ಐಪಿಎಲ್‌ನ ಈ ಒಂದು ನಿಯಮದಿಂದ ಹೆಚ್ಚಿದ ಗುಜರಾತ್ ಟೆನ್ಷನ್; ಪ್ಲೇ ಆಫ್‌ ಪಂದ್ಯಗಳಿಗೆ ಇದೆ ಬೇರೆಯದೇ ರೂಲ್ಸ್‌!

Published : May 25, 2026, 06:52 PM IST
Gujarat Titans

ಸಾರಾಂಶ

ಐಪಿಎಲ್ 2026ರ ಪ್ಲೇಆಫ್ ಹಂತದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಕ್ವಾಲಿಫೈಯರ್ 1ರಲ್ಲಿ ಮುಖಾಮುಖಿಯಾಗಲಿವೆ. ಒಂದು ವೇಳೆ ಮಳೆಯಿಂದ ಪಂದ್ಯ ಸಂಪೂರ್ಣ ರದ್ದಾದರೆ, ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್ ಪ್ರವೇಶಿಸುವ ನಿಯಮವಿದೆ.

ಬೆಂಗಳೂರು (ಮೇ.25): ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮಹಾಸಮರದ ಪ್ಲೇಆಫ್ ಹಂತದ ರೋಚಕತೆ ಹೆಚ್ಚಾಗುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಅಂತಿಮ ನಾಲ್ಕು ತಂಡಗಳು (Playoffs) ಅಧಿಕೃತವಾಗಿ ಫಿಕ್ಸ್‌ ಆಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಅಗ್ರ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದಿವೆ. ಲೀಗ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ತಂಡಗಳು ಮೊದಲ ಕ್ವಾಲಿಫೈಯರ್ (Qualifier 1) ಪಂದ್ಯದಲ್ಲಿ ನಾಳೆ ಮುಖಾಮುಖಿಯಾಗಲಿವೆ.

ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ನೇರವಾಗಿ ಫೈನಲ್ ಪ್ರವೇಶಿಸುವ ಸುವರ್ಣಾವಕಾಶ ಸಿಗಲಿದೆ. ಆದರೆ, ಐಪಿಎಲ್‌ನ ಒಂದು ನಿರ್ದಿಷ್ಟ ನಿಯಮವು ಈಗ ಗುಜರಾತ್ ಟೈಟನ್ಸ್ ತಂಡದ ನಿದ್ದೆಗೆಡಿಸಿದೆ. ಒಂದು ವೇಳೆ ಪಂದ್ಯವೇ ನಡೆಯದಿದ್ದರೂ ಆರ್‌ಸಿಬಿ ನೇರವಾಗಿ ಫೈನಲ್ ತಲುಪುವ ಅವಕಾಶ ಈ ನಿಯಮದಲ್ಲಿದೆ!

ಏನಿದು ನಿಯಮ? ಪಂದ್ಯ ರದ್ದಾದರೆ ಫೈನಲ್ ತಲುಪೋದು ಯಾರು?

ಐಪಿಎಲ್‌ನ ಲೀಗ್ ಹಂತದಲ್ಲಿ ಪಂದ್ಯಗಳು ಮಳೆಯಿಂದಾಗಿ ರದ್ದಾದರೆ ಎರಡೂ ತಂಡಗಳಿಗೆ ತಲಾ 1 ಅಂಕವನ್ನು ಹಂಚಲಾಗುತ್ತದೆ. ಇತ್ತೀಚೆಗಷ್ಟೇ ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ಪಂದ್ಯದಲ್ಲಿ ಇದು ಕಂಡುಬಂದಿತ್ತು. ಆದರೆ ಪ್ಲೇಆಫ್ ಪಂದ್ಯಗಳಿಗೆ ಬಿಸಿಸಿಐ (BCCI) ಬೇರೆಯದೇ ಆದ ನಿಯಮಗಳನ್ನು ರೂಪಿಸಿದೆ.

