ಧೋನಿಗೆ RCB ಗೆ ಬಂದು ಕಪ್ ಗೆಲ್ಲಿಸಿಕೊಡಿ ಎಂದ ಬೆಂಗಳೂರು ಅಪ್ಪಟ ಅಭಿಮಾನಿ: ಕ್ಯಾಪ್ಟನ್ ಕೂಲ್ ಕೊಟ್ಟ ರಿಪ್ಲೇ ವೈರಲ್

By Naveen Kodase  |  First Published Dec 23, 2023, 2:06 PM IST

ಮಹೇಂದ್ರ ಸಿಂಗ್ ಧೋನಿಯ ಹಲವು ನಾಯಕತ್ವದ ಗುಣಗಳು ಅವರನ್ನು ಒಬ್ಬ ಗೇಮ್‌ಚೇಂಜರ್ ಕ್ಯಾಪ್ಟನ್ ಎಂದು ಗುರುತಿಸುವಂತೆ ಮಾಡಿದೆ. ಇನ್ನು ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಪ್ಪಟ ಅಭಿಮಾನಿಯೊಬ್ಬ, ಧೋನಿಗೆ ನಮ್ಮ ತಂಡಕ್ಕೆ ಸಪೋರ್ಟ್ ಮಾಡಿ ಹಾಗೂ ನಮ್ಮ ತಂಡಕ್ಕೆ ಬಂದು ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಡಿ ಎಂದು ಖಾಸಗಿ ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಂಡರು


ಬೆಂಗಳೂರು(ಡಿ.23): ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಧೋನಿಯ ನಾಯಕತ್ವ ಗುಣಕ್ಕೆ ಇಡೀ ಜಗತ್ತೇ ಸಲ್ಯೂಟ್ ಮಾಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಮಹೇಂದ್ರ ಸಿಂಗ್ ಧೋನಿಯ ಹಲವು ನಾಯಕತ್ವದ ಗುಣಗಳು ಅವರನ್ನು ಒಬ್ಬ ಗೇಮ್‌ಚೇಂಜರ್ ಕ್ಯಾಪ್ಟನ್ ಎಂದು ಗುರುತಿಸುವಂತೆ ಮಾಡಿದೆ. ಇನ್ನು ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಪ್ಪಟ ಅಭಿಮಾನಿಯೊಬ್ಬ, ಧೋನಿಗೆ ನಮ್ಮ ತಂಡಕ್ಕೆ ಸಪೋರ್ಟ್ ಮಾಡಿ ಹಾಗೂ ನಮ್ಮ ತಂಡಕ್ಕೆ ಬಂದು ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಡಿ ಎಂದು ಖಾಸಗಿ ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಧೋನಿ ಸಮಯಪ್ರಜ್ಞೆಯಿಂದ ಉತ್ತರಿಸಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

Tap to resize

Latest Videos

ಆಫ್ಘಾನಿಸ್ತಾನ ಟಿ20 ಸರಣಿಗಿಲ್ಲ ಸೂರ್ಯಕುಮಾರ್ ಯಾದವ್..! ಹಾರ್ದಿಕ್ ಪಾಂಡ್ಯ ಕೂಡಾ ಡೌಟ್

ನೋಡಿ ಅವರದ್ದು ತುಂಬಾ ಒಳ್ಳೆಯ ತಂಡ. ಕ್ರಿಕೆಟ್‌ನಲ್ಲಿ ಎಲ್ಲವೂ ನಾವಂದುಕೊಂಡಂತೆಯೇ ಆಗುವುದಿಲ್ಲ. ಐಪಿಎಲ್‌ ವಿಚಾರವನ್ನೇ ತೆಗೆದುಕೊಂಡರೇ ಎಲ್ಲಾ 10 ತಂಡದಲ್ಲೂ ಬಲಿಷ್ಠ ಆಟಗಾರರೇ ಇದ್ದಾರೆ. ಸಮಸ್ಯೆ ಯಾವಾಗ ಬರುತ್ತೆ ಅಂದರೆ, ಟೂರ್ನಿಯ ಸಂದರ್ಭದಲ್ಲಿ ಕೆಲವರು ಗಾಯದ ಸಮಸ್ಯೆ. ಇನ್ನಿತರ ಕಾರಣಗಳಿಂದ ತಂಡದ ಆಯ್ಕೆಗೆ ಲಭ್ಯವಿರುವುದಿಲ್ಲ. ಅವರೂ ಕೂಡಾ ತುಂಬಾ ಒಳ್ಳೆಯ ತಂಡ. ಎಲ್ಲಾ ತಂಡಗಳಿಗೂ ಕಪ್ ಗೆಲ್ಲಲು ಸಮಾನ ಅವಕಾಶವಿದೆ. ಸದ್ಯಕ್ಕಂತೂ ನಾನು ನನ್ನ ತಂಡದ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದೇನೆ. ಹೀಗಾಗಿ ನಾನು ಎಲ್ಲಾ ತಂಡಗಳಿಗೆ ಒಳ್ಳೇದಾಗಲಿ ಎಂದು ಹಾರೈಸುತ್ತೇನೆ. ಅದಕ್ಕಿಂತ ನಾನು ಹೆಚ್ಚೇನು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಾನು ನನ್ನ ತಂಡವನ್ನು ಬಿಟ್ಟು ಬೇರೆ ರೀತಿಯಲ್ಲಿ ಇನ್ನೊಂದು ಟೀಮ್‌ಗೆ ಸಪೋರ್ಟ್ ಮಾಡಲು ಬಂದರೆ ನಮ್ಮ ತಂಡದ ಫ್ಯಾನ್ಸ್‌ಗೆ ಏನು ಅನಿಸಬಹುದು ನೀವೇ ಹೇಳಿ ಎಂದು ಮಹಿ ಹೇಳಿದ್ದಾರೆ.

MS Dhoni's response when one of the RCB fan asked Dhoni to come and support RCB to win a title.

- This is 👏pic.twitter.com/mcvlfrMBwI

— Johns. (@CricCrazyJohns)

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ 2023ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ 5ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿತ್ತು. ಕಳೆದ ಬಾರಿಯ ಐಪಿಎಲ್ ಧೋನಿ ಪಾಲಿಗೆ ಕೊನೆಯ ಐಪಿಎಲ್ ಎಂದು ಹಲವು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ ಧೋನಿ ತಾವು ಇನ್ನೂ ಒಂದು ಐಪಿಎಲ್ ಆಡುವುದಾಗಿ ಕಳೆದ ಬಾರಿಯೇ ಘೋಷಿಸಿದ್ದರು. 2024ರ ಐಪಿಎಲ್‌ನಲ್ಲೂ ಧೋನಿ ನಾಯಕನಾಗಿ ಸಿಎಸ್‌ಕೆ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತ ಎನಿಸಿದೆ. ಅದೇ ರೀತಿ 2024ರ ಐಪಿಎಲ್ ಧೋನಿ ಆಡಲಿರುವ ಕೊನೆಯ ಐಪಿಎಲ್ ಎನಿಸಿಕೊಂಡರೂ ಅಚ್ಚರಿಯಿಲ್ಲ.

click me!