ಲಂಡನ್‌ನಲ್ಲಿ ಕೊಹ್ಲಿ ರಹಸ್ಯ ಭೇಟಿಯ ಫೋಟೋ ವೈರಲ್.. ಆಕ್ರೋಶ ಹೊರಹಾಕಿದ RCB ಸ್ಟಾರ್..!

Published : Jul 11, 2026, 11:14 AM IST
virat kohli and JORDON COX

ಸಾರಾಂಶ

ಲಂಡನ್‌ನ ಕೆಫೆಯೊಂದರಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಜೋರ್ಡಾನ್ ಕಾಕ್ಸ್ ಜೊತೆಗಿನ ವಿರಾಟ್ ಕೊಹ್ಲಿಯ ಖಾಸಗಿ ಭೇಟಿಯ ಫೋಟೋ ವೈರಲ್ ಆಗಿದೆ. ಈ ಘಟನೆಯಿಂದ ಬೇಸರಗೊಂಡಿರುವ ಕಾಕ್ಸ್, ಕೊಹ್ಲಿಯ ಖಾಸಗಿ ಬದುಕಿಗೆ ಅಡ್ಡಿಪಡಿಸುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಂಡನ್: ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿದ್ದರೂ ಅಥವಾ ಮೈದಾನದ ಹೊರಗಿದ್ದರೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಲಂಡನ್‌ನ ಕೆಫೆಯೊಂದರಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಹಾಗೂ ಆರ್‌ಸಿಬಿ ತಂಡದ ತಮ್ಮ ಸಹ ಆಟಗಾರ ಜೋರ್ಡಾನ್ ಕಾಕ್ಸ್ ಅವರೊಂದಿಗೆ ವಿರಾಟ್ ನಡೆಸಿದ ಖಾಸಗಿ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಫೋಟೋ ಲೀಕ್ ಆಗಿರುವುದಕ್ಕೆ ಜೋರ್ಡಾನ್ ಕಾಕ್ಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಡೆದಿದ್ದೇನು?

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪದಾರ್ಪಣೆಗೆ ಮುನ್ನ ಜೋರ್ಡಾನ್ ಕಾಕ್ಸ್ ಲಂಡನ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದರು. ಒಂದು ಶಾಂತವಾದ ಕೆಫೆಯಲ್ಲಿ ಇಬ್ಬರೂ ಖಾಸಗಿಯಾಗಿ ಮಾತನಾಡುತ್ತಾ ಕುಳಿತಿದ್ದ ಫೋಟೋಗಳನ್ನು ಯಾರೋ ರಹಸ್ಯವಾಗಿ ಕ್ಲಿಕ್ಕಿಸಿ ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ನಾನು ದಂಗಾಗಿ ಹೋದೆ ಎಂದ ಕಾಕ್ಸ್

ಈ ಘಟನೆ ಬಗ್ಗೆ ಮಾತನಾಡಿದ ವಿಕೆಟ್ ಕೀಪರ್ ಬ್ಯಾಟರ್ ಕಾಕ್ಸ್, ನಾವು ಕೆಫೆಯಲ್ಲಿ ಕುಳಿತಿದ್ದಾಗ ನೂರಾರು ಜನರು ನಮ್ಮನ್ನು ದಾಟಿ ಹೋದರು, ಯಾರೂ ನಮ್ಮನ್ನು ತಡೆಯಲಿಲ್ಲ. ಆದರೆ ಎರಡು ಗಂಟೆಗಳ ನಂತರ ಸ್ವತಃ ವಿರಾಟ್ ಅವರೇ ನನಗೆ ಮೆಸೇಜ್ ಮಾಡಿ, ಆ ಫೋಟೋಗಳನ್ನು ತೋರಿಸಿದಾಗ ನಾನು ದಂಗಾಗಿ ಹೋದೆ. ಅವರ ಖಾಸಗಿ ಬದುಕಿಗೆ ಈ ರೀತಿ ಅಡ್ಡಿಪಡಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದ್ದಾರೆ.

ವಿರಾಟ್ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬದುಕಲು ಬಯಸುತ್ತಾರೆ. ಆದರೆ ಅವರ ಅಗಾಧವಾದ ಜನಪ್ರಿಯತೆ ಅವರಿಗೆ ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಅವರು ಎಲ್ಲರ ಕಣ್ಣಿನಿಂದ ದೂರ ಉಳಿದು ಕುಟುಂಬದೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ, ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗುತ್ತಿಲ್ಲ ಎಂದು ಕಾಕ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಪ್ರೈವೆಸಿ ಬಗ್ಗೆ ಕೊಹ್ಲಿ ಕಾಳಜಿ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೊದಲಿನಿಂದಲೂ ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರ ವಿಷಯದಲ್ಲಿ ಪ್ರೈವೆಸಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಕಾಯ್ ಜೊತೆ ಕೊಹ್ಲಿ ಆಟವಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಪದೇ ಪದೇ ಈ ರೀತಿ ಖಾಸಗಿ ಬದುಕಿಗೆ ಕ್ಯಾಮರಾ ಕಣ್ಣುಗಳು ಇಣುಕುತ್ತಿರುವುದು ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.

ಕೊಹ್ಲಿ ಬಗ್ಗೆ ಕಾಕ್ಸ್ ಮೆಚ್ಚುಗೆ

ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಿದ್ದ ಜೋರ್ಡಾನ್ ಕಾಕ್ಸ್, ಕೊಹ್ಲಿ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದಾರೆ. ಅವರು ಅಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿದ್ದರೂ, ಸದಾ ಇತರರಿಗೆ ಸಹಾಯ ಮಾಡಲು ಬಯಸುತ್ತಾರೆ. ಅವರ ಮಾರ್ಗದರ್ಶನ ಅದ್ಭುತ. ಕೇವಲ ತಮ್ಮ ಆಟದ ಬಗ್ಗೆ ಯೋಚಿಸದೆ ತಂಡದ ಇತರ ಆಟಗಾರರ ಬೆಳವಣಿಗೆಗೆ ಶ್ರಮಿಸುವ ವಿರಳ ವ್ಯಕ್ತಿತ್ವ ಕೊಹ್ಲಿಯದ್ದು ಎಂದು ಹೊಗಳಿದ್ದಾರೆ.

ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಆರ್‌ಸಿಬಿ ಚಾಂಪಿಯನ್ ಆದ ಬೆನ್ನಲ್ಲೇ ಕೊಹ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹ್ಯಾಮ್‌ಸ್ಟ್ರಿಂಗ್ ಗಾಯದಿಂದಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಅವರು ಹೊರಗುಳಿದಿದ್ದರು. ಈಗ ಸಂಪೂರ್ಣ ಫಿಟ್ ಆಗಿರುವ ಕೊಹ್ಲಿ, ಜುಲೈ 14 ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇನ್ನು ರೆಡಿಯಾಗಿಲ್ಲ ಹುಡುಗ, BCCI ಪರಾಮರ್ಶೆ ಬೆನ್ನಲ್ಲೇ ವೈಭವ್ ಸೂರ್ಯವಂಶಿ ವಿರುದ್ಧ ಗುಡುಗಿದ ಫ್ಯಾನ್ಸ್
ಇಂಗ್ಲೆಂಡ್ ಎದುರು ಭಾರತ 285 ರನ್‌ಗೆ ಅಲೌಟ್‌; ಐತಿಹಾಸಿಕ ಲಾರ್ಡ್ಸ್‌ ಟೆಸ್ಟ್‌ನಲ್ಲಿ ಅಪರೂಪದ ದಾಖಲೆ ಬರೆದ ಸ್ಮೃತಿ ಮಂಧನಾ!