ಐಪಿಎಲ್ ಆರಂಭಕ್ಕೂ ಮುನ್ನವೇ ತಂಡಗಳಿಗೆ ಆಘಾತಕಾರಿ ಸುದ್ದಿ! ಹಲವು ತಂಡಗಳಿಗೆ ಗಾಯದ ಟೆನ್ಶನ್‌!

Kannadaprabha News   | Kannada Prabha
Published : Mar 21, 2026, 08:24 AM IST
RCB IPL 2026

ಸಾರಾಂಶ

ಐಪಿಎಲ್ 2024 ಆರಂಭಕ್ಕೆ ಮುನ್ನವೇ ಹಲವು ಫ್ರಾಂಚೈಸಿಗಳು ಆಟಗಾರರ ಗಾಯದ ಸಮಸ್ಯೆಯಿಂದ ಕಂಗೆಟ್ಟಿವೆ. ಜೋಶ್ ಹೇಜಲ್‌ವುಡ್‌, ಪ್ಯಾಟ್‌ ಕಮಿನ್ಸ್‌ರಂತಹ ಪ್ರಮುಖರು ಆರಂಭಿಕ ಪಂದ್ಯಗಳಿಗೆ ಗೈರಾದರೆ, ಸ್ಯಾಮ್ ಕರನ್, ನೇಥನ್ ಎಲ್ಲಿಸ್‌ರಂತಹ ಆಟಗಾರರು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.  

ನವದೆಹಲಿ: ಈ ಬಾರಿ ಐಪಿಎಲ್‌ ಆರಂಭಕ್ಕೆ ಇನ್ನೇನು ಒಂದು ವಾರ ಮಾತ್ರ ಬಾಕಿಯಿದೆ. ಅಭಿಮಾನಿಗಳು ಟೂರ್ನಿಗೆ ಕಾತರದಿಂದ ಕಾಯುತ್ತಿದ್ದರೆ, ಫ್ರಾಂಚೈಸಿಗಳಿಗೆ ತಲೆಬಿಸಿ ಆರಂಭವಾಗಿದೆ. ಪ್ರಮುಖ ವಿದೇಶಿ ಆಟಗಾರರು ಗಾಯದಿಂದಾಗಿ ಕೆಲ ಪಂದ್ಯಗಳನ್ನು ತಪ್ಪಿಸಿಕೊಂಡರೆ, ಇನ್ನೂ ಕೆಲ ವಿದೇಶಿಗರು ಇಡೀ ಟೂರ್ನಿಗೇ ಗೈರಾಗಲಿದ್ದಾರೆ.

ಆರ್‌ಸಿಬಿಯ ಪ್ರಮುಖ ವೇಗಿ ಜೋಶ್‌ ಹೇಜಲ್‌ವುಡ್‌ ಟೂರ್ನಿ ಆರಂಭಿಕ ಪಂದ್ಯಗಳಿಗೆ ಗೈರಾಗಲಿರುವುದು ಈಗಾಗಲೇ ಖಚಿತವಾಗಿತ್ತು. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಕೂಡಾ ಈಗ ಪುನಶ್ಚೇತನ ಶಿಬಿರದಲ್ಲಿದ್ದು, ವಿಶ್ರಾಂತಿ ಅಗತ್ಯಿವಿದೆ. ಹೀಗಾಗಿ ಟೂರ್ನಿಯ ಕೆಲ ಪಂದ್ಯಗಳಲ್ಲಿ ಆಡಲ್ಲ. ಅವರ ಬದಲು ಇಶಾನ್‌ ಕಿಶನ್‌ ತಂಡದ ನಾಯಕತ್ವ ವಹಿಸಲಿದ್ದಾರೆ. ಇನ್ನು, ಡೆಲ್ಲಿ ಕ್ಯಾಪಿಟಲ್ಸ್‌ನ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ನಿರಂತರ ಕ್ರಿಕೆಟ್‌ನ ಕಾರ್ಯದೊತ್ತಡ ತಗ್ಗಿಸುವ ನಿಟ್ಟಿನಲ್ಲಿ ಕೆಲ ದಿನ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಅವರು ಈ ಬಾರಿ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಲ್ಲಿ ಆಡಲ್ಲ.

