
ಗುವ್ಹಾಟಿ(ಏ.05): ಗೆಲುವಿನೊಂದಿಗೆ ಐಪಿಎಲ್ 2023 ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಇದೀಗ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಗೆಲುವಿನ ಕಾಂಬಿನೇಷ್ ಕಣಕ್ಕಿಳಿಸಿದೆ. ಇಂದಿನ ಪಂದ್ಯಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ
ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ರಿಯಾನ ಪರಾಗ್, ಶಿಮ್ರೋನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೋಲ್ಟ್, ಕೆಎಂ ಆಸೀಫ್, ಯುಜುವೇಂದ್ರ ಚಹಾಲ್
ಡೆಲ್ಲಿ-ಗುಜರಾತ್ ನಡುವಿನ ಪಂದ್ಯಕ್ಕೆ ರಿಷಬ್ ಪಂತ್ ಪ್ರತ್ಯಕ್ಷ, ವಾಕ್ ಸ್ಟಿಕ್ ಹಿಡಿದು ಕ್ರೀಡಾಂಗಣಕ್ಕೆ ಆಗಮನ!
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಶಿಖರ್ ಧವನ್(ನಾಯಕ), ಪ್ರಭಾಸಿಮ್ರನ್ ಸಿಂಗ್, ಭಾನುಕಾ ರಾಜಪಕ್ಸ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ ಕುರನ್, ಸಿಕಂದರ್ ರಾಜಾ, ನತನ್ ಎಲ್ಲಿಸ್, ಹರ್ಪ್ರೀತ್ ಸಿಂಗ್ ಬ್ರಾರ್, ರಾಹುಲ್ ಚಹಾರ್, ಅರ್ಶದೀಪ್ ಸಿಂಗ್
ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು ದಾಖಲಿಸಿತ್ತು. ಬ್ಯಾಟರ್ಗಳ ಸ್ಫೋಟಕ ಆಟ, ಯಜುವೇಂದ್ರ ಚಹಲ್ ಸೇರಿದಂತೆ ಬೌಲರ್ಗಳ ಮಾರಕ ದಾಳಿ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ಸ್ 72 ರನ್ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಬಟ್ಲರ್, ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಅಬ್ಬರದ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 5 ವಿಕೆಟ್ಗೆ 203 ರನ್ ಕಲೆಹಾಕಿತು. ಆದರೆ ಯಾವುದೇ ಹೋರಾಟ ಪ್ರದರ್ಶಿಸದ ಹೈದ್ರಾಬಾದ್ 20 ಓವರಲ್ಲಿ 8 ವಿಕೆಟ್ಗೆ 131 ರನ್ ಗಳಿಸಿ ಸೋಲೊಪ್ಪಿಕೊಂಡಿತು.
IPL 2023 ಟೂರ್ನಿಗೆ ಕೋವಿಡ್ ಭೀತಿ, ಕಮೆಂಟೇಟರ್ ಆಕಾಶ್ ಚೋಪ್ರಾಗೆ ಕೊರೋನಾ ಪಾಸಿಟಿವ್!
ಮತ್ತೊಂದೆಡೆ ಶಿಖರ್ ಧವನ್ ನಾಯಕತ್ವದಲ್ಲಿ ಆಡುತ್ತಿರುವ ಪಂಜಾಬ್‌ಗೆ ಅನುಭವಿಗಳ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚು. ಜಾನಿ ಬೇರ್‌ಸ್ಟೋವ್ ಅನುಪಸ್ಥಿತಿ ತಂಡಕ್ಕೆ ಕಾಡಲಿದ್ದು, ಲಿವಿಂಗ್ಸ್ಟೋನ್ ಕೂಡಾ ಆಡಲು ಫಿಟ್ ಆಗಿಲ್ಲ. ಹೀಗಾಗಿ ಪ್ರಭ್ಸಿಮ್ರನ್ ಸಿಂಗ್, ಜಿತೇಶ್ ಶರ್ಮಾ, ಶಾರುಕ್ ಖಾನ್‌ರಂತಹ ದೇಸಿ ಆಟಗಾರರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಭನುಕಾ ರಾಜಪಕ್ಸೆ, ಸಿಕಂದರ್ ರಾಜಾ ಅವರ ಪ್ರದರ್ಶನ ಪಂಜಾಬ್‌ಗೆ ನಿರ್ಣಾಯಕ ಎನಿಸಿದ್ದು, ಸ್ಯಾಮ್ ಕರ್ರನ್‌ರ ಆಟ ತಂಡದ ಸೋಲು-ಗೆಲುವನ್ನು ನಿರ್ಧರಿಸಬಲ್ಲದು. ದ.ಆಫ್ರಿಕಾದ ತಾರಾ ವೇಗಿ ಕಗಿಸೋ ರಬಾಡ ಸೇರ್ಪಡೆಯಿಂದ ಬೌಲಿಂಗ್ ವಿಭಾಕ್ಕೆ ಮತ್ತಷ್ಟುಬಲ ಬಂದಿದ್ದು, ಅಶ್ರ್ದೀಪ್ ಸಿಂಗ್ ಹೆಗಲ ಮೇಲಿರುವ ಹೊರೆ ಕಡಿಮೆಯಾಗಬಹುದು. ಇದೇ ವೇಳೆ ತಂಡದಲ್ಲಿರುವ ಕರ್ನಾಟಕದ ವೇಗಿ ವಿದ್ವತ್ ಕಾವೇರಪ್ಪ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.