ಐಪಿಎಲ್ 2025 ರಲ್ಲಿ ಆರೆಂಜ್‌ ಕ್ಯಾಪ್‌, ಪರ್ಪಲ್‌ ಕ್ಯಾಪ್‌ಗಾಗಿ ಸೆಣಸುತ್ತಿರುವ ಅಗ್ರ 4 ಸ್ಪರ್ಧಿಗಳು

Published : May 30, 2025, 06:51 PM ISTUpdated : Jun 05, 2025, 11:12 AM IST
IPL

ಸಾರಾಂಶ

ಆಶಿಶ್ ನೆಹ್ರಾ ರವರ ಅನುಗ್ರಹ, ಗುರು ಕೃಪಾಕಟಾಕ್ಷದ ಮಾರ್ಗದರ್ಶನದಲ್ಲಿ, ತರಬೇತಿ ಪಡೆಯುತ್ತಿರುವ ಗುಜರಾತ್ ಟೈಟಾನ್ಸ್ ಆಟಗಾರರು ಐಪಿಎಲ್ 2025 ರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆನೆ ನಡೆದದ್ದೇ ದಾರಿ ಎನ್ನುತ್ತಿದ್ದಾರೆ.

Parimatch sports analyst Sir Vivian Richards: 2025 ರ ಇಂಡಿಯನ್ ಪ್ರೀಮಿಯರ್ ಲೀಗ್ ಹೊಸ ತಂಗಾಳಿ ಹಾಗಾಗಿದ್ದು, ಹೊಸ ನಾಯಕರು, ಹೊಸ ಆಟಗಾರರು, ಹೊಸ ಸಹಾಯಕ ಸಿಬ್ಬಂದಿ ಮತ್ತು ಹೊಸ ಅಭಿಮಾನಿಗಳು ಸೇರಿಬರುತ್ತಿದ್ದು ಲೀಗ್ ವರ್ಷದಿಂದ ವರ್ಷ ಹೊಸ ಮುತ್ತು ರತ್ನಗಳನ್ನು ಹೊರತೆಗೆಯುವ ಸಂಪ್ರದಾಯವನ್ನು ಮುಂದುವರಿಸಲು ಸಹಾಯ ಮಾಡುತ್ತಿದ್ದಾರೆ.

ಹೌದು ಆಯುಷ್ ಮ್ಹಾತ್ರೆ, ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಪೋರೇಲ್ ರವರಂತಹ ಕ್ರೀಡಾಪಟುಗಳು ಉನ್ನತ ಮಟ್ಟದಲ್ಲಿ ಯುವಕರು ಸಿದ್ಧ ಚಿಂತನೆ ಪರಿಭಾಷೆ ಪ್ರಕಾರ ಹೇಗೆ ಆಡುತ್ತಾರೆ ಎಂಬುದನ್ನು ಮರು ವ್ಯಾಖ್ಯಾನಿಸಿದ್ದಾರೆ, ಆದರೆ ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ, ಜಿತೇಶ್ ಶರ್ಮಾ ಮತ್ತು ಪ್ರಭಸಿಮ್ರನ್ ಸಿಂಗ್ ಅವರಂತಹ ತಾರೆಯರ ಪುನರುತ್ಥಾನವು ಕ್ರಿಕೆಟ್ ಪ್ರಪಂಚದಾದ್ಯಂತ ಎಲ್ಲರನ್ನೂ ಮೆಚ್ಚಿಸಿದೆ ಎಂದರೆ ಸುಳ್ಳಲ್ಲ. 

ಪ್ರಸಿದ್ಧ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರಾದ ಸರ್ ವಿವಿಯನ್ ರಿಚರ್ಡ್ಸ್, ಈಗ ಪ್ಯಾರಿಮ್ಯಾಚ್ ಕ್ರೀಡಾ ವಿಶ್ಲೇಷಕರಾಗಿದ್ದು, ಈ ಉದಯೋನ್ಮುಖ ತಾರೆಯನ್ನ ಪ್ರಶಂಸಿ, ಐಪಿಎಲ್ 2025 ಕವರೇಜ್‌ಗೆ ಮೌಲ್ಯಯುತ ವಿಶ್ಲೇಷಣೆ ನೀಡಿದ್ದಾರೆ.

