ಮಾಲಿಂಗಾ ಮ್ಯಾಜಿಕ್, ದಾಖಲೆ ಮೇಲೆ ದಾಖಲೆ.. 4ಕ್ಕೇ ನಾಲ್ಕು! ವಿಡಿಯೋ

Published : Sep 06, 2019, 11:53 PM IST
ಮಾಲಿಂಗಾ ಮ್ಯಾಜಿಕ್, ದಾಖಲೆ ಮೇಲೆ ದಾಖಲೆ.. 4ಕ್ಕೇ ನಾಲ್ಕು! ವಿಡಿಯೋ

ಸಾರಾಂಶ

ಮೂರನೇ ಓವರ್ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ ಕಿತ್ತ ಮಾಲಿಂಗ/ ಟಿ-20 ಕ್ರಿಕೆಟ್ ನಲ್ಲಿ 100 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್/ ಶ್ರೀಲಂಕಾದ ವೇಗಿ ದಾಳಿಗೆ ಸೋಸು ಸುಣ್ಣವಾದ ನ್ಯೂಜಿಲೆಂಡ್

ಪಲ್ಲೆಕೆಲೆ[ಸೆ. 06] ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಚಕ ಸೋಲು ಅನುಭವಿಸಿದ್ದ ನ್ಯೂಜಿಲೆಂಡ್ ತಂಡಕ್ಕೆ ಶ್ರೀಲಂಕಾದ ಹಿರಿಯ ವೇಗಿ ಲಸಿತ್ ಮಾಲಿಂಗ ಸರಿಯಾದ ಶಾಕ್ ನೀಡಿದ್ದಾರೆ.. 4 ಚೆಂಡುಗಳಲ್ಲಿ 4 ವಿಕೆಟ್ ಕಬಳಿಸಿದ್ದಾರೆ.

ಮೂರನೇ ಓವರ್ ಕೈಗೆ ಎತ್ತಿಕೊಂಡ ಮಾಲಿಂಗ್ ಕ್ರಮವಾಗಿ  3ನೇ ಚೆಂಡಿನಲ್ಲಿ ಮುನ್ರೋ, 4ನೇ ಚೆಂಡಿನಲ್ಲಿ ರುದರ್ಫರ್ಡ್, 5ನೇ ಚೆಂಡಿನಲ್ಲಿ ಗ್ರ್ಯಾಂಡ್ ಹೋಮ್ ಮತ್ತು ಆರನೇ ಚೆಂಡಿನಲ್ಲಿ ರಾಸ್ ಟೇಲರ್ ಅವರ ಬಲಿ ಪಡೆದರು. ಈ ಮೂಲಕ ಟಿ-20 ಇತಿಹಾಸದಲ್ಲಿ 100 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಖ್ಯಾತಿಯೂ 36 ವರ್ಷದ ಮಲಿಂಗ ಅವರದ್ದಾಯಿತು.

ತಮ್ಮ 76ನೇ ಪಂದ್ಯದಲ್ಲಿ ಮುನ್ರೋ ವಿಕೆಟ್ ಪಡೆಯುವ ಮೂಲಕ 100 ನೇ ವಿಕೆಟ್ ಸಾಧನೆ ಮಾಡಿದರು. ಮತ್ತೆ 5ನೇ ಓವರ್ ನಲ್ಲಿ ದಾಳಿಗಿಳಿದ ಮಲಿಂಗಾ ಟಿಮ್ ಸೆಲ್ಫೇರ್ಟ್ ಅವರ ವಿಕೆಟ್ ಕಬಳಿಸಿ 5ರ ಗೊಂಚಲು ತಮ್ಮದಾಗಿರಿಸಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 20 ಓವರ್ ಗಳಲ್ಲಿ 126 ರನ್ ಗಳಿಸಿತ್ತು. ಇದನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ಮಾಲಿಂಗ ದಾಳಿಗೆ ಕುಸಿದು 16 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 88 ರನ್ ಗೆ ಆಲೌಟ್ ಆಯಿತು.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?