IPL 2023 ಸಂಜು, ಶಿಮ್ರೊನ್ ಸಿಕ್ಸರ್‌ಗೆ ಬೆಚ್ಚಿದ ಗುಜರಾತ್, ರಾಜಸ್ಥಾನ ರಾಯಲ್ಸ್‌ಗೆ 3 ವಿಕೆಟ್ ಗೆಲುವು!

By Suvarna NewsFirst Published Apr 16, 2023, 11:12 PM IST
Highlights

ಆರಂಭಿಕ ಹಂತದಲ್ಲಿ ಗುಜರಾತ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಆದರೆ ಸಂಜು ಸ್ಯಾಮ್ಸನ್ ಪಂದ್ಯಗ ಗತಿ ಬದಲಿಸಿದರು. ಸ್ಯಾಮ್ಸನ್ ಔಟಾದ ಬಳಿಕ ಮತ್ತೆ ಗುಜರಾತ್ ಮೇಲುಗೈ ಸಾಧಿಸಿತು. ಆದರೆ ಶಿಮ್ರೊನ್ ಹೆಟ್ಮೆಯರ್ ಲೆಕ್ಕಾಚಾರ ಬದಲಿಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ರಾಜಸ್ಥಾನ ತಂಡಕ್ಕೆ 3 ವಿಕೆಟ್ ಗೆಲುವು ತಂದುಕೊಟ್ಟರು.

ಅಹಮ್ಮದಾಬಾದ್(ಏ.16): ಒಮ್ಮೆ ಗುಜರಾತ್ ಟೈಟಾನ್ಸ್, ಮತ್ತೊಮ್ಮೆ ರಾಜಸ್ಥಾನ ರಾಯಲ್ಸ್..ಹೀಗೆ ಕ್ಷಣಕ್ಷಣಕ್ಕೂ ಪಂದ್ಯದ ಗತಿ ಬದಲಾಗುತ್ತಿತ್ತು. ಸಂಜು ಸ್ಯಾಮ್ಸನ್ ಅಬ್ಬರ ಆರಂಭಗೊಂಡಾ ರಾಯಲ್ಸ್‌ನತ್ತ ಪಂದ್ಯ ವಾಲಿತ್ತು. ಆದರೆ ವಿಕೆಟ್ ಕಬಳಿಸಿದ ಬೆನ್ನಲ್ಲೇ ಪಂದ್ಯ ಗುಜರಾತ್‌ನತ್ತ ಪಂದ್ಯವಾಲತೊಡಗಿತು. ಶಿಮ್ರೊನ್ ಹೆಟ್ಮೆಯರ್ ಸಿಕ್ಸರ್ ಅಬ್ಬರ ಶುರುವಾದಾಗ ಮತ್ತೆ ರಾಯಲ್ಸ್ ಗೆಲುವಿನ ಫೇವರಿಟ್ ಎನಿಸಿಕೊಂಡಿತು. ಇದರ ಜೊತೆಗೆ ಆರ್ ಅಶ್ವಿನ್ ಸಿಕ್ಸರ್ ಕೂಡ ನೆರವಾಯಿತು. ಅಂತಿಮ ಓವರ್‌ನಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿದ ಹೆಟ್ಮೆಯರ್ ಪಂದ್ಯ ಫಿನೀಶ್ ಮಾಡಿದರು. ರಾಜಸ್ಥಾನ 3 ವಿಕೆಟ್ ಗೆಲುವು ಸಾಧಿಸಿತು. 

178 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಆಘಾತ ಎದುರಿಸಿತ್ತು. ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಅಬ್ಬರಿಸಲು ರಾಜಸ್ಥಾನ ಅವಕಾಶ ನೀಡಲಿಲ್ಲ. ಜೈಸ್ವಾಲ್ 1 ರನ್ ಸಿಡಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರೆ, ಇತ್ತ ಮೊಹಮ್ಮದ್ ಶಮಿ ದಾಳಿಗೆ ಬಟ್ಲರ್ ವಿಕೆಟ್ ಎಗರಿಬಿತ್ತು. 4 ರನ್‌ಗೆ ರಾಜಸ್ಥಾನದ ಪ್ರಮುಖ 2 ವಿಕೆಟ್ ಪತನಗೊಂಡಿತು. 