ಆರೆಂಜ್‌ ಕ್ಯಾಪ್‌ಗೆ ಫೇವರಿಟ್‌ ಪ್ಲೇಯರ್ಸ್

ಭಾರತದ ಮಾಜಿ ಕ್ರಿಕೆಟ್ ತಂಡದ ದಿಗ್ಗಜರು , ಹಾಲೀ ಭಾರತೀಯ ಕ್ರಿಕೆಟ್ ತಂಡದ ದಿಗ್ಗಜರು ಮತ್ತು ಭವಿಷ್ಯದ ಭಾರತೀಯ ಕ್ರಿಕೆಟ್ ತಂಡದ ದಿಗ್ಗಜರು ಕಿತ್ತಳೆ ಟೋಪಿಗಾಗಿ ಹಗ್ಗ ಜಗ್ಗಾಟದ ಹೋರಾಟಕ್ಕೆ ಬಿರುಸಿನ ಸ್ಪರ್ದೆಗೆ ಇಳಿದಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಕಿತ್ತಳೆ ಟೋಪಿ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದಾರೆ, ಏಕೆಂದರೆ ಅವರು ರನ್ ಗಳಿಸಲು ಹೆಚ್ಚಿನ ಎಸೆತಗಳನ್ನು ಪಡೆಯುತ್ತಿರುತ್ತಾರೆ. ಕಿತ್ತಳೆ ಟೋಪಿಗಾಗಿ ವಿಜೇತರೆನ್ನಿಸುವ ನಮ್ಮ ನಾಲ್ಕು ಪ್ರಮುಖ ಆಯ್ಕೆಗಳು ಇಲ್ಲಿವೆ:

ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್)

ತಮಿಳುನಾಡು ರಾಜ್ಯದ ಈ ಕ್ರಿಕೆಟಿಗ ಟಿಎನ್‌ಪಿಎಲ್‌ನಿಂದ ಕ್ರಿಕೆಟ್ ಖ್ಯಾತಿಗೆ ಏರಿದರು ಮತ್ತು 2026ರ ಐಸಿಸಿ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ರಾಷ್ಟ್ರೀಯ ತಂಡದ ಸಂಭಾವ್ಯ ಆರಂಭಿಕ ಬ್ಯಾಟ್ಸ್‌ಮನ್‌ಗಳ ಚರ್ಚೆಗಳಲ್ಲಿ ತಮ್ಮ ಹೆಸರನ್ನು ಎದ್ದುಕಾಣುವ ಹಾಗೆ ನಿರಂತರವಾಗಿ ಸೇರಿಸಿಕೊಂಡಿದ್ದಾರೆ.

ಸುದರ್ಶನ್ ರವರು 10 ಪಂದ್ಯಗಳಲ್ಲಿ 50.4 ಸರಾಸರಿ ಮತ್ತು ಸುಮಾರು 155 ಸ್ಟ್ರೈಕ್ ರೇಟ್‌ನೊಂದಿಗೆ 504 ರನ್ ಗಳಿಸಿದ್ದಾರೆ, 55 ಬೌಂಡರಿಗಳು ಮತ್ತು 16 ಸಿಕ್ಸರ್ಗಳನ್ನು ಗಳಿಸುವ ಮೂಲಕ ಲೀಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಈ ಯುವಕ ಸಾಧಾರಣ ಸ್ಟ್ರೈಕ್ ರೇಟ್‌ನಲ್ಲಿ ರನ್‌ ಸಂಗ್ರಹಿಸುವವನಾಗಿ ಹೆಸರು ಗಳಿಸಿದ್ದಾನೆ, ಇದು ಲೀಗ್ ಮತ್ತು ಟಿ20 ಕ್ರಿಕೆಟ್ನ ಪ್ರಸ್ತುತ ಉನ್ನತ ಗುಣಮಟ್ಟಕ್ಕೆ ಯೋಗ್ಯವಾದ ಅರ್ಹತೆ ಮತ್ತು ಪ್ರಮಾಣತೆಯನ್ನು ಹೊಂದಿದೆ. ಸುದರ್ಶನ್, ಶುಭಮನ್ ಗಿಲ್ (ಅವರು ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು ಮತ್ತು ಖಂಡಿತವಾಗಿಯೂ ಅವರು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದನ್ನು ನೋಡಲು ನಾನು ಇಚ್ಛಿಸುತ್ತೇನೆ) ಮತ್ತು ಜೋಸ್ ಬಟ್ಲರ್ = ಈ ತ್ರಿವಳಿ ಕ್ರೀಡಾಪಟುಗಳು ಈ ಸೀಸನ್ನಲ್ಲಿ ಆಡಿದ ಕಡಿಮೆ ಡಾಟ್ ಬಾಲ್ಗಳ ವಿಷಯದಲ್ಲಿ ತಮ್ಮ ಫ್ರಾಂಚೈಸಿಯನ್ನು ಮುನ್ನಡೆಸುತ್ತಿದೆ ಎಂದು ಖಚಿತಪಡಿಸಿದೆ.

ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ವಿರಾಟ್ ಕೊಹ್ಲಿ ಆರೆಂಜ್‌ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರು. ಎರಡು ಬಾರಿ ಆರೆಂಜ್‌ ಕ್ಯಾಪ್‌ ವಿಜೇತ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್ ನಂತರ ಶ್ರೀಮಂತ ಲೀಗ್‌ನ ಮೂರು ಸೀಸನ್-ಗಳಲ್ಲಿ ಆರೆಂಜ್‌ ಕ್ಯಾಪ್‌ ಗೆದ್ದ ಮೊದಲ ಬ್ಯಾಟ್ಸ್‌ಮನ್‌ ಆಗುವ ಗುರಿಯಲ್ಲಿದ್ದಾರೆ. ನಿವೃತ್ತಿಯ ನಂತರ ಕೊಹ್ಲಿ ಐಪಿಎಲ್‌ ಆಡುತ್ತಿರುವ ಮೊದಲ ಸೀಸನ್ ಇದಾಗಿದ್ದು, ಬ್ಯಾಟಿಂಗ್ ಮಾಂತ್ರಿಕ ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ಏಕೆ ಇದೆ ಶೈಲಿಯ ಕ್ರಿಕೆಟ್-ಗೆ ವಿರಾಮ ನೀಡಿದರೋ ಎಂದು ಅವರ ಅನೇಕ ಅಭಿಮಾನಿಗಳು ಆಶ್ಚರ್ಯ ಪಡುತ್ತಿರಬಹುದು.

ಆರ್ಸಿಬಿ ಮತ್ತು ಭಾರತದ ಮಾಜಿ ನಾಯಕ, ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ರನ್-ಬೆನ್ನುಹತ್ತಿ ಬೇಟೆ ಆಡುವಲ್ಲಿ ಅಜೇಯರಾಗುವ ಮೂಲಕ ಸೀಸನ್ ಅನ್ನು ಪರಿಪೂರ್ಣವಾಗಿ ಪ್ರಾರಂಭಿಸಿದರು ಮತ್ತು ರನ್‌ ಚೇಸಿಂಗ್‌ನಲ್ಲಿ ಫಿಲ್ ಸಾಲ್ಟ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್‌ ಬ್ಯಾಟಿಂಗ್ ಕ್ರಮಾಂಕದಲ್ಲಿ ತಾಕತ್ತು -ಭರಿತ ಬ್ಯಾಟ್ ಬೀಸುವವರಿದ್ದು ಸೆಣಸಾಟಕ್ಕೆ ಎದುರುನಿಂತು ಇವರು ಉತ್ಸಾಹ ತುಂಬಿವ ಕಾರ್ಯಕ್ರಮದ ಆಂಕರ್ ಆಗಿ ಆಡುವ ಮೂಲಕ ಹಲವಾರು ಬಾರಿ ಅದನ್ನೇ ಮಾಡಿದ್ದಾರೆ.

36 ವರ್ಷದ ಬ್ಯಾಟ್ಸ್ಮನ್ ಪ್ರಸ್ತುತ ಸೀಸನ್ನಿನಲ್ಲಿ 11 ಪಂದ್ಯಗಳಲ್ಲಿ 63.13 ಸರಾಸರಿ ಮತ್ತು 143.46 ಸ್ಟ್ರೈಕ್ ರೇಟ್ನೊಂದಿಗೆ 505 ರನ್ ಗಳಿಸಿದ್ದಾರೆ ಮತ್ತು ರಾಯಲ್ ಚಾಲೆಂಜರ್ಸ್ ತಮ್ಮ ಪ್ರಮುಖ ಆಟಗಾರನು ಸೀಸನ್ನ ಉಳಿದ ದಿನಗಳಲ್ಲಿ ತನ್ನ ಫಾರ್ಮ್ ಅನ್ನು ಕಾಯ್ದುಕೊಳ್ಳುವ ಭರವಸೆಯಲ್ಲಿ ದೇವರಲ್ಲಿ ಮೊರೆಯಿಟ್ಟುಕೊಳ್ಳಲಿದೆ.

ಶುಭ್ಮನ್ ಗಿಲ್ (ಗುಜರಾತ್ ಟೈಟಾನ್ಸ್)

2024 ರಲ್ಲಿ ಶುಭ್ಮನ್ ಗಿಲ್ ಒಂದು ಕಠಿಣ ಸೀಸನ್ ಅನ್ನು ಹೊಂದಿದ್ದರು ಆದರೆ ಈ ಗುಜರಾತ್ ಟೈಟಾನ್ಸ್ ನಾಯಕ 10 ಪಂದ್ಯಗಳಲ್ಲಿ 51.67 ಸರಾಸರಿ ಮತ್ತು 160ಕೂ ಅಧಿಕ ಸ್ಟ್ರೈಕ್ ರೇಟ್ನಲ್ಲಿ 465 ರನ್ ಗಳಿಸಿದ್ದಾರೆ, ಇದರಿಂದಾಗಿ ಸುದರ್ಶನ್ ರವರನ್ನು ಪಿಚ್-ನ ಇನ್ನೊಂದು ತುದಿಯಲ್ಲಿ ಸಲೀಸಾಗಿ ನೆಲೆಗೊಳ್ಳಲು ಅವಕಾಶ ಮಾಡಿಕೊಟ್ಟರು.

