
ಲಖನೌ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ 61ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಖನೌನ ಪ್ರತಿಭಾನ್ವಿತ ಸ್ಪಿನ್ನರ್ ದಿಗ್ವೇಶ್ ಸಿಂಗ್ ರಾಠಿ ಮತ್ತೊಮ್ಮೆ ವಿಚಿತ್ರ ನೋಟ್ ಬುಕ್ ಸೆಲಿಬ್ರೇಷನ್ ಮಾಡುವ ಮೂಲಕ ಎದುರಾಳಿ ಬ್ಯಾಟರ್ ಕೆರಳಿಸಿದ್ದಾರೆ. ದಂಡ ಹಾಕಿದರೂ ತಿದ್ದಿಕೊಳ್ಳದ ಈ ದಿಗ್ವೇಶ್ ಅವರನ್ನು ಇದೀಗ ಒಂದು ಪಂದ್ಯದ ಮಟ್ಟಿಗೆ ಬ್ಯಾನ್ ಮಾಡುವ ಮೂಲಕ ಬಿಸಿ ಮುಟ್ಟಿಸಿದೆ
ಅಭಿಷೇಕ್ ಔಟ್ ಆಗ್ತಿದ್ದಂತೆ ಬೌಲರ್‌ನ ವಿಚಿತ್ರ ಪ್ರತಿಕ್ರಿಯೆ:
ಸನ್‌ರೈಸರ್ಸ್ ಹೈದರಾಬಾದ್‌ನ ಸ್ಕೋರ್ 7.3 ಓವರ್‌ಗಳಲ್ಲಿ 99 ರನ್ ಆಗಿತ್ತು. ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 59 ರನ್ ಗಳಿಸಿದ್ದರು. ಆಗ 8ನೇ ಓವರ್‌ನಲ್ಲಿ ದಿಗ್ವೇಶ್ ಸಿಂಗ್ ರಾಠಿ ಬೌಲಿಂಗ್ ಮಾಡ್ತಿದ್ರು. ದಿಗ್ವೇಶ್ ಎಸೆತವನ್ನು ಅಭಿಷೇಕ್ ಶರ್ಮಾ ಸಿಕ್ಸರ್‌ಗೆ ಅಟ್ಟಲು ಮುಂದಾದರು. ಆದರೆ ಚೆಂಡು ಸರಿಯಾಗಿ ಬ್ಯಾಟ್‌ಗೆ ತಾಗಲಿಲ್ಲ ಮತ್ತು ನೇರವಾಗಿ ಶಾರ್ದೂಲ್ ಠಾಕೂರ್ ಕೈಗೆ ಸಿಕ್ಕಿತು. ಹೀಗೆ ಅಭಿಷೇಕ್‌ರ ಸ್ಫೋಟಕ ಇನ್ನಿಂಗ್ಸ್ ಅಂತ್ಯಗೊಂಡಿತು.
ಅಭಿಷೇಕ್ ಶರ್ಮಾ ಔಟ್ ಆಗ್ತಿದ್ದಂತೆ ಸ್ಪಿನ್ನರ್ ದಿಗ್ವೇಶ್ ಸಿಂಗ್ ರಾಠಿ ತಮ್ಮ 'ನೋಟ್‌ಬುಕ್' ಸೆಲೆಬ್ರೇಷನ್ ಮಾಡಿದರು. ಈ ವೇಳೆ ಅಭಿಷೇಕ್‌ಗೆ ಏನೋ ಹೇಳುವುದು ಕಂಡು ಬಂತು, ಅದು ಬ್ಯಾಟ್ಸ್‌ಮನ್‌ಗೆ ಇಷ್ಟವಾಗಲಿಲ್ಲ ಮತ್ತು ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. ಇಬ್ಬರೂ ಒಬ್ಬರಿಗೊಬ್ಬರು 'ಟೂ-ಟೂ, ಮೈ-ಮೈ' ಅಂತಿದ್ದರು. ಆದರೆ, ಅಲ್ಲಿ ಇದ್ದ ಇತರ ಆಟಗಾರರು ಮತ್ತು ಅಂಪೈರ್ ಇಬ್ಬರನ್ನೂ ಸಮಾಧಾನಪಡಿಸಿ ವಿಷಯವನ್ನು ತಣ್ಣಗಾಗಿಸಿದರು. ಅವರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಂದು ಮ್ಯಾಚ್ ಬ್ಯಾನ್, 50% ದಂಡ:
ನೋಟ್ ಬುಕ್ ಸೆಲಿಬ್ರೇಷನ್ ಮೂಲಕ ಎದುರಾಳಿ ಆಟಗಾರನನ್ನು ಕೆಣಕಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ತಪ್ಪಿಗಾಗಿ ಇದೀಗ ದಿಗ್ವೇಶ್ ರಾಠಿ ಅವರಿಗೆ ಐಪಿಎಲ್ ಗವರ್ನಿಂಗ್ ಬಾಡಿ ಪಂದ್ಯದ ಸಂಭಾವನೆಯ 50% ದಂಡ ವಿಧಿಸಲಾಗಿದೆ. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೇ 5 ಡಿಮೆರಿಟ್ ಅಂಕ ಪಡೆದಿದ್ದರಿಂದ ದಿಗ್ವೇಶ್ ರಾಠಿ ಅವರಿಗೆ ಒಂದು ಐಪಿಎಲ್ ಪಂದ್ಯದಿಂದ ಬ್ಯಾನ್ ಮಾಡಲಾಗಿದೆ. ಹೀಗಾಗಿ ದಿಗ್ವೇಶ್ ರಾಠಿ ಮೇ 22ರಂದು ಗುಜರಾತ್ ಟೈಟಾನ್ಸ್ ಎದುರು ನಡೆಯಲಿರುವ ಪಂದ್ಯಕ್ಕೆ ದಿಗ್ವೇಶ್ ರಾಠಿ ಬೆಂಚ್ ಕಾಯಿಸಲಿದ್ದಾರೆ.
ಆರೆಂಜ್ ಆರ್ಮಿಗೆ ಶರಣಾದ ಲಖನೌ ಆಫ್ ರೇಸ್‌ನಿಂದ ಔಟ್
ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯವು ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ರಿಷಭ್ ಪಂತ್ ನೇತೃತ್ವದ ಲಖನೌ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಹೈಸ್ಕೋರಿಂಗ್ ಮ್ಯಾಚ್‌ಗೆ ಸಾಕ್ಷಿಯಾಗಿದ್ದ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಬಾದ್ ತಂಡವು 6 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು. ಈ ಸೋಲಿನೊಂದಿಗೆ ಲಖನೌ ಸೂಪರ್ ಜೈಂಟ್ಸ್ ಪಡೆಯ ಪ್ಲೇ ಆಫ್ ಕನಸು ನುಚ್ಚುನೂರಾಯಿತು.
ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡವು ಮಿಚೆಲ್ ಮಾರ್ಷ್ ಹಾಗೂ ಏಯ್ಡನ್ ಮಾರ್ಕ್‌ರಮ್ ಆಕರ್ಷಕ ಅರ್ಧಶತಕ ಹಾಗೂ ನಿಕೋಲಸ್ ಪೂರನ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತ್ತು. ಇನ್ನು ಕಠಿಣ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೇನ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಇನ್ನೂ 10 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.