
ಸೋಶಿಯಲ್ ಮೀಡಿಯಾದಲ್ಲಿ ಹಲವರು ತಿಲಕ್ ವರ್ಮಾರನ್ನು 'ಟಿಕ್-ಟಿಕ್' ಬ್ಯಾಟರ್ ಎಂದು ಲೇವಡಿ ಮಾಡುತ್ತಿದ್ದಾರೆ. ಟಿ20 ಮಾದರಿಗೆ ಬೇಕಾದ ವೇಗದಲ್ಲಿ ರನ್ ಗಳಿಸಲು ತಿಲಕ್‌ಗೆ ಸಾಧ್ಯವಾಗುತ್ತಿಲ್ಲ. ಅವರ ಬದಲು ಕನ್ನಡಿಗ ಕೆ.ಎಲ್. ರಾಹುಲ್ ಆಡುವ ರೀತಿಯಲ್ಲೇ ಆಕ್ರಮಣಕಾರಿ ಆಟಗಾರನಾದ ಮಲಯಾಳಿ ಹುಡುಗ ಸಂಜು ಸ್ಯಾಮ್ಸನ್‌ರನ್ನು ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಿಕೊಳ್ಳಬೇಕು ಎಂಬುದು ಅಭಿಮಾನಿಗಳ ಪ್ರಮುಖ ಬೇಡಿಕೆಯಾಗಿದೆ. ತಿಲಕ್ ವಿರುದ್ಧ ಬಂದಿರುವ ಕೆಲವು ಟ್ರೋಲ್‌ಗಳು ಇಲ್ಲಿವೆ...
ಟೀಂ ಇಂಡಿಯಾ ಈಗಾಗಲೇ ಸೂಪರ್ 8 ಹಂತಕ್ಕೆ ಕ್ವಾಲಿಫೈ ಆಗಿರುವಾಗ, ಸಂಜು ಸ್ಯಾಮ್ಸನ್ ಅವರಂತಹ ಅಟ್ಯಾಕಿಂಗ್ ಆಟಗಾರನಿಗೆ ಒಂದು ಅವಕಾಶ ನೀಡಬೇಕಿತ್ತು ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ವಿಶ್ವಕಪ್‌ನಲ್ಲಿ ಸಿಕ್ಕ ಒಂದೇ ಒಂದು ಅವಕಾಶದಲ್ಲಿ ಸಂಜು ಕೇವಲ 8 ಎಸೆತಗಳಲ್ಲಿ 22 ರನ್ ಚಚ್ಚಿದ್ದರು. ನಮೀಬಿಯಾ ವಿರುದ್ಧ ಈ ಪಂದ್ಯ ನಡೆದಿತ್ತು. ನಂತರ, ಅಭಿಷೇಕ್ ಶರ್ಮಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸ್ ಬಂದಾಗ ಸಂಜುಗೆ ಸ್ಥಾನ ತಪ್ಪಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.