IPL Final ಆರ್‌ಸಿಬಿ ಗುಜರಾತ್ ಹೋರಾಟದಲ್ಲಿ ಗೆಲ್ಲೋದು ಯಾರು? ಗಿಣಿ ನುಡಿದ ಭವಿಷ್ಯ

Published : May 31, 2026, 03:19 PM IST
parrot astrology

ಸಾರಾಂಶ

ಐಪಿಎಲ್ ಪೈನಲ್ ಪಂದ್ಯ ಇನ್ನುಕೆಲವೆ ಗಂಟೆಗಳಲ್ಲಿ ಆರಂಭಗೊಳ್ಳಲಿದೆ. ಈ ಬಾರಿ ಟ್ರೋಫಿ ಗೆಲ್ಲೋದು ಯಾರು ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಇದೀಗ ಗಿಣಿ ಶಾಸ್ತ್ರದ ಮೂಲಕ ವಿನ್ನರ್ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಬೆಂಗಳೂರು (ಮೇ.31) ದೇಶದೆಲ್ಲೆಡೆ ಇದೀಗ ಐಪಿಎಲ್ ಫೈನಲ್ ಫೀವರ್ ಜೋರಾಗಿದೆ. ರಾಜ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳು ಪಂದ್ಯದ ಪ್ರತಿ ಎಸೆತ ಸಂಭ್ರಮಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಇತ್ತ ಹಲವು ಅಭಿಮಾನಿಗಳು ಅಹಮ್ಮದಾಬಾದ್ ಪ್ರಯಾಣ ಮಾಡಿದ್ದು, ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಸಜ್ಜಾಗಿದ್ದಾರೆ. ಇದರ ನಡುವೆ ಹಲವು ರಾಜ್ಯಗಳಲ್ಲಿ ಈ ಬಾರಿ ಟ್ರೋಫಿ ಗೆಲ್ಲೋದು ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ಇದೀಗ ಗಿಣಿ ಶಾಸ್ತ್ರದ ಮೂಲಕ ಈ ಬಾರಿ ಟ್ರೋಫಿ ವಿನ್ನರ್ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಗಿಣಿ ಹೆಕ್ಕಿದ ಲೋಗೋ ಹಲವರಿಗೆ ಅಚ್ಚರಿ ನೀಡಿದೆ.

ಗಿಣಿ ಹೇಳಿದ ಐಪಿಎಲ್ 2026 ಫೈನಲ್ ಭವಿಷ್ಯ

ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಎರಡೂ ಬಲಿಷ್ಠ ತಂಡ. ತಂಡಗಳ ಲೋಗೋ ಮುಂದಿಟ್ಟು, ಗಿಣಿ ಬಳಿ ಒಂದು ಕಾರ್ಡ್ ಆಯ್ಕೆ ಮಾಡಲು ಸೂಚಿಸಲಾಗಿದೆ. ಪಂಜರದಿಂದ ಹೊರಬಂದ ಗಿಣಿ ನೇರವಾಗಿ ಒಂದು ಕಾರ್ಡ್ ಆಯ್ಕೆ ಮಾಡಿ ಮಾಲೀಕನಿಗೆ ನೀಡಿದೆ. ಕಾರ್ಡ್ ತೆಗೆದು ಒಳ ನೋಡಿದರೆ ಅದು ಗುಜರಾತ್ ಟೈಟಾನ್ಸ್ ಲೋಗೋ. ಈ ಗಿಣಿ ಶಾಸ್ತ್ರದ ಪ್ರಕಾರ ಗುಜರಾತ್ ಟೈಟಾನ್ಸ್ ಈ ಫೈನಲ್ ಪಂದ್ಯ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.