ಐಪಿಎಲ್ 2023 ರ ಆರೆಂಜ್‌ ಕ್ಯಾಪ್‌ವಿಜೇತರಾಗಿರುವ ಗಿಲ್, ಕಳೆದ 12 ತಿಂಗಳುಗಳಲ್ಲಿ ಪ್ರೌಢಾವಸ್ಥೆಯನ್ನು ಪ್ರದರ್ಶಿಸಿದ್ದರಿಂದ ತಮ್ಮ ಬತ್ತಳಿಕೆಗೆ ಹೆಚ್ಚಿನ ಹೊಡೆತಗಳನ್ನು ಸೇರಿಸಿದ್ದಾರೆ, ಒಳ್ಳೆ ರನ್-ಗಳ ಗುಡ್ಡೆ ಮಾಡಿದ್ದಾರೆ ಮತ್ತು ಅಂಪೈರ್ಗಳೊಂದಿಗಿನ ಒಂದೆರಡು ಮಾತಿನ ಚಕಮಕಿಗಳ ಸಂದರ್ಭಗಳನ್ನು ಹೊರತುಪಡಿಸಿ, ನಾಯಕ ಮತ್ತು ಉತ್ತಮ ಆರಂಭಿಕ ಬ್ಯಾಟ್ಸ್ಮನ್ ಆಗಿ ತಮ್ಮ ಕಾರ್ಯವನ್ನು ಚೆನ್ನಾಗಿ ಹಗ್ಗದ ಮೇಲೆ ದೊಂಬರಾಟ ಆಡುವಲ್ಲಿ ಸಮತೋಲನ ಕಾಪಾಡುತ್ತಿದ್ದಾರೆ.

ಸೀಸನ್ನ ಆರಂಭದಲ್ಲಿ ಸುದರ್ಶನ್ ಮತ್ತು ಬಟ್ಲರ್ ಟೈಟಾನ್ಸ್ ತಂಡದ ಪ್ರಬಲ ಆಟಗಾರರಾಗಿದ್ದರೆ, ಲೀಗ್ ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನಗಳಲ್ಲಿರುವ ತಂಡಕ್ಕೆ ಪ್ಲೇಆಫ್ಗಳು ವೇಗವಾಗಿ ಸಮೀಪಿಸುತ್ತಿರುವುದರಿಂದ ಗಿಲ್ ಸಂದರ್ಭಕ್ಕೆ ತಕ್ಕಂತೆ ಹೊರ ಮೂಡಿಬಂದಿದ್ದಾರೆ. ಏಕದಿನ ಮಾದರಿಯ ಆಟಗಾರ ಈ ಜಿಟಿ ನಾಯಕ, ಕಳೆದ ಮೂರು ಪಂದ್ಯಗಳಲ್ಲಿ ಕೇವಲ 143 ಎಸೆತಗಳನ್ನು ಎದುರಿಸಿ 250 ರನ್ ಗಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್)

ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ರವರ ನಾಯಕತ್ವದಲ್ಲಿ ಮುನ್ನಡೆಸಲು ಫ್ರಾಂಚೈಸೀ ಸಮ್ಮತಿಸಿದ್ದು , ಟಿ20ಐ ತಂಡದ ನಾಯಕ ಸೂರ್ಯಕುಮಾರ್ ಯಾದವ್ ನಾಯಕನ ಯಾವ ಬಾಧ್ಯತೆ ಇಲ್ಲದೆ ಮುಕ್ತವಾಗಿ ಮತ್ತೆ ತಮ್ಮ ಬ್ಯಾಟಿಂಗ್ ಸ್ಪರ್ಶ ಕಂಡುಕೊಂಡಿದ್ದಾರೆ.

ಸಾಮಾನ್ಯವಾಗಿ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬ್ಯಾಟ್ಸ್ಮನ್ 11 ಪಂದ್ಯಗಳಲ್ಲಿ 172.72 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್ನಲ್ಲಿ 465 ರನ್ ಗಳಿಸಿದ್ದಾರೆ, ಇದು ಎಂ.ಐ. ನ ಮಧ್ಯಮ ಓವರ್ಗಳಲ್ಲಿ ವೇಗವಾಗಿ ಸ್ಕೋರ್ ಗಳಿಸಲು ಸಹಾಯ ಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಲಾಭವನ್ನು ನೀಡುತ್ತದೆ. ಐಪಿಎಲ್ 2025 ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಟಾಪ್ 5 ರಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ ಎಂದರೆ ಈ ಭಾರತೀಯ ನಾಯಕ.

