
ಪ್ರಾಗ್ವೆ(ಜ.20): ಕಾರು ಖರೀದಿಸಬೇಕು ಅನ್ನೋದು ಬಹುತೇಕರ ಬಯಕೆ. ಆದರೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕಾರಣ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಕಡಿಮೆ ಬೆಲೆಯ ಕಾರು ಕೂಡು ಮಧ್ಯಮ ವರ್ಗಕ್ಕೆ ದುಬಾರಿ. ಆದರೆ ಶ್ರೀಮಂತರ ಗೋಳು ಹಾಗಿಲ್ಲ. ಕೋಟಿ ಕೋಟಿ ರೂಪಾಯಿ ಕಾರನ್ನು ಸುಲಭವಾಗಿ ಖರೀದಿಸುತ್ತಾರೆ. ಬಳಿಕ ಕೋಟಿ ರೂಪಾಯಿ ಸುರಿದು ಮಾಡಿಫಿಕೇಶ್ ಮಾಡುತ್ತಾರೆ. ಕಾರು ಇಷ್ಟವಾಗಿಲ್ಲ ಅಂದರೆ ಮಾರಾಟ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಾರನ್ನೇ ಸುಟ್ಟು ಭಸ್ಮ ಮಾಡಿದ್ದಾನೆ.
ಇದನ್ನೂ ಓದಿ: ಕೋಟಿ ರೂ. ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಬಿಸಾಡಿದ ಪುಣ್ಮಾತ್ಮ!.
ಜೆಕ್ ಗಣರಾಜ್ಯದ ವ್ಯಕ್ತಿ ಲ್ಯಾಂಬೋರ್ಗಿನಿ ಕಂಪನಿಯ ದುಬಾರಿ ಹಾಗೂ ಲಿಮಿಟೆಡ್ ಎಡಿಶನ್ ಅವೆಂಟಡೂರ್ ಕಾರನ್ನು ಖರೀದಿಸಿದ್ದಾನೆ. ಭಾರತದಲ್ಲಿ ಇದರ ಬೆಲೆ ಸರಿಸುಮಾರು 6 ಕೋಟಿ ರೂಪಾಯಿ. ದುಬಾರಿ ಕಾರು ಖರೀದಿಸಿ ಮತ್ತೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಕಾರಿನ ಲುಕ್ ಬದಲಸಿದ್ದಾನೆ. ಮಾಡಿಫಿಕೇಶ್ ಬಳಿಕ ಕಾರನ್ನು ನೋಡಿದಾಗ ಮಾಲೀಕನ ಸಿಟ್ಟು ನೆತ್ತಿಗೇರಿದೆ. ಕೋಟಿ ರೂಪಾಯಿ ಕಾರು ಮಾಲೀಕನಿಗೆ ಸಾವಿರ ರೂಪಾಯಿ ಕಾರು ರೀತಿಯಲ್ಲಿ ಕಂಡಿದೆ.
ಇದನ್ನೂ ಓದಿ: ತನ್ನದೇ ಬೈಕ್ ಸುಟ್ಟು ಆಕ್ರೋಶ; ವಾಹನವೂ ಹೋಯ್ತು, ಅರೆಸ್ಟ್ ಆದ!
ರೋಚ್ಚಿಗೆದ್ದ ಮಾಲೀಕ 5 ನಿಮಿಷ ಯೋಚಿಸಿದ್ದರೆ ಎಲ್ಲವೂ ಶಾಂತವಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ಕಾರಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾನೆ. ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿತು. ಅಷ್ಟರಲ್ಲೇ ಕಾರು ಬಹುತೇಕ ಸುಟ್ಟು ಕರಕಲಾಗಿತ್ತು.
ಸಾರ್ವಜನಿಕ ಸ್ಥಳದಲ್ಲಿ ಕಾರು ಸುಟ್ಟು ಅಪಾಯಕಾರಿ ಸಂದರ್ಭ ಸೃಷ್ಟಿಸಿದ ಕಾರು ಮಾಲೀಕನ ವಿರುದ್ಧ ಕೇಸ್ ದಾಖಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.