
ಮುಂಬೈ(ಏ.08): IPL 2023 ಟೂರ್ನಿಯಲ್ಲಿ ಆರ್‌ಸಿಬಿ ಗೆಲುವು ಸೋಲು ಎರಡನ್ನೂ ಕಂಡಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಸೋಲಿನ ಜೊತೆಗೆ ಆರ್‌ಸಿಬಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಅನುಭವಿಸಿದೆ. ಇದೇ ಪರಿಸ್ಥಿತಿಯನ್ನು ಆರ್‌ಸಿಬಿ ಈ ಹಿಂದೆಯೂ ಎದುರಿಸಿದೆ. ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಅನಗತ್ಯ ಎಸೆತಕ್ಕೆ ಕೈಹಾಕಿ ವಿಕೆಟ್ ಕೈಚೆಲ್ಲಿ ಪರಿತಪಿಸಿದ ಹಲವು ಉದಾಹರಣೆಗಳಿವೆ. ಕೆಕೆರ್ ವಿರುದ್ದದ ಪಂದ್ಯದಲ್ಲಿ ಕೊಹ್ಲಿ 21 ರನ್ ಸಿಡಿಸಿ ನಿರ್ಗಮಿಸಿದ್ದಾರೆ. ಇತ್ತ ವೀಕ್ಷಕ ವಿವರಣೆ ನೀಡುತ್ತಿದ್ದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ ಇದೇ ರೀತಿ ವಿಕೆಟ್ ಕೈಚೆಲ್ಲಿ ಡಗೌಟ್‌ಗೆ ಆಗಮಿಸಿದ ಘಟನೆ ನೆನಪಿಸಿದ್ದಾರೆ. ಈ ಮೂಲಕ ಮುಂದಿನ ಪಂದ್ಯದಲ್ಲಿ ಕೊಹ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಲಿದ್ದಾರೆ ಅನ್ನೋ ಸೂಚನೆಯನ್ನು ನೀಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿಯ ಆರಂಭಿಕ ದಿನಗಳನ್ನು ಮೊಹಮ್ಮದ್ ಕೈಫ್ ನೆನಪಿಸಿದ್ದಾರೆ. ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧ ವಿರುದ್ಧ ವಿಕೆಟ್ ಕೈಚೆಲ್ಲಿದ ರೀತಿಯಲ್ಲೇ ಅಂದು ಅನಗತ್ಯ ಹೊಡೆತಕ್ಕೆ ಮುಂದಾಗಿ ಔಟಾಗಿದ್ದರು. ಇದು ಕೊಹ್ಲಿಗೆ ತೀವ್ರ ಸಿಟ್ಟು ತರಿಸಿತ್ತು. ತನ್ನದೇ ತಪ್ಪಿನಿಂದ ವಿಕೆಟ್ ಕೈಚೆಲ್ಲಿದ ಆಕ್ರೋಶವೂ ಮಡುಗಟ್ಟಿತು. ಕೋಪದಿಂದಲೇ ವಿರಾಟ್ ಕೊಹ್ಲಿ ಪೆವಿಲಿಯನ್‌ಗೆ ಆಗಮಿಸಿದರು. ನಾನು ಆರ್‌ಸಿಬಿ ಡಗೌಟ್‌ನಲ್ಲಿ ಕುಳಿತಿದ್ದೆ. ಕೊಹ್ಲಿ ಬಂದ ಹಾಗೇ ಬ್ಯಾಟ್ ಎಸೆದರು. ಪ್ಯಾಡ್, ಗ್ಲೌಸ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಬಳಿ ಬಂದು, ನೋಡುತ್ತಾ ಇರಿ, ಮುಂದಿನ ಪಂದ್ಯದಲ್ಲಿ ಸ್ಕೋರ್ ಮಾಡುತ್ತೇನೆ ಎಂದು ಆಕ್ರೋಶದಿಂದಲೇ ನುಡಿದರು ಎಂದು ಕೈಫ್ ಹಳೇ ಘಟನೆ ನೆನಪಿಸಿದ್ದಾರೆ.
IPL ನಿಂದ ಅತಿಹೆಚ್ಚು ಸಂಪಾದನೆ ಮಾಡಿದ ಟಾಪ್ 5 ಭಾರತೀಯ ಕ್ರಿಕೆಟಿಗರಿವರು..!
ಆಕ್ರೋಶದಿಂದ ಹವು ಕ್ರಿಕೆಟಿಗರು ಹೇಳುತ್ತಾರೆ. ಆದರೆ ಮತ್ತೆ ವೈಫಲ್ಯ ಅನುಭವಿಸಿದಾಗ ಆತ್ಮವಿಶ್ವಾಸವೇ ಕುಗ್ಗುತ್ತದೆ. ಆದರೆ ಮಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ 72 ರನ್ ಸಿಡಿಸಿದ್ದರು. ಇಷ್ಟೇ ಅಲ್ಲ ಆರ್‌ಸಿಬಿ ಗೆಲುವಿನ ರೂವಾರಿಯಾಗಿದ್ದರು. ಅಂದು ಕೊಹ್ಲಿ ಸಾಮಾನ್ಯ ಕ್ರಿಕೆಟಿಗನಲ್ಲ ಅನ್ನೋದು ನನಗೆ ಸ್ಪಷ್ಟವಾಗಿತ್ತು. ಹಳೇಯ ಕಳಪೆ ಇನ್ನಿಂಗ್ಸ್ ಮರೆತು ಕೊಹ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದು ಕ್ರಿಕೆಟಿಗನಿಗೆ ಅತ್ಯವಶ್ಯಕ. ಹಳೇ ಭಾರ ಹೊತ್ತು ಕೊಂಡು ನಡೆಯುವುದಕ್ಕಿಂತ ಆತ್ಮವಿಶ್ವಾಸದಿಂದ ಪ್ರದರ್ಶನ ನೀಡುವುದು ಮುಖ್ಯವಾಗಿದೆ ಎಂದು ಕೈಫ್ ಹೇಳಿದ್ದಾರೆ.
IPL 2023 ರಾಹುಲ್, ಕ್ರುನಾಲ್ ಹೋರಾಟಕ್ಕೆ ಶರಣಾದ ಸನ್‌ರೈಸರ್ಸ್, ಮೊದಲ ಸ್ಥಾನಕ್ಕೇರಿದ ಲಖನೌ!
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಕೊಹ್ಲಿ ಅತ್ಯುತ್ತಮ ಆರಂಭ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಔಟಾಗದೆ 82 ರನ್ ಸಿಡಿಸಿದ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ 50ನೇ ಬಾರಿಗೆ 50ಕ್ಕೂ ಹೆಚ್ಚು ರನ್ ದಾಖಲಿಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಒಟ್ಟಾರೆ 2ನೇ ಹಾಗೂ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾದರು. ಕೊಹ್ಲಿ ಐಪಿಎಲ್‌ನಲ್ಲಿ 45 ಅರ್ಧಶತಕ ಬಾರಿಸಿದ್ದು, 5 ಶತಕ ದಾಖಲಿಸಿದ್ದಾರೆ. ಒಂದೇ ತಂಡದ ವಿರುದ್ಧ 50 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಡೇವಿಡ್ ವಾರ್ನರ್ 60 ಬಾರಿ (56 ಫಿಫ್ಟಿಹಾಗೂ 4 ಶತಕ) 50ಕ್ಕೂ ಹೆಚ್ಚು ಗಳಿಸಿದ್ದು, ಅವರು ಸನ್‌ರೈಸರ್ಸ್, ಡೆಲ್ಲಿ ತಂಡಗಳ ಪರ ಆಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.