
ಬೆಂಗಳೂರು: 2026ರ ಐಪಿಎಲ್ ಮಿನಿ ಹರಾಜು ಇಂದು ಮಧ್ಯಾಹ್ನ 2.30ರಿಂದ ಆರಂಭವಾಗಲಿದೆ. ಈ ಮಿನಿ ಹರಾಜಿಗೂ ಒಂದು ದಿನ ಮುಂಚೆ ನಡೆದ ಐಪಿಎಲ್ ಅಣಕು ಹರಾಜು ನಡೆಸಲಾಯಿತು. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಈ ಅಣಕು ಹರಾಜು ನಡೆಸಲಾಗಿತು. ಬೆಂಗಳೂರು ತಂಡವನ್ನು ಅನಿಲ್ ಕುಂಬ್ಳೆ ಪ್ರತಿನಿಧಿಸಿದರೆ, ಚೆನ್ನೈ ತಂಡವನ್ನು ಸುರೇಶ್ ರೈನಾ ಪ್ರತಿನಿಧಿಸಿದ್ದರು. ಬನ್ನಿ ಈ ಅಣಕು ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 5 ಆಟಗಾರರು ಯಾರು ಎನ್ನುವುದನ್ನು ನೋಡೋಣ
ಆಸ್ಟ್ರೇಲಿಯಾ ಮೂಲದ ಪ್ರತಿಭಾನ್ವಿತ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಈ ಬಾರಿಯ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗುವ ಆಟಗಾರ ಎನ್ನಲಾಗುತ್ತಿದೆ.ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಗ್ರೀನ್‌ಗಿದೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಗ್ರೀನ್ ಆಸೀಸ್ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಗ್ರೀನ್ ಈಗಾಗಲೇ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ಪರ ತಮ್ಮ ಸಾಮರ್ಥ್ಯ ಅನಾವರಣ ಮಾಡಿದ್ದಾರೆ. ಇದೀಗ ಐಪಿಎಲ್ ಅಣಕು ಹರಾಜಿನಲ್ಲಿ ಗ್ರೀನ್ ಬರೋಬ್ಬರಿ 30.50 ಕೋಟಿಗೆ ಸೋಲ್ಡ್ ಅಗಿದ್ದಾರೆ. ಇದೀಗ ಇಂದು ನಡೆಯಲಿರುವ ನಿಜವಾದ ಮಿನಿ ಹರಾಜಿನಲ್ಲಿ ಗ್ರೀನ್ ಎಷ್ಟು ಕೋಟಿ ರುಪಾಯಿಗೆ ಹರಾಜಾಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇಂಗ್ಲೆಂಡ್ ಮೂಲದ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ದೊಡ್ಡ ದೊಡ್ಡ ಸಿಕ್ಸರ್ ಸಿಡಿಸುವುದರಲ್ಲಿ ಎತ್ತಿದ ಕೈ. ಟಿ20 ಕ್ರಿಕೆಟ್‌ನಲ್ಲಿ ಅವರ ಸ್ಟ್ರೈಕ್‌ರೇಟ್ ಕೂಡಾ ಉತ್ತಮವಾಗಿದೆ. ಲಿವಿಂಗ್‌ಸ್ಟೋನ್, ಐಪಿಎಲ್‌ನಲ್ಲಿ ಈ ಮೊದಲು ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. ಇದೀಗ ಐಪಿಎಲ್ ಅಣಕು ಹರಾಜಿನಲ್ಲಿ ಲಖನೌ ತಂಡವು 19 ಕೋಟಿ ರುಪಾಯಿಗೆ ಲಿವಿಂಗ್‌ಸ್ಟೋನ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
ಶ್ರೀಲಂಕಾ ಮೂಲದ ಯುವ ಮಾರಕ ವೇಗಿ ಮಥೀಶ್ ಪತಿರಾಣ ಅವರ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣಿದೆ. ಪತಿರಾಣ ಬೌಲಿಂಗ್ ಶೈಲಿಯು ದಿಗ್ಗಜ ವೇಗಿ ಲಸಿತ್ ಮಾಲಿಂಗಾ ಅವರನ್ನು ಹೋಲುವಂತಿದೆ. ಡೆತ್ ಓವರ್ ಸ್ಪೆಷಲಿಸ್ಟ್ ಹಾಗೂ ಯಾರ್ಕರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಪತಿರಾಣ ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸಿದ್ದರು. ಇದೀಗ ಐಪಿಎಲ್ ಅಣಕು ಹರಾಜಿನಲ್ಲಿ ಪತಿರಾಣ ಅವರನ್ನು ಕೋಲ್ಕತಾ ತಂಡವು 13 ಕೋಟಿ ರುಪಾಯಿಗೆ ಖರೀದಿಸಿದೆ.
ಭಾರತದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಒಂದು ಕಾಲದಲ್ಲಿ ಐಸಿಸಿ ನಂ.1 ಟಿ20 ಬೌಲರ್ ಆಗಿ ಹೊರಹೊಮ್ಮಿದ್ದರು. ತಮ್ಮ ಚುರುಕಾದ ಲೆಗ್‌ಸ್ಪಿನ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಂಗಾಲು ಮಾಡುವ ಕ್ಷಮತೆ ಬಿಷ್ಣೋಯಿ ಅವರಿಗಿದೆ. ಐಪಿಎಲ್‌ನಲ್ಲಿ ಮೊದಲ ಪಂಜಾಬ್ ಆ ಬಳಿಕ ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿರುವ ಬಿಷ್ಣೋಯಿ ಇದೀಗ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದೀಗ ಅಣಕು ಹರಾಜಿನಲ್ಲಿ ರಾಜಸ್ಥಾನ ತಂಡವು 11.5 ಕೋಟಿ ರುಪಾಯಿಗೆ ಹರಾಜಾಗಿದ್ದಾರೆ.
ಭಾರತದ ಲೆಗ್‌ಸ್ಪಿನ್ನರ್ ರಾಹುಲ್ ಚಹರ್, ಗೂಗ್ಲಿ ಹಾಗೂ ಆಕ್ರಮಣಕಾರಿ ಬೌಲಿಂಗ್ ಮೂಲಕ ಮಿಂಚಬಲ್ಲ ಬೌಲರ್ ಆಗಿದ್ದಾರೆ. ರಾಹುಲ್ ಚಹರ್ ಈ ಮೊದಲು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ರಾಹುಲ್ ಚಹರ್ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಅಣಕು ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 10 ಕೋಟಿಗೆ ರಾಹುಲ್ ಚಹರ್ ಅವರನ್ನು ಖರೀದಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.