
ಬೆಂಗಳೂರು(ಡಿ.14): ಜಗತ್ತಿನ ಹಲವು ಭಾಗಗಳಲ್ಲಿ ಪ್ರತಿವರ್ಷ ವಿವಿಧ ದೇಶಿ ಟಿ20 ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಲೇ ಇರುತ್ತವೆ. ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League), ಆಸ್ಟ್ರೇಲಿಯಾದಲ್ಲಿ ಬಿಗ್‌ಬ್ಯಾಶ್ ಲೀಗ್ (Big Bash League), ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (Pakistan Super League), ವೆಸ್ಟ್ ಇಂಡೀಸ್‌ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶದಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಇಂಗ್ಲೆಂಡ್‌ನಲ್ಲಿ ವೆಲಾಸಿಟಿ ಬ್ಲಾಸ್ಟ್ ಟಿ20 ಲೀಗ್ ಹೀಗೆ ಹಲವು ಟೂರ್ನಿಗಳು ನಡೆಯುತ್ತವೆ. ಈ ಸಾಲಿಗೆ ಶ್ರೀಲಂಕಾ ಕೂಡಾ ಸೇರ್ಪಡೆಗೊಂಡಿದ್ದು, ಈ ಟೂರ್ನಿಗೆ Sky247 ಕೈ ಜೋಡಿಸಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಕಳೆದ ವರ್ಷ ಅದ್ಧೂರಿಯಾಗಿ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಗೆ Sky247 ಸಹಭಾಗಿತ್ವದಲ್ಲಿ ಚಾಲನೆ ನೀಡಲಾಗಿದೆ. ದ್ವೀಪರಾಷ್ಟ್ರವಾದ ಶ್ರೀಲಂಕಾದ ಐದು ವಿವಿಧ ನಗರಗಳನ್ನು ಪ್ರತಿನಿಧಿಸುವ ಐದು ತಂಡಗಳು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದವು. ಜಾಪ್ನಾ ಕಿಂಗ್ಸ್, ದಂಬುಲ್ಲಾ ಜೈಂಟ್ಸ್, ಗಾಲೆ ಗ್ಲಾಡಿಯೇಟರ್ಸ್, ಕೊಲಂಬೊ ಸ್ಟಾರ್ಸ್ ಮತ್ತು ಕ್ಯಾಂಡಿ ವಾರಿಯರ್ಸ್ ತಂಡಗಳು Sky247 LPL ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಜಾಪ್ನಾ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಜಾಪ್ನಾ ಕಿಂಗ್ಸ್ ತಂಡವು ಎರಡನೇ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲೂ ಭರ್ಜರಿ ಆರಂಭವನ್ನೇ ಪಡೆದಿದೆ.
ಇಲ್ಲಿಯವರೆಗೆ ಎಲ್ಲಾ ತಂಡಗಳು ಕನಿಷ್ಠ 5 ಪಂದ್ಯಗಳನ್ನು ಆಡಿವೆ(ಗಾಲೆ ಗ್ಲಾಡಿಯೇಟರ್ಸ್ ತಂಡವು 6 ಪಂದ್ಯಗಳನ್ನಾಡಿದೆ). ಈ ಪೈಕಿ ಜಾಪ್ನಾ ಕಿಂಗ್ಸ್ ತಂಡವು ಈಗಾಗಲೇ 4 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇದಾದ ಬಳಿಕ ದಂಬುಲಾ ಜೈಂಟ್ಸ್ 3 ಪಂದ್ಯಗಳನ್ನು ಗೆಲ್ಲುವ ಮೂಲಕ ಗ್ಲಾಡಿಯೇಟರ್ಸ್ ಹಾಗೂ ಸ್ಟಾರ್ಸ್‌ಗಿಂತ ಅಂಕಪಟ್ಟಿಯಲ್ಲಿ ಮೇಲಿದೆ. ಈ ಎರಡು ತಂಡಗಳು ತಲಾ 2 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಕ್ಯಾಂಡಿ ವಾರಿಯರ್ಸ್ ತಂಡವು ನಿರಾಶದಾಯಕ ಆರಂಭವನ್ನು ಕಂಡಿದ್ದು, ಆಡಿದ ಐದು ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ.
