ಪಂದ್ಯದ 2ನೇ ದಿನವಾದ ಶುಕ್ರವಾರ ಆರ್ಚರ್ ರಾಜ್ಯ ಸಂಸ್ಥೆಯ ತಂಡದ ಪರ ಆಡಿ ಸಸೆಕ್ಸ್ ಬ್ಯಾಟರ್‌ಗಳನ್ನು ಕಾಡಿದರು. ಅವರು 7 ಓವರ್ ಎಸೆದು 22 ರನ್‌ಗೆ 2 ವಿಕೆಟ್ ಕಿತ್ತರು. ಮೊದಲ ದಿನ ಕೆಎಸ್‌ಸಿಎ ತಂಡದ 201 ರನ್‌ಗೆ ಉತ್ತವಾಗಿ 2 ವಿಕೆಟ್‌ಗೆ 185 ರನ್ ಗಳಿಸಿದ್ದ ಸಸೆಕ್ಸ್, 365 ರನ್‌ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಕೆಎಸ್‌ಸಿಎ ತಂಡ 4 ವಿಕೆಟ್‌ಗೆ 162 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು.
ಆಲೂರು(ಮಾ.16): ಬೆಂಗಳೂರಿನ ಹೊರವಲಯದ ಆಲೂರು ಕ್ರೀಡಾಂಗಣದಲ್ಲಿ ನಡೆದ 2 ದಿನಗಳ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ನ ತಾರಾ ವೇಗದ ಬೌಲರ್ ಜೋಫ್ರಾ ಆರ್ಚರ್ ಕೆಎಸ್‌ಸಿಎ ಇಲೆವೆನ್ ಪರ ಕಣಕ್ಕಿಳಿದರು. ಇತ್ತೀಚೆಗಷ್ಟೇ ಸಸೆಕ್ಸ್ ಕೌಂಟಿ ತಂಡ ನಗರಕ್ಕೆ ಆಗಮಿಸಿದ್ದು, ಕೆಎಸ್‌ಸಿಎ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯವಾಡಿತು.
ಆದರೆ ಪಂದ್ಯದ 2ನೇ ದಿನವಾದ ಶುಕ್ರವಾರ ಆರ್ಚರ್ ರಾಜ್ಯ ಸಂಸ್ಥೆಯ ತಂಡದ ಪರ ಆಡಿ ಸಸೆಕ್ಸ್ ಬ್ಯಾಟರ್‌ಗಳನ್ನು ಕಾಡಿದರು. ಅವರು 7 ಓವರ್ ಎಸೆದು 22 ರನ್‌ಗೆ 2 ವಿಕೆಟ್ ಕಿತ್ತರು. ಮೊದಲ ದಿನ ಕೆಎಸ್‌ಸಿಎ ತಂಡದ 201 ರನ್‌ಗೆ ಉತ್ತವಾಗಿ 2 ವಿಕೆಟ್‌ಗೆ 185 ರನ್ ಗಳಿಸಿದ್ದ ಸಸೆಕ್ಸ್, 365 ರನ್‌ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಕೆಎಸ್‌ಸಿಎ ತಂಡ 4 ವಿಕೆಟ್‌ಗೆ 162 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು.
Jofra Archer destroying stumps in a Sussex practice match in Bengaluru 🔥
(via ) pic.twitter.com/4aNYyWeHhQ
ಪಂದ್ಯದ ಮೊದಲ ದಿನ ಡಿ.ನಿಶ್ಚಲ್ ಶತಕದ ಹೊರತಾಗಿಯೂ ಕೆಎಸ್‌ಸಿಎ ಇಲೆವೆನ್ 49.1 ಓವರ್‌ಗಳಲ್ಲಿ 201ಕ್ಕೆ ಆಲೌಟಾಗಿತ್ತು. ನಿಶ್ಚಲ್ 156 ಎಸೆತಗಳಲ್ಲಿ 107 ರನ್ ಗಳಿಸಿದ್ದರು. ಬಳಿಕ ಬ್ಯಾಟಿಂಗ್ ಆರಂಭಿಸಿದ್ದ ಸಸೆಕ್ಸ್ ಮೊದಲ ದಿನದಂತ್ಯಕ್ಕೆ 2 ವಿಕೆಟ್‌ಗೆ 185 ರನ್ ಗಳಿಸಿ, ಕೇವಲ 16 ರನ್ ಹಿನ್ನಡೆಯಲ್ಲಿತ್ತು.