ಗಿಣಿ ಭವಿಷ್ಯದಿಂದ ಆರ್‌ಸಿಬಿ ಗೆಲುವು ಪಕ್ಕ ಎಂದ ಫ್ಯಾನ್ಸ್

ಹೈದರಾಬಾದ್ ಮೂಲಕ ಈ ಗಿಣಿ ಹಾಗೂ ಗಿಣಿ ಶಾಸ್ತ್ರ ನುಡಿಯುವ ಚಿಲಕಮ್ಮನಿಗೆ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿಲಕಮ್ಮ ಮೊನ್ನೆ ಹೈದರಾಬಾದ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ್ದದರು. ಆದರೆ ಹೈದರಾಬಾದ್ ಸೋಲು ಕಂಡ ಟೂರ್ನಿಯಿಂದ ಹೊರಬಿತ್ತು. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲ್ಲುತ್ತೆ ಎಂದಿದ್ದೀರಿ, ಆದರೆ ಸೋಲು ಕಂಡಿತ್ತು. ಇದೀದ ಫೈನಲ್ ಪಂದ್ಯದಲ್ಲಿ ಗುಜರಾತ್ ಗೆಲ್ಲುತ್ತೆ ಎಂದಿದ್ದೀರಿ. ಧನ್ಯವಾದ ಖಂಡಿತ ಆರ್‌ಸಿಬಿ ಗೆಲ್ಲಲಿದೆ ಎಂದು ಹಲವು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕಮೆಂಟ್ ವ್ಯಕ್ತವಾಗಿದೆ. ಈ ಪೈಕಿ ಬಹುತೇಕರು ಆರ್‌ಸಿಬಿ ಗೆಲ್ಲುತ್ತೆ ಎಂದಿದ್ದಾರೆ. ಇದೀಗ ಕುತೂಹಲ ಹೆಚ್ಚಾಗುತ್ತಿದೆ. ಎರಡು ಬಲಿಷ್ಠ ತಂಡ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂದು ಟ್ರೋಫಿ ಯಾರಿಗೆ ಒಲಿಯುತ್ತೆ ಅನ್ನೋ ಕುತೂಹಲ ಕೆಲ ಗಂಟೆಗಳಲ್ಲಿ ತಿಳಿಯಲಿದೆ.

2025ರ ಚಾಂಪಿಯನ್ ತಂಡ ಆರ್‌ಸಿಬಿ

2025ರಲ್ಲಿ ಆರ್‌ಸಿಬಿ ಇದೇ ಮೈದಾನದಲ್ಲಿ ಟ್ರೋಫಿ ಗೆದ್ದು ಸಂಭ್ರಮಿತ್ತು. 18 ವರ್ಷಗಳ ಬಳಿಕ ಮೊದಲ ಟ್ರೋಫಿ ಗೆದ್ದು ಸಂಭ್ರಮ ಆಚರಿಸಿತ್ತು. ಕಳೆದ ಬಾರಿ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹೋರಾಟ ನಡೆಸಿತ್ತು. ಟ್ರೋಫಿ ಗೆಲುವಿನೊಂದಿಗೆ ಬರ ನೀಗಿಸಿಕೊಂಡಿತ್ತು. ಇದೀಗ ಆರ್‌ಸಿಬಿಗೆ ಸತತ 2ನೇ ಟ್ರೋಫಿ ಗೆಲ್ಲುವ ಅವಕಾಶ ಮುಂದಿದೆ. ಇದಕ್ಕಾಗಿ ಭಾರಿ ತಯಾರಿ ಮಾಡಿಕೊಂಡಿದೆ.

ಗುಜರಾತ್ ಟೈಟಾನ್ಸ್ ಕೂಡ 2ನೇ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. 2022ರಲ್ಲಿ ಗುಜರಾತ್ ಟೈಟಾನ್ಸ್ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಶುಬಮನ್ ಗಿಲ್, ಜೋಸ್ ಬಟ್ಲರ್, ಸಾಯಿ ಸುದರ್ಶನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಇಂದಿನ ಹೋರಾಟ ಮತ್ತಷ್ಟು ರೋಚಕವಾಗಲಿದೆ.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅವನು 3 ಓವರ್ ಬೌಲ್ ಮಾಡಿದ್ರೆ RCB ಕಥೆ ಮುಗೀತು; ಫೈನಲ್‌ಗೂ ಮುನ್ನ ಬೆಂಗಳೂರು ಆಟಗಾರನನ್ನೇ ಗೇಲಿ ಮಾಡಿದ ಕೃಷ್ಣಮಾಚಾರಿ ಶ್ರೀಕಾಂತ್!
ತಂದೆ ಕೊಡುತ್ತಿದ್ದ 70 ರೂಪಾಯಿಯಲ್ಲೇ ₹70 ಕೋಟಿಯ ಸಾಮ್ರಾಜ್ಯ ಕಟ್ಟಿದ ಮಗನ ಕಥೆ..!