CSK ಹಿಂದಿಕ್ಕಿ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದ RCB! ಗಗನ ಮುಟ್ಟಿದ ಐಪಿಎಲ್ ಬ್ರ್ಯಾಂಡ್‌ ವ್ಯಾಲ್ಯೂ

Published : Jul 08, 2025, 05:20 PM IST
ipl 2025 virat kohli rcb wins

ಸಾರಾಂಶ

ಐಪಿಎಲ್ 18ನೇ ಆವೃತ್ತಿ ಮುಕ್ತಾಯದ ನಂತರ ಬ್ರ್ಯಾಂಡ್ ಮೌಲ್ಯ 18.5 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್‌ನ್ನು ಹಿಂದಿಕ್ಕಿ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದೆ. ಟಾಟಾ ಗ್ರೂಪ್ 2028ರವರೆಗೆ ಟೈಟಲ್ ಸ್ಪಾನ್ಸರ್ ಆಗಿ ಮುಂದುವರಿಯಲಿದೆ.

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ತಿಂಗಳು ಕಳೆದಿದೆ. ಇದೀಗ ಐಪಿಎಲ್ ಬ್ರ್ಯಾಂಡ್‌ ವ್ಯಾಲ್ಯೂ ಮತ್ತಷ್ಟು ಏರಿಕೆ ಕಂಡಿದೆ. 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬಳಿಕ ಬ್ಯುಸಿನೆಸ್ 12.9% ಹೆಚ್ಚಳವಾಗಿದ್ದು, ಐಪಿಎಲ್ ಬ್ರ್ಯಾಂಡ್‌ ವ್ಯಾಲ್ಯೂ 18.5 ಬಿಲಿಯನ್‌ಗೆ ತಲುಪಿದೆ. ಇನ್ನು ಇದೇ ವೇಳೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದೆ.

ಗ್ಲೋಬಲ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಹೌಲಿಹಾನ್ ಲೋಕೆ ಈ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ವರದಿಯನ್ನು ಪ್ರಕಟಿಸಿದೆ. 18ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ 269 ಯುಎಸ್‌ ಮಿಲಿಯನ್ ಡಾಲರ್‌ಗಳೊಂದಿಗೆ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಮಿಲಿಯನ್ ಡಾಲರ್ ಟಿ20 ಲೀಗ್ ಎಂದೇ ಕರೆಸಿಕೊಳ್ಳುವ ಐಪಿಎಲ್ ಟೂರ್ನಿಗೆ ಹಲವಾರು ಸ್ಪಾನ್ಸರ್‌ಶಿಪ್‌ ಡೀಲ್‌ಗಳಾಗಿವೆ. ಬಿಸಿಸಿಐ ನಾಲ್ಕು ಅಸೋಸಿಯೇಟ್ ಸ್ಪಾನ್ಸರ್‌ ಸ್ಲಾಟ್‌ಗಳನ್ನು ಮಾರಾಟ ಮಾಡುವ ಮೂಲಕ 1485 ಕೋಟಿ ರುಪಾಯಿಗಳನ್ನು ಜೇಬಿಗಿಳಿಸಿಕೊಂಡಿದೆ. ಇನ್ನು ಟಾಟಾ ಗ್ರೂಪ್ ಕೂಡಾ ತನ್ನ ಟೈಟಲ್ ಸ್ಲಾನ್ಸರ್‌ಶಿಪ್ ಅನ್ನು 2028ರವರೆಗೂ ಮುಂದುವರೆಸಿದ್ದು, 300 ಮಿಲಿಯನ್ ಡಾಲರ್‌ಗೆ ಬಿಸಿಸಿಐ ಜತೆ ಒಪ್ಪಂದ ಮಾಡಿಕೊಂಡಿದೆ

ಕಳೆದ 17 ವರ್ಷಗಳಿಂದ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದೆ. ಇನ್ನು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 242 ಮಿಲಿಯನ್ ಡಾಲರ್ ಬ್ರ್ಯಾಂಡ್‌ ವ್ಯಾಲ್ಯೂದೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 235 ಮಿಲಿಯನ್ ಡಾಲರ್‌ ಬ್ರ್ಯಾಂಡ್‌ ವ್ಯಾಲ್ಯೂದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಇನ್ನೊಂದೆಡೆ ಟೂರ್ನಿಯುದ್ದಕ್ಕೂ ಅಸಾಧಾರಣ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಬ್ರ್ಯಾಂಡ್‌ ವ್ಯಾಲ್ಯೂ ಭರ್ಜರಿ ಬೆಳವಣಿಗೆ ಕಂಡಿದ್ದು, ಪ್ರಾಂಚೈಸಿ ಬೆಳವಣಿಗೆ 39.6% ಹೆಚ್ಚಳವಾಗಿದೆ.

ಇನ್ನುಳಿದಂತೆ ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಬ್ರ್ಯಾಂಡ್‌ವ್ಯಾಲ್ಯೂ(227 ಮಿಲಿಯನ್ ಡಾಲರ್), ಸನ್‌ರೈಸರ್ಸ್ ಹೈದರಾಬಾದ್(154 ಮಿಲಿಯನ್ ಡಾಲರ್), ಡೆಲ್ಲಿ ಕ್ಯಾಪಿಟಲ್ಸ್(152 ಮಿಲಿಯನ್ ಡಾಲರ್), ರಾಜಸ್ಥಾನ ರಾಯಲ್ಸ್(146 ಮಿಲಿಯನ್ ಡಾಲರ್), ಗುಜರಾತ್ ಟೈಟಾನ್ಸ್(142 ಮಿಲಿಯನ್ ಡಾಲರ್), ಪಂಜಾಬ್ ಕಿಂಗ್ಸ್(141 ಮಿಲಿಯನ್ ಡಾಲರ್) ಹಾಗೂ ಲಖನೌ ಸೂಪರ್ ಜೈಂಟ್ಸ್(122 ಮಿಲಿಯನ್) ಕ್ರಮವಾಗಿ ಟಾಪ್ ಬ್ರ್ಯಾಂಡ್‌ ವ್ಯಾಲ್ಯೂ ಹೊಂದಿದ ತಂಡಗಳು ಎನಿಸಿಕೊಂಡಿವೆ.

IPL ವೀಕ್ಷಣೆಯಲ್ಲೂ ಹೊಸ ದಾಖಲೆ:

2025ರ ಐಪಿಎಲ್‌ನ ಅಧಿಕೃತ ಬ್ರಾಡ್‌ಕಾಸ್ಟರ್ ಜಿಯೋ ಸ್ಟಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಕುರಿತಂತೆ ಮಹತ್ವದ ಅಪ್‌ಡೇಟ್ ನೀಡಿದೆ. ಈ ಫೈನಲ್ ಪಂದ್ಯವು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತಿಹೆಚ್ಚು ವೀಕ್ಷಣೆಗೊಳಗಾದ ಪಂದ್ಯ ಎನಿಸಿಕೊಂಡಿದೆ. ಎಲ್ಲಾ ಪ್ಲಾಟ್‌ಫಾರಂ ಸೇರಿದಂತೆ ಈ ಪಂದ್ಯದ ವಾಚಿಂಗ್ ಟೈಮ್ 31.7 ಬಿಲಿಯನ್ ಮಿನಿಟ್ಸ್‌ಗಳಾಗಿವೆ. ಇನ್ನು ಡಿಜಿಟಲ್ ಪ್ಲಾಟ್‌ಫಾರಂನಲ್ಲಿ ಆರ್‌ಸಿಬಿ-ಪಂಜಾಬ್ ನಡುವಿನ ಐಪಿಎಲ್ ಫೈನಲ್ ಪಂದ್ಯವು ಹಿಂದೆಂದೂ ಕಂಡು ಕೇಳರಿಯದ ದಾಖಲೆ ನಿರ್ಮಿಸಿದೆ. ಡಿಜಿಟಲ್ ಫ್ಲಾಟ್‌ಫಾರಂನಲ್ಲಿ ಆರ್‌ಸಿಬಿ-ಪಂಜಾಬ್ ನಡುವಿನ ಫೈನಲ್ ಪಂದ್ಯವನ್ನು 892 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