ಐಪಿಎಲ್ ಮಿನಿ ಹರಾಜು ಆರಂಭಗೊಂಡಿದೆ. ಕೊಚ್ಚಿಯಲ್ಲಿ ನಡೆಯುತ್ತಿರುವ ಮಿನಿ ಹರಾಜಿನಲ್ಲಿ 405 ಆಟಗಾರರು ಬುಡ್ಡಿಂಗ್ ಪೂಲ್‌ನಲ್ಲಿದ್ದಾರೆ. ಮಿನಿ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಸೇರಿ ಗರಿಷ್ಠ 87 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಮಯಾಂಕ್ ಅಗರ್‌ವಾಲ್, ಬೆನ್ ಸ್ಟೋಕ್ಸ್, ಕ್ಯಾಮರೋನ್ ಗ್ರೀನ್, ಸ್ಯಾಮ್ ಕರ್ರನ್ ಹಾಗೂ ಹ್ಯಾರಿ ಬ್ರೂಕ್ ಅವರಂತಹ ತಾರಾ ಟಿ20 ಸ್ಪೆಷಲಿಸ್ಟ್ ಆಟಗಾರರು ಈ ಬಾರಿಯ ಹರಾಜಿನಲ್ಲಿ ಲಭ್ಯವಿರಲಿದ್ದು, ಯಾವ ಆಟಗಾರರು ಯಾವ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

10:21 PM (IST) Dec 23
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿಯಾಟಗಾರನಾಗಿ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ್ರನ್ ಹೊರಹೊಮ್ಮಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಹಾಗೂ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದ ಸ್ಯಾಮ್ ಕರ್ರನ್ ಅವರನ್ನು 18.50 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಪಂಜಾಬ್ ಕಿಂಗ್ಸ್ ತಂಡವು ಯಶಸ್ವಿಯಾಗಿದೆ.
10:21 PM (IST) Dec 23
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡವೆಂಬ ಹಿರಿಮೆಗೆ ಪಾತ್ರವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯ ಮಿನಿ ಹರಾಜಿನಲ್ಲಿ ಸಾಕಷ್ಟು ಅಳೆದು ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಇದು ಕಡೆಯ ಐಪಿಎಲ್ ಟೂರ್ನಿಯಾಗುವ ಸಾಧ್ಯತೆಯಿದ್ದು, ಸಿಎಸ್‌ಕೆ ತಂಡವು ಭವಿಷ್ಯದ ನಾಯಕತ್ವದ ಬಗ್ಗೆ ಗಮನ ಹರಿಸುವಲ್ಲಿ ಯಶಸ್ವಿಯಾಗಿದೆ.
09:25 PM (IST) Dec 23
ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಹರಾಜು ಮುಕ್ತಾಯಗೊಂಡಿದೆ. 8.75 ಕೋಟಿ ರೂಪಾಯಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲಿ ಬೇಡಿಕೆ ಆಟಗಾರರ ಖರೀದಿಗೆ ಮನಸ್ಸು ಮಾಡಲಿಲ್ಲ. ಇದಕ್ಕೆ ಹಣದ ಅಭಾವ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಅಂತಿಮ ಹಂತದಲ್ಲಿ ಮೂಲ ಬೆಲೆಯ ಅಸುಪಾಸಿನಲ್ಲಿ ಆಟಗಾರರ ಖರೀದಿಸಿದ ಕೋಟಾ ಭರ್ತಿ ಮಾಡಿಕೊಂಡಿದೆ.
