ಟೀಂ ಇಂಡಿಯಾದ ಪ್ಯಾಕೇಜ್ ಸ್ಟಾರ್ ರಾಹುಲ್: DRS ತೆಗೆದುಕೊಳ್ಳೋದ್ರಲ್ಲೂ ಕನ್ನಡಿಗ ಪಂಟರ್..!

By Suvarna News  |  First Published Nov 17, 2023, 7:13 PM IST

ಒನ್ಡೇ ವರ್ಲ್ಡ್‌ಕಪ್ ವಾರ್‌ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರಿಸ್ತಿದ್ದಾರೆ. ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಎರಡರಲ್ಲೂ ಮಿಂಚುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಫೈಟ್‌ನಲ್ಲಿ ರಾಹುಲ್ ತಮ್ಮ ರೋಲ್‌ನ ಸಖತ್ತಾಗಿ ನಿಭಾಯಿಸಿದ್ರು. ಆ ಮೂಲಕ ತಂಡದ ಗೆಲುವಿನಲ್ಲಿ ಮಿಂಚಿದ್ರು. 


ಬೆಂಗಳೂರು(ನ.17): ಕ್ರಿಕೆಟ್‌ನಲ್ಲಿ ಒಬ್ಬ ಆಟಗಾರ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಿದ್ರೆ, ಆಲ್ರೌಂಡರ್ ಅಂತಾರೆ. ಆದ್ರೆ, ಅದೇ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಿ, ಕೊನೆಯಲ್ಲಿ ಫಿನಿಶರ್ ರೋಲ್ ನಿಭಾಯಿಸಿ. ವಿಕೆಟ್ ಕೀಪಿಂಗ್‌ನಲ್ಲೂ ಮಿಂಚಿದ್ರೆ ಏನಂತಾರೆ ಗೊತ್ತಾ..? ಕಂಪ್ಲೀಟ್ ಪ್ಯಾಕೇಜ್ ಪ್ಲೇಯರ್ ಅಂತಾರೆ. ನಾವ್ಯಾರ ಬಗ್ಗೆ ಹೇಳ್ತಿದ್ದೀವಿ ಅನ್ಕೊಂಡ್ರಾ..? ಈ ಸ್ಟೋರಿ ಓದಿ ನಿಮಗೆ ಗೊತ್ತಾಗುತ್ತೆ.

ಯೆಸ್, ಒನ್ಡೇ ವರ್ಲ್ಡ್‌ಕಪ್ ವಾರ್‌ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರಿಸ್ತಿದ್ದಾರೆ. ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಎರಡರಲ್ಲೂ ಮಿಂಚುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಫೈಟ್‌ನಲ್ಲಿ ರಾಹುಲ್ ತಮ್ಮ ರೋಲ್‌ನ ಸಖತ್ತಾಗಿ ನಿಭಾಯಿಸಿದ್ರು. ಆ ಮೂಲಕ ತಂಡದ ಗೆಲುವಿನಲ್ಲಿ ಮಿಂಚಿದ್ರು. 

Tap to resize

Latest Videos

ಮೊನ್ನೆಯ ಮ್ಯಾಚ್ ಅಷ್ಟೇ ಅಲ್ಲ, ಈ ವಿಶ್ವಕಪ್‌ನಲ್ಲಿ ಹಲವು ಬಾರಿ ರಾಹುಲ್ ಜವಾಬ್ದಾರಿ ಅರಿತು ಬ್ಯಾಟ್ ಬೀಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ರಾಹುಲ್ ಬ್ಯಾಟಿಂಗ್ ನಿಜಕ್ಕೂ ಅದ್ಭತವಾಗಿತ್ತು. ತಂಡ ತೀವ್ರ ಸಂಕಷ್ಟ ಸಿಲುಕಿದ್ದಾಗ ಬ್ಯಾಟಿಂಗ್ಗೆ ಇಳಿದ ರಾಹುಲ್, ಕೂಲ್ ಆ್ಯಂಡ್ ಕಾಮ್ ಆಗಿ ಬ್ಯಾಟ್ ಬೀಸಿದ್ರು. ಕೊಹ್ಲಿಗೆ ಜೊತೆಗೆ 165 ರನ್ ಸೇರಿಸಿದ್ರು. 

