LPL 2020: ಕೊಲಂಬೊ ಕಿಂಗ್ಸ್‌ ಸೆಮಿಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಕೋಚ್ ಗಿಬ್ಸ್‌ ದಿಢೀರ್ ರಾಜೀನಾಮೆ

Suvarna News   | Asianet News
Published : Dec 13, 2020, 04:47 PM IST
LPL 2020: ಕೊಲಂಬೊ ಕಿಂಗ್ಸ್‌ ಸೆಮಿಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಕೋಚ್ ಗಿಬ್ಸ್‌ ದಿಢೀರ್ ರಾಜೀನಾಮೆ

ಸಾರಾಂಶ

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಕೊಲಂಬೊ ಕಿಂಗ್ಸ್‌ ತಂಡದ ಮುಖ್ಯ ಕೋಚ್ ಹರ್ಷಲ್ ಗಿಬ್ಸ್‌ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕೊಲಂಬೊ(ಡಿ.13): ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಏಂಜಲೋ ಮ್ಯಾಥ್ಯೂಸ್ ನೇತೃತ್ವದ ಕೊಲಂಬೊ ಕಿಂಗ್ಸ್‌ ತಂಡ ಅದ್ಭುತ ಪ್ರದರ್ಶನ ತೋರಿದೆ. ಲೀಗ್ ಹಂತದ ಆಡಿದ 8 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಲೀಗ್ ಹಂತದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. 

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಲಂಬೊ ಕಿಂಗ್ಸ್‌ ತಂಡವು ಗಾಲೆ ಗ್ಲಾಡಿಯೇಟರ್ಸ್‌ ವಿರುದ್ದ ಸೆಣಸಾಡಲು ರೆಡಿಯಾಗಿದೆ. ಹೀಗಿರುವಾಗಲೇ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್‌ ಗಿಬ್ಸ್‌ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕೊಲಂಬೊ ಕಿಂಗ್ಸ್‌ ತಂಡದ ನಾಯಕ ಏಂಜಲೋ ಮ್ಯಾಥ್ಯೂಸ್ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ.

ನ್ಯೂಜಿಲೆಂಡ್ ಎದುರಿನ ಟಿ20 ಸರಣಿಯಿಂದ ಹೊರಬಿದ್ದ ಪಾಕ್ ನಾಯಕ..!

ವೈಯುಕ್ತಿಕ ಕಾರಣದಿಂದ ಹರ್ಷಲ್ ಗಿಬ್ಸ್‌ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ನಮ್ಮ ಮಾಲೀಕರು ನಮಗೆ ತಿಳಿಸಿದ್ದಾರೆ. ಇಂದು ರಾತ್ರಿಯೇ ಲಂಕಾದಿಂದ ದಕ್ಷಿಣ ಆಫ್ರಿಕಾಗೆ ತೆರಳಲಿದ್ದಾರೆ ಎಂದು ಮ್ಯಾಥ್ಯೂಸ್‌ ಹೇಳಿದ್ದಾರೆ.

ತಮ್ಮ ತಾಯಿಗೆ ಕೊರೋನಾ ಸೋಂಕು ತಗುಲಿದ್ದರಿಂದ ತಕ್ಷಣವೇ ಆಫ್ರಿಕಾಗೆ ಹೊರಟಿದ್ದಾಗಿ ಗಿಬ್ಸ್ ನಾಯಕ ಮ್ಯಾಥ್ಯೂಸ್‌ಗೆ ತಿಳಿಸಿದ್ದಾರೆ. ಅಲ್ಲದೇ ಗಿಬ್ಸ್‌ ಸಹೋದರ ಕೂಡಾ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬ ಸಹೋದರಿ ಈಗಷ್ಟೇ ಕೊರೋನಾದಿಂದ ಚೇತರಿಸಿಕೊಂಡಿದ್ದಾಗಿ ಗಿಬ್ಸ್‌ ಟ್ವೀಟ್ ಮೂಲಕ ತಿಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!