ಮತ್ತು ಕ್ಯಾಷ್ –ರಿಚ್ ಲೀಗ್ನ ಪ್ರಸ್ತುತ ಸೀಸನ್ನಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಅಗ್ರ 5 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಎಂ.ಐ. ಸದ್ಯ ಹೊಂದಿಕೊಳ್ಳುವ ಬ್ಯಾಟಿಂಗ್ ಕ್ರಮಾಂಕದೊಂದಿಗೆ ಬ್ಯಾಟಿಂಗ್ ಮಾಡಲು ಆದ್ಯತೆ ನೀಡುತ್ತಿದೆ. ವಿಲ್ ಜ್ಯಾಕ್ಸ್, ನಮನ್ ಧೀರ್ ಮತ್ತು ತಿಲಕ್ ವರ್ಮಾ ಎಂಬ ಮೂವರು ಬ್ಯಾಟ್ಸ್ಮನ್ಗಳು ತಂಡದ ಕ್ರಮ ಸಂಖ್ಯೆ 3ಕ್ಕೆ ಪರ್ಯಾಯವಾಗಿ ಈಗಾಗಲೇ ಇವರಲ್ಲಿ ಒಬ್ಬರಲ್ಲ ಇನ್ನೊಬ್ಬರು ಬಂದಿರುವುದರಿಂದ, ಸೂರ್ಯಕುಮಾರ್ ಅವರ ಉಪಸ್ಥಿತಿಯು ಅವರಿಗಿಂತ ಮೇಲಿರುವ ಬ್ಯಾಟ್ಸ್ಮನ್ಗಳಿಗೆ ಇನ್ನಿಂಗ್ಸ್ನ ಆರಂಭದಲ್ಲಿ ಬೌಲರ್ಗಳನ್ನು ಬಲಿಷ್ಠವಾಗಿ ಎದುರುಹಾಕಿಕೊಳ್ಳಲು ಸಹಾಯ ಮಾಡುತ್ತದೆ.

ಪರ್ಪಲ್‌ ಕ್ಯಾಪ್‌ ಆಯ್ಕೆಗಿರುವ ಅಚ್ಚು ಮೆಚ್ಚಿನ ಪ್ಲೇಯರ್‌ಗಳು

ಆಧುನಿಕ ಆಟದಲ್ಲಿ ಬ್ಯಾಟರ್ಗಳು ಪ್ರಾಬಲ್ಯ ಹೊಂದಿದ್ದಾರೆ, ವಿಶೇಷವಾಗಿ T20ಗಳಲ್ಲಿ, ಇದು ಪಿಚ್ ಅಥವಾ ನೆಲದ ಪರಿಸ್ಥಿತಿಗಳನ್ನು ಲೆಕ್ಕಿಸದೆ ತಮ್ಮ ಫ್ರಾಂಚೈಸಿಗಳಿಗಾಗಿ ಸಿದ್ದಿಸಿಕೊಡಬಲ್ಲ ವಿಶ್ವ ದರ್ಜೆಯ ಬೌಲರ್ಗಳ ಮೌಲ್ಯವನ್ನು ಹೆಚ್ಚಿಸುತ್ತದೆ. 2025 ರ ಐಪಿಎಲ್ ಸೀಸನ್ನಿನಲ್ಲಿ ಆಶಿಶ್ ನೆಹ್ರಾ ಮತ್ತು ಜಹೀರ್ ಖಾನ್ ಅವರಂತಹ ತರಬೇತುದಾರರು ಅಖಿಲ ಭಾರತ ವೇಗದ ದಾಳಿಯನ್ನು ಪ್ರದರ್ಶಿಸಿದ್ದಾರೆ ಮತ್ತು ಅದಕ್ಕಾಗಿ ತಕ್ಕ ಪ್ರತಿಫಲವನ್ನು ಪಡೆದಿದ್ದಾರೆ. ಪರ್ಪಲ್‌ ಕ್ಯಾಪ್‌ಗಾಗಿ ವಿಜೇತರೆನ್ನಿಸುವ ನಮ್ಮ ನಾಲ್ಕು ಪ್ರಮುಖ ಆಯ್ಕೆಗಳು ಇಲ್ಲಿವೆ:

ಪ್ರಸಿದ್ಧ ಕೃಷ್ಣ (ಗುಜರಾತ್ ಟೈಟಾನ್ಸ್)

