ಒಂದೇ ಓವರ್‍‌ನಲ್ಲಿ 4 ಬಾಲ್‌ಗೆ 4 ವಿಕೆಟ್! 23 ವರ್ಷದ ವೇಗಿ ಮೇಲೆ ಕಣ್ಣಿಟ್ಟ ಐಪಿಎಲ್ ಫ್ರಾಂಚೈಸಿಗಳು!

Published : Nov 22, 2026, 04:57 PM IST
Jamshed Alam

ಸಾರಾಂಶ

ದೇಶಿಯ ಕ್ರಿಕೆಟ್‌ನಲ್ಲಿ ಜೆಮ್ಶೆಡ್ ಆಲಂ (jamshed alam) ಎಂಬ ಯುವಕ ಸಂಚಲನ ಸೃಷ್ಟಿದ್ದಾನೆ. ಮುಂಬರುವ ಐಪಿಎಲ್ ಮಿನಿ ಹರಾಜು ಹಿನ್ನೆಲೆಯಲ್ಲಿ 23 ವರ್ಷದ ಈ ಹುಡುಗನ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಈತ ಯಾರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಬೆಂಗಳೂರು: ದೇಶಿಯ ಕ್ರಿಕೆಟ್‌ನಲ್ಲಿ ಜೆಮ್ಶೆಡ್ ಆಲಂ (jamshed alam) ಎಂಬ ಯುವಕ ಸಂಚಲನ ಸೃಷ್ಟಿದ್ದಾನೆ. ಮುಂಬರುವ ಐಪಿಎಲ್ ಮಿನಿ ಹರಾಜು ಹಿನ್ನೆಲೆಯಲ್ಲಿ 23 ವರ್ಷದ ಈ ಹುಡುಗನ ಬಗ್ಗೆ ಭಾರೀ ಚರ್ಚೆ ಆಗ್ತಿದೆ.

ಯಾಕೆ ಚರ್ಚೆ ಆಗ್ತಿದೆ?

ಚರ್ಚೆಗೆ ಮುಖ್ಯ ಕಾರಣ ಸೈಯದ್ ಮುಷ್ತಾಕ್ ಅಲಿ ಟ್ರೋಫಿ. ರೈಲ್ವೇಸ್ ಪರ ಆಡುತ್ತಿರುವ ಈತ, ನಾಲ್ಕು ಬಾಲ್‌ನಲ್ಲಿ 4 ವಿಕೆಟ್ ತೆಗೆದು ಇತಿಹಾಸ ಸೃಷ್ಟಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆಯೋದು ಸುಲಭದ ಮಾತಲ್ಲ. ಹೀಗಿರುವಾಗ ಆಲಂ, ಕೇವಲ ಒಂಬತ್ತು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದು ತಮ್ಮ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿದ್ದಾರೆ.

ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ರೈಲ್ವೇಸ್ 5 ವಿಕೆಟ್‌ ಕಳೆದುಕೊಂಡು 182 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡಕ್ಕೆ ಜಮ್ಶೆಡ್ ಆಲಂ ಮಾಸ್ಟ್ರರ್ ಸ್ಟ್ರೋಕ್ ನೀಡಿದರು. ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಹಾರ್ವಿಕ್ ದೇಸಾಯಿ, ಪ್ರೇರಕ್ ಮಂಕಡ್, ರುಚಿತ್ ಅಹಿರ್ ಮತ್ತು ಸಮ್ಮರ್ ಗಜ್ಜರ್‍‌ ಬ್ಯಾಕ್ ಟು ಬ್ಯಾಕ್ ವಿಕೆಟ್ ಔಟ್ ಮಾಡಿದರು. ಇದರಿಂದ ಸೌರಾಷ್ಟ್ರ ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು.

ಅಷ್ಟೇ ಅಲ್ಲದೇ ಮುಂದಿನ ಓವರ್‍‌ನಲ್ಲಿ ಆಲಂ ಸಿದ್ಧಾರ್ಥ್ ರಾಣಾ ಔಟ್ ಮಾಡುವ ಮೂಲಕ ತಮ್ಮ ಚೊಚ್ಚಲ ಪಂದ್ಯದಲ್ಲಿ ಐದು ವಿಕೆಟ್ ಪಡೆದರು. 3.5 ಓವರ್‌ಗಳಲ್ಲಿ 38 ವಿಕೆಟ್‌ಗಳಿಗೆ 5 ವಿಕೆಟ್‌ ಪಡೆದು ತಂಡದ ಗೆಲುವಿಗೆ ಸಹಾಯಕಾರಿಯಾದರು. ಪ್ರಭಾವಶಾಲಿ ಬೌಲಿಂಗ್‌ನ ಮುಂದೆ ಸೌರಾಷ್ಟ್ರ 8 ವಿಕೆಟ್‌ಗಳಿಗೆ 153 ರನ್‌ಗಳಿಗೆ ಸೀಮಿತವಾಯಿತು. ರೈಲ್ವೇಸ್ 29 ರನ್‌ಗಳಿಂದ ಪಂದ್ಯವನ್ನು ಗೆದ್ದು ಮಿಂಚಿತು.

ಯಾರು ಜೆಮ್ಶೆಡ್ ಆಲಂ?

ಜಮ್ಶೆಡ್ ಆಲಂ ದೇಶೀಯ ಕ್ರಿಕೆಟ್‌ನಲ್ಲಿ ರೈಲ್ವೇಸ್ ತಂಡದವನ್ನು ಪ್ರತಿನಿಧಿಸುತ್ತಿರುವ ಬಲಗೈ ಮಧ್ಯಮ ವೇಗಿ. ಅವರು ಉತ್ತರ ಪ್ರದೇಶ ಟಿ 20 ಲೀಗ್‌ನಲ್ಲಿ ರಿಂಕು ಸಿಂಗ್ ನಾಯಕತ್ವದ ಮೀರತ್ ಮಾವೆರಿಕ್ಸ್ ಪರ ಆಡಿದ್ದಾರೆ. ರೈಲ್ವೇಸ್‌ನ ಅಂಡರ್ -23 ತಂಡಕ್ಕಾಗಿ ಸಿಕೆ ನಾಯುಡು ಟ್ರೋಫಿಯಲ್ಲಿ ಭಾಗವಹಿಸಿದ್ದಾರೆ. ಈ ವರ್ಷ ಟಿ 20 ಮುಂಬೈ ಲೀಗ್‌ನಲ್ಲಿ ಆಕಾಶ್ ಟೈಗರ್ಸ್ ಎಂಡಬ್ಲ್ಯೂಎಸ್ ಪರವೂ ಆಡಿದ್ದಾರೆ.

ಜಮ್ಶೆಡ್ ಆಲಂ ಪ್ರದರ್ಶನ ಭಾರತೀಯ ಕ್ರಿಕೆಟ್‌ಗೆ ಮಾತ್ರವಲ್ಲದೇ ವಿಶ್ವ ಕ್ರಿಕೆಟ್‌ಗೆ ಮಹತ್ವದ್ದಾಗಿದೆ. ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅವರಿಗಿಂತ ಕಡಿಮೆ ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದು ಕೇವಲ ಇಬ್ಬರು ಮಾತ್ರ. ಇಂಡೋನೇಷ್ಯಾದ ಗೆಡೆ ಪ್ರಿಯಂದನ ಕಾಂಬೋಡಿಯಾ ವಿರುದ್ಧ ಆರು ಎಸೆತಗಳಲ್ಲಿ ಐದು ವಿಕೆಟ್ ಪಡೆದ್ದಿದ್ದಾರೆ. ಫಿನ್‌ಲ್ಯಾಂಡ್‌ನ ಮಹೇಶ್ ತಾಂಬೆ ಎಸ್ಟೋನಿಯಾ ವಿರುದ್ಧ ಎಂಟು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಜಮ್ಶೆಡ್ ತಮ್ಮ ಟಿ20 ಚೊಚ್ಚಲ ಪಂದ್ಯದಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ವಿಶ್ವದ 2ನೇ ಬೌಲರ್ ಮತ್ತು ಭಾರತೀಯರಿಂದ ಮೊದಲಿಗರಾಗಿದ್ದಾರೆ.

ಕಣ್ಣಿಟ್ಟ ಐಪಿಎಲ್ ಫ್ರಾಂಚೈಸಿಗಳು

ದೇಶಿಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಜಮ್ಶೆಡ್ ಆಲಂ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್‍‌ನಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಜಮ್ಶೆಡ್ ಆಲಂ ಹೆಸರು ಮುಂಚೂಣಿಗೆ ಬರೋದು ದಟ್ಟವಾಗಿದೆ. ಮುಂಬರುವ ಟೂರ್ನಿಗಳಲ್ಲೂ ಜಮ್ಶೆಡ್ ಆಲಂ ಇದೇ ರೀತಿ ಪ್ರದರ್ಶನ ನೀಡುತ್ತ ಹೋದರೆ, ದೊಡ್ಡ ಮೊತ್ತಕ್ಕೆ ಫ್ರಾಂಚೈಸಿ ಪಾಲಾಗೋದ್ರಲ್ಲಿ ಅನುಮಾನವೇ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ನವೇ ಅಧಿಕೃತವಾಗಿ ಈ ರಾಜಕೀಯ ಪಕ್ಷ ಸೇರಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ..! ಸಿಕ್ತು ಮಹತ್ವದ ಜವಾಬ್ದಾರಿ
ಇಂದಿನ ಭಾರತ vs ಪಾಕಿಸ್ತಾನ ಮ್ಯಾಚ್ ಎಷ್ಟು ಗಂಟೆಗೆ ಆರಂಭ? ಎಲ್ಲಿ ನೇರ ಪ್ರಸಾರ? ಸೂರ್ಯವಂಶಿ, ಅಭಿಷೇಕ್ ಶರ್ಮಾ ಮೇಲೆ ಎಲ್ಲರ ಕಣ್ಣು