ಸೆಂಚೂರಿ ಸಿಡಿಸಿ ಕೊನೆಯವರೆಗೂ ಹೋರಾಡಿ ಗೆದ್ದ Jemimah Rodrigues ಮೈದಾನದಲ್ಲಿ ಹೇಳಿಕೊಂಡ ಬೈಬಲ್ ಸಾಲುಗಳು ಯಾವ್ದು?

Published : Oct 31, 2025, 04:22 PM IST
Jemimah Rodrigues

ಸಾರಾಂಶ

ವಿಶ್ವಕಪ್ ಸೆಮಿಫೈನಲ್ ನಲ್ಲಿ ಜೆಮಿಮಾ ಅಬ್ಬರಿಸಿದ್ದಾರೆ. ಶತಕ ಸಿಡಿಸಿದ್ರೂ ಖುಷಿಪಡದ ಜೆಮಿಮಾ, ಭಾರತ ಗೆಲ್ಲುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ದಣಿವಿದ್ರೂ ಕೊನೆಯವರೆಗೂ ಹೋರಾಡಲು ಬೈಬಲ್ ಕಾರಣ ಎಂದಿದ್ದಾರೆ.

ಐಸಿಸಿ ಮಹಿಳಾ ವಿಶ್ವಕಪ್ ಸೆಮಿ ಫೈನಲ್ (ICC Womens World Cup Semi Finals) ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಜೆಮಿಮಾ ರೋಡ್ರಿಗಸ್ (Jemimah Rodrigues) ಈಗ ಎಲ್ಲರ ಕಣ್ಮಣಿ. ಜೆಮಿಮಾಗೆ ಈ ಪ್ರಸಿದ್ಧಿ, ಹೆಸರು, ಪ್ರೀತಿ ಸುಲಭವಾಗಿ ಧಕ್ಕಿದ್ದಲ್ಲ. ಹಿಂದಿನ ವಿಶ್ವಕಪ್ ನಲ್ಲಿ ತಂಡದಿಂದ ಹೊರಗಿದ್ದ ಜೆಮಿಮಾ ಈ ಬಾರಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆದ್ರೆ ಆರಂಭಿಕ ಆಟ ಹೇಳಿಕೊಳ್ಳುವಂತಿರಲಿಲ್ಲ. ಕಳಪೆ ಫಾರ್ಮ್ ನಿಂದ ಖಿನ್ನತೆಗೆ ಒಳಗಾಗಿದ್ದ ಜೆಮಿಮಾ ಪ್ರತಿ ದಿನ ಕಣ್ಣೀರಿಡುತ್ತಿದ್ದರು. ತಾನೇನು ಎಂಬುದನ್ನು ತೋರಿಸಲು ಕೊನೆಗೂ ಅವಕಾಶ ಸಿಕ್ತು. ಮೈದಾನದಲ್ಲಿ ಶತಕ ಸಿಡಿಸಿ ಮಿಂಚಿದ ಜೆಮಿಮಾ ದೇಹದಲ್ಲಿ ಶಕ್ತಿ ಇರಲಿಲ್ಲ. ದಣಿದು ಸುಸ್ತಾಗಿದ್ದ ಜೆಮಿಮಾ ಮಾನಸಿಕ ಧೈರ್ಯ ಮಾತ್ರ ಮೆಚ್ಚುವಂತದ್ದು. ಜೆಮಿಮಾ ಕಣ್ಣಿಗೆ ಕಾಣ್ತಿದ್ದಿದ್ದು ಬರೀ ಭಾರತದ ಗೆಲುವು. ಅರ್ಧ ಶತಕ, ಶತಕದ ಬಗ್ಗೆ ಸ್ವಲ್ಪವೂ ಆಲೋಚನೆ ಮಾಡದ ಮಂಗಳೂರಿನ ಹುಡುಗಿ, ಮುಂಬೈ ಮೈದಾನದಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಆಟ ಆಡಿದ್ರು.

ಜಮಿಮಾ ಕೈ ಹಿಡಿತಾ ಬೈಬಲ್ ? : 

ದಿಗ್ಗಜ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸೋದು ಭಾರತಕ್ಕೆ ಸುಲಭವಾಗಿರಲಿಲ್ಲ. ದೊಡ್ಡ ಮೊತ್ತ 339 ರನ್ ಬೆನ್ನು ಹತ್ತಿದ್ದ ಟೀಂ ಇಂಡಿಯಾದಲ್ಲಿ ದಿಢೀರ್ ಬದಲಾವಣೆಯಾಗಿತ್ತು. ಐದನೇ ಸ್ಥಾನದಲ್ಲಿ ಬರ್ಬೇಕಿದ್ದ ಜೆಮಿಮಾ ಮೂರನೇಯವರಾಗಿ ಮೈದಾನಕ್ಕೆ ಇಳಿದಿದ್ದರು. ಆಗಷ್ಟೆ ಫ್ರೆಶ್ ಆಗಿ ಬಂದಿದ್ದ ಜೆಮಿಮಾ, ಮೈದಾನದಲ್ಲಿ ಅಬ್ಬರಿಸಿದ್ರು. ಶತಕ ಸಿಡಿಸಿದ್ರೂ ಜೆಮಿಮಾ ಸಂಭ್ರಮಿಸಲಿಲ್ಲ. ಸಂದರ್ಶನದಲ್ಲಿ ಈ ವಿಷ್ಯವನ್ನು ಜೆಮಿಮಾ ಹಂಚಿಕೊಂಡಿದ್ದಾರೆ. ನನಗೆ ಶತಕ ಮುಖ್ಯವಾಗಿರಲಿಲ್ಲ. ನನ್ನ ಶತಕಕ್ಕಿಂತ ದೇಶದ ಗೆಲುವು ಮುಖ್ಯವಾಗಿತ್ತು ಎಂದ ಜೆಮಿಮಾ ತಮ್ಮೆಲ್ಲ ಆಟವನ್ನು ದೇವರ ಆಶೀರ್ವಾದ ಎಂದಿದ್ದಾರೆ. ದೇವರಿಂದ ಇದೆಲ್ಲವೂ ಸಾಧ್ಯವಾಯ್ತು. ಸರಿಯಾದ ಸಮಯಕ್ಕೆ ಸರಿಯಾದದ್ದನ್ನು ದೇವರು ನೀಡಿದ್ದಾನೆ ಎಂದಿರುವ ಜೆಮಿಮಾ, ಬೈಬಲ್ ಶಕ್ತಿ ತುಂಬಿತ್ತು ಎಂದಿದ್ದಾರೆ.

INDW vs AUSW: ಆಸ್ಟ್ರೇಲಿಯಾ ಮಣಿಸಿ ವಿಶ್ವದಾಖಲೆಯೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಬೈಬಲ್ ನ ಯಾವ ವಾಕ್ಯ ಹೇಳಿಕೊಳ್ತಿದ್ದರು ಜೆಮಿಮಾ : 

ಮೈದಾನದಲ್ಲಿ ಜೆಮಿಮಾ ಏನೋ ಹೇಳಿಕೊಳ್ತಿದ್ದರು. ಏನು ಎನ್ನುವ ಕುತೂಹಲ ವೀಕ್ಷಕರಿಗಿತ್ತು. ಕೊನೆಯಲ್ಲಿ ಯಾವುದು ನನಗೆ ಮಾನಸಿಕ ಧೈರ್ಯ ತುಂಬಿದ್ದು ಎಂಬುದನ್ನು ಜೆಮಿಮಾ ಹೇಳಿದ್ದಾರೆ. ಆರಂಭದಲ್ಲಿ ಗಮನವನ್ನು ಕೇಂದ್ರೀಕರಿಸಲು ಮತ್ತು ನನ್ನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೆ. ಆದರೆ ಕೊನೆಯಲ್ಲಿ, ನಾನು ಬೈಬಲ್ನ ಒಂದು ಪದ್ಯವನ್ನು ಪುನರಾವರ್ತಿಸುತ್ತಿದ್ದೆ, "ಸುಮ್ಮನೆ ನಿಲ್ಲು, ದೇವರು ನಿಮಗಾಗಿ ಹೋರಾಡುತ್ತಾನೆʼʼ ಅಂತ ನಾನು ಹೇಳಿಕೊಳ್ತಿದ್ದೆ. ನಾನು ಸುಮ್ಮನೆ ನಿಂತಿದ್ದೆ. ಅವನು ನನಗಾಗಿ ಹೋರಾಡಿದ ಎಂದಿದ್ದಾರೆ ಜೆಮಿಮಾ.

ಅಪ್ಪ – ಅಮ್ಮನಿಗೆ ಖುದ್ದು ಡಿವೋರ್ಸ್ ಕೊಡಿಸಿದ್ದ ಈ Cricketer, ಅಚ್ಚರಿ ಕಾರಣ ಬಹಿರಂಗ

ಜೆಮಿಮಾ ಯಾರು? : 

ಜೆಮಿಮಾ,. ಮಂಗಳೂರಿನ ಮೂಲದವರು. ಅವರು ಬೆಳೆದಿದ್ದು ಮುಂಬೈನಲ್ಲಿ. ಜೆಮಿಮಾ ಸೆಪ್ಟೆಂಬರ್ 5, 2000 ರಂದು ಮುಂಬೈನ ಭಾಂಡಪ್ ಪ್ರದೇಶದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ರು. ಅವರ ತಂದೆ ಇವಾನ್ ರೊಡ್ರಿಗಸ್ ಕ್ರಿಕೆಟ್ ತರಬೇತುದಾರ. ಜೆಮಿಮಾ ಅವರನ್ನು ಕ್ರೀಡಾ ಜಗತ್ತಿಗೆ ಪರಿಚಯಿಸಿದ್ದು ಅವರ ತಂದೆ. ಶಾಲೆಯಲ್ಲಿ ಬಾಲಕಿಯರ ಕ್ರಿಕೆಟ್ ತಂಡ ಇಲ್ಲದ ಕಾರಣ, ಅವರ ತಂದೆ ಸ್ವತಃ ತಂಡವನ್ನು ರಚಿಸಿದ್ದರು. ಅವರು ಪ್ರತಿದಿನ ಬೆಳಿಗ್ಗೆ ಅಭ್ಯಾಸಕ್ಕೆ ಜೆಮಿಮಾ ಅವರನ್ನು ಕರೆದುಕೊಂಡು ಹೋಗ್ತಿದ್ದರು. ಗೆಲ್ಲಲು ಮಾತ್ರವಲ್ಲ, ನಿಮ್ಮನ್ನು ತಿಳಿದುಕೊಳ್ಳಲು ಆಟ ಆಡಿ ಅಂತ ಅವರ ತಂದೆ ಸದಾ ಹೇಳ್ತಿದ್ದರು. ಜೆಮಿಮಾ ಕೇವಲ 10 ವರ್ಷದವಳಿದ್ದಾಗ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದರು. ಅಂಡರ್ -19 ತಂಡದಲ್ಲಿ ಅಧ್ಬುತ ಆಟ ಪ್ರದರ್ಶನ ಮಾಡಿದ್ದ ಜೆಮಿಮಾ 17 ನೇ ವಯಸ್ಸಿನಲ್ಲಿ ಜೆಮಿಮಾ ಭಾರತಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಜೆನ್ ಜಿ ಜೆಮಿಮಾ, ಮೈದಾನದಲ್ಲಿ ಆಟ ಪ್ರದರ್ಶಿಸಿದ್ರೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡ್ತಾ ಕೋಟ್ಯಾಂತರ ಮಂದಿ ಮನಸ್ಸು ಗೆದ್ದಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