
ಅಹಮ್ಮದಾಬಾದ್ (ಮೇ.31) ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈ ನಿರ್ಧಾರಗಳ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಪಂದ್ಯದ ನಡುವೆ ಮಳೆ ಆತಂಕ ಎದುರಾಗಿದೆ. ಹವಾಮಾನ ಇಲಾಖೆ ಅಹಮ್ಮದಾಬಾದ್ ಹಾಗೂ ಸುತ್ತ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ಪಂದ್ಯದ ನಡುವೆ ಮಳೆ ಬಂದರೂ ಅಚ್ಚರಿಯಿಲ್ಲ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಮಳೆ ಅಡ್ಡಿಯಾದರೆ ಇಡೀ ಲೆಕ್ಕಾಚಾರವೇ ಉಲ್ಟಾ ಆಗಲಿದೆ.
ಇಂದು ಮಧ್ಯಾಹ್ನದ ವೇಳೆ ಅಹಮ್ಮದಾಬಾದ್‌ನಲ್ಲಿ ತಾಪಮಾನ 39ಕ್ಕೆ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಹವಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿತ್ತು. ಅಹಮ್ಮದಾಬಾದ್‌ನಲ್ಲಿ ಇಂದು ರಾತ್ರಿ ಮಳೆ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂಚಿಸಿದೆ. ಸದ್ಯ ಮೋಡ ಕವಿಡ ವಾತಾವರವಿದೆ. ಆದರೆ ಮಳೆ ಸಾದ್ಯತೆಗಳು ಕಾಣುತ್ತಿಲ್ಲ. ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ರಾತ್ರಿ ಮಳೆಯಿಂದ ಕೆಲ ಕಾಲ ಪಂದ್ಯ ಅಡ್ಡಿಯಾದರೆ ಪಂದ್ಯದ ಓವರ್ ಕಡಿತಗೊಳ್ಳಲಿದೆ. ಬಾರಿ ಮಳೆಯಿಂದ ಪಂದ್ಯ ಮುಂದುವರಿಸಲು ಸಾಧ್ಯವಾಗದಿದ್ದರೆ, ಪಂದ್ಯ ಮೀಸಲ ದಿನಕ್ಕೆ ಮುಂದೂಡಲಾಗುತ್ತದೆ. ಹೀಗಾದಲ್ಲಿ ಜೂನ್ 1 ರಂದು ಫೈನಲ್ ಪಂದ್ಯ ಮತ್ತೆ ನಡೆಯಲಿದೆ.
ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ರೋಚಕ ಹೋರಾಟಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗಾಗಲೇ ಆರ್‌ಸಿಬಿ ಅಭಿಮಾನಿಗಳು ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕುಳಿತಿದ್ದಾರೆ. ಸಂಭ್ರಮ ಜೋರಾಗಿದೆ. ಗೆಲುವು ಯಾರಿಗೆ ಅನ್ನೋ ಕುತೂಹಲ ಹೆಚ್ಚಾಗಿದೆ. ಎರಡು ತಂಡಗಳು ಬಲಿಷ್ಠವಾಗಿದ್ದು, ರೋಚಕ ಹೋರಾಟ ನಡೆಯುವುದರಲ್ಲಿ ಅನುಮಾನವಿಲ್ಲ.
2025ರಲ್ಲಿ ಇದೇ ಮೈದಾನದಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿತ್ತು. ಅಂದು ಕೂಡ ಪಿಚ್ ನಂಬರ್ 6ರಲ್ಲಿ ಪಂದ್ಯ ಆಡಲಾಗಿತ್ತು. ಇದೀಗ 2026ರ ಫೈನಲ್ ಪಂದ್ಯ ಕೂಡ ಪಿಚ್ ನಂ.6ರಲ್ಲೇ ಆಡಲಾಗುತ್ತಿದೆ. ಗುಜರಾತ್ ಟೈಟಾನ್ಸ್‌ಗೆ ತವರಾಗಿದ್ದರೆ, ಆರ್‌ಸಿಬಿ ಇತಿಹಾಸ ರಚಿಸಿದ ಮೈದಾನ ಇದು. ಹೀಗಾಗಿ ಹೋರಾಟದ ತೀವ್ರತೆ ಹೆಚ್ಚಾಗಲಿದೆ. ಉಭಯ ತಂಡದ ಅಭಿಮಾನಿಗಳು ತಮ್ಮ ತಂಡ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.