ಡೆಲ್ಲಿ ಕ್ಯಾಪಿಟಲ್ಸ್‌ಗೆ ಬರೀ 10 ಲಕ್ಷಕ್ಕೆ ಸೇರಿಕೊಂಡ ವುಮೆನ್‌ 'ವೈಭವ್‌ ಸೂರ್ಯವಂಶಿ' ಕರ್ನಾಟಕದ ಆಲ್ರೌಂಡರ್‌ ಉಮಾ ಕಾಶ್ವಿ!

Published : Oct 28, 2026, 11:12 PM IST
Who Is Uma Kashvi

ಸಾರಾಂಶ

WPL ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕರ್ನಾಟಕದ 15 ವರ್ಷದ ಉಮಾ ಕಾಶ್ವಿಯನ್ನು ಖರೀದಿಸಿದ್ದು, ಇವರು ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉಮಾ ಕಾಶ್ವಿ ಅವರ ಹಿನ್ನೆಲೆ ಏನು? ಸ್ಟೋರಿ ಓದಿ.

WPL ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 15 ವರ್ಷದ ಕರ್ನಾಟಕ ಪ್ಲೇಯರ್ ಉಮಾ ಕಾಶ್ವಿಯನ್ನು ಖರೀದಿಸಿದೆ. ಆ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಉಮಾ ಕಾಶ್ವಿಯನ್ನು ದೆಹಲಿ ಕ್ಯಾಪಿಟಲ್ಸ್ ತಂಡವು ಮೂಲ ಬೆಲೆ ₹10 ಲಕ್ಷಕ್ಕೆ ಖರೀದಿಸಿತು. ಕರ್ನಾಟಕದ 15 ವರ್ಷದ ಆಲ್‌ರೌಂಡರ್ ಉಮಾ, ಹರಾಜಿಗೆ ಮುಂಚೆಯೇ ಸುದ್ದಿಯಲ್ಲಿದ್ದರು. ವೈಭವ್ ಸೂರ್ಯವಂಶಿ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಲೀಗ್ ಕ್ರಿಕೆಟ್‌ಗೆ ಪ್ರವೇಶಿಸಿದ್ದರು. ನಂತರ 15ನೇ ವಯಸ್ಸಿನಲ್ಲಿ ಸೂರ್ಯವಂಶಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ಇನ್ನು, ವೈಭವ್ ಸೂರ್ಯವಂಶಿಯನ್ನ ರಾಜಸ್ಥಾನ ರಾಯಲ್ಸ್ ಸ್ವಾಧೀನಪಡಿಸಿಕೊಂಡಾಗ ಕೇವಲ 14 ವರ್ಷ ವಯಸ್ಸಾಗಿತ್ತು.

ಉಮಾ ಕಾಶ್ವಿ ಹಿನ್ನೆಲೆ ಏನು?

ಬೆಂಗಳೂರು ಮೂಲದ ಉಮಾ ಕಾಶ್ವಿ, ಜನಿಸಿದ್ದು ಏಪ್ರಿಲ್ 9, 2011ರಲ್ಲಿ. ಆಲ್‌ರೌಂಡರ್ ಆಗಿರುವ ಇವರು, ರೈಟ್‌ ‌ಹ್ಯಾಂಡ್ ಬ್ಯಾಟರ್. ಬಿಸಿಸಿಐ ಮಹಿಳಾ 15 ವರ್ಷದೊಳಗಿನವರ ಏಕದಿನ ಪಂದ್ಯಾವಳಿಯಲ್ಲಿ ಪ್ರಾಮುಖ್ಯತೆ ಪಡೆದರು. ಅಲ್ಲಿ ಅವರು 172 ಸರಾಸರಿಯಲ್ಲಿ 516 ರನ್ ಗಳಿಸಿದರು, ಇದರಲ್ಲಿ ಮೂರು ಶತಕಗಳು ಮತ್ತು ಅರ್ಧಶತಕ ಸೇರಿವೆ. 19 ವರ್ಷದೊಳಗಿನ ಭಾರತ ತಂಡವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಇವರದ್ದು. ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 19 ವರ್ಷದೊಳಗಿನ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಈ ವೇಳೆ ಬ್ಯಾಟಿಂಗ್ ಮತ್ತು ಬಾಲಿಂಗ್ ಎರಡರಲ್ಲೂ ಗಮನ ಸೆಳೆದಿದ್ದರು. ಕರ್ನಾಟಕದ ವಿವಿಧ ಟೂರ್ನಿಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ. ಕರ್ನಾಟಕದ 15 ವರ್ಷದೊಳಗಿನ ಮಹಾರಾಣಿ ಪಂದ್ಯಗಳಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಆರ್‍‌ಸಿಬಿ ಸೇರಿದ ಮತ್ತೊಬ್ಬ ಕನ್ನಡತಿ

ಕರ್ನಾಟಕದ ಮತ್ತೊಬ್ಬ ಆಟಗಾರ್ತಿ ವೃಂದಾ ದಿನೇಶ್ ಅವರನ್ನು ಆರ್‍‌ಸಿಬಿ ತಂಡ 10 ಲಕ್ಷಕ್ಕೆ ಖರೀದಿಸಿದೆ. ವೃಂದಾ ದಿನೇಶ್ ಮೂಲತಃ ಬೆಂಗಳೂರಿನವರು. ದೇಸಿಯ ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ಇವರು, ಈ ಹಿಂದೆ ಡಬ್ಲ್ಯೂಪಿಎಲ್‌ನಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಇದೀಗ ಆರ್‍‌ಸಿಬಿ ಪರ ಆಡಲು ರೆಡ್‌ ಜೆರ್ಸಿ ತೊಡಲಿದ್ದಾರೆ. ವೃಂದಾ ದಿನೇಶ್ ಬಲಗೈ ಟಾಪ್-ಆರ್ಡರ್ ಬ್ಯಾಟ್ಸ್‌ಮನ್ ಮತ್ತು ಸಾಂದರ್ಭಿಕ ಲೆಗ್-ಸ್ಪಿನ್ನರ್ ಕೂಡ ಹೌದು. ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಬ್ಯಾಟಿಂಗ್ ಮಾಡುವಲ್ಲಿ ನಿಸ್ಸಿಮರು.

2027ರ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಬುಧವಾರ ಕೊಚ್ಚಿಯಲ್ಲಿ ನಡೆಯಿತು. ಹರಾಜಿಗೂ ಮುನ್ನ 5 ತಂಡಗಳಲ್ಲಿ ಒಟ್ಟು 27 ಸ್ಥಾನಗಳು ಖಾಲಿ ಇದ್ದವು. ಯುಪಿ ವಾರಿಯರ್ಸ್ ಬಳಿ ಅತಿ ಹೆಚ್ಚು ಹಣ ಇತ್ತು, ಅದರ ಲಾಭವನ್ನು ಅವರು ಹರಾಜಿನಲ್ಲಿ ಪಡೆದುಕೊಂಡರು. ಅವರು ಒಟ್ಟು 6 ಆಟಗಾರ್ತಿಯರನ್ನು ಖರೀದಿಸಿದರು. ಈ ಹರಾಜಿನ ಅತಿ ದೊಡ್ಡ ಬೆಲೆಯನ್ನು ಕೂಡ ಅವರೇ ಕೊಟ್ಟರು. ಯುಪಿ ತಂಡವು ಸೋಫಿ ಮೊಲಿನೆಕ್ಸ್ ಅವರನ್ನು 1 ಕೋಟಿ 10 ಲಕ್ಷ ರೂಪಾಯಿಗೆ ಖರೀದಿಸಿತು.

ಗ್ರೇಸ್ ಹ್ಯಾರಿಸ್ ಅವರನ್ನು ಬೇರೆ ಯಾವ ತಂಡವೂ ಕೇಳದ ಕಾರಣ, ಅವರ ಮೂಲ ಬೆಲೆಯಾದ 30 ಲಕ್ಷ ರೂಪಾಯಿಗೆ ಖರೀದಿಸಿತು.ಸೋಫಿ ಮೊಲಿನೆಕ್ಸ್ ನಂತರ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ್ತಿ ಕಿರಣ್ ನವಗಿರೆ. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 75 ಲಕ್ಷ ರೂಪಾಯಿಗೆ ಖರೀದಿಸಿತು. ಕಿರಣ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಕೂಡ ಆಸಕ್ತಿ ತೋರಿಸಿತ್ತು.

ಮುಂಬೈ 70 ಲಕ್ಷದವರೆಗೆ ಬಿಡ್ ಮಾಡಿತ್ತು. ಡೆಲ್ಲಿ 75 ಲಕ್ಷಕ್ಕೆ ಹೋದಾಗ ಮುಂಬೈ ಹಿಂದಕ್ಕೆ ಸರಿಯಿತು.ಮುಂಬೈ ಇಂಡಿಯನ್ಸ್ ಹರಾಜಿನಲ್ಲಿ ಖರೀದಿಸಿದ ಎಲ್ಲಾ 6 ಆಟಗಾರ್ತಿಯರೂ ಅನ್ಕ್ಯಾಪ್ಡ್ ಆಟಗಾರ್ತಿಯರು. ಅವರಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಸಿದ್ದು ದಿಶಾ ಕಸತ್ ಅವರನ್ನು. ದಿಶಾ ಅವರನ್ನು 30 ಲಕ್ಷ ರೂಪಾಯಿಗೆ ಖರೀದಿಸಲಾಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕನ್ನಡದ ಹುಡುಗಿ ವೃಂದಾ ದಿನೇಶ್ ಆರ್‍‌ಸಿಬಿಗೆ ಬಂದಿದ್ದಕ್ಕೆ ಕುಣಿದು ಕುಪ್ಪಳಿಸಿದ ಶ್ರೇಯಾಂಕಾ ಪಾಟೀಲ್
RCB ಮತ್ತಷ್ಟು ಸ್ಟ್ರಾಂಗ್, ತಂಡ ಸೇರಿದ ನಾಲ್ವರು ಹೊಸ ಆಟಗಾರ್ತಿಯರು; ಯಾರು ಎಷ್ಟು ಲಕ್ಷ ಹಣಕ್ಕೆ ಬಂದರು?