Justin Langer Resigns: ಆಸ್ಟ್ರೇಲಿಯಾ ತಂಡದ ಹೆಡ್‌ ಕೋಚ್ ಜಸ್ಟಿನ್ ಲ್ಯಾಂಗರ್ ದಿಢೀರ್ ರಾಜೀನಾಮೆ..!

Suvarna News   | Asianet News
Published : Feb 05, 2022, 11:34 AM ISTUpdated : Feb 05, 2022, 11:37 AM IST
Justin Langer Resigns: ಆಸ್ಟ್ರೇಲಿಯಾ ತಂಡದ ಹೆಡ್‌ ಕೋಚ್ ಜಸ್ಟಿನ್ ಲ್ಯಾಂಗರ್ ದಿಢೀರ್ ರಾಜೀನಾಮೆ..!

ಸಾರಾಂಶ

* ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್‌ ಕೋಚ್ ಹುದ್ದೆಗೆ ಜಸ್ಟಿನ್‌ ಲ್ಯಾಂಗರ್‌ ರಾಜೀನಾಮೆ * 51 ವರ್ಷದ ಜಸ್ಟಿನ್ ಲ್ಯಾಂಗರ್‌ 2018ರಲ್ಲಿ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದರು. * ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಹೆಡ್ ಕೋಚ್ ಹುದ್ದೆಗೆ ಜಸ್ಟಿನ್ ಲ್ಯಾಂಗರ್‌ ರಾಜೀನಾಮೆ

ಮೆಲ್ಬರ್ನ್‌(ಫೆ.05): ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್‌ (Australian Cricket Team) ತಂಡದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ಸಂಭವಿಸಿದ್ದು, ದಿಢೀರ್ ಎನ್ನುವಂತೆ ತಂಡದ ಹೆಡ್‌ ಕೋಚ್‌ ಜಸ್ಟಿನ್ ಲ್ಯಾಂಗರ್‌ (Justin Langer) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆ್ಯಷಸ್ ಟೆಸ್ಟ್ (Ashes Test) ಸರಣಿಯಲ್ಲಿ ಬದ್ದ ಎದುರಾಳಿ ಇಂಗ್ಲೆಂಡ್ ಎದುರು ಎದುರು ಆಸ್ಟ್ರೇಲಿಯಾ ತಂಡವು 4-0 ಅಂತರದ ಭರ್ಜರಿ ಗೆಲುವು ದಾಖಲಿಸಿದ್ದರೂ ಸಹಾ, ದಿಢೀರ್ ಎನ್ನುವಂತೆ ತಮ್ಮ ಕೋಚ್ ಹುದ್ದೆಗೆ ಲ್ಯಾಂಗರ್ ರಾಜೀನಾಮೆ ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.

ಕೆಲ ತಿಂಗಳ ಹಿಂದಷ್ಟೇ ಜಸ್ಟಿನ್ ಲ್ಯಾಂಗರ್‌ ಮಾರ್ಗದರ್ಶನದಲ್ಲಿ ಅಸ್ಟ್ರೇಲಿಯಾ ಕ್ರಿಕೆಟ್ ತಂಡವು ಚೊಚ್ಚಲ ಬಾರಿಸಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 51 ವರ್ಷದ ಜಸ್ಟಿನ್ ಲ್ಯಾಂಗರ್‌ ಕೆಲ ಆಟಗಾರರು ಹಾಗೂ ಕ್ರಿಕೆಟ್‌ ಆಸ್ಟ್ರೇಲಿಯಾದ (Cricket Australia) ಆಡಳಿತ ಮಂಡಳಿಯ ಜತೆ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ ನಡೆದ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳ ಜತೆ ಜಸ್ಟಿನ್ ಲ್ಯಾಂಗರ್ ದೀರ್ಘಕಾಲಿಕ ಚರ್ಚೆ ನಡೆಸಿದ್ದಾರೆ. ಕ್ರಿಕೆಟ್‌ ಆಸ್ಟ್ರೇಲಿಯಾ ಇನ್ನು ಕೆಲವು ಕಾಲ ಹೆಡ್‌ ಕೋಚ್ ಆಗಿ ಮುಂದುವರೆಯುವಂತೆ ಆಫರ್ ನೀಡಿತಾದರೂ, ಜಸ್ಟಿನ್ ಲ್ಯಾಂಗರ್ ಈ ಆಫರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಹೆಡ್ ಕೋಚ್ ಹುದ್ದೆಗೆ ಇಂದು ಬೆಳಗ್ಗೆ ಜಸ್ಟಿನ್ ಲ್ಯಾಂಗರ್‌ ರಾಜೀನಾಮೆ ನೀಡಿದ್ದಾರೆ. ಕಳೆದ ಸಂಜೆ ಕ್ರಿಕೆಟ್ ಆಸ್ಟ್ರೇಲಿಯಾದ ಜತೆ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಜಸ್ಟಿನ್ ಲ್ಯಾಂಗರ್ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಈ ವಿಚಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಕೂಡಾ ಖಚಿತಪಡಿಸಿದ್ದು, ಈ ಕುರಿತಂತೆ ಮತ್ತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Silverwood sacked: ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ ಸೋಲು, ಇಂಗ್ಲೆಂಡ್ ಕೋಚ್‌ ಸಿಲ್ವರ್‌ವುಡ್ ತಲೆದಂಡ..!

