IPL 2023: ಇಂದು ರಾಯಲ್ ಚಾಲೆಂಜರ್ಸ್‌ ಬೆಂಗ​ಳೂ​ರು - ಚೆನ್ನೈ ಸೂಪರ್ ಕಿಂಗ್ಸ್‌ ಮೆಗಾ ಫೈಟ್‌

Published : Apr 17, 2023, 09:53 AM IST
IPL 2023: ಇಂದು ರಾಯಲ್ ಚಾಲೆಂಜರ್ಸ್‌ ಬೆಂಗ​ಳೂ​ರು - ಚೆನ್ನೈ ಸೂಪರ್ ಕಿಂಗ್ಸ್‌ ಮೆಗಾ ಫೈಟ್‌

ಸಾರಾಂಶ

ಚಿನ್ನ​ಸ್ವಾ​ಮಿ​ಯಲ್ಲಿ ಮತ್ತೊಂದು ದೊಡ್ಡ ಗೆಲು​ವಿನ ನಿರೀ​ಕ್ಷೆ​ಯಲ್ಲಿ ಆರ್‌​ಸಿಬಿ ಡೆಲ್ಲಿ ವಿರುದ್ಧದ ಗೆಲುವಿನಿಂದ ವೃದ್ಧಿಸಿದ ಆರ್‌ಸಿಬಿ ಆತ್ಮವಿಶ್ವಾಸ ಚೆನ್ನೈಗೆ ಮತ್ತೆ ಗಾಯಾಳುಗಳ ಸಮಸ್ಯೆ: ಸ್ಟೋಕ್ಸ್‌ ಅನು​ಮಾನ ಮಂಡಿ ನೋವಿನಿಂದ ಬಳಲುತ್ತಿರುವ ಧೋನಿ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ

ಬೆಂಗಳೂರು(ಏ.17): ಐಪಿ​ಎಲ್‌ ಇತಿ​ಹಾ​ಸ​ದಲ್ಲೇ ಸಾಂಪ್ರ​ದಾ​ಯಿಕ ಬದ್ಧ ಎದು​ರಾ​ಳಿ​ಗಳು ಎನಿ​ಸಿ​ಕೊಂಡಿ​ರುವ ಆರ್‌​ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್‌್ಸ ನಡು​ವಿನ ಮೆಗಾ ಫೈಟ್‌ಗೆ ವೇದಿಕೆ ಸಿದ್ಧ​ವಾ​ಗಿದ್ದು, ಬಹು​ನಿ​ರೀ​ಕ್ಷಿತ ಸೆಣ​ಸಾ​ಟಕ್ಕೆ ಸೋಮ​ವಾರ ನಗ​ರದ ಚಿನ್ನ​ಸ್ವಾಮಿ ಕ್ರೀಡಾಂಗಣ ಸಾಕ್ಷಿ​ಯಾಗ​ಲಿದೆ. 2 ದಿನದ ಹಿಂದಷ್ಟೇ ಡೆಲ್ಲಿ ಕ್ಯಾಪಿ​ಟ​ಲ್ಸ್‌ ಅನ್ನು ಬಗ್ಗು​ಬ​ಡಿ​ದಿದ್ದ ಆರ್‌​ಸಿಬಿ ತವ​ರಿ​ನ ಅಂಗ​ಳ​ದಲ್ಲಿ ಮತ್ತೊಂದು ಜಯದ ನಿರೀ​ಕ್ಷೆ​ಯ​ಲ್ಲಿ​ದ್ದರೆ, ಗಾಯಾಳುಗಳ ಸಮಸ್ಯೆಯ ಹೊರತಾಗಿಯೂ ಗೆಲುವಿನ ದಾರಿ ಹುಡುಕಲು ಚೆನ್ನೈ ಎದುರು ನೋಡುತ್ತಿದೆ.

