ಮೊಹಮ್ಮದ್ ಶಮಿಯನ್ನೇ ಹೋಲುವ ವ್ಯಕ್ತಿಯೊಬ್ಬರು ನಾಗಪುರದಲ್ಲಿ ಪತ್ತೆಯಾಗಿದ್ದಾರೆ. ಅವರಂತೆಯೇ ಮುಖಚಹರೆ, ಗಡ್ಡ, ಎತ್ತರ, ದೇಹವನ್ನು ಹೊಂದಿರುವ ಈ ವ್ಯಕ್ತಿಯನ್ನು ನೋಡಿದವರು ತಾವು ಶಮಿಯನ್ನೇ ನೋಡಿದ್ದೇವೆ ಎಂದು ಭಾವಿಸುವುದು ಗ್ಯಾರೆಂಟಿ.
ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿರುವ ಮೊಹಮ್ಮದ್ ಶಮಿ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಕಳೆದ ವಿಶ್ವಕಪ್ ನಲ್ಲಿ ಅತ್ಯುತ್ತಮ ಆಟವಾಡಿದ ಬಳಿಕ ತಮ್ಮ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಂಡ ಮೊಹಮ್ಮದ್ ಶಮಿಗೆ ಏಕಾಏಕಿ ಫ್ಯಾನ್ಸ್ ಕೂಡ ಅಧಿಕವಾದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್ಸ್ ವಿರುದ್ಧ ನಡೆದ ಐಐಸಿ ವಿಶ್ವಕಪ್ ಸೆಮಿಫೈನಲ್ಸ್ ಪಂದ್ಯದಲ್ಲಿ ಬರೋಬ್ಬರಿ 7 ವಿಕೆಟ್ ಗಳನ್ನು ಪಡೆದ ಶಮಿಯ ಕೈಚಳಕಕ್ಕೆ ಕ್ರಿಕೆಟ್ ಪ್ರೇಮಿಗಳು ರೋಮಾಂಚನಗೊಂಡಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ಅವರಿಗೆ ಮದುವೆಯ ಆಫರ್ ಗಳು ನೇರವಾಗಿ ಮಹಿಳೆಯರಿಂದಲೇ ಬಂದಿದ್ದವು. ಅದಾದ ಬಳಿಕ ಅವರ ಬೌಲಿಂಗ್ ಶೈಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇತ್ತೀಚೆಗೆ ಮೊಹಮ್ಮದ್ ಶಮಿ ಕ್ರೀಡಾ ಕ್ಷೇತ್ರದ ಅರ್ಜುನ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಮಾರನೆಯ ದಿನವೇ ತಮ್ಮ ಅಮ್ಮನಿಗೆ ಭಾವುಕರಾಗಿ ಬರೆದ ಪತ್ರದಿಂದಾಗಿ ಅವರು ಸುದ್ದಿಯಾಗಿದ್ದರು. ಇದೀಗ, ಮೊಹಮ್ಮದ್ ಶಮಿಯನ್ನೇ ಹೋಲುವ ವ್ಯಕ್ತಿಯೊಬ್ಬ ನಾಗಪುರದಲ್ಲಿ ಪತ್ತೆಯಾಗಿದ್ದಾರೆ. ಈ ವಿಚಾರಕ್ಕಾಗಿ ಮತ್ತೆ ಶಮಿಯನ್ನು ನೆನಪಿಸಿಕೊಳ್ಳುವಂತಾಗಿದೆ.
ಸೋಷಿಯಲ್ ಮೀಡಿಯಾ (Social Media) ಎಕ್ಸ್ ನಲ್ಲಿ ಒಬ್ಬರು ಮೊಹಮ್ಮದ್ ಶಮಿಯನ್ನೇ (Mohammad Shami) ಹೋಲುವ ವ್ಯಕ್ತಿಯ ವೀಡಿಯೋವನ್ನು ಶೇರ್ (Share) ಮಾಡಿದ್ದಾರೆ. ಇದನ್ನು ನೋಡಿದ ಶಮಿಯ ಅಭಿಮಾನಿಗಳು ಶಾಕ್ (Shock) ಆಗಿದ್ದಾರೆ. ಏಕೆಂದರೆ, ಇವರು ಶಮಿ ಅಲ್ಲ ಎನ್ನಲು ಸಾಧ್ಯವಿಲ್ಲದಷ್ಟು ಹೋಲಿಕೆ ಹೊಂದಿದ್ದಾರೆ. ಸ್ವತಃ ತಾವೂ ಶಮಿಯ ಅಭಿಮಾನಿ (Fan) ಎಂದು ಇವರು ಹೇಳಿಕೊಂಡಿದ್ದಾರೆ. ಗ್ರೇ ಬಣ್ಣದ ಜಾಕೆಟ್ ಹಾಗೂ ಕ್ಯಾಪ್ ಧರಿಸಿರುವ ಈ ವ್ಯಕ್ತಿಯನ್ನು ನೋಡಿದವರು ತಾವು ಶಮಿಯನ್ನೇ ನೋಡಿದ್ದೇವೆ ಎಂದು ಭ್ರಮಿಸುವುದು ಗ್ಯಾರೆಂಟಿ. ಅಸಲಿಗೆ ಇವರ ಹೆಸರು ಚೇತನ್ ಶರ್ಮಾ, ನಾಗಪುರದಲ್ಲಿ ನೆಲೆಸಿದ್ದಾರೆ.