ಹಲವರು ಹೊರಕ್ಕೆ:

ಇತ್ತೀಚೆಗೆ ರವೀಂದ್ರ ಜಡೇಜಾ ಜೊತೆ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದ ಇಂಗ್ಲೆಂಡ್‌ನ ಆಲ್ರೌಂಡರ್‌ ಸ್ಯಾಮ್‌ ಕರನ್‌ ತೊಡೆಯ ಭಾಗದ ಗಾಯಕ್ಕೆ ತುತ್ತಾಗಿದ್ದು, ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿ ಆಟಗಾರನಿಗಾಗಿ ರಾಜಸ್ಥಾನ ತಂಡ ಹುಡುಕಾಟ ಆರಂಭಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವೇಗದ ಬೌಲರ್‌, ಆಸ್ಟ್ರೇಲಿಯಾದ ನೇಥನ್‌ ಎಲ್ಲಿಸ್‌ ತೊಡೆಯ ಹಿಂಭಾಗದ ಗಾಯಕ್ಕೆ ತುತ್ತಾಗಿದ್ದರಿಂದ ಈ ಬಾರಿ ಟೂರ್ನಿಯಲ್ಲಿ ಆಡಲ್ಲ ಎಂದು ಫ್ರಾಂಚೈಸಿ ಖಚಿತಪಡಿಸಿದೆ. ಆದರೆ ಅವರ ಬದಲು ಯಾವ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.

ಇದೇ ವೇಳೆ ಸನ್‌ರೈಸರ್ಸ್‌ ಹೈದರಾಬಾದ್ ಪರ ಆಡಬೇಕಿದ್ದ ಆಸ್ಟ್ರೇಲಿಯಾದ ಬೌಲಿಂಗ್‌ ಆಲ್ರೌಂಡರ್‌ ಜ್ಯಾಕ್ ಎಡ್ವರ್ಡ್ಸ್‌ ಪಾದ ಗಾಯಕ್ಕೆ ತುತ್ತಾಗಿದ್ದು, ಈ ಬಾರಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಮಗು ಜನನ: ಲಾಕಿ ಮೊದಲ 7 ಪಂದ್ಯಕ್ಕಿಲ್ಲ

ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್‌ ಐಪಿಎಲ್‌ನ ಆರಂಭಿಕ 7 ಪಂದ್ಯಗಳಿಗೆ ಗೈರಾಗಲಿದ್ದಾರೆ. ಅವರು ಕೆಲ ವಾರಗಳ ಕಾಲ ತಮ್ಮ ಕುಟುಂಬದ ಜೊತೆ ಇರಲಿದ್ದಾರೆ. ಬಳಿಕ ಐಪಿಎಲ್ ಗೆ ಮರಳುವ ನಿರೀಕ್ಷೆಯಿದೆ.

ವೇಗದ ಬೌಲರ್ ಗಳದ್ದೇ ಸಮಸ್ಯೆ 

ಈ ಬಾರಿ ಐಪಿಎಲ್ ನ ಕೆಲ ಪಂದ್ಯಗಳಿಗೆ ಗೈರಾಗುವ ಮತ್ತು ಪೂರ್ತಿ ಟೂರ್ನಿಗೆ ಗೈರಾಗಲಿರುವ ಆಟಗಾರರಲ್ಲಿ ಬಹುತೇಕರು ವೇಗದ ಬೌಲರ್ ಗಳು. ಸ್ಟಾರ್ಕ್, ಕಮಿನ್ಸ್, ಹೇಜಲ್ ವುಡ್, ಸ್ಯಾಮ್ ಕರನ್, ಎಡ್ವರ್ಡ್ಸ್, ಫರ್ಗ್ಯೂಸನ್ ಸೇರಿದಂತೆ ಪ್ರಮುಖ ವೇಗಗಳೇ ಟೂರ್ನಿಗೆ ಭಾಗಶಃ ಅಥವಾ ಪೂರ್ತಿ ಗೈರು ಆಗಲಿದ್ದಾರೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಸಿಸಿಐ ಮೇಲೆ ವರ್ಣಭೇದ ಆರೋಪ ಮಾಡಿ ಹಠಾತ್‌ ನಿವೃತ್ತಿ ಹೇಳಿದ ಪ್ರಖ್ಯಾತ ಕ್ರಿಕೆಟ್‌ ವಿಶ್ಲೇಷಕ!
ಸಂಜು ಸ್ಯಾಮ್ಸನ್ ಬದಲಿಗೆ ರಾಜಸ್ಥಾನ ರಾಯಲ್ಸ್ ತೆಕ್ಕೆ ಸೇರಿದ್ದ ಸ್ಟಾರ್ ಆಲ್ರೌಂಡರ್ ಐಪಿಎಲ್ ಟೂರ್ನಿಯಿಂದಲೇ ಔಟ್!