09:20 PM (IST) Dec 23
ಈ ಬಾರಿಯ ಐಪಿಎಲ್ ಮಿನಿ ಹರಾಜು ಭಾರಿ ಸಂಚಲನ ಸೃಷ್ಟಿಸಿದೆ. ಈ ಹಿಂದಿನ ಎಲ್ಲಾ ಹರಾಜಿನ ದಾಖಲೆಗಳು ಪುಡಿ ಪುಡಿಯಾಗಿದೆ. ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತದ ಬಿಡ್ಡಿಂಗ್ ಇದೇ ಮಿನಿ ಹರಾಜಿನಲ್ಲಿ ನಡೆದಿದೆ. ಎರಡನೇ ಗರಿಷ್ಠ ಮೊತ್ತದ ದಾಖಲೆಯೂ ಇದೇ ಹರಾಜಿನಲ್ಲಿ ಸೃಷ್ಟಿಯಾಗಿದೆ. ಈ ಮೂಲಕ ಈ ಬಾರಿಯ ಮಿನಿ ಹರಾಜು ಹಲವು ಕಾರಣಗಳಿಂದ ಸಂಚಲನ ಸೃಷ್ಟಿಸಿದೆ.
ಪೂರ್ತಿ ಡಿಟೇಲ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ: ಸ್ಯಾಮ್ To ಗ್ರೀನ್, ಹರಾಜು ಮಿನಿಯಾದ್ರೂ ಧಾರಾಳವಾಗಿ ಕೊಟ್ರು ಮನಿ!
08:43 PM (IST) Dec 23
ಒಂದೂವರೆ ಕೋಟಿ ರುಪಾಯಿಗೆ ಶಕೀಬ್ ಅಲ್ ಹಸನ್, ಕೋಲ್ಕತಾ ನೈಟ್ ರೈಡರ್ಸ್ ಪಾಲು
08:42 PM (IST) Dec 23
ಮೂಲ ಬೆಲೆ ಒಂದು ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲಾದ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್
08:24 PM (IST) Dec 23
ಮೂಲ ಬೆಲೆ 50 ಲಕ್ಷ ರುಪಾಯಿಗೆ ಲಖನೌ ಸೂಪರ್ ಜೈಂಟ್ಸ್ ಪಾಲಾದ ಆಫ್ಘಾನಿಸ್ತಾನದ ವೇಗಿ ನವೀನ್ ಉಲ್ ಹಕ್
08:21 PM (IST) Dec 23
50 ಲಕ್ಷ ರುಪಾಯಿ ಮೂಲ ಬೆಲೆಗೆ ಮನ್ದೀಪ್ ಸಿಂಗ್ ಕೋಲ್ಕತಾ ನೈಟ್ ರೈಡರ್ಸ್ ಪಾಲು
08:20 PM (IST) Dec 23
20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಮುರುಗನ್ ಅಶ್ವಿನ್ ಮೂಲ ಬೆಲೆಗೆ ರಾಜಸ್ಥಾನ ರಾಯಲ್ಸ್ ಪಾಲಿಗೆ
08:16 PM (IST) Dec 23
ಮೊದಲ ಸುತ್ತಿನಲ್ಲಿ ಅನ್‌ಸೋಲ್ಡ್ ಆಗಿದ್ದ ದಕ್ಷಿಣ ಆಫ್ರಿಕಾದ ಬ್ಯಾಟರ್ ರೈಲಿ ರೂಸೌ ಖರೀದಿಸಲು ಡೆಲ್ಲಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಪೈಪೋಟಿ, 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ರಿಲೇ ರೂಸೌ 4.60 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲು
07:39 PM (IST) Dec 23
ಆಲ್ರೌಂಡರ್ ಸೋನು ಯಾದವ್ ಅವರನ್ನು 20 ಲಕ್ಷ ರುಪಾಯಿ ನೀಡಿ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
07:35 PM (IST) Dec 23
20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಅವಿನಾಶ್ ಸಿಂಗ್ ಅವರನ್ನು 60 ಲಕ್ಷ ರುಪಾಯಿ ನೀಡಿ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
07:32 PM (IST) Dec 23
ಮೂಲ ಬೆಲೆ 1 ಕೋಟಿ ರುಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ತೆಕ್ಕೆಗೆ ಜಾರಿದ ಡೇವಿಡ್ ವೀಸಾ