ಪ್ಲೇಆಫ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ, ಮೊದಲು ಸೂಪರ್ ಓವರ್ ಅಥವಾ ಕನಿಷ್ಠ ತಲಾ 5 ಓವರ್‌ಗಳ ಪಂದ್ಯವನ್ನು ಆಡಿಸಲು ಸಂಪೂರ್ಣ ಪ್ರಯತ್ನ ನಡೆಸಲಾಗುತ್ತದೆ. ಆದರೆ, ಸತತ ಮಳೆಯಿಂದಾಗಿ ಕನಿಷ್ಠ 5 ಓವರ್‌ಗಳ ಆಟವೂ ಸಾಧ್ಯವಾಗದೇ ಪಂದ್ಯ ಸಂಪೂರ್ಣವಾಗಿ ರದ್ದಾದರೆ ಹಾಗೂ ಪ್ಲೇಆಫ್ ಪಂದ್ಯಗಳಿಗೆ ಯಾವುದೇ ಮೀಸಲು ದಿನ (Reserve Day) ಇಲ್ಲದ ಕಾರಣ, ಅಂಕಪಟ್ಟಿಯ ನಿಯಮವನ್ನು ಅನ್ವಯಿಸಲಾಗುತ್ತದೆ. ಇದರ ಪ್ರಕಾರ, ಲೀಗ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಆದ್ಯತೆ ಸಿಗಲಿದ್ದು, ಆರ್‌ಸಿಬಿ ನೇರವಾಗಿ ಫೈನಲ್ ಟಿಕೆಟ್ ಪಡೆಯಲಿದೆ. ಇನ್ನು ಸೋತ ತಂಡಕ್ಕೆ ಸಿಗುವ ಎರಡನೇ ಅವಕಾಶದಂತೆ ಗುಜರಾತ್ ಟೈಟನ್ಸ್ ಕ್ವಾಲಿಫೈಯರ್ 2 ಪಂದ್ಯವನ್ನು ಆಡಬೇಕಾಗುತ್ತದೆ.

ಎಲಿಮಿನೇಟರ್‌ನಲ್ಲಿ ಹೈದರಾಬಾದ್-ರಾಜಸ್ಥಾನ್ ಫೈಟ್

ಮತ್ತೊಂದೆಡೆ, ಅಂಕಪಟ್ಟಿಯ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ (SRH) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳ ನಡುವೆ 'ಎಲಿಮಿನೇಟರ್' (Eliminator) ಪಂದ್ಯ ಜರುಗಲಿದೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆದ್ದ ತಂಡವು ಕ್ವಾಲಿಫೈಯರ್ 1 ರ ಪರಾಜಿತ ತಂಡದ (ಅಂದರೆ ಗುಜರಾತ್ ಅಥವಾ ಆರ್‌ಸಿಬಿ) ವಿರುದ್ಧ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸೆಣಸಾಡಬೇಕಾಗುತ್ತದೆ.

ಆರ್‌ಸಿಬಿ ವರ್ಸಸ್ ಗುಜರಾತ್: ದಾಖಲೆ ಹೀಗಿದೆ:

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಮುಖಾಮುಖಿ ಸದಾ ಹೈ-ವೋಲ್ಟೇಜ್ ಆಗಿರುತ್ತದೆ. ಎರಡು ತಂಡಗಳು ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 8 ಬಾರಿ ಮುಖಾಮುಖಿಯಾಗಿದ್ದು, ಉಭಯ ತಂಡಗಳೂ ತಲಾ 4-4 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿವೆ. ಪ್ರಸಕ್ತ ಸೀಸನ್‌ನಲ್ಲೂ ಉಭಯ ತಂಡಗಳು ಎರಡು ಬಾರಿ ಪರಸ್ಪರ ಭೇಟಿಯಾಗಿದ್ದು, ಆರ್‌ಸಿಬಿ ಮತ್ತು ಗುಜರಾತ್ ತಲಾ ಒಂದೊಂದು ಪಂದ್ಯವನ್ನು ಗೆದ್ದುಕೊಂಡಿವೆ. ಹೀಗಾಗಿ ಕ್ವಾಲಿಫೈಯರ್ 1 ರಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಜಿದ್ದಾಜಿದ್ದಿನ ಪೈಪೋಟಿ ವೀಕ್ಷಿಸಲು ಸಿಗುವುದಂತೂ ಖಾತ್ರಿಯಾಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

RCB ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ IPL ಡೇಟಾ: ಟೀಮ್ ಚೇಂಜ್ ಮಾಡದೇ ಅಂಕಪಟ್ಟಿಯ ‘ಕಿಂಗ್’ ಆದ ಬೆಂಗಳೂರು!
ವೈಭವ್ ಸೂರ್ಯವಂಶಿ ಗುರಿ ಕೇಳಿ ಬೆಚ್ಚಿಬಿದ್ದ ಪೀಟರ್ಸನ್; ಒಂದು ಚಾನ್ಸ್ ಸಿಕ್ಕರೆ ಟಿ-20ಯಲ್ಲಿ 200 ರನ್ ಹೊಡಿತೇನೆ!