ಸತತ ಸೋಲಿನ ಬಳಿಕ ಜಿಂಬಾಬ್ವೆ ಸರಣಿ ಗೆದ್ದರೂ ಟೀಂ ಇಂಡಿಯಾಗೆ ಸಂಕಷ್ಟ, 3ನೇ ಪಂದ್ಯದಲ್ಲಿ ತಳಮಳ

Published : Jul 26, 2026, 04:37 PM IST
Team India

ಸಾರಾಂಶ

ಸತತ ಸೋಲು, ಮನಸ್ತಾಪ, ಮಾಜಿ ಕ್ರಿಕೆಟಿಗರ ಆಕ್ರೋಶ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಬಳಿಕ ಟೀಂ ಇಂಡಿಯಾ ಜಿಂಬಾಬ್ಬೆ ಸರಣಿ ಗೆದ್ದಿದೆ. ಆದರೆ 3ನೇ ಪಂದ್ಯಕ್ಕೂ ಮೊದಲೇ ಟೀಂ ಇಂಡಿಯಾದಲ್ಲಿ ತಳಮಳ ಶುರುವಾಗಿದೆ.

ಹರಾರೆ (ಜು.26) ಟೀಂ ಇಂಡಿಯಾ ಕಳೆದೆರಡು ತಿಂಗಳಲ್ಲಿ ಸತತವಾಗಿ ಸಂಕಷ್ಟಗಳ ಸರಮಾಲೆ ಎದುರಿಸಿದೆ. ಟೀಂ ಇಂಡಿಯಾ ಆಯ್ಕೆ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಸೋಲು ಸೇರಿದಂತೆ ಹಲವು ಸಂಕಷ್ಟಗಳು ಎದುರಾಗಿದೆ. ಆದರೆ ಜಿಂಬಾಬ್ವೆ ವಿರುದ್ದ ಆರಂಭಿಕ 2 ಪಂದ್ಯ ಗೆದ್ದು ಸರಣಿ ಗೆದ್ದುಕೊಂಡಿದೆ. ಈ ಮೂಲಕ ಸೋಲಿನಿಂದ ಹೊರಬಂದಿದೆ. ಆದರೆ ಗೆಲುವಿನ ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾಗೆ ಮತ್ತೆ ಸಂಕಷ್ಟಗಳು ಎದುರಾಗಿದೆ. ಜಿಂಬಾಬ್ವೆ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೂ ಮೊದಲೇ ಅನಿವಾರ್ಯ ನಿರ್ಧಾರಗಳು ತಲೆನೋವು ಹೆಚ್ಚಿಸಿದೆ.

ಟೀಂ ಇಂಡಿಯಾಗೆ ಎದುರಾದ ಸಂಕಷ್ಟವೇನು?

ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾಗೆ ಇದೀಗ ಇಂಜುರಿ ಸಮಸ್ಯೆಗಳು ಕಾಡುತ್ತಿದೆ. 2ನೇ ಟಿ20 ಪಂದ್ಯದಲ್ಲಿ ಗಾಯಗೊಂಡ ಬೌಲರ್ ಪ್ರಿನ್ಸ್ ಯಾದವ್ 3ನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಪ್ರಿನ್ಸ್ ಯಾದವ್ ಪ್ರಮುಖ 2 ವಿಕೆಟ್ ಕಬಳಿಸಿ ಗಮನಸೆಳೆದಿದ್ದರು. ಆದರೆ ಗಾಯಗೊಂಡ ಕಾರಣ ಅರ್ಧದಿಂದಲೇ ಮೈದಾನದಿಂದ ಹೊರನಡೆಯಬೇಕಾಯಿತು.ಇದೀಗ ಜಿಂಬಾಬ್ವೆ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. 3ನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿದೆ. ಪ್ರಿನ್ಸ್ ಯಾದವ್ ಬದಲು ಅಶೋಕ್ ಶರ್ಮಾ ತಂಡ ಸೇರಿಕೊಂಡಿದ್ದಾರೆ.

ಯಾರಿಗೆ ಸ್ಥಾನ

2ನೇ ಪಂದ್ಯದಲ್ಲಿ ಅಶೋಕ್ ಬದಲು ಯಶ್ ಠಾಕೂರ್ ಸ್ಥಾನ ಪಡೆದಿದ್ದರು. ಇದೀಗ ಪ್ರಿನ್ಸ್ ಯಾದವ್ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಮತ್ತೆ ಅಶೋಕ್ ಶರ್ಮಾ ತಂಡ ಸೇರಿಕೊಂಡಿದ್ದಾರೆ. 2ನೇ ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಇಂಜುರಿ ಕುರಿತು ಅಪ್‌ಡೇಟ್ ನೀಡಿದ್ದಾರೆ.

ಆರಂಭಿಕ 2 ಪಂದ್ಯಗಳಲ್ಲಿ ಗೆಲುವು

ಐರ್ಲೆಂಡ್ ವಿರುದ್ದ 2 ಸೋಲು, ಇಂಗ್ಲೆಂಡ್ ವಿರುದ್ಧ 4 ಸೋಲು ಕಂಡ ಟೀಂ ಇಂಡಿಯಾ ಕಂಗಾಲಾಗಿತ್ತು. ಆದರೆ ಜಿಂಬಾಬ್ವೆ ವಿರುದ್ದದ 3 ಪಂದ್ಯಗಳ ಟಿ20 ಸರಣಿಯಲ್ಲಿ ಆರಂಭಿಕ 2 ಪಂದ್ಯ ಗೆದ್ದು ಸರಣಿ ಗೆದ್ದುಕೊಂಡಿದೆ. 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಅಬ್ಬರಿಸಿತ್ತು. ಹೀಗಾಗಿ ಭರ್ಜರಿ 90 ರನ್ ಗೆಲುವು ದಾಖಲಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯ 219 ರನ್ ಸಿಡಿಸಿತ್ತು. ಇತ್ತ ಜಿಂಬಾಬ್ವೆ ತಂಡವನ್ನು 129 ರನ್‌ಗೆ ಆಲೌಟ್ ಮಾಡಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೈಭವ್‌ಗೆ ಸೀನಿಯರ್ ಪ್ಲೇಯರ್ಸ್‌ಯಿಂದ ವಾರ್ನಿಂಗ್; ಡ್ರೆಸ್ಸಿಂಗ್ ರೂಂನಲ್ಲಿ ಬಿಗ್‌ ಫೈಟ್‌! ಆಗಿದ್ದೇನು?
ಮುಂಬೈನಿಂದ ಹಾರ್ದಿಕ್ ಪಾಂಡ್ಯ ಟ್ರೇಡ್‌ಗೆ 20 ಕೋಟಿ ರೂ ಆಫರ್, ಸಿಎಸ್‌ಕೆ ಮೆಗಾ ಪ್ಲಾನ್ ಬಹಿರಂಗ