07:31 PM (IST) Dec 23
20 ಲಕ್ಷ ರುಪಾಯಿ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಪಾಲಾದ ಆಲ್ರೌಂಡರ್ ಶಮ್ಸ್ ಮುಲಾನಿ
07:28 PM (IST) Dec 23
50 ಲಕ್ಷ ರುಪಾಯಿ ಮೂಲ ಬೆಲೆಗೆ ಮೋಹಿತ್ ಶರ್ಮಾ ಗುಜರಾತ್ ಟೈಟಾನ್ಸ್ ಪಾಲು
07:26 PM (IST) Dec 23
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಐರ್ಲೆಂಡ್‌ನ ವೇಗಿ ಜೋಶ್ ಲಿಟ್ಲ್ ಅವರನ್ನು 4.40 ಕೋಟಿ ರುಪಾಯಿ ನೀಡಿ ತನ್ನ ಖಾತೆಗೆ ಸೆಳೆದುಕೊಂಡ ಗುಜರಾತ್ ಟೈಟಾನ್ಸ್
07:20 PM (IST) Dec 23
20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ರಾಜನ್ ಕುಮಾರ್ ಅವರನ್ನು ₹70ಲಕ್ಷಕ್ಕೆ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
07:18 PM (IST) Dec 23
ಕರ್ನಾಟಕ ಮೂಲದ ವೇಗಿ ವಿದ್ವತ್ ಕಾವೇರಪ್ಪ 20 ಲಕ್ಷ ರುಪಾಯಿಗೆ ಪಂಜಾಬ್ ಕಿಂಗ್ಸ್ ಪಾಲು
07:18 PM (IST) Dec 23
20 ಲಕ್ಷ ರುಪಾಯಿ ಮೂಲ ಬೆಲೆಗೆ ವಿಷ್ಣು ವಿನೋದ್, ಮುಂಬೈ ಇಂಡಿಯನ್ಸ್ ತೆಕ್ಕೆಗೆ
07:17 PM (IST) Dec 23
20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ದಕ್ಷಿಣ ಆಫ್ರಿಕಾದ ದೊನೊವನ್ ಪೆರೇರಿಯಾ 50 ಲಕ್ಷ ರುಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲು
07:13 PM (IST) Dec 23
ಮತ್ತೋರ್ವ ಕನ್ನಡಿಗ ಜಗದೀಶ ಸುಚಿತ್ ಅನ್‌ಸೋಲ್ಡ್
07:12 PM (IST) Dec 23
20 ಲಕ್ಷ ರುಪಾಯಿ ಮೂಲ ಬೆಲೆಗೆ ಪ್ರೇರಕ್ ಮಂಕಡ್ ಲಖನೌ ಸೂಪರ್ ಜೈಂಟ್ಸ್ ಪಾಲು
07:11 PM (IST) Dec 23
20 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿರುವ ಮಯಾಂಕ್ ದಾಗರ್ ಖರೀದಿಸುವಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ಪೈಪೋಟಿ. ಕೊನೆಗೂ 1.80 ಕೋಟಿ ರುಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ಪಾಲು
07:10 PM (IST) Dec 23
ಕೊನೆಗೂ ಕನ್ನಡಿಗನನ್ನು ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು. 20 ಲಕ್ಷ ರುಪಾಯಿ ಮೂಲ ಬೆಲೆಗೆ ಮನೋಜ್ ಬಂಡಾಜೆ ಆರ್‌ಸಿಬಿ ತೆಕ್ಕೆಗೆ
07:05 PM (IST) Dec 23
ಐಪಿಎಲ್‌ನ ಅತ್ಯಂತ ಹಿರಿಯ ಆಟಗಾರ ಅಮಿತ್ ಮಿಶ್ರಾ ಮೂಲ ಬೆಲೆ 50 ಲಕ್ಷ ರುಪಾಯಿಗೆ ಲಖನೌ ಸೂಪರ್ ಜೈಂಟ್ಸ್ ಪಾಲು
07:02 PM (IST) Dec 23
50 ಲಕ್ಷ ರುಪಾಯಿ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಪಾಲಾದ ಪೀಯೂಸ್ ಚಾವ್ಲಾ
06:16 PM (IST) Dec 23
ಒಂದು ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ನ್ಯೂಜಿಲೆಂಡ್‌ನ ನೀಳಕಾಯದ ವೇಗಿ ಕೈಲ್ ಜೇಮಿಸನ್ ಮೂಲಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲು
06:15 PM (IST) Dec 23
ಐಪಿಎಲ್‌ನ ಯಶಸ್ವಿ ವೇಗಿಗಳಲ್ಲಿ ಒಬ್ಬರೆನಿಸಿಕೊಂಡಿರುವ ವೇಗಿ ಸಂದೀಪ್ ಶರ್ಮಾ ಕೂಡಾ ಅನ್‌ಸೋಲ್ಡ್
06:15 PM (IST) Dec 23
ಒಂದೂವರೆ ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದ ಆಸ್ಟ್ರೇಲಿಯಾದ ವೇಗಿ ರಿಲೇ ಮೆರಿಡಿತ್ ಅನ್‌ಸೋಲ್ಡ್
06:14 PM (IST) Dec 23
2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ನ್ಯೂಜಿಲೆಂಡ್ ಆಲ್ರೌಂಡರ್ ಜೇಮ್ಸ್ ನೀಶಮ್ ಅನ್‌ಸೋಲ್ಡ್
06:12 PM (IST) Dec 23
50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ವೆಸ್ಟ್ ಇಂಡೀಸ್‌ನ ರೊಮ್ಯಾರಿಯೋ ಶೆಫಾರ್ಡ್ ಮೂಲ ಬೆಲೆಗೆ ಲಖನೌ ಸೂಪರ್ ಜೈಂಟ್ಸ್ ಪಾಲು
06:11 PM (IST) Dec 23
ಒಂದೂವರೆ ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಡೇವಿಡ್ ಮಲಾನ್ ಅನ್‌ಸೋಲ್ಡ್
05:57 PM (IST) Dec 23
ಒಂದೂವರೆ ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ವಿಲ್ ಜೇಕ್ಸ್ 3.20 ಕೋಟಿ ರುಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲು
05:57 PM (IST) Dec 23
ಒಂದೂವರೆ ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಶೆರ್ಫಾನೆ ರುದರ್‌ಫೋರ್ಡ್ ಅನ್‌ಸೋಲ್ಡ್
05:56 PM (IST) Dec 23
2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡರ್ ಡುಸೇನ್ ಅನ್‌ಸೋಲ್ಡ್
05:55 PM (IST) Dec 23
2.40 ಕೋಟಿ ರುಪಾಯಿಗೆ ಮನೀಶ್ ಪಾಂಡೆ ದೆಲ್ಲಿ ಕ್ಯಾಪಿಟಲ್ಸ್ ಪಾಲು
05:52 PM (IST) Dec 23
50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಐರ್ಲೆಂಡ್ ಆಟಗಾರ ಪೌಲ್ ಸ್ಟರ್ಲಿಂಗ್ ಅನ್‌ಸೋಲ್ಡ್
05:33 PM (IST) Dec 23
ಮಿನಿ ಹರಾಜಿನಲ್ಲಿ ಇದುವರೆಗೂ ಸೋಲ್ಡ್ ಆದ ಏಕೈಕ ಕನ್ನಡಿಗ ಮಯಾಂಕ್ ಅಗರ್‌ವಾಲ್..!
05:31 PM (IST) Dec 23
ಐಪಿಎಲ್ ಹರಾಜಿನಲ್ಲಿ ಕನ್ನಡಿಗರನ್ನು ಖರೀದಿಸಲು ಐಪಿಎಲ್ ಫ್ರಾಂಚೈಸಿಗಳು ನಿರಾಸಕ್ತಿ
05:27 PM (IST) Dec 23
20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಹಿಮಾಂಶು ಶರ್ಮಾ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು