ಸಿಎಸ್‌ಕೆ ತಂಡವನ್ನು ಉತ್ತಮ ರನ್‌ರೇಟ್‌ನಿಂದ ಮಣಿಸಿ ಪ್ಲೇ ಆಫ್ ಪ್ರವೇಶಿಸಲು ಆರ್‌ಸಿಬಿ ಸಜ್ಜಾಗಿದೆ. ಇತ್ತ ಚೆನ್ನೈ ಕೂಡ ಪ್ಲೇ ಆಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಆದರೆ ಈ ಎರಡೂ ತಂಡ ಪ್ಲೇ ಆಫ್ ಸುತ್ತು ಪ್ರವೇಶಿಸಲು ಒಂದು ಅವಕಾಶವಿದೆ. ಅದು ಹೇಗೆ?
ಬೆಂಗಳೂರು(ಮೇ.15) ಐಪಿಎಲ್ 2024 ಟೂರ್ನಿಯಲ್ಲಿ ಇದೀಗ ಅಭಿಮಾನಿಗಳು ಪ್ಲೇ ಆಫ್ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಆರ್‌ಸಿಬಿ, ಸಿಎಸ್‌ಕೆ, ಹೈದರಾಬಾದ್ ತಂಡಗಳಲ್ಲಿ ಪ್ಲೇ ಆಫ್ ಚರ್ಚೆ. ಪ್ರಮುಖವಾಗಿ ಆರ್‌ಸಿಬಿ ಅದ್ಬುತ ಪ್ರದರ್ಶನದ ಮೂಲಕ ಕಮ್‌ಬ್ಯಾಕ್ ಮಾಡಿ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ. ಇದೀಗ ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಪ್ಲೇ ಆಪ್ ಸುತ್ತು ಪ್ರವೇಶಿಸಲು ಆರ್‌ಸಿಬಿ ಸಜ್ಜಾಗಿದೆ. ಚೆನ್ನೈ ವಿರುದ್ದ ಉತ್ತಮ ರನ್‌ರೇಟ್ ನೊಂದಿಗೆ ಗೆಲುವು ಸಾಧಿಸಿದರೆ ಆರ್‌ಸಿಬಿ ಪ್ಲೇ ಆಫ್ ಸ್ಥಾನಕ್ಕೇರಲಿದೆ. ಆದರೆ ಸಿಎಸ್‌ಕೆ ಹಾಗೂ ಆರ್‌ಸಿಬಿ ಎರಡೂ ತಂಡಗಳು ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಿದೆ. ಆದರೆ ಇದಕ್ಕೆ ಒಂದೇ ಕಂಡೀಷನ್, ಸನ್‌ರೈಸರ್ಸ್ ಹೈದರಾಬಾದ್ ತಂಡ ಇನ್ನುಳಿದ ಎಲ್ಲಾ ಪಂದ್ಯ ಸೋಲಬೇಕು. ಹೀನಾಯವಾಗಿ ಸೋಲು ಕಾಣಬೇಕು.
ಸದ್ಯ ಅಂಕಪಟ್ಟಿಯಲ್ಲಿ ಆರ್‌ಸಿಬಿ 6ನೇ ಸ್ಥಾನದಲ್ಲಿದೆ. 13 ಪಂದ್ಯಗಳಿಂದ 12 ಅಂಕ ಸಂಪಾದಿಸಿದೆ. ಅಂಕಪಟ್ಟಿಯ ಟಾಪ್ ನಾಲ್ಕು ಸ್ಥಾನದಲ್ಲಿ ಕೋಲ್ಕತಾ ಹಾಗೂ ರಾಜಸ್ಥಾನ ಈಗಾಗಲೇ ಅಧಿಕತವಾಗಿ ಪ್ಲೇ ಆಫ್ ಸ್ಥಾನಕ್ಕೇರಿದೆ. ಇನ್ನುಳಿದ 2 ಸ್ಥಾನಕ್ಕಾಗಿ ಚೆನ್ನೈ, ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೋರಾಟ ನಡೆಸುತ್ತಿದೆ.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಿದ ಅಭಿಮಾನಿ, ಬಿಸಿಸಿಐಗೆ ಶುರುವಾಯ್ತ ಹೊಸ ತಲೆನೋವು!
ಪ್ಲೇ ಆಫ್ ಅವಕಾಶಕ್ಕೆ ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಉತ್ತಮ ರನ್‌ರೇಟ್‌ನಿಂದ ಗೆಲ್ಲಬೇಕು. ಈ ವಿಚಾರದಲ್ಲಿ ಯಾವುದೇ ಶಾರ್ಟ್‌ಕಟ್ ಇಲ್ಲ. ಹೀಗಾದರೆ ಆರ್‌ಸಿಬಿ ಹಾಗೂ ಚೆನ್ನೈ ಅಂಕ 14 ಆಗಲಿದೆ. ರನ್‌ರೇಟ್ ಆಧಾರದಲ್ಲಿ ಆರ್‌ಸಿಬಿ ಕ್ವಾಲಿಫೈ ಆಗಲಿದೆ. ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ 12 ಪಂದ್ಯದಲ್ಲಿ 14 ಅಂಕ ಸಂಪಾದಿಸಿದೆ. ಇನ್ನುಳಿದ 2 ಪಂದ್ಯದಲ್ಲಿ ಹೈದಾಬಾದ್ ಮುಗ್ಗರಿಸಬೇಕು. ಅದು ಕೂಡ ಹೀನಾಯವಾಗಿ ಸೋಲು ಕಂಡವರೆ ಮಾತ್ರ. ಇತ್ತ ಚೆನ್ನೈ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿದರೆ, ಹೊಸ ಪ್ಲೇ ಆಫ್ ಲೆಕ್ಕಾಚಾರ ತೆರೆದುಕೊಳ್ಳಲಿದೆ. ಹೀಗಾದರೆ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎರಡೂ ತಂಡಗಳೂ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಸ್ಥಾನದಿಂದ ಹೊರಗುಳಿಯಲಿದೆ.
ಡೆಲ್ಲಿ ಕ್ಯಾಪಿಟಲ್ಸ್ 14 ಅಂಕದೊಂದಿಗೆ ಸದ್ಯ 5ನೇ ಸ್ಥಾನದಲ್ಲಿದೆ. ಆದರೆ ನೆಟ್‌ರೇಟ್ ನೆಗಟೀವ್ ಆಗಿದೆ. ಹೀಗಾಗಿ ಡೆಲ್ಲಿಗೆ ಅವಕಾಶಗಳು ಬಹುತೇಕ ಮುಚ್ಚಿಹೋಗಿದೆ. ಇತ್ತ ಲಖನೌ ಸೂಪರ್ ಜೈಂಟ್ಸ್ ಇನ್ನೊಂದು ಪಂದ್ಯ ಬಾಕಿ ಉಳಿದಿದೆ. ಮುಂಬೈ ವಿರುದ್ದ ಲಖನೌ ಸೋಲು ಕಂಡರೆ ಆರ್‌ಸಿಬಿ, ಚೆನ್ನೈ ಪ್ಲೇ ಆಫ್ ಅವಕಾಶಗಳು ಸುಲಭವಾಗಲಿದೆ.
IPL ಪ್ಲೇ ಆಫ್ ರೇಸ್‌ನಿಂದ ಗುಜರಾತ್ ಔಟ್: 3 ಸ್ಥಾನಕ್ಕೆ ಈ 6 ತಂಡಗಳ ಫೈಟ್..! ಹೀಗಿದೆ ನೋಡಿ ಹೊಸ ಲೆಕ್ಕಾಚಾರ