ವೈದ್ಯಕೀಯ ಪರೀಕ್ಷೆಗೆ ಒಳಗಾದ ಕರ್ನಾಟಕ ಕ್ರಿಕೆಟರ್ಸ್

By Suvarna News  |  First Published Jun 23, 2020, 1:49 PM IST

ಕ್ರೀಡಾಚಟುವಟಿಕೆಗಳು ಆರಂಭಕ್ಕೆ ಮುನ್ಸೂಚನೆ ಸಿಕ್ಕಿರುವುದರಿಂದ ಒಂದು ಡಜನ್‌ಗೂ ಹೆಚ್ಚು ಕರ್ನಾಟಕದ ಕ್ರಿಕೆಟಿಗರು ಚಿನ್ನಸ್ವಾಮಿ ಮೈದಾನ ಪ್ರವೇಶಿಸಿದ್ದಾರೆ. ಇದರ ಜತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಪಾಸಣೆಗೂ ಒಳಪಟ್ಟರು.


ಬೆಂಗಳೂರು(ಜೂ.23): ಬರೋಬ್ಬರಿ ಮೂರು ತಿಂಗಳುಗಳ ಬಳಿಕ ಸೋಮವಾರ(ಜೂ.22)ದಿಂದ ಕರ್ನಾಟಕದ ಕ್ರಿಕೆಟ್ ಆಟಗಾರರು ನಗರದ ಹೃದಯ ಭಾಗದಲ್ಲಿರುವ ಎಂ. ಚಿನ್ನಸ್ವಾಮಿ ಮೈದಾನಕ್ಕೆ ಎಂಟ್ರಿಕೊಟ್ಟಿದ್ದಾರೆ.

ಕ್ರೀಡಾಚಟುವಟಿಕೆಗಳು ಆರಂಭಕ್ಕೆ ಮುನ್ಸೂಚನೆ ಸಿಕ್ಕಿರುವುದರಿಂದ ಒಂದು ಡಜನ್‌ಗೂ ಹೆಚ್ಚು ಕ್ರಿಕೆಟಿಗರು ಚಿನ್ನಸ್ವಾಮಿ ಮೈದಾನ ಪ್ರವೇಶಿಸಿದ್ದಾರೆ. ಇದರ ಜತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಪಾಸಣೆಗೂ ಒಳಪಟ್ಟರು. ಕರುಣ್ ನಾಯರ್, ಆರ್. ಸಮರ್ಥ್ ಸೇರಿದಂತೆ ಹಲವು ಕ್ರಿಕೆಟಿಗರು ಬಹಳ ದಿನಗಳ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಬಂದಿಳಿದರು. ಆದರೆ ಕೇಂದ್ರೀಯ ಗುತ್ತಿಗೆಗೆ ಒಳಪಟ್ಟಿರುವ ರಾಜ್ಯ ಕ್ರಿಕೆಟಿಗರಾದ ಮನೀಶ್ ಪಾಂಡೆ, ಕೆ.ಎಲ್. ರಾಹುಲ್, ಮಯಾಂಕ್ ಅಗರ್‌ವಾಲ್ ಬಿಸಿಸಿಐ ಅನುಮತಿಯನ್ನು ಎದುರು ನೋಡುತ್ತಿದ್ದಾರೆ.

Tap to resize

Latest Videos

KSCA ಕೋವಿಡ್ 19 ಶಿಷ್ಟಾಚಾರದಂತೆ ಆಟಗಾರರನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ಇಸಿಜಿ, ರಕ್ತಪರೀಕ್ಷೆಗಳನ್ನು ಮಾಡಲಾಯಿತು. ಕ್ರಿಕೆಟ್ ಅಭ್ಯಾಸ ಯಾವಾಗಿನಿಂದ ಎನ್ನುವುದರ ಕುರಿತಂತೆ ರಾಜ್ಯ ಕ್ರಿಕೆಟ್ ಸಂಸ್ಥೆ ಅಧಿಕೃತ ವೇಳಾಪಟ್ಟಿ ಪ್ರಕಟಿಸಿಲ್ಲ. ಇದೊಂದು ವಾರ ಆಟಗಾರರು ಫಿಟ್ನೆಸ್ ಹಾಗೂ ಡಿಲ್ಸ್ ಬಗ್ಗೆ ಗಮನ ಕೊಡುವ ಸಾಧ್ಯತೆಯಿದೆ.

ಪಾಕಿಸ್ತಾನದ ಮೂವರು ಸ್ಟಾರ್ ಕ್ರಿಕೆಟಿಗರಿಗೆ ಕೊರೋನಾ ಅಟ್ಯಾಕ್..!

ಸ್ಟೇಡಿಯಂಗೆ ಮರಳಿರುವುದು ಸಾಕಷ್ಟು ಖುಷಿ ಕೊಟ್ಟಿದೆ. ನನಗೆ ಚಿನ್ನಸ್ವಾಮಿ ಮೈದಾನ ಎರಡನೇ ಮನೆಯಿದ್ದಂತೆ. ತುಂಬಾ ದಿನಗಳಿಂದಲೂ ಸ್ಟೇಡಿಯಂನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ನಾವಿನ್ನೂ ಅಭ್ಯಾಸ ಆರಂಭಿಸಿಲ್ಲ, ಸಹ ಆಟಗಾರರನ್ನು ಮುಖಾಮುಖಿಯಾಗಿ ಭೇಟಿಯಾಗಿರುವುದು ಸಾಕಷ್ಟು ಸಂತಸ ತಂದಿದೆ ಎಂದು ಕರುಣ್ ನಾಯರ್ ಹೇಳಿದ್ದಾರೆ.

click me!