ಮಾಜಿ ಭಾವಿ ಪತಿಯೇ ಬೇರೆ, ಮದ್ವೆಯಾಗಿದ್ದೇ ಬೇರೆಯವರನ್ನಾ? ಏನಿದು ಆಮೀರ್ ಖಾನ್ ಪುತ್ರಿಯ ಹೊಸ ವಿಷ್ಯ?
undefined
ಸೇಮ್ ಆಟಿಟ್ಯೂಡ್
ಈ ವೀಡಿಯೋ ಮಾಡಿರುವವರು ಮೊಹಮ್ಮದ್ ಶಮಿಯನ್ನು ಹೋಲುವ ವ್ಯಕ್ತಿಯ ಬಳಿ ಬೌಲಿಂಗ್ ಸ್ಟೈಲ್ (Style) ಮಾಡಲು ಕೇಳುತ್ತಾರೆ. ಅವರು ಅದೇ ರೀತಿಯ ಆಕ್ಷನ್ ಮಾಡಿ ತೋರಿಸುವುದು ಸಹ ಶಮಿಯನ್ನೇ ಹೋಲುತ್ತದೆ. ವೀಡಿಯೋದಲ್ಲಿ ಇರುವ ವ್ಯಕ್ತಿ ಶಮಿ ಅಲ್ಲ ಎಂದು ಹೇಳುವುದು ಸಹ ಕಷ್ಟವಾಗುತ್ತದೆ. ಇದೀಗ ಈ ವೀಡಿಯೋ ಮೊಹಮ್ಮದ್ ಶಮಿಯ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ. ಹೀಗಾಗಿ, ಕಾಮೆಂಟುಗಳ ಮಹಾಪೂರವೇ ಹರಿದು ಬಂದಿದೆ.
Mohammed Shami Twin 😂❤️ pic.twitter.com/gHBKiCIIZE
— multiple projects (@FaizanMultiple)
ಡಿವೋರ್ಸ್ ಕೇಸ್ ಇವರ ಮೇಲೆ ಹಾಕ್ಬಿಡಿ!
ಒಬ್ಬರು, “ಶಮಿ ಅವರ ಸಹೋದರ ಕೂಡ ಶಮಿಯಂತೆಯೇ ಇದ್ದಾರೆ. ಇಲ್ಲಿ ಮತ್ತೊಬ್ಬರು ಸಹ ಅವರಂತೆಯೇ ಕಂಡುಬರುತ್ತಿದ್ದಾರೆ’ ಎಂದು ಹೇಳಿದ್ದಾರೆ. ಮತ್ತೊಬ್ಬರು, ತಮಾಷೆಯಾಗಿ “ಡಿವೋರ್ಸ್ ಗೆ ಸಂಬಂಧಿಸಿದ ನಿಮ್ಮ ಪ್ರಕರಣವನ್ನು ಇವರಿಗೆ ಶಿಫ್ಟ್ (Shift) ಮಾಡಿಬಿಡಿ’ ಎಂದು ಸಲಹೆ ನೀಡಿದ್ದಾರೆ. ಒಬ್ಬರು, ಇಬ್ಬರ ಆಟಿಟ್ಯೂಡ್ (Attitude) ಕೂಡ ಒಂದೇ ರೀತಿಯಾಗಿದೆ ಎಂದು ವಿಸ್ಮಯ ಪಟ್ಟಿದ್ದಾರೆ. ಮತ್ತೊಬ್ಬರು, “ಅರೆ ಭಾಯಿ, ಬೇರೆ ಯಾರೋ ಒಬ್ಬರು ಅರ್ಜುನ ಪ್ರಶಸ್ತಿಯನ್ನು (Arjuna Award) ಸ್ವೀಕಾರ ಮಾಡಲಿಲ್ಲ ತಾನೇ?’ ಎಂದು ತಮಾಷೆ ಮಾಡಿದ್ದಾರೆ. ಯಾರೋ ಒಬ್ಬರು “ಮೊದಲು ಬೌಲಿಂಗ್ ಮಾಡಿ ತೋರಿಸಲಿ, ಆ ಬಳಿಕ ಶಮಿ ಹೌದೋ ಅಲ್ಲವೋ ಎಂದು ಹೇಳುತ್ತೇನೆ’ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಶಮಿಯ ನಕಲು ವ್ಯಕ್ತಿ ಅವರ ಅಭಿಮಾನಿಗಳಲ್ಲಿ ಭಾರೀ ಪುಳಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಈ ವೀಡಿಯೋಕ್ಕೂ ಭರ್ಜರಿ ಲೈಕ್ಸ್ (Likes) ದೊರೆತಿವೆ.
ಹಿಂದೂ-ಮುಸ್ಲಿಂ ಮಗಳಿಗೆ ಕ್ರೈಸ್ತ ಸಂಪ್ರದಾಯದ ಮದುವೆ: ಆಮೀರ್ ಖಾನ್ ಕಣ್ಣೀರಿಂದೇ ಭಾರಿ ಚರ್ಚೆ!
ಜಗತ್ತಿನಲ್ಲಿ ಒಂದೇ ರೀತಿಯಲ್ಲಿ ಏಳು ಜನರಿರುತ್ತಾರೆ ಎನ್ನುವ ಮಾತಿದೆ. ಕೆಲವರು ಇದನ್ನು ಬಲವಾಗಿ ನಂಬುತ್ತಾರೆ ಕೂಡ. ಮೊಹಮ್ಮದ್ ಶಮಿಯ ನಕಲು ವ್ಯಕ್ತಿಯನ್ನು ನೋಡಿದರೆ ಆ ಭಾವನೆ ಗಾಢವಾಗುತ್ತದೆ.