ಜಸ್ಟಿನ್ ಲ್ಯಾಂಗರ್‌ 2018ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕವಾಗಿದ್ದರು. ಬಾಲ್ ಟ್ಯಾಂಪರಿಂಗ್ ವಿವಾದದಿಂದಾಗಿ ಪಾತಾಳಕ್ಕೆ ಕುಸಿದಿದ್ದ ಆಸ್ಟ್ರೇಲಿಯಾ ತಂಡಕ್ಕೆ ಹುರುಪು ತುಂಬುವಲ್ಲಿ ಹೆಡ್‌ ಕೋಚ್ ಜಸ್ಟಿನ್ ಲ್ಯಾಂಗರ್‌ ಯಶಸ್ವಿಯಾಗಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾವು ಅನುಭವಿಸಿದ್ದ ಕಹಿ ಘಟನೆ ಮರೆಸುವಂತ ಪ್ರದರ್ಶನ ತೋರುವಲ್ಲಿ ಕಾಂಗರೂ ಪಡೆ ಯಶಸ್ವಿಯಾಗಿತ್ತು.

ಜಸ್ಟಿನ್‌ ಲ್ಯಾಂಗರ್‌ ಕ್ರಿಕೆಟ್‌ ಕೋಚ್‌ ಆಗಿ ಮಾತ್ರವಲ್ಲದೇ ಆಟಗಾರನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಜಸ್ಟಿನ್ ಲ್ಯಾಂಗರ್ 1993ರಿಂದ 2007ರ ಅವಧಿಯಲ್ಲಿ ಆಸ್ಟ್ರೇಲಿಯಾ ಪರ 105 ಟೆಸ್ಟ್ ಪಂದ್ಯಗಳನ್ನಾಡಿ 45.27ರ ಬ್ಯಾಟಿಂಗ್ ಸರಾಸರಿಯಲ್ಲಿ 7,696 ರನ್‌ ಬಾರಿಸಿದ್ದಾರೆ. ಇದರಲ್ಲಿ 23 ಶತಕಗಳು ಸೇರಿವೆ.

ICC suspends Mohammad Hasnain ಅನುಮಾನಾಸ್ಪದ ಬೌಲಿಂಗ್, ಪಾಕ್‌ ವೇಗಿ ಮೊಹಮ್ಮದ್ ಹಸ್ನೈನ್‌ ಸಸ್ಪೆಂಡ್‌

ಜಸ್ಟಿನ್‌ ಲ್ಯಾಂಗರ್‌ ಹಾಗೂ ಮ್ಯಾಥ್ಯೂ ಹೇಡನ್‌(Matthew Hayden), ಆಸ್ಟ್ರೇಲಿಯಾ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟಿಂಗ್ ಜೋಡಿಯಾಗಿ ಗುರುತಿಸಿಕೊಂಡಿತ್ತು. ಈ ಜೋಡಿ ಆಸ್ಟ್ರೇಲಿಯಾ ಪರ ಒಟ್ಟು 113 ಟೆಸ್ಟ್ ಪಂದ್ಯಗನ್ನಾಡಿ 51.58ರ ಬ್ಯಾಟಿಂಗ್ ಸರಾಸರಿಯಲ್ಲಿ 5,655 ರನ್‌ ಬಾರಿಸಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸುವರ್ಣ ಯುಗವೆಂದು ಗುರುತಿಸಲ್ಪಡುವ ಶೇನ್ ವಾರ್ನ್‌, ಆಡಂ ಗಿಲ್‌ಕ್ರಿಸ್ಟ್‌, ಗ್ಲೆನ್ ಮೆಗ್ರಾತ್ ಹಾಗೂ  ರಿಕಿ ಪಾಂಟಿಂಗ್ ಅವರ ಸಮಕಾಲೀನ ಆಟಗಾರರಾಗಿ ಜಸ್ಟಿನ್ ಲ್ಯಾಂಗರ್‌ ಗುರುತಿಸಿಕೊಂಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!