IPL 2023: ಪಂಜಾಬ್‌ ಮಣಿಸಿ ಮುಂಬೈ ಇಂಡಿಯನ್ಸ್‌ಗೆ 4ನೇ ಗೆಲು​ವಿ​ನ ಗುರಿ

Published : Apr 22, 2023, 12:43 PM IST
IPL 2023: ಪಂಜಾಬ್‌ ಮಣಿಸಿ ಮುಂಬೈ ಇಂಡಿಯನ್ಸ್‌ಗೆ 4ನೇ ಗೆಲು​ವಿ​ನ ಗುರಿ

ಸಾರಾಂಶ

ಮುಂಬೈನಲ್ಲಿ ಪಂಜಾಬ್ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ ಮುಖಾಮುಖಿ ಕಳೆದ 4ರಲ್ಲಿ 3 ಸೋತಿ​ರುವ ಪಂಜಾಬ್ ಕಿಂಗ್‌್ಸ ಸತತ 4ನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ ಪಡೆ

ಮುಂಬೈ(ಏ.22): ಮುಂಬೈ ಇಂಡಿ​ಯನ್ಸ್‌ ತನ್ನ ಎಂದಿನ ಚಾಂಪಿ​ಯನ್‌ ಆಟ​ವಾ​ಡಿ​ದರೆ ಉಳಿದ ತಂಡ​ಗಳಿಗೆ ಉಳಿ​ಗಾ​ಲ​ವಿಲ್ಲ ಎಂಬುದು ಸುಳ್ಳಲ್ಲ. ಸತತ 2 ಪಂದ್ಯ​ಗಳ ಸೋಲಿನ ಬಳಿಕ ಕಮ್‌​ಬ್ಯಾಕ್‌ ಮಾಡಿ 16ನೇ ಆವೃತ್ತಿ ಐಪಿ​ಎ​ಲ್‌​ನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿ​ಸಿ​ರುವ ಮುಂಬೈ ಇಂಡಿಯನ್ಸ್‌ ಜಯದ ಓಟ ಮುಂದು​ವ​ರಿ​ಸುವ ನಿರೀ​ಕ್ಷೆ​ಯ​ಲ್ಲಿದ್ದು, ಶನಿ​ವಾರ ಪಂಜಾಬ್‌ ಕಿಂಗ್‌್ಸ ವಿರುದ್ಧ ಸೆಣ​ಸಾ​ಡ​ಲಿದೆ. ಅತ್ತ ಶುಭಾ​ರಂಭ ಮಾಡಿ​ದ ಹೊರತಾಗಿಯೂ ಕಳೆದ 4 ಪಂದ್ಯ​ಗ​ಳಲ್ಲಿ ಮೂರ​ರ​ಲ್ಲಿ ಸೋತಿ​ರುವ ಪಂಜಾಬ್‌ ಗೆಲು​ವಿನ ಲಯಕ್ಕೆ ಮರ​ಳಲು ಪರ​ದಾ​ಡು​ತ್ತಿದೆ.

ಮುಂಬೈ ಮೊದ​ಲೆ​ರಡು ಪಂದ್ಯ​ದಲ್ಲಿ ಹೀನಾಯ ಪ್ರದ​ರ್ಶನ ನೀಡಿ​ದ್ದರೂ ಈಗ ಫೀನಿಕ್ಸ್‌ನಂತೆ ಎದ್ದು ನಿಂತಿದೆ. ನಾಯಕ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿದ್ದು, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕ್ಯಾಮರೋನ್ ಗ್ರೀನ್‌, ತಿಲಕ್‌ ವರ್ಮಾ ಹಾಗೂ ಟಿಮ್ ಡೇವಿಡ್ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಸ್ಪೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.

ಮತ್ತೊಂದೆಡೆ ಶಿಖರ್ ಧವನ್‌ ಅನು​ಪ​ಸ್ಥಿ​ತಿ​ಯಲ್ಲಿ ಸೊರ​ಗಿ​ದಂತೆ ಕಾಣು​ತ್ತಿ​ರುವ ಪಂಜಾಬ್‌ ಕಿಂಗ್ಸ್‌ ಸೂಕ್ತ ಆಡುವ ಹನ್ನೊಂದರ ಬಳಗ ಹೊಂದಿಸಲು ಪರ​ದಾ​ಡು​ತ್ತಿದೆ. ಕಳೆದ ನಾಲ್ಕೂ ಪಂದ್ಯ​ಗ​ಳಲ್ಲಿ ತಂಡ ತಲಾ 8ಕ್ಕಿಂತ ಹೆಚ್ಚು ವಿಕೆಟ್‌ ಕಳೆ​ದು​ಕೊಂಡಿದ್ದು ಬ್ಯಾಟ​ರ್‌​ಗಳ ವೈಫ​ಲ್ಯಕ್ಕೆ ಸಾಕ್ಷಿ. ತಂಡದ ಆಯ್ಕೆಯಲ್ಲೂ ತಪ್ಪುಗಳನ್ನು ಮಾಡುತ್ತಿದ್ದು, ಕಿಂಗ್‌್ಸ ಒತ್ತಡಕ್ಕೆ ಸಿಲುಕಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

IPL 2023: ಅಗ್ರಸ್ಥಾನದ ಮೇಲೆ ಲಖನೌ ಸೂಪರ್‌ ಜೈಂಟ್ಸ್‌ ಕಣ್ಣು..!

ಮುಂಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಕಳೆದ 14 ಪಂದ್ಯಗಳ ಪೈಕಿ 11 ಪಂದ್ಯಗಳಲ್ಲಿ ಚೇಸ್‌ ಮಾಡಿದ ತಂಡವು ಗೆಲುವಿನ ನಗೆ ಬೀರಿದೆ. ಇನ್ನು ಕಳೆದ 5 ಪಂದ್ಯಗಳಲ್ಲಿ ಕೂಡಾ ಸತತವಾಗಿ ಚೇಸ್‌ ಮಾಡಿದ ತಂಡವು ಗೆಲುವಿನ ನಗೆ ಬೀರಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಮುಖಾಮುಖಿ: 29

ಮುಂಬೈ: 15

ಪಂಜಾ​ಬ್‌: 14

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ರೋಹಿತ್‌ ಶರ್ಮಾ(ನಾ​ಯ​ಕ​), ಇಶಾನ್‌ ಕಿಶನ್, ಕ್ಯಾಮರೋನ್ ಗ್ರೀನ್‌, ಸೂರ‍್ಯಕುಮಾರ್‌​ ಯಾದವ್, ತಿಲಕ್‌ ವರ್ಮಾ, ಟಿಮ್‌ ಡೇವಿಡ್‌, ರಿಲೇ ಮೆರಿ​ಡಿ​ತ್‌, ಹೃತ್ತಿಕ್ ಶೊಕೀನ್‌, ಜೇಸನ್ ಬೆಹ್ರ​ನ್‌​ಡ್ರಾ​ಫ್‌, ಪೀಯೂಸ್ ಚಾವ್ಲಾ, ಅರ್ಜು​ನ್‌ ತೆಂಡುಲ್ಕರ್.

ಪಂಜಾಬ್‌: ಅಥರ್ವ ಟೈಡೆ, ಹಪ್ರೀರ್ತ್‌ ಭಾಟಿ​ಯಾ, ಲಿಯಾಮ್ ಲಿವಿಂಗ್‌​ಸ್ಟೋನ್‌, ಸಿಕಂದರ್ ರಾಜಾ, ಸ್ಯಾಮ್ ಕರ್ರನ್‌(ನಾ​ಯ​ಕ​), ಜಿತೇ​ಶ್‌ ಶರ್ಮಾ, ಶಾರೂಖ್‌ ಖಾನ್, ಹರ್ಪ್ರೀತ್ ಬ್ರಾರ್‌, ರಾಹುಲ್‌ ಚಹರ್, ಅಶ್‌ರ್‍ದೀಪ್‌ ಸಿಂಗ್, ಕಗಿಸೋ ರಬಾ​ಡ

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋ​ರ್ಟ್‌

ವಾಂಖೇಡೆ ಕ್ರೀಡಾಂಗ​ಣದ ಪಿಚ್‌ ಬ್ಯಾಟರ್‌​ಗ​ಳಿಗೆ ಹೆಚ್ಚಿನ ನೆರವು ನೀಡ​ಲಿದ್ದು, ದೊಡ್ಡ ಮೊತ್ತ ದಾಖ​ಲಾ​ಗ​ಬ​ಹುದು. ಕಳೆ​ದೆ​ರಡು ಪಂದ್ಯ​ದಲ್ಲೂ ಚೇಸಿಂಗ್‌ ಮಾಡಿದ ತಂಡ ಗೆದ್ದಿದೆ. ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