. ಕಳೆದೆರಡು ವರ್ಷಗಳಿಂದ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಪ್ರತಿನಿಧಿಸಿದ್ದ, ಕೆ.ಎಲ್‌. ರಾಹುಲ್‌ ಈ ಬಾರಿ ಹೊಸ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆ.ಎಲ್‌. ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದಲ್ಲೇ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಲಾಯಿತು. ಆದರೆ 29 ವರ್ಷದ ರಾಹುಲ್ ತಾವು ತಂಡದಿಂದ ಹೊರಹೋಗುವುದಾಗಿ ತಿಳಿಸಿದ್ದರು ಎಂದು ಅನಿಲ್ ಕುಂಬ್ಳೆ (Anil Kumble) ಹೇಳಿದ್ದರು. ಮೆಗಾ ಹರಾಜಿಗೂ (IPL Mega Auction) ಮುನ್ನ ಎಲ್ಲಾ ಫ್ರಾಂಚೈಸಿಗಳಿಗೆ ಗರಿಷ್ಠ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಆದರೆ ರಾಹುಲ್ ಪಂಜಾಬ್ ತಂಡದಲ್ಲಿ ಮುಂದುವರೆಯಲು ಹಿಂದೇಟು ಹಾಕಿದ್ದರು. ರಾಹುಲ್ ನಿರ್ಧಾರವನ್ನು ಗೌರವಿಸುವುದಾಗಿ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದರು. ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮಯಾಂಕ್ ಅಗರ್‌ವಾಲ್ (Mayank Agarwal) ಹಾಗೂ ಆರ್ಶದೀಪ್ ಸಿಂಗ್ ಅವರನ್ನು ರೀಟೈನ್ ಮಾಡಿಕೊಂಡಿತ್ತು.

Isa Guha double meaning comment: 'ನಿಮ್ಮದು ತೋರಿಸಿ' ಎಂದ ಇಂಗ್ಲೆಂಡ್ ಆಟಗಾರ್ತಿ..!

ಬಿಸಿಸಿಐ ನಿಯಮದ ಪ್ರಕಾರ ಮೆಗಾ ಹರಾಜಿಗೂ ಮುನ್ನ ಎರಡು ಹೊಸ ತಂಡಗಳು ಗರಿಷ್ಠ ಮೂರು ಆಟಗಾರರನ್ನು ಆಯ್ದುಕೊಳ್ಳಬಹುದುದಾಗಿದೆ. ಕೆ.ಎಲ್‌. ರಾಹುಲ್‌. ರಶೀದ್ ಖಾನ್, ಶ್ರೇಯಸ್ ಅಯ್ಯರ್, ಬೆನ್ ಸ್ಟೋಕ್ಸ್‌, ಡೇವಿಡ್ ವಾರ್ನರ್ ಅವರಂತಹ ಆಟಗಾರರ ಪೈಕಿ ತಲಾ ಮೂರು ಆಟಗಾರರನ್ನು ಆಯ್ದುಕೊಳ್ಳಬಹುದಾಗಿದೆ. ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು ಜನವರಿ ಮೊದಲ ವಾರ ಇಲ್ಲವೇ ಎರಡನೇ ವಾರ ನಡೆಯುವ ಸಾಧ್ಯತೆಯಿದೆ. 

click me!