ಇನ್ನು Sky247 ಲಂಕಾ ಪ್ರೀಮಿಯರ್ ಲೀಗ್ 2021 ಟೂರ್ನಿಯಲ್ಲಿ ಆಟಗಾರರ ವೈಯುಕ್ತಿಕ ಪ್ರದರ್ಶನವನ್ನು ಗಮನಿಸುವುದಾದರೇ ಕೊಲಂಬೊ ಸ್ಟಾರ್ಸ್ ತಂಡದ ಬ್ಯಾಟರ್ ದಿನೇಶ್ ಚಾಂಡಿಮಲ್ ಇಲ್ಲಿಯವರೆಗೆ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಚಾಂಡಿಮಲ್ 60.33ರ ಬ್ಯಾಟಿಂಗ್ ಸರಾಸರಿಯಲ್ಲಿ 181 ರನ್ ಸಿಡಿಸಿದ್ದಾರೆ. ಇನ್ನು ಗಾಲೆ ಗ್ಲಾಡಿಯೇಟರ್ಸ್ ತಂಡದ ಸಮಿತ್ ಪಟೇಲ್ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಆರು ಪಂದ್ಯಗಳಿಂದ 11 ವಿಕೆಟ್ ಕಬಳಿಸಿದ್ದಾರೆ.
ಇನ್ನು ಈ ಸ್ಪರ್ಧಾತ್ಮಕ ಟೂರ್ನಿಯ ಜನಪ್ರಿಯತೆಯ ವಿಚಾರಕ್ಕೆ ಬಂದರೆ, Sky247 LPL ಟೂರ್ನಿಯು ಕಳೆದ ವರ್ಷದಿಂದಲೇ ಜಾಗತಿಕ ಮಟ್ಟದಲ್ಲಿ ಗಮನವನ್ನು ಸೆಳೆದಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಟೂರ್ನಿಯಲ್ಲಿ ಪಾಲ್ಗೊಂಡ ಅಂತಾರಾಷ್ಟ್ರೀಯ ಆಟಗಾರರ ಸಂಖ್ಯೆಯೂ ಹೆಚ್ಚಿದೆ. ಅಂತಾರಾಷ್ಟ್ರೀಯ ತಾರಾ ಕ್ರಿಕೆಟಿಗರಾದ ವಹಾಬ್ ರಿಯಾಜ್, ಶೋಯೆಬ್ ಮಲಿಕ್, ಸಮಿತ್ ಪಟೇಲ್, ರವಿ ರಾಂಪಾಲ್, ರೋಮನ್ ಪೊವೆಲ್ ಸೇರಿದಂತೆ ಹಲವು ಕ್ರಿಕೆಟಿಗರು Sky247 LPL 2021 ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. Sky247 ನೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಗೆ ಮತ್ತಷ್ಟು ಮೆರಗು ತಂದುಕೊಟ್ಟಿದೆ.
ಇನ್ನು ಗುಂಪು ಹಂತದಲ್ಲಿ 7 ಪಂದ್ಯಗಳು ನಡೆಯಬೇಕಿದ್ದು, ನೀವೆಲ್ಲರೂ Sky247ನೊಂದಿಗೆ ಟೂರ್ನಿಯಲ್ಲಿ ಆಟಗಾರರ ಪ್ರದರ್ಶನದ ಮನರಂಜನೆಯನ್ನು ಪಡೆಯಬಹುದಾಗಿದೆ. ಮನರಂಜನೆ ಹಾಗೂ ಅವಕಾಶಗಳು ಕೇವಲ ಗ್ರೂಪ್ ಹಂತಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಪ್ಲೇ ಆಫ್ ಹಾಗೂ ಡಿಸೆಂಬರ್ 23ರಂದು ನಡೆಯಲಿರುವ ಫೈನಲ್‌ವರೆಗೂ ಇರಲಿದೆ. 2021ನೇ ಸಾಲಿನ ಲಂಕಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಕ್ಕೆ ಹೊಂಬಾನ್‌ಟೊಟದ ಮಹಿಂದಾ ರಾಜಪಕ್ಸಾ ಮೈದಾನ ಆತಿಥ್ಯವನ್ನು ವಹಿಸಿದೆ. ಈಗಾಗಲೇ ಹಲವು ರೋಚಕ ಪಂದ್ಯಾಟಗಳಿಗೆ ಸಾಕ್ಷಿಯಾಗಿದ್ದು, ಇನ್ನೂ ಹಲವು ಪಂದ್ಯಗಳಲ್ಲಿ ಹೈವೋಲ್ಟೇಜ್ ಪಂದ್ಯಗಳನ್ನು ನಿರೀಕ್ಷೆ ಮಾಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.