ಪ್ರಥಮ ದರ್ಜೆ ಕ್ರಿಕೆಟ್‌ಗೆ ವೇಡ್ ನಿವೃತ್ತಿ ಘೋಷಣೆ
ಹೋಬರ್ಟ್: ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮಾ.21ರಿಂದ ಆರಂಭಗೊಳ್ಳಲಿರುವ ಶೆಫೀಲ್ಡ್ ಶೀಲ್ಡ್ ಟೂರ್ನಿಯ ಫೈನಲ್ ಪಂದ್ಯ ಪ್ರಥಮ ದರ್ಜೆಯಲ್ಲಿ ತನ್ನ ಕೊನೆ ಪಂದ್ಯದ ಎಂದು ಅವರು ತಿಳಿಸಿದ್ದಾರೆ.
WPL 2024 ಕಪ್ ಕನಸಿನಲ್ಲಿರುವ ಆರ್‌ಸಿಬಿ ಫೈನಲ್‌ಗೆ ಲಗ್ಗೆ!
ವೇಡ್ ಆಸ್ಟ್ರೇಲಿಯಾ ಪರ 36 ಟೆಸ್ಟ್ ಪಂದ್ಯಗಳನ್ನಾಡಿದ್ದು, 4 ಶತಕ ಸೇರಿದಂತೆ 1613 ರನ್ ಕಲೆಹಾಕಿದ್ದಾರೆ. 2021ರಲ್ಲಿ ಕೊನೆ ಬಾರಿ ಅವರು ಭಾರತ ವಿರುದ್ಧ ಟೆಸ್ಟ್ ಆಡಿದ್ದರು. ಐಪಿಎಲ್‌ನಲ್ಲಿ ಗುಜರಾತ್ ತಂಡದಲ್ಲಿರುವ ವೇಡ್, ಶೆಫೀಲ್ಡ್ ಶೀಲ್ಡ್ ಟೂರ್ನಿ ಬಳಿಕ ಭಾರತಕ್ಕೆ ಆಗಮಿಸಿ ಗುಜರಾತ್ ತಂಡ ಸೇರ್ಪಡೆಗೊಳ್ಳಲಿದ್ದಾರೆ.
2ನೇ ಏಕದಿನ: ಬಾಂಗ್ಲಾ ವಿರುದ್ಧ ಲಂಕಾಕ್ಕೆ ಗೆಲುವು
ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 3 ವಿಕೆಟ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 7 ವಿಕೆಟ್‌ಗೆ 286 ರನ್ ಕಲೆಹಾಕಿತು. ಸೌಮ್ಯಾ ಸರ್ಕಾರ್ 68, ನಜ್ಮುಲ್ ಹೊಸೈನ್ 40 ರನ್ ಸಿಡಿಸಿದರು.
ಅತಿಹೆಚ್ಚು ಐಪಿಎಲ್ ಪ್ಲೇ ಆಫ್ ಪ್ರವೇಶಿಸಿದ ತಂಡಗಳಿವು..! ಆರ್‌ಸಿಬಿಗೆ ಎಷ್ಟನೇ ಸ್ಥಾನ?
ಕೊನೆಯಲ್ಲಿ ತೌಹಿದ್ ಹೃದೊಯ್ ಔಟಾಗದೆ 96 ರನ್ ಸಿಡಿಸಿ ತಂಡವನ್ನು 300ರ ಸನಿಹಕ್ಕೆ ತಲುಪಿಸಿದರು. ದೊಡ್ಡ ಗುರಿ ಬೆನ್ನತ್ತಿದ ಲಂಕಾ 47.1 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಅಭೂತಪೂರ್ವ ಲಯ ಮುಂದುವರಿಸಿದ ಪಥುಮ್ ನಿಸ್ಸಾಂಕ 114 ರನ್ ಸಿಡಿಸಿದರೆ, ಚರಿತ್ ಅಸಲಂಕ 91 ರನ್ ಬಾರಿಸಿದರು.