IPL Auction 2022: ಮೆಗಾ ಹರಾಜಿಗಾಗಿ ಬೆಂಗಳೂರಿಗೆ ಬಂದಿಳಿದ ಫ್ರಾಂಚೈಸಿಗಳು..!

Suvarna News   | Asianet News
Published : Feb 11, 2022, 01:55 PM IST
IPL Auction 2022: ಮೆಗಾ ಹರಾಜಿಗಾಗಿ ಬೆಂಗಳೂರಿಗೆ ಬಂದಿಳಿದ ಫ್ರಾಂಚೈಸಿಗಳು..!

ಸಾರಾಂಶ

* ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭ * ಫೆಬ್ರವರಿ 12-13ರಂದು ಬೆಂಗಳೂರಿನಲ್ಲಿ ನಡೆಯಲಿದೆ ಮೆಗಾ ಹರಾಜು * ಬೆಂಗಳೂರಿಗೆ ಬಂದಿಳಿದ ಐಪಿಎಲ್ ಫ್ರಾಂಚೈಸಿಗಳು

ಬೆಂಗಳೂರು(ಫೆ.11): 2022ರ ಐಪಿಎಲ್‌ನ ಆಟಗಾರರ ಹರಾಜು (IPL Auction 2022) ಪ್ರಕ್ರಿಯೆಗೆ ಕೇವಲ ಒಂದು ದಿನ ಬಾಕಿ ಇದ್ದು, ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಹಾಗೂ ಅಹಮದಾಬಾದ್‌ ಸೇರಿ ಎಲ್ಲಾ 10 ತಂಡಗಳ ಮಾಲಿಕರು, ಕೋಚ್‌ ಹಾಗೂ ಪ್ರಮುಖ ಅಧಿಕಾರಿಗಳು ಬೆಂಗಳೂರು (Bengaluru) ತಲುಪಿದ್ದಾರೆ. ಶನಿವಾರ ಹಾಗೂ ಭಾನುವಾರ ಹರಾಜು ಪ್ರಕ್ರಿಯೆ ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ನಡೆಯಲಿದ್ದು, ಒಟ್ಟು 590 ಆಟಗಾರರು ಅದೃಷ್ಟಪರೀಕ್ಷೆಗೆ ಒಳಗಾಗಲಿದ್ದಾರೆ. 

ಮೊದಲ ದಿನ ಅಗ್ರ 161 ಆಟಗಾರರ ಹರಾಜು ನಡೆಯಲಿದ್ದು, 2ನೇ ದಿನ ಇನ್ನುಳಿದ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿನಲ್ಲಿ ಪಾಲ್ಗೊಳ್ಳುವ ತಂಡಗಳ ಪ್ರತಿನಿಧಿಗಳಿಗೆ ಬಿಸಿಸಿಐ ಕೋವಿಡ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಿದ್ದು, ನೆಗೆಟಿವ್‌ ವರದಿ ಬಂದರಷ್ಟೇ ಹರಾಜು ಪ್ರಕ್ರಿಯೆ ನಡೆಯುವ ಸ್ಥಳಕ್ಕೆ ಪ್ರವೇಶ ನೀಡುವುದಾಗಿ ಸ್ಪಷ್ಟಪಡಿಸಿದೆ.

ಐಪಿಎಲ್ ಆಟಗಾರರ ಮೆಗಾ ಹರಾಜು ಎರಡು ದಿನಗಳ ಕಾಲ ನಡೆಯಲಿದ್ದು, ಎರಡೂ ದಿನವೂ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ ಎಂದು ಬಿಸಿಸಿಐ (BCCI) ಈಗಾಗಲೇ ಖಚಿತಪಡಿಸಿದ್ದು, ಯಾವೆಲ್ಲಾ ಆಟಗಾರರು ಯಾವ ತಂಡದ ಪಾಲಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಿಗೆ ವಿದೇಶಿ ತಾರೆಯರು ಅನುಮಾನ?

ನವದೆಹಲಿ: 15ನೇ ಆವೃತ್ತಿಯ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಿಗೆ ಡೇವಿಡ್‌ ವಾರ್ನರ್‌ (David Warner), ಕಗಿಸೊ ರಬಾಡ(Kagiso Rabada), ಪ್ಯಾಟ್‌ ಕಮಿನ್ಸ್‌ (Pat Cummins) ಸೇರಿದಂತೆ ಆಸ್ಪ್ರೇಲಿಯಾ, ಇಂಗ್ಲೆಂಡ್‌, ವೆಸ್ಟ್‌ಇಂಡೀಸ್‌, ದ.ಆಫ್ರಿಕಾ ಹಾಗೂ ಬಾಂಗ್ಲಾದೇಶದ ಪ್ರಮುಖ ಆಟಗಾರರು ಅಲಭ್ಯರಾಗುವ ಸಾಧ್ಯತೆ ಇದೆ.

