ಕಿವೀಸ್ ನೆಲದಲ್ಲಿ ಕನ್ನಡ ಕಲರವ: ರಾಹುಲ್-ಪಾಂಡೆ ಮಾತಿಗೆ ಫ್ಯಾನ್ಸ್ ಫುಲ್ ಖುಷ್

Suvarna News   | Asianet News
Published : Feb 11, 2020, 02:30 PM ISTUpdated : Feb 12, 2020, 04:43 PM IST
ಕಿವೀಸ್ ನೆಲದಲ್ಲಿ ಕನ್ನಡ ಕಲರವ: ರಾಹುಲ್-ಪಾಂಡೆ ಮಾತಿಗೆ ಫ್ಯಾನ್ಸ್ ಫುಲ್ ಖುಷ್

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಕನ್ನಡದ ಕಲರವ ಕೇಳಿ ಬಂದಿದೆ. ಮನೀಶ್ ಪಾಂಡೆ-ಕೆ.ಎಲ್ ರಾಹುಲ್ ಬ್ಯಾಟಿಂಗ್ ಮಾಡುವ ವೇಳೆ ಕನ್ನಡದಲ್ಲೇ ಮಾತಾಡಿದ ಕ್ಷಣಗಳು ಅಭಿಮಾನಿಗಳ ಮನ ಗೆದ್ದಿವೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

"

ಮೌಂಟ್‌ ಮಾಂಗನ್ಯುಯಿ(ಫೆ.11):ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಕರ್ನಾಟಕದ ಕ್ರಿಕೆಟಿಗರಾದ ಕೆ.ಎಲ್. ರಾಹುಲ್-ಮನೀಶ್ ಪಾಂಡೆ ನಡುವಿನ ಜುಗಲ್‌ಬಂದಿಗೆ ಸಾಕ್ಷಿಯಾಯಿತು. ಅಲ್ಲದೇ ಬ್ಯಾಟಿಂಗ್ ನಡೆಸುವ ವೇಳೆ ಈ ಇಬ್ಬರು ಆಟಗಾರರು ಕನ್ನಡದಲ್ಲೇ ಮಾತನಾಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಶತಕ ಸಿಡಿಸಿ ಕೊಹ್ಲಿ ದಾಖಲೆ ಮುರಿದು ದ್ರಾವಿಡ್ ರೆಕಾರ್ಡ್ ಸರಿಗಟ್ಟಿದ ರಾಹುಲ್..!

ಶ್ರೇಯಸ್ ಅಯ್ಯರ್ ವಿಕೆಟ್ ಪತನದ ಬಳಿಕ 5ನೇ ವಿಕೆಟ್‌ಗೆ ಕೆ.ಎಲ್ ರಾಹುಲ್ ಕೂಡಿಕೊಂಡ ಮನೀಶ್ ಪಾಂಡೆ 107 ರನ್‌ಗಳ ಜತೆಯಾಟ ನಿಭಾಯಿಸಿದರು.  ಈ ಮೂಲಕ ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. ರನ್ ಗಳಿಸುವ ವೇಳೆ ಈ ಜೋಡಿ ಕನ್ನಡದಲ್ಲೇ ಮಾತನಾಡಿದ ಕ್ಷಣಗಳು ಸ್ಟಂಪ್ಸ್ ಮೈಕ್‌ನಲ್ಲಿ ದಾಖಲಾಗಿದೆ. ಈ ಕ್ಷಣಗಳು ಕನ್ನಡದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ.

ರಾಹುಲ್ ಶತಕ: ಕಿವೀಸ್‌ಗೆ ಸ್ಫರ್ಧಾತ್ಮಕ ಗುರಿ ನೀಡಿದ ಟೀಂ ಇಂಡಿಯಾ

ರಾಜ್ಯ ರಣಜಿ ತಂಡದಲ್ಲಿ ಒಟ್ಟಾಗಿ ಆಡುವ ಮನೀಶ್-ರಾಹುಲ್, ಇದೀಗ ರಾಷ್ಟ್ರಿಯ ತಂಡದ ಸೀಮಿತ ಓವರ್‌ಗಳ ಪಂದ್ಯದಲ್ಲೂ ಮಿಂಚುತ್ತಿದ್ದಾರೆ. ರಾಹುಲ್ 112 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮನೀಶ್ ಪಾಂಡೆ 42 ರನ್ ಗಳಿಸಿ ಕೇವಲ 8 ರನ್‌ಗಳಿಂದ ಅರ್ಧಶತಕ ವಂಚಿತರಾದರು.

ಕೆಲ ವರ್ಷಗಳ ಬಳಿಕ ಟೀಂ ಇಂಡಿಯಾದಲ್ಲಿ ಮೂವರು ಕನ್ನಡಿಗರು ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಯಾಂಕ್ ಅಗರ್‌ವಾಲ್, ಕೆ.ಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಕೊನೆಯ  ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಪಾಂಡೆ-ರಾಹುಲ್ ಮಾತಿಗೆ ಮೆಚ್ಚುಗೆ ವ್ಯಕ್ತವಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ
Ind vs SA: ಶುಭ್‌ಮನ್ ಗಿಲ್ ಫುಲ್ ಫಿಟ್; ಈ ಡೇಟ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಫಿಕ್ಸ್!