2024-25ರ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೊಸ ವರ್ಷದ ಟೆಸ್ಟ್ನಲ್ಲಿ ಭಾರತ ಪರ ಬಿಳಿಯ ಸಮವಸ್ತ್ರ ಧರಿಸಿದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣರವರ ಕ್ರಿಕೆಟ್ ಪುನರುತ್ಥಾನವು ದೇಶದ ಗ್ರಾಮ-ಪಟ್ಟಣದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಸರಣಿಯಲ್ಲಿನ ಏಕೈಕ ಟೆಸ್ಟ್ನಲ್ಲಿ ಸಾಧಾರಣ ಪ್ರದರ್ಶನ ನೀಡಿದ ನಂತರ, ಕೃಷ್ಣ 2025 ರ ಐಪಿಎಲ್ ಸೀಸನ್ನಿಗಾಗಿ ನೆಹ್ರಾ ಮತ್ತು ತಂಡವನ್ನು ಸೇರಿದರು.

ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ವೇಗಿಗಳನ್ನು ಪ್ರತಿ ಎಸತವನ್ನೂ ಮೈದಾನದ ಎಲ್ಲೆಡೆ ಸಂಪೂರ್ಣ ಚಚ್ಚಿ ಹಾಕಿದ್ದರಿಂದ ಕೃಷ್ಣ ಅಭಿಯಾನಕ್ಕೆ ಬಿಸಿ ತುಪ್ಪದ ಆರಂಭ ದೊರೆಯಿತು. ಆದರೆ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2/18 ಅಂಕಿ ಸಾಧಿಸುವ ಮೂಲಕ ಗಳಿಸುವ ಮೂಲಕ ಕೃಷ್ಣ ಉತ್ತಮ ಪ್ರದರ್ಶನ ನೀಡಿದರು. ಅಂದಿನಿಂದ, ಬೆಂಗಳೂರಿನಲ್ಲಿ ಜನಿಸಿದ ಈ ಬೌಲರ್ ಈವರೆಗೆ ಹಿಂತಿರುಗಿ ನೋಡಿಲ್ಲ, ಈ ಸೀಸನ್ನಿನಲ್ಲಿ ಪಂದ್ಯದ ನಂತರ ಪಂದ್ಯಕ್ಕೆ ಮಿತವ್ಯಯಕಾರಿ ಮಾಂತ್ರಿಕ ಎಸೆತಗಳನ್ನು ನೀಡುತ್ತಾ, ನಿರ್ಣಾಯಕ ವಿಕೆಟ್ಗಳನ್ನು ಚಕ್ಕೆ ಕಿತ್ತಿಬರುವಷ್ಟು ಕಬಳಿಸಿದರು.

ಇಲ್ಲಿಯವರೆಗೆ, ಕೃಷ್ಣ 10 ಪಂದ್ಯಗಳಲ್ಲಿ 7.49 ರ ಮಿತವ್ಯಯದಲ್ಲಿ 19 ವಿಕೆಟ್ಗಳನ್ನು ಕಬಳಿಸಿದ್ದಾರೆ, ಮೊಹಮ್ಮದ್ ಶಮಿ ಮತ್ತು ಪ್ಯಾಟ್ ಕಮ್ಮಿನ್ಸ್ರಂತಹ ಸೀಮರ್ಗಳು ಒಂದೇ ಪಂದ್ಯದಲ್ಲಿ ಒಂದೇ ವಿಕೆಟ್ನಲ್ಲಿ ಬೃಹತ್ ರನ್ಗಳನ್ನು ಗಳಿಸಿದಾಗ ಮಾತ್ರ ಅವರು ಪ್ರತಿಸ್ಪರ್ಧಿಗಳ ಎದುರು ಒಂದೇ ಪಿಚ್ನಲ್ಲಿ ಒಂದೇ ಮ್ಯಾಚ್ಗೆ ನಿಲ್ಲುತ್ತಿದ್ದರೆ, ಅದೇ ಇವರು ತಮ್ಮ ಮಿತವ್ಯಯದ ದರವನ್ನು ನಿಯಂತ್ರಣದಲ್ಲಿಟ್ಟುಕೊಂಡರು ಮತ್ತು ವಿವಿಧ ಬಗೆಯ ಹಲವಾರು ಪಂದ್ಯ ಗೆಲ್ಲುವ ಪ್ರದರ್ಶನಗಳನ್ನು ನೀಡಿದ್ದಾರೆ.