Latest Videos

ದೇವದತ್ ಪಡಿಕ್ಕಲ್ ಹಾಗೂ ಸಂಜು ಸ್ಯಾಮ್ಸನ್ ಜೊತೆಯಾಟದಿಂದ ರಾಜಸ್ಥಾನ ಚೇತರಿಸಿಕೊಂಡಿತು. ಆದರೆ ಪಡಿಕ್ಕಲ್ ಅಬ್ಬರಿಸುವ ಮೊದಲೇ ವಿಕೆಟ್ ಕೈಚೆಲ್ಲಿದರು. 25 ಎಸೆತದಲ್ಲಿ 26 ರನ್  ಸಿಡಿಸಿ ಪಡಿಕ್ಕಲ್ ನಿರ್ಗಮಿಸಿದರು.ಇತ್ತ ನಾಯಕ ಸಂಜು ಸ್ಯಾಮ್ಸನ್ ಸಿಕ್ಸರ್ ಮೂಲಕ ಅಬ್ಬರಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರ. ರಿಯಾನ್ ಪರಾಗ್ ಕೇವಲ 5 ರನ್ ಸಿಡಿಸಿ ಔಟಾದರು.

ಶಿಮ್ರೊನ್ ಹೆಟ್ಮೆಯರ್ ಹಾಗೂ ಸಂಜು ಬ್ಯಾಟಿಂಗ್ ಪಂದ್ಯದ ಗತಿಯನ್ನು ನಿಧಾನವಾಗಿ ಬದಲಿಸಲು ಆರಂಭಿಸಿತು. ಹಾಫ್ ಸೆಂಚುರಿ ಸಿಡಿಸಿದ ಸಂಜು ಸ್ಯಾಮ್ಸನ್, ಗುಜರಾತ್ ತಂಡಕ್ಕೆ ತಲೆನೋವು ಹೆಚ್ಚಿಸಿದರು. ಈ ವೇಳೆ ಸಂಜು ಸ್ಯಾಮ್ಸನ್ 32 ಎಸೆತದಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 60 ರನ್ ಸಿಡಿಸಿ ಔಟಾದರು. ಇತ್ತ ಶಿಮ್ರೊನ್ ಹೆಟ್ಮೆಯರ್ ಹಾಗೂ ಧ್ರುವ್ ಜುರೆಲ್ ಜೊತೆಯಾಟ ರಾಜಸ್ಥಾನದ ಗೆಲುವಿನ ಆಸೆ ಜೀವಂತವಾಗಿರಿಸಿತು.

ಶಿಮ್ರೊನ್ ಹೆಟ್ಮೆಯರ್ ಹೊಡಿ ಬಡಿ ಆಟ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೆರವಾಯಿತು. ಧ್ರುವ ಜುರೆಲ್ ವಿಕೆಟ್ ಪತನ ಮತ್ತೆ ರಾಜಸ್ಥಾನ ತಂಡದ ಮೇಲೆ ಒತ್ತಡ ಹೆಚ್ಚಿಸಿತು. ಆದರೆ ಆರ್ ಅಶ್ವಿನ್ ಕ್ರೀಸ್‌ಗೆ ಬಂದ ಬೆನ್ನಲ್ಲೇ ಸಿಕ್ಸರ್ ಸಿಡಿಸಿ ರಾಜಸ್ಥಾನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದರು. ಮರು ಎಸೆತದಲ್ಲಿ ಅಶ್ವಿನ್ ವಿಕೆಟ್ ಪತನಗೊಂಡಿತು. ಅಂತಿಮ 6 ಎಸೆತದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿಗೆ 7 ರನ್ ಅವಶ್ಯಕತೆ ಇತ್ತು. 

ಮೊದಲ ಎಸೆತದಲ್ಲಿ 2 ರನ್ ಸಿಡಿಸಿದ ಹೆಟ್ಮೆಯರ್ 25 ಎಸೆತದಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಅಂತಿಮ 5 ಎಸೆತದಲ್ಲಿ 5 ರನ್ ಅವಶ್ಯಕತೆ ಇತ್ತು. ಹೆಟ್ಮೆಯರ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ರಾಜಸ್ಥಾನ ರಾಯಲ್ಸ್ ಇನ್ನೂ 4 ಎಸೆತ ಇರುವಂತೆ 3 ವಿಕೆಟ್ ಗೆಲುವು ದಾಖಲಿಸಿತು. ಈ ಮೂಲಕ ಸಂಭ್ರಮ ಆಚರಿಸಿತು. 

click me!