ಚೆನ್ನೈ ತನ್ನ ಮುಂದಿನ 6 ಪಂದ್ಯಗಳ ಪೈಕಿ 4 ಪಂದ್ಯಗಳನ್ನು ತವರಿನಾಚೆ ಆಡಲಿದ್ದು, ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ವೇಗದ ಬೌಲರ್‌ಗಳನ್ನು ಹೊಂದಿಸಲು ಸಾಹಸ ಮಾಡಬೇಕಿದೆ. ಜೊತೆಗೆ ನಾಯಕ ಎಂ.ಎಸ್‌.ಧೋನಿಯೂ ಮಂಡಿ ನೋವಿನಿಂದ ಬಳಲುತ್ತಿರುವ ಕಾರಣ ಚೆನ್ನೈ ಟೂರ್ನಿಯ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಮತ್ತೊಂದೆಡೆ ಆರ್‌ಸಿಬಿ ಕೂಡ ಗಾಯಾಳುಗಳ ಸಮಸ್ಯೆಗೆ ಒಳಗಾದರೂ, ತಂಡ ಸಂಯೋಜನೆಗೆ ತೊಡಕಾಗದಂತೆ ಎಚ್ಚರಿಕೆ ವಹಿಸಿದೆ. ಪ್ರಮುಖವಾಗಿ ಬೌಲಿಂಗ್‌ ವಿಭಾಗದಲ್ಲಿ ಮೊಹಮದ್‌ ಸಿರಾಜ್‌ ಪ್ರಚಂಡ ಲಯದಲ್ಲಿದ್ದು, ಸ್ಥಳೀಯ ಆಟಗಾರ ವೈಶಾಖ್‌ ವಿಜಯ್‌ಕುಮಾರ್‌ ಆಡಿದ ಮೊದಲ ಪಂದ್ಯದಲ್ಲೇ ಭರವಸೆ ಮೂಡಿಸಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ಚಚ್ಚಿಸಿಕೊಂಡಿದ್ದ ಹರ್ಷಲ್‌ ಪಟೇಲ್‌ ಲಯ ಕಂಡುಕೊಂಡಂತೆ ಕಾಣುತ್ತಿದೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಈ ವರೆಗೂ ಕೇವಲ ಒಂದು ಓವರ್‌ ಬೌಲ್‌ ಮಾಡಿದ್ದರೂ, ಚೆನ್ನೈನ ಬ್ಯಾಟಿಂಗ್‌ ಪಡೆ ಹೆಚ್ಚು ಎಡಗೈ ಆಟಗಾರರಿಂದ ಕೂಡಿರುವ ಕಾರಣ ಈ ಪಂದ್ಯದಲ್ಲಿ ಹೆಚ್ಚು ಬೌಲಿಂಗ್‌ ಅವಕಾಶ ಸಿಗಬಹುದು.

IPL 2023 ಸಂಜು, ಶಿಮ್ರೊನ್ ಸಿಕ್ಸರ್‌ಗೆ ಬೆಚ್ಚಿದ ಗುಜರಾತ್, ರಾಜಸ್ಥಾನ ರಾಯಲ್ಸ್‌ಗೆ 3 ವಿಕೆಟ್ ಗೆಲುವು!

ಬ್ಯಾಟಿಂಗ್‌ ವಿಭಾಗದಲ್ಲಿ ಆರ್‌ಸಿಬಿಯ ಆರಂಭಿಕರಾದ ವಿರಾಟ್‌ ಕೊಹ್ಲಿ ಹಾಗೂ ಫಾಫ್‌ ಡು ಪ್ಲೆಸಿ ಅದ್ಭುತ ಲಯದಲ್ಲಿದ್ದಾರೆ. ಮ್ಯಾಕ್ಸ್‌ವೆಲ್‌ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆದರೆ ಈ ಮೂವರನ್ನು ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಇದು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದಂತೆ ಕಾಣುತ್ತಿದೆ.

ಇನ್ನು ದೀಪಕ್‌ ಚಹರ್‌, ಸಿಸಾಂಡ ಮಗಾಲ, ಸಿಮರ್‌ಜೀತ್‌ ಸಿಂಗ್‌ ಹಾಗೂ ಬೆನ್‌ ಸ್ಟೋಕ್ಸ್‌ ಗಾಯಗೊಂಡಿದ್ದು, ಮತೀಶ ಪತಿರಣ ಈಗಷ್ಟೇ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಆದರೂ ಕಳೆದ ಬುಧವಾರ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಪತಿರಣ ಅವರನ್ನು ಕಣಕ್ಕಿಳಿಸಿದ್ದ ಚೆನ್ನೈ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಅವರನ್ನು ಆಡಿಸಬಹುದು. ಇನ್ನು ಮ್ಯಾಕ್ಸ್‌ವೆಲ್‌ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಜಡೇಜಾ, ಸ್ಪಿನ್ನರ್‌ ಮಹೀಶ್‌ ತೀಕ್ಷಣ ಮೇಲೂ ಸಿಎಸ್‌ಕೆ ಹೆಚ್ಚಿನ ನಿರೀಕ್ಷೆ ಇರಿಸಲಿದೆ.