ಜೋಶ್ ಹ್ಯಾಜಲ್ವುಡ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಈ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಜೋಶ್ ಹ್ಯಾಜಲ್ವುಡ್ ಪ್ರಮುಖ ಪಾತ್ರ ವಹಿಸಿದ್ದಾರೆಂದು ಸಾಬೀತುಪಡಿಸಿದ್ದಾರೆ. ಆಸ್ಟ್ರೇಲಿಯಾದ ಈ ಎತ್ತರದ ವೇಗದ ಬೌಲರ್ ರನ್ಗಳಿಗೆ ಕಡಿವಾಣ ಹಾಕಿದ್ದಾರೆ ಮತ್ತು ಪರ್ಪಲ್‌ ಕ್ಯಾಪ್‌ ಲೀಡರ್ಬೋರ್ಡ್ನಲ್ಲಿ ಎರಡನೇ ಸ್ಥಾನದಲ್ಲಿ ಕುಳಿತ್ತಿದ್ದಾರೆ. ಆಸೀಸ್‌ನ ಸ್ಟಾರ್‌ ಬೌಲರ್‌, ಎಂ ಚಿನ್ನಸ್ವಾಮಿ ಕ್ರೀಡಾಂಗಣದಂತಹ ಕಠಿಣ ಪಿಚ್‌ನಲ್ಲಿ ಬೌಲಿಂಗ್ ಮಾಡಲು ಶಿಸ್ತುಬದ್ಧ ಬೌಲಿಂಗ್ ಏಕೆ ಅಂತಿಮ ಪರಿಹಾರ ಎಂದು ಸಾಬೀತುಪಡಿಸಿದ್ದಾರೆ.

ಹ್ಯಾಜಲ್ವುಡ್ ಪ್ರಸ್ತುತ 10 ಪಂದ್ಯಗಳಲ್ಲಿ 18 ವಿಕೆಟ್ಗಳನ್ನು ಪಡೆದಿದ್ದಾರೆ ಮತ್ತು ಭುಜದ ನೋವಿನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 'ಸದರ್ನ್ ಬ್ಯಾಟಲ್' ಅನ್ನು ತಪ್ಪಿಸಿಕೊಂಡಿದ್ದಾರೆ, ಇದು ಆರ್ಸಿಬಿ ಪರ ಇನ್ನೂ ಒಂದೆರಡು ಪಂದ್ಯಗಳನ್ನು ಆಡಲು ಅಡ್ಡಿಯಾಗಬಹುದು ಮತ್ತು ಪರ್ಪಲ್‌ ಕ್ಯಾಪ್‌ ಗೆಲ್ಲುವ ಸಾಧ್ಯತೆಗಳಿಗೆ ಘಾಸಿ ಉಂಟುಮಾಡಬಹುದು.

ನೂರ್ ಅಹ್ಮದ್ (ಚೆನ್ನೈ ಸೂಪರ್ ಕಿಂಗ್ಸ್)

ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಂದು ಘಟಕವಾಗಿ ವಿಫಲವಾದರೂ, ತಂಡಕ್ಕೆ ಹೊಸ ಆಟಗಾರ ನೂರ್ ಅಹ್ಮದ್, ಎಂಎಸ್ ಧೋನಿ ತಂಡದ ಸ್ಟಾರ್‌ ಪ್ಲೇಯರ್‌ ಆಗಿದ್ದಾರೆ. ಅಫ್ಘಾನ್ ನ ಯುವ ಸ್ಪಿನ್ನರ್ 11 ಪಂದ್ಯಗಳಲ್ಲಿ 16 ವಿಕೆಟ್ಗಳನ್ನು ಕಬಳಿಸಿದ್ದಾರೆ, ಮತ್ತು ಅವರು ಇನ್ನೂ ಮೂರು ಪಂದ್ಯಗಳಿಗೆ ಮಾತ್ರ ಆಡುತ್ತಾರೆ, ಆದರೆ ಪಿಚ್ ನಿಧಾನಗತಿಯ ಬೌಲರ್ಗಳಿಗೆ ಸಹಾಯ ಮಾಡುತ್ತಿದ್ದರೆ ಒಂದೇ ಪಂದ್ಯದಲ್ಲಿ ಹಲವು ವಿಕೆಟ್ಗಳನ್ನು ಪಡೆಯುವ ಸಾಮರ್ಥ್ಯವನ್ನು ನೂರ್ ಹೊಂದಿದ್ದಾರೆ ಎಂಬುದು ನಿಜ.

ರವೀಂದ್ರ ಜಡೇಜಾ ಚೆಂಡಿಗಿಂತ ಬ್ಯಾಟಿಂಗ್ನಲ್ಲಿ ಹೆಚ್ಚಿನ ಕೊಡುಗೆ ಸದ್ಯ ನೀಡುತ್ತಿದ್ದು ಮತ್ತು ರವಿಚಂದ್ರನ್ ಅಶ್ವಿನ್ ರವರ ಫಾರ್ಮ್‌ ಕಳವಳಕಾರಿಯಾಗಿಸಿತ್ತು. ಏಪ್ರಿಲ್ ಕೊನೆಯ ವಾರದಲ್ಲಿ ಸೂಪರ್ ಕಿಂಗ್ಸ್ ಪ್ಲೇಆಫ್ ತಲುಪುವ ಸ್ಪರ್ಧೆಯಲ್ಲಿದ್ದವು, ಅಂದರೆ ಅದು ನೂರ್ ರವರ ಮಿತವ್ಯಯತೆಯು ಮತ್ತು ವಿಕೆಟ್ ಕಬಳಿಸುವ ಮಾಂತ್ರಿಕ ಬೌಲಿಂಗ್‌ ಕಾರಣ ಎಂದಾಗಿತ್ತು.

