
ಅಹಮ್ಮದಾಬಾದ್ (ಮೇ.31) ಐಪಿಎಲ್ ಫೈನಲ್ ಪಂದ್ಯದ ಕುತೂಹಲ ಹೆಚ್ಚಾಗುತ್ತಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ಈ ಮೂಲಕ ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಸೂಚನೆ ನೀಡಿದೆ. ಇತ್ತ ಕ್ರೀಡಾಂಗಣದಲ್ಲಿ, ಕ್ರೀಡಾಂಗಣದ ಹೊರಗಡೆ, ಸ್ಕ್ರೀನ್ ಮೂಲಕ ಪಂದ್ಯ ನೋಡುತ್ತಿರುವ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ. ವಿಶೇಷ ಅಂದರೆ ನರೇಂದ್ರ ಮೋದಿ ಕ್ರೀಡಾಂಗಣ ಗುಜರಾತ್ ಟೈಟಾನ್ಸ್ ತವರು ನೆಲ. ಇಂದಿನ ಪಂದ್ಯದಲ್ಲಿ ಕ್ರೀಡಾಂಗಣದ ತುಂಬಾ ಆರ್‌ಸಿಬಿ ಅಭಿಮಾನಿಗಳೇ ತುಂಬಿದ್ದಾರೆ. ಹುಡುಕಿದರೂ ಗುಜರಾಟ್ ಟೈಟಾನ್ಸ್ ಜರ್ಸಿ ಹಾಕಿದ ಅಭಿಮಾನಿಗಳು ಕಾಣುತ್ತಿಲ್ಲ. ಅಷ್ಟರಮಟ್ಟಿಗೆ ಆರ್‌ಸಿಬಿ ಫ್ಯಾನ್ಸ್ ತುಂಬಿಹೋಗಿದ್ದಾರೆ.
ಕ್ರೀಡಾಂಗಣದಲ್ಲಿ ಕುಳಿತ ಅಭಿಮಾನಿಗಳು ವಿಡಿಯೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಎಲ್ಲೆಡೆ ಆರ್‌ಸಿಬಿ ಜರ್ಸಿ ತೊಟ್ಟ ಅಭಿಮಾನಿಗಳೇ ಕಾಣುತ್ತಿದ್ದಾರೆ. ಇಡೀ ಕ್ರೀಡಾಂಗಣದಲ್ಲಿ ಆರ್‌ಸಿಬಿ, ಆರ್‌ಸಿಬಿ ಶಬ್ದ ಮೊಳಗುತ್ತಿದೆ. ಇತ್ತ ಹಲವರು ನರೇಂದ್ರ ಮೋದಿ ಕ್ರೀಡಾಂಗಣ ಆರ್‌ಸಿಬಿ ಹೋಮ್ ಗ್ರೌಂಡ್ ರೀತಿ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Entire stadium is filled with RCB jersey, not a single GT fan. 😭🔥
It's feels like our homeground. ❤️pic.twitter.com/p1taK09x3F— ` (@KunalVkf18) May 31, 2026
ಅಭಿಮಾನಿಗಳ ನಿರೀಕ್ಷೆ ಹಾಗೂ ಬೆಂಬಲಕ್ಕೆ ತಕ್ಕಂತೆ ಆರ್‌ಸಿಬಿ ಹೋರಾಟ ನೀಡುತ್ತಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ಮಾರಕ ಬೌಲಿಂಗ್ ದಾಳಿ ಮೂಲಕ ಗುಜರಾತ್ ತಂಡವನ್ನು ಕಟ್ಟಿ ಹಾಕಿದೆ. ಆರಂಭದಲ್ಲಿ ಜೋಶ್ ಹೇಜಲ್‌ವುಡ್ ಬಳಿಕ ಭುವನೇಶ್ವರ್ ಕುಮಾರ್ ದಾಳಿಗೆ ಗುಜರಾತ್ ಕಂಗಾಲಾಗಿದೆ. ಗುಜರಾತ್ ಟೈಟಾನ್ಸ್ ತಂಡದ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಟಾಪ್ ಆರ್ಡರ್ ಬ್ಯಾಟ್ಸಮನ್ ವಿಕೆಟ್ ಪತನಗೊಂಡಿದೆ. ಸಾಯಿ ಸುದರ್ಶನ್, ಶುಬಮನ್ ಗಿಲ್, ಜೋಸ್ ಬಟ್ಲರ್ ಅಬ್ಬರಿಸುವ ಮೊದಲೇ ಔಟಾದರು. ಇನ್ನು ನಿಶಾಂತ್ ಸಿಂಧು, ಅರ್ಶದ್ ಖಾನ್ ಅಬ್ಬರಿಸಲಿಲ್ಲ. ಸದ್ಯ ವಾಶಿಂಗ್ಟನ್ ಸುಂದರ್ ಹಾಗೂ ರಾಹುಲ್ ಟಿವಾಟಿಯಾ ಹೋರಾಟ ನೀಡುತ್ತಿದ್ದಾರೆ.
ಗುಜರಾತ್ ಟೈಟಾನ್ಸ್ 105 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ಇತ್ತ ಆರ್‌ಸಿಬಿ ಪರ ಜೋಶ್ ಹೇಜಲ್‌ವುಡ್ 2 ವಿಕೆಟ್ ಕಬಳಿಸಿದರೆ, ಭುವನೇಶ್ವರ್ ಕುಮಾರ್, ರಸಿಕ್ ದಾರ್, ಕ್ರುನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಗುಜರಾತ್ ಟೈಟಾನ್ಸ್ ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಆರ್‌ಸಿಬಿ ಮುಂದಾಗಿದೆ. ಈ ಮೂಲಕ ಸತತ 2ನೇ ಬಾರಿಗೆ ಟ್ರೋಫಿ ಗೆಲುವಿಗೆ ಸಜ್ಜಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.