ಪತ್ನಿ ಮೇಲಿನ ಕಳಂಕ ತೊಡೆದು ಹಾಕಿದ ವಿರಾಟ್‌: ಟೀಂ ಇಂಡಿಯಾಗೆ ಅದೃಷ್ಟ ದೇವತೆಯಾದ ಅನುಷ್ಕಾ..!

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಕೊಹ್ಲಿ ಜೊತೆ ಸೇರಿ 83 ರನ್ ಕಲೆಹಾಕಿದ್ರು. ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲೂ ಕೊಹ್ಲಿಯೊಟ್ಟಿಗೆ 54 ರನ್‌ಗಳಿಸಿದ್ರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ತಂಡಕ್ಕೆ ಆಸರೆಯಾದ್ರು. ಗಳಿಸಿದ್ದು 39 ರನ್ ಆದ್ರೂ, ಕ್ಯಾಪ್ಟನ್ ರೋಹಿತ್ ಶರ್ಮ ಜೊತೆಗೆ 91 ರನ್‌ಗಳ ಜೊತೆಯಾಟವಾಡಿದ್ರು. ಈ ಜೊತೆಯಾಟ ಇಲ್ಲದೇ ಹೋಗಿದ್ರೆ, ಟೀಂ ಇಂಡಿಯಾ 200 ರನ್ಗಳಿಸೋದು ಕಷ್ಟವಾಗ್ತಿತ್ತು.

ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಆಗಿ ಅಷ್ಟೇ ಅಲ್ಲ, ಫಿನಿಶರ್ ಆಗಿಯೂ ತಂಡಕ್ಕೆ ನೆರವಾಗ್ತಿದ್ದಾರೆ. ಮೊನ್ನೆಯ ಪಂದ್ಯದಲ್ಲಿ ರಾಹುಲ್ ಕ್ರೀಸ್ಗಿಳಿದಾಗ ಹೆಚ್ಚು ಓವರ್ಗಳು ಇರಲಿಲ್ಲ. ಆದ್ರೆ, ಸೆಟ್ ಆಗೋಕೆ ಹೆಚ್ಚು ಸಮಯ ತೆಗದುಕೊಳ್ಳದೇ ಕೇವಲ 20 ಎಸೆತಗಳಲ್ಲಿ 39 ರನ್ ಬಾರಿಸಿದ್ರು. ತಂಡದ ಮೊತ್ತ 390ರ ಗಡಿ ದಾಟುವಂತೆ ಮಾಡಿದ್ರು.  

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಎತ್ತಂಗಡಿ?

DRS ತೆಗದುಕೊಳ್ಳೋದ್ರಲ್ಲೂ ರಾಹುಲ್ ಪಂಟರ್

ಇನ್ನು DRS ತೆಗೆದುಕೊಳ್ಳೋದ್ರಲ್ಲೂ ರಾಹುಲ್ ಪಂಟರ್. ಸುಖಾ ಸುಮ್ಮನೆ ರಿವ್ಯೂ ತೆಗೆದುಕೊಳ್ಳದೇ, ಪಕ್ಕಾ ಔಟಿದ್ದರೆ ಮಾತ್ರ ರಿವ್ಯೂಗೆ ಹೋಗುವಂತೆ ರೋಹಿತ್‌ಗೆ  ಸೂಚಿಸ್ತಾರೆ. ಆ ಮೂಲಕ ರಿವ್ಯೂ ವೇಸ್ಟ್ ಆಗದಂತೆ ನೋಡಿಕೊಳ್ತಿದ್ದಾರೆ. ಇನ್ನು ಫೀಲ್ಡಿಂಗ್ ಸೆಟ್ ಮಾಡೋದ್ರಲ್ಲೂ ರೋಹಿತ್‌ಗೆ ಸಲಹೆ ನೀಡ್ತಿದ್ದಾರೆ. ಒಟ್ಟಿನಲ್ಲಿ ರಾಹುಲ್ ತಾವೊಬ್ಬ ಕಂಪ್ಲೀಟ್ ಪ್ಯಾಕೇಜ್ ಅನ್ನೋದನ್ನ ಪ್ರೂವ್ ಮಾಡ್ತಿದ್ದಾರೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!