ಐಪಿಎಲ್‌ ಮಾ.27ಕ್ಕೆ ಆರಂಭವಾಗಿ ಮೇ ಮೊದಲ ವಾರ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಆದರೆ ಆಸ್ಪ್ರೇಲಿಯಾ ತಂಡ ಏ.5ರ ವರೆಗೆ ಪಾಕಿಸ್ತಾನ ಪ್ರವಾಸದಲ್ಲಿರಲಿದ್ದು, ವಾರ್ನರ್‌ ಜೊತೆ ಕಮಿನ್ಸ್‌, ಸ್ಟೀವ್‌ ಸ್ಮಿತ್‌ ಸರಣಿಯಲ್ಲಿ ಆಡುವುದು ಬಹುತೇಕ ಖಚಿತ. ದ.ಆಫ್ರಿಕಾದ ವೇಗಿಗಳಾದ ರಬಾಡ, ಏನ್ರಿಚ್‌ ನೋಕಿಯಾ, ಮಾರ್ಕೋ ಯಾನ್ಸನ್‌ ಮಾ.18ರಿಂದ ಏ.11ರ ವರೆಗೆ ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿಯಲ್ಲಿರಲಿದ್ದಾರೆ ಎನ್ನಲಾಗಿದೆ.

IPL 2022: ಮಹಾರಾಷ್ಟ್ರದಲ್ಲಿ ಐಪಿಎಲ್ ಲೀಗ್ ಪಂದ್ಯಗಳಿಗೆ ಆತಿಥ್ಯ..?

ಇಂಗ್ಲೆಂಡ್‌-ವೆಸ್ಟ್‌ಇಂಡೀಸ್‌ (England vs West Indies) ಸರಣಿ ಮಾ.28ರ ವರೆಗೆ ನಿಗದಿಯಾಗಿದ್ದು, ಜಾನಿ ಬೇರ್‌ಸ್ಟೋವ್‌, ಜೇಸನ್‌ ಹೋಲ್ಡರ್‌ ಸೇರಿದಂತೆ ಪ್ರಮುಖರು ಸರಣಿಯಲ್ಲಿ ಭಾಗಿಯಾಗಬಹುದು. ವಿಂಡೀಸ್‌ ತಂಡ ನೆದರ್ಲೆಂಡ್ಸ್‌ ವಿರುದ್ಧ ಮೇ 31ರಿಂದ ಏಕದಿನ ಸರಣಿ ಆಡಲಿದ್ದು, ಕೀರನ್‌ ಪೊಲ್ಲಾರ್ಡ್‌ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಇನ್ನು, ಮೇ.8ರಿಂದ 23ರ ವರೆಗೆ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ 2 ಟೆಸ್ಟ್‌ ಪಂದ್ಯಗಳನ್ನಾಡಲಿದ್ದು, ಶಕೀಬ್‌ ಅಲ್‌ ಹಸನ್‌ ತಂಡಕ್ಕೆ ಆಯ್ಕೆಯಾದರೆ ಅವರೂ ಐಪಿಎಲ್‌ನ ಕೆಲ ಪಂದ್ಯಗಳಿಂದ ಹೊರಗುಳಿಯಬಹುದು. ಪ್ರಮುಖ ಆಟಗಾರರ ಗೈರು ಇದೀಗ ಫ್ರಾಂಚೈಸಿಗಳ ತಲೆನೋವಿಗೆ ಕಾರಣವಾಗಿದ್ದು, ಹರಾಜಿನಲ್ಲಿ ವಿದೇಶಿಗರ ಖರೀದಿ ಮೇಲೆ ಪರಿಣಾಮಬೀರಬಹುದು.

ರಣಜಿ ಟ್ರೋಫಿ: ಚೆನ್ನೈ ತಲುಪಿದ ಕರ್ನಾಟಕ ತಂಡ

ಚೆನ್ನೈ: ರಣಜಿ ಟ್ರೋಫಿ ಮೊದಲ ಹಂತದಲ್ಲಿ ಪಾಲ್ಗೊಳ್ಳಲು ಕರ್ನಾಟಕ ತಂಡ (Karnataka Cricket Team) ಗುರುವಾರ ಚೆನ್ನೈಗೆ ಪ್ರಯಾಣಿಸಿತು. 5 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವ ಆಟಗಾರರಿಗೆ 2ನೇ ಹಾಗೂ 5ನೇ ದಿನ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ. ಎಲೈಟ್‌ ‘ಸಿ’ ಗುಂಪಿನಲ್ಲಿರುವ ಕರ್ನಾಟಕ ಫೆ.15, 16ರಂದು ಅಭ್ಯಾಸ ನಡೆಸಲಿದ್ದು ಫೆ.17ರಿಂದ ರೈಲ್ವೇಸ್‌ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ತಂಡವನ್ನು ಮನೀಶ್‌ ಪಾಂಡೆ ಮುನ್ನಡೆಸಲಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