ಒಟ್ಟು ಮುಖಾಮುಖಿ: 30

ಆರ್‌​ಸಿ​ಬಿ: 10

ಚೆನ್ನೈ: 19

ಫಲಿ​ತಾಂಶ​ವಿ​ಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಆರ್‌​ಸಿ​ಬಿ: ಫಾಫ್ ಡು ಪ್ಲೆಸಿಸ್​(​ನಾ​ಯ​ಕ), ವಿರಾಟ್‌ ಕೊಹ್ಲಿ, ಮಹಿಪಾಲ್ ಲೊಮ್ರೊರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ದಿನೇಶ್ ಕಾರ್ತಿಕ್‌, ಶಾಬಾಜ್‌ ಅಹಮ್ಮದ್, ವನಿಂದು ಹಸ​ರಂಗ, ವೇಯ್ನ್‌ ಪಾರ್ನೆಲ್‌, ಹರ್ಷಲ್‌ ಪಟೇಲ್, ಮೊಹಮ್ಮದ್ ಸಿರಾಜ್‌, ವೈಶಾಕ್ ವಿಜಯ್‌ಕುಮಾರ್.

ಚೆನ್ನೈ: ಋತುರಾಜ್‌ ಗಾಯ​ಕ್ವಾಡ್‌, ಡೆವೊನ್‌ ಕಾನ್‌ವೇ, ಅಜಿಂಕ್ಯ ರಹಾನೆ, ಮೋಯಿನ್‌ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ಎಂ ಎಸ್ ಧೋನಿ(​ನಾ​ಯ​ಕ),ಪತಿರಣ, ಮಹೀಶ್ ತೀಕ್ಷಣ, ತುಷಾರ್ ದೇಶ​ಪಾಂಡೆ, ಆಕಾ​ಶ್‌ ಸಿಂಗ್‌.

ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋ​ರ್ಟ್‌

ಚಿನ್ನ​ಸ್ವಾಮಿ ಕ್ರೀಡಾಂಗ​ಣದ ಬ್ಯಾಟಿಂಗ್‌ ಸ್ನೇಹಿ ಪಿಚ್‌ ದೊಡ್ಡ ಮೊತ್ತದ ಪಂದ್ಯ​ಗ​ಳಿಗೆ ಹೆಸ​ರು​ವಾಸಿ. ವೇಗಿ​ಗ​ಳಿಗೂ ನೆರವು ನೀಡಲಿದೆ. ಚೇಸಿಂಗ್‌ ಸುಲ​ಭ​ವಾ​ಗುವ ಕಾರಣ ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ದು​ಕೊ​ಳ್ಳು​ವುದು ಬಹು​ತೇಕ ಖಚಿತ.

ಟಿಕೆಟ್‌ ಇಲ್ಲ​ದಿ​ದ್ದ​ರೂ ಅಭಿ​ಮಾ​ನಿ​ಗಳ ಕ್ಯೂ!

ಆರ್‌​ಸಿ​ಬಿ-ಚೆನ್ನೈ ಪಂದ್ಯದ ಟಿಕೆಟ್‌ ಈಗಾ​ಗಲೇ ಸೋಲ್ಡ್‌ಔಟ್‌ ಆಗಿದ್ದರೂ ಭಾನುವಾರವೂ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಟಿಕೆಟ್‌ಗಾಗಿ ನೂರಾರು ಮಂದಿ ಅಭಿ​ಮಾ​ನಿ​ಗಳು ಸೇರಿ​ದ್ದರು. ಅಧಿ​ಕಾ​ರಿ​ಗ​ಳು ಟಿಕೆಟ್‌ ಈಗಾ​ಗಲೇ ಮುಗಿ​ದಿದೆ ಎಂದು ಹೇಳಿ​ದರೂ ಸ್ಥಳ​ದಿಂದ ತೆರ​ಳ​ಲಿಲ್ಲ. ಗೇಟ್‌ ಬಳಿ ನೆರೆ​ದಿದ್ದ ಪ್ರೇಕ್ಷ​ಕ​ರನ್ನು ಅಲ್ಲಿಂದ ಹೊರ​ಕ​ಳು​ಹಿ​ಸ​ಲು ಪೊಲೀ​ಸರು ಹರ​ಸಾ​ಹಸ ಪಡ​ಬೇ​ಕಾ​ಯಿ​ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana