IPL 2026 Qualifier 2: ಗುಜರಾತ್ ಟೈಟಾನ್ಸ್ - ರಾಜಸ್ಥಾನ ರಾಯಲ್ಸ್ ಮ್ಯಾಚ್ ನಡಿಯೋದೇ ಡೌಟ್..! ಟೈಟಾನ್ಸ್ ಫೈನಲ್‌ಗೆ, ರಾಯಲ್ಸ್‌ಗೆ ನಿರಾಸೆ?

Published : May 28, 2026, 08:25 PM IST
IPL 2026

ಸಾರಾಂಶ

ಐಪಿಎಲ್ 2026ರ ಕ್ವಾಲಿಫೈಯರ್-2 ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದ್ದು, ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಒಂದು ವೇಳೆ ಪಂದ್ಯ ರದ್ದಾದರೆ, ಲೀಗ್ ಹಂತದಲ್ಲಿ ಉತ್ತಮ ಅಂಕ ಹೊಂದಿರುವ ಗುಜರಾತ್ ತಂಡವು ಐಪಿಎಲ್ ನಿಯಮದ ಪ್ರಕಾರ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ.

ಬೆಂಗಳೂರು: 2026ರ ಐಪಿಎಲ್ ಟೂರ್ನಿಯು ಇದೀಗ ಅಂತಿಮ ಹಂತದಲ್ಲಿದೆ. ಕ್ವಾಲಿಫೈಯರ್-2 ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಫೈನಲ್ ಟಿಕೆಟ್‌ಗಾಗಿ ಕಾದಾಡಲಿವೆ. ಫೈನಲ್‌ ಪಂದ್ಯವು ಮೇ 31ರಂದು ನಿಗದಿಯಾಗಿದ್ದು, ಕ್ವಾಲಿಫೈಯರ್-2 ಪಂದ್ಯದಲ್ಲಿ ಗೆಲ್ಲುವ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಇದೆಲ್ಲದರ ನಡುವೆ ಕೆಲ ಮಾಧ್ಯಮ ವರದಿಗಳ ಪ್ರಕಾರ ಕ್ವಾಲಿಫೈಯರ್-2 ಪಂದ್ಯ ನಡೆಯೋದೇ ಡೌಟ್ ಎನ್ನಲಾಗುತ್ತಿದೆ. ಹೀಗಾದಲ್ಲಿ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಕನಸು ನುಚ್ಚುನೂರಾಗಲಿದೆ. ಇನ್ನು ಕ್ವಾಲಿಫೈಯರ್-2 ಮ್ಯಾಚ್ ಆಡದೆಯೇ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಫೈನಲ್‌ಗೆ ಲಗ್ಗೆಯಿಡುವ ಸಾಧ್ಯತೆಯಿದೆ.

ಕ್ವಾಲಿಫೈಯರ್-2 ಪಂದ್ಯಕ್ಕೆ ವರುಣನ ಭೀತಿ, ಮ್ಯಾಚ್ ರದ್ದಾಗುವ ಸಾಧ್ಯತೆ!

ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಮಹತ್ವದ ಕ್ವಾಲಿಫೈಯರ್-2 ಪಂದ್ಯವು ಇದೇ ಮೇ 29ರಂದು ಮಹರಾಜ ಯದುವೇಂದ್ರ ಸಿಂಗ್ ಇಂಟರ್‌ನ್ಯಾಷನಲ್ ಸ್ಟೇಡಿಯಂ ಮುಲ್ಲನಪುರದಲ್ಲಿ ನಿಗದಿಯಾಗಿದೆ. ಮ್ಯಾಚ್ ನಿಗದಿಯಾಗಿರುವ ಮೇ 29ರಂದು ನ್ಯೂ ಚಂಡೀಗಢದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಸೂಚಿಸಿದೆ. ಇದು ಕ್ವಾಲಿಫೈಯರ್-2 ಮ್ಯಾಚ್ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ಕ್ವಾಲಿಫೈಯರ್-2 ಮ್ಯಾಚ್ ಆಡದೆಯೇ ಗುಜರಾತ್ ಟೈಟಾನ್ಸ್ ಫೈನಲ್‌ಗೆ ಎಂಟ್ರಿ?

ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಒಂದು ವೇಳೆ ಮ್ಯಾಚ್ ರದ್ದಾದರೇ, ಐಪಿಎಲ್ ನಿಯಮಾವಳಿಗಳ ಪ್ರಕಾರ ಗುಜರಾತ್ ಟೈಟಾನ್ಸ್ ತಂಡವು ಅನಾಯಾಸವಾಗಿ ಫೈನಲ್‌ಗೆ ಎಂಟ್ರಿಕೊಡಲಿದೆ. ಬಿಸಿಸಿಐ ಪ್ರಕಾರ ಫೈನಲ್ ಹೊರತುಪಡಿಸಿ ಐಪಿಎಲ್‌ನ ಯಾವುದೇ ಪ್ಲೇ ಆಫ್‌ ಪಂದ್ಯಗಳಿಗೆ ಮೀಸಲು ದಿನವಿಲ್ಲ. ಪ್ಲೇ ಆಫ್‌ ಪಂದ್ಯಗಳು ಮಳೆಯಿಂದ ರದ್ದಾದರೇ, ಲೀಗ್ ಹಂತದ ಅಂತ್ಯದ ವೇಳೆಗೆ ಉಭಯ ತಂಡಗಳ ಪೈಕಿ ಯಾವ ತಂಡವು ಅಂಕಪಟ್ಟಿಯಲ್ಲಿ ಮೇಲಿರುತ್ತದೆಯೋ ಆ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ. ಒಂದು ವೇಳೆ ಕ್ವಾಲಿಫೈಯರ್-2 ಪಂದ್ಯವು ಮಳೆಯಿಂದ ರದ್ದಾದರೆ, ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಲಿದೆ. ಯಾಕೆಂದರೆ ಲೀಗ್ ಹಂತದ ಕೊನೆಯಲ್ಲಿ ಗುಜರಾತ್ ಟೈಟಾನ್ಸ್ ತಂಡವು 18 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿತ್ತು. ರಾಜಸ್ಥಾನ ರಾಯಲ್ಸ್ ತಂಡವು ಗ್ರೂಪ್ ಹಂತದ ಅಂತ್ಯಕ್ಕೆ 16 ಅಂಕ ಗಳಿಸಿತ್ತು. ಹೀಗಾಗಿ ರಾಜಸ್ಥಾನ ರಾಯಲ್ಸ್‌ಗಿಂತ ಉತ್ತಮ ಅಂಕ ಹೊಂದಿರುವ ಗಿಲ್ ಪಡೆ ಕ್ವಾಲಿಫೈಯರ್-2 ಮ್ಯಾಚ್ ಆಡದೆಯೂ ಫೈನಲ್ ಪ್ರವೇಶಿಸಿದರೇ ಅಚ್ಚರಿಯೇನಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಅದೊಂದು ಕಾರಣಕ್ಕಾಗಿ ರಾಜಸ್ಥಾನ ರಾಯಲ್ಸ್‌ ಬಿಟ್ಟು ಈ ತಂಡಕ್ಕೆ ಹೋಗು': ಯಶಸ್ವಿ ಜೈಸ್ವಾಲ್‌ಗೆ ಅಂಬಟಿ ರಾಯುಡು ಖಡಕ್ ಸಲಹೆ!
ವೈಭವ್ ಸೂರ್ಯವಂಶಿ ವಿಚಾರದಲ್ಲಿ ಅದೊಂದು ತಪ್ಪು ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌..! ಇದೀಗ ಹಳೆ ವಿಡಿಯೋ ವೈರಲ್