
WPL-2027 ಮಿನಿ ಹರಾಜು ಮುಕ್ತಾಯಗೊಂಡಿದೆ. ಆರ್‍ಸಿಬಿ ನಾಲ್ಕು ಆಟಗಾರರನ್ನು ಖರೀದಿಸಿದ್ದು, ಮತ್ತಷ್ಟು ಸ್ಟ್ರಾಂಗ್ ಆಗಿ ಹೊರಹೊಮ್ಮಿದೆ.
ಹಾಲಿ ಚಾಂಪಿಯನ್ ಆರ್‍ಸಿಬಿ WPL ಗೆದ್ದ ನಂತರ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿತು. ಆದರೆ ಗ್ರೇಸ್ ಹ್ಯಾರಿಸ್, ಲಿನ್ಸೇ ಸ್ಮಿತ್, ಗೌತಮಿ ನಾಯಕ್ ಮತ್ತು ದಯಾಲನ್ ಹೇಮಲತಾ ಅವರನ್ನು ಬಿಡುಗಡೆ ಮಾಡಿತು. ಹರಾಜಿಗೂ ಮುನ್ನ ಆರ್‍ಸಿಬಿ ನಾಲ್ವರು ವಿದೇಶಿ ಆಟಗಾರರು ಸೇರಿ 13 ಆಟಗಾರರನ್ನು ಉಳಿಸಿಕೊಂಡಿತ್ತು. ಹಾಲಿ ಚಾಂಪಿಯನ್‌ಗಳು ಐದು ಸ್ಥಾನಗಳಲ್ಲಿ 1.15 ಕೋಟಿ ರೂಪಾಯಿಗಳೊಂದಿಗೆ ಹರಾಜಿಗೆ ಪ್ರವೇಶಿಸಿದರು.
RCB ಉಳಿಸಿಕೊಂಡ ಆಟಗಾರರು: ಅರುಂಧತಿ ರೆಡ್ಡಿ, ಪ್ರತ್ಯೂಷಾ ಕುಮಾರ್, ರಿಚಾ ಘೋಷ್, ಸ್ಮೃತಿ ಮಂಧಾನ, ಪ್ರೇಮಾ ರಾವತ್, ಸಯಾಲಿ ಸತ್ಘರೆ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಲಾರೆನ್ ಬೆಲ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲೆರ್ಕ್.
| ಆಟಗಾರರು | ದೇಶ | ವಿಭಾಗ | ಎಷ್ಟು ರೂಗೆ ಖರೀದಿ? |
| ಜೆಸ್ ಜೊನಾಸ್ಸೆನ್ | ಆಸ್ಟ್ರೇಲಿಯಾ | ಆಲ್-ರೌಂಡರ್ | 40 ಲಕ್ಷ ರೂ. |
| ತೇಜಲ್ ಹಸಬ್ನಿಸ್ | ಭಾರತ | ಬ್ಯಾಟರ್ | 30 ಲಕ್ಷ ರೂ |
| ವೃಂದಾ ದಿನೇಶ್ | ಭಾರತ | ಬ್ಯಾಟರ್ | 10 ಲಕ್ಷ ರೂ |
| ಕ್ಲೋಯ್ ಟ್ರಯಾನ್ | ದಕ್ಷಿಣ ಆಫ್ರಿಕಾ | ಆಲ್-ರೌಂಡರ್ | 30 ಲಕ್ಷ ರೂ |
ಹರಾಜಿಗೂ ಮುನ್ನ ಮಾತನ್ನಾಡಿರುವ ಆರ್‍ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನಾ.. ತಂಡದ ಭವಿಷ್ಯಕ್ಕಾಗಿ ಪ್ರತಿಭೆಗಳನ್ನು ಹುಡುಕುತ್ತಿದ್ದೇವೆ. ನಮಗೆ ಡಬ್ಲ್ಯೂಪಿಎಲ್ ದೊಡ್ಡ ಪ್ರಯೋಜನ ನೀಡಿದೆ. ನಮ್ಮ ಮುಂದೆ ದೊಡ್ಡ ತಂಡವನ್ನು ಕಟ್ಟುವುದಾಗಿದೆ. ನಮ್ಮ ತಂಡದಲ್ಲಿ ಖಂಡಿತವಾಗಿಯೂ ಅತ್ಯಾಕರ್ಷಕ ಪ್ರತಿಭೆಗಳಿವೆ. ನಮ್ಮಲ್ಲಿ 19-24 ವರ್ಷದೊಳಗಿನ ಎಂಟರಿಂದ ಒಂಬತ್ತು ಜನರಿದ್ದಾರೆ. ಅವರನ್ನೆಲ್ಲ ಮುಂದೊಂದು ದಿನ ಭಾರತ ತಂಡಕ್ಕೆ ತೆಗೆದುಕೊಂಡು ಹೋಗವುದು ನಮ್ಮ ಜಬಾಬ್ದಾರಿ ಎಂದಿದ್ದಾರೆ.
ಆರ್‍ಸಿಬಿ ಮತ್ತಷ್ಟು ಸ್ಟ್ರಾಂಗ್: ಅರುಂಧತಿ ರೆಡ್ಡಿ, ಪ್ರತ್ಯೂಷಾ ಕುಮಾರ್, ರಿಚಾ ಘೋಷ್, ಸ್ಮೃತಿ ಮಂಧಾನ, ಪ್ರೇಮಾ ರಾವತ್, ಸಯಾಲಿ ಸತ್ಘರೆ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಲಾರೆನ್ ಬೆಲ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಜಾರ್ಜಿಯಾ ವೋಲ್, ಜೆಸ್ ಜೊನಾಸ್ಸೆನ್, ಡಿ ಟ್ರೈನಿ, ಚೆಸ್ನ್ ವಿ, ಚ್ರಿನ್ ವಿ ಟ್ರೈನ್, ಟೆಜ್ಲೊ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.