ಟ್ರೆಂಟ್ ಬೌಲ್ಟ್ (ಮುಂಬೈ ಇಂಡಿಯನ್ಸ್)

ಮಹಾ-ಹರಾಜಿನಲ್ಲಿ ಟ್ರೆಂಟ್ ಬೌಲ್ಟ್ ಮುಂಬೈ ಇಂಡಿಯನ್ಸ್ಗೆ ಮರಳಿದರು ಮತ್ತು ಜಸ್ಪ್ರೀತ್ ಬುಮ್ರಾ ರವರನ್ನು ಐಪಿಎಲ್ 2025 ರ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿದ ಕಾರಣ ನ್ಯೂಜಿಲೆಂಡ್ ವೇಗಿ ಬೌಲ್ಟ್ ಅವರ ಉಪಸ್ಥಿತಿಯು ಇನ್ನಷ್ಟು ನಿರ್ಣಾಯಕವಾಯಿತು. ಬುಮ್ರಾ ಅನುಪಸ್ಥಿತಿಯಲ್ಲಿ, ನಾಯಕ ಪಾಂಡ್ಯ ಬೌಲ್ಟ್ ಜೊತೆಗೆ ಡೆತ್ ಬೌಲಿಂಗ್ ಕರ್ತವ್ಯಗಳನ್ನು ಹಂಚಿಕೊಂಡರು, ಮತ್ತು ಈ ಜೋಡಿ ಉತ್ತಮ ಜೊತೆಯಾಟ ನಡೆಸಿ ಎಂ.ಐ. ತಂಡವು ಸೀಸನ್ನ ಮೊದಲ ಕೆಲವು ಪಾಯಿಂಟ್ಗಳನ್ನು ಗಳಿಸಲು ಸಹಾಯ ಮಾಡಿತು.

ಬೌಲ್ಟ್ 11 ಪಂದ್ಯಗಳಲ್ಲಿ 16 ವಿಕೆಟ್ಗಳನ್ನು ಕಬಳಿಸಿದ್ದಾರೆ ಮತ್ತು ಪಾಂಡ್ಯ ನೇತೃತ್ವದ ತಂಡವು ಲೀಗ್ ಪಾಯಿಂಟ್ ಟೇಬಲಿನಲ್ಲಿ ಅಗ್ರಸ್ಥಾನದಲ್ಲಿ ಕುಳಿತಿರುವುದರಿಂದ, ಬೌಲ್ಟ್ ಮುಂದಿನ ಮೂರು ಪಂದ್ಯಗಳು ಮತ್ತು ಪ್ಲೇಆಫ್ ಪಂದ್ಯಗಳಲ್ಲಿ ಇನ್ನೂ ಕೆಲವು ವಿಕೆಟ್ಗಳನ್ನು ಗಳಿಸಬಹುದು, ಇದರಿಂದಾಗಿ ಮುಂಬೈ ಆರನೇ ಐಪಿಎಲ್ ಪ್ರಶಸ್ತಿಯನ್ನು ಎತ್ತಿಹಿಡಿಯಲು ಬಯಸಿದರೆ ಎಡಗೈ ಸೀಮರ್ ತನ್ನ ಅತ್ಯುತ್ತಮ ಪ್ರದರ್ಶನ ನೀಡಬೇಕಾಗುತ್ತದೆ.

ಸರ್ ಅವರ ಟೀಕೆ ಟಿಪ್ಪಣಿ: ಎಂ.ಐ. ತಂಡಕ್ಕೆ, ಪಂದ್ಯಾವಳಿಯಲ್ಲಿ ಉತ್ತಮವಾಗಿ ಆರಂಭಿಸದ ತಂಡವು ಈಗ ವೇಗವನ್ನು ಪಡೆಯಲು ಪ್ರಾರಂಭಿಸಿದೆ ಮತ್ತು ಪ್ರಗತಿಯನ್ನು ತೋರಿಸಲು ಪ್ರಾರಂಭಿಸಿದೆ, ಇದು ಪ್ಲೇ-ಆಫ್ಗೆ ಪ್ರವೇಶಿಸಲು ಉತ್ತಮ ಅವಕಾಶವನ್ನು ಮಾಡಿಕೊಟ್ಟಿದೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana