ದಾಖಲೆಯ 48,390 ಕೋಟಿ ರೂಪಾಯಿಗೆ ಐದು ವರ್ಷಗಳ IPL Media Rights ಮಾರಾಟ!

Published : Jun 14, 2022, 07:07 PM IST
ದಾಖಲೆಯ 48,390 ಕೋಟಿ ರೂಪಾಯಿಗೆ ಐದು ವರ್ಷಗಳ IPL Media Rights ಮಾರಾಟ!

ಸಾರಾಂಶ

ಮುಂದಿನ ಐದು ವರ್ಷಗಖ ಐಪಿಎಲ್ ಮಾಧ್ಯಮ ಹಕ್ಕುಗಳು ಇ-ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದೆ. ಭಾರತದಲ್ಲಿ ಟಿವಿ ನೇರಪ್ರಸಾರ ಹಕ್ಕುಗಳನ್ನು ಸ್ಟಾರ್ ಇಂಡಿಯಾ ಖರೀದಿ ಮಾಡಿದ್ದರೆ, ಡಿಜಿಟಲ್ ಪ್ರಸಾರದ ಹಕ್ಕು ರಿಯಲನ್ಸ್ ನೇತೃತ್ವದ ವಯಾಕಾಮ್ ಖರೀದಿ ಮಾಡಿದೆ. ಒಟ್ಟಾರೆ ಐಪಿಎಲ್ ಹಕ್ಕುಗಳು 48, 390 ಕೋಟಿ ರೂಪಾಯಿಗೆ ಸೇಲ್ ಆಗಿದೆ.  

ಮುಂಬೈ (ಜೂನ್ 14): ಐಪಿಎಲ್ (IPL) ಟೂರ್ನಿಯ ಮೇಲೆ ದುಡ್ಡಿನ ಮಳೆಯಾಗಿದೆ. ಮುಂದಿನ ಐದು ವರ್ಷದಲ್ಲಿ ನಡೆಯಲಿರುವ 410 ಐಪಿಎಲ್ ಪಂದ್ಯಗಳ ಟಿವಿ (TV) ಹಾಗೂ ಡಿಜಿಟಲ್ (Digital) ಪ್ರಸಾರದ ಹಕ್ಕುಗಳು ದಾಖಲೆಯ 48, 390 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ (bcci secretary jay shah) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ವಯೋಕಾಮ್ (Viacom18), ಸ್ಟಾರ್ ಇಂಡಿಯಾ (Disney Star Or Star India) ಹಾಗೂ ಟೈಮ್ಸ್ ಇಂಟರ್ನೆಟ್ (Times Internet) ಕಂಪನಿಗಳು ತಮ್ಮ ನಡುವೆ ಹಕ್ಕುಗಳನ್ನು ಹಂಚಿಕೊಂಡಿವೆ.

ಟ್ವಿಟರ್ ಮೂಲಕ ಹರಾಜಿನಲ್ಲಿ ಗೆದ್ದವರ ವಿವರಗಳನ್ನು ಜಯ್ ಷಾ ಪ್ರಕಟ ಮಾಡಿದ್ದಾರೆ. "ಐಪಿಎಲ್ ಆರಂಭದಿಂದಲೂ ತನ್ನ ಬೆಳವಣಿಗೆ ಮೂಲಕ ಭಾರತೀಯ ಕ್ರಿಕೆಟ್ ಅನ್ನು ಶ್ರೀಮಂತವಾಗಿಸಿದೆ. ಈಗ ಬ್ರ್ಯಾಂಡ್ ಐಪಿಎಎಲ್ ಮಾಧ್ಯಮ ಹಕ್ಕುಗಳ ಇ-ಹರಾಜು 48,390 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಇನ್ನೊಂದು ದಾಖಲೆ ಮಾಡಿದೆ. ಪ್ರತಿ ಪಂದ್ಯದ ನೇರಪ್ರಸಾರ ಮಾಡುವ ಮೌಲ್ಯದ ಆಧಾರದ ಮೇಲೆ ವಿಶ್ವದ 2ನೇ ಮೌಲ್ಯಯುತ ಲೀಗ್ ಐಪಿಎಲ್ ಆಗಿದೆ' ಎಂದು ಜಯ್ ಷಾ ಬರೆದಿದ್ದಾರೆ.


BCCI ಐಪಿಎಲ್‌ನಿಂದ ಉತ್ಪತ್ತಿಯಾಗುವ ಆದಾಯವನ್ನು ತಳಮಟ್ಟದಿಂದ ಪ್ರಾರಂಭವಾಗುವ ನಮ್ಮ ದೇಶೀಯ ಕ್ರಿಕೆಟ್ ರಚನೆಯನ್ನು ಬಲಪಡಿಸಲು, ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಭಾರತದಾದ್ಯಂತ ಸೌಲಭ್ಯಗಳನ್ನು ಹೆಚ್ಚಿಸಲು ಬಳಸಿಕೊಳ್ಳುತ್ತದೆ. ಇದೀಗ, ನಮ್ಮ ರಾಜ್ಯದ ಸಂಘಗಳು, ಐಪಿಎಲ್ ಫ್ರಾಂಚೈಸಿಗಳು ಅಭಿಮಾನಿಗಳ ಅನುಭವವನ್ನು ಹೆಚ್ಚಿಸಲು ಮತ್ತು ನಮ್ಮ ದೊಡ್ಡ ಪಾಲುದಾರರಾದ 'ಕ್ರಿಕೆಟ್ ಅಭಿಮಾನಿ'ಯನ್ನು ಚೆನ್ನಾಗಿ ನೋಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಐಪಿಎಲ್‌ನೊಂದಿಗೆ ಒಟ್ಟಾಗಿ ಕೆಲಸ ಮಾಡುವ ಸಮಯ ಬಂದಿದೆ ಎಂದು ಜಯ್ ಷಾ ಹೇಳಿದ್ದಾರೆ.

Media Rights ಬರೋಬ್ಬರಿ 44,075 ಕೋಟಿ ರೂಪಾಯಿಗೆ IPL ಪ್ರಸಾರ ಹಕ್ಕು ಮಾರಾಟ!

2023 ರಿಂದ 2027ರವರೆಗೆ ಐಪಿಎಲ್ ನಲ್ಲಿ ಒಟ್ಟು 410 ಐಪಿಎಲ್ ಪಂದ್ಯಗಳು ನಡೆಯಲಿದ್ದು, ಮೂರು ದಿನಗಳ ಹರಾಜು ಪ್ರಕ್ರಿಯೆ ಮಂಗಳವಾರ ಮುಕ್ತಾಯ ಕಂಡಿದೆ. ಈ ಐದು ವರ್ಷದ ಅವಧಿಯಲ್ಲಿ ಹಾಗೇನಾದರೂ ಪಂದ್ಯಗಳ ಸಂಖ್ಯೆ ಏರಿಕೆ ಕಂಡಲ್ಲಿ ಅದರ ನೇರಪ್ರಸಾರ ಹಕ್ಕುಗಳನ್ನು ಬಿಸಿಸಿಐ ಇನ್ನೊಮ್ಮೆ ಮಾರಾಟ ಮಾಡಲಿದೆ.

IPL Media Rights: ರೇಸ್‌ನಿಂದ ಹಿಂದೆ ಸರಿದ ಅಮೆಜಾನ್

ಪ್ಯಾಕೇಜ್ ಎ:
ಭಾರತದಲ್ಲಿ ಟಿವಿ ಪ್ರಸಾರ 
ಒಟ್ಟು ಪಂದ್ಯಗಳು: 410
ಒಟ್ಟು ಹಣ: 23,575 ಕೋಟಿ (USD 3.0 bn)
ಪ್ರತಿ ಪಂದ್ಯಕ್ಕೆ: 57.5 ಕೋಟಿ (USD 7.4 mn)
ಬಿಡ್ ವಿಜೇತ ಕಂಪನಿ: ಸ್ಟಾರ್ ಇಂಡಿಯಾ

ಪ್ಯಾಕೇಜ್ ಬಿ: ಭಾರತದಲ್ಲಿ ಡಿಜಿಟಲ್ ಪ್ರಸಾರ
ಒಟ್ಟು ಪಂದ್ಯಗಳು: 410
ಒಟ್ಟು ಹಣ: 20,500 ಕೋಟಿ (USD 2.6 bn)
ಪ್ರತಿ ಪಂದ್ಯಕ್ಕೆ: 50 ಕೋಟಿ (USD 6.4 mn)
ಬಿಡ್ ವಿಜೇತ ಕಂಪನಿ: ವಯೋಕಾಮ್

ಪ್ಯಾಕೇಜ್ ಸಿ: ಆಯ್ದ 18 ಪಂದ್ಯಗಳ ನೇರಪ್ರಸಾರ
ಒಟ್ಟು ಪಂದ್ಯಗಳು: 18
ಒಟ್ಟು ಹಣ:  3,258 ಕೋಟಿ (USD 0.4 bn)
ಪ್ರತಿ ಪಂದ್ಯಕ್ಕೆ: 33.24 ಕೋಟಿ (USD 4.3 mn)
ಬಿಡ್ ವಿಜೇತ ಕಂಪನಿ: ವಯೋಕಾಮ್

ಪ್ಯಾಕೇಜ್ ಡಿ: ವಿದೇಶದಲ್ಲಿ ಪಂದ್ಯಗಳ ನೇರಪ್ರಸಾರ
ಒಟ್ಟು ಪಂದ್ಯಗಳು: 410
ಒಟ್ಟು ಹಣ:  1,058 ಕೋಟಿ (USD 0.1 bn)
ಪ್ರತಿ ಪಂದ್ಯಕ್ಕೆ: 2.6 ಕೋಟಿ (USD 0.3 mn)
ಬಿಡ್ ವಿಜೇತ ಕಂಪನಿ: ವಯೋಕಾಮ್ ಮತ್ತು ಟೈಮ್ಸ್ ಇಂಟರ್ನೆಟ್
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಕ್ಕು ವಯೋಕಾಮ್ ಗೆ
ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಹಾಗೂ ಅಮೆರಿಕ ಹಕ್ಕು ಟೈಮ್ಸ್ ಇಂಟರ್ನೆಟ್

ಒಟ್ಟಾರೆ ಐಪಿಎಲ್ ಮಾಧ್ಯಮ ಹಕ್ಕುಗಳ ಆದಾಯ
ಒಟ್ಟು ಪಂದ್ಯಗಳು: 410
ಒಟ್ಟು ಹಣ: 48,390 ಕೋಟಿ(USD 6.2 bn)
ಪ್ರತಿ ಪಂದ್ಯಕ್ಕೆ 118.0 ಕೋಟಿ (USD 15.1 mn)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!
ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!