IPL 2023: ಕ್ರಿಸ್ ಗೇಲ್‌, ಎಬಿಡಿಯಿಂದ ಐಪಿಎಲ್‌ ಕಾಮೆಂಟ್ರಿ!

By Naveen KodaseFirst Published Mar 30, 2023, 4:24 PM IST
Highlights

16ನೇ ಆವೃತ್ತಿಯ ಐಪಿಎಲ್ ಟೂರ್ನಿಯು  ಮಾರ್ಚ್ 31ರಿಂದ ಆರಂಭ
ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಬಿಡಿ, ಕ್ರಿಸ್ ಗೇಲ್‌
ಇಂಗ್ಲಿಷ್ ಕಾಮೆಂಟ್ರಿ ಮಾಡಲಿರುವ ಆರ್‌ಸಿಬಿ ದಿಗ್ಗಜ ಕ್ರಿಕೆಟಿಗರು

ಮುಂಬೈ(ಮಾ.30): 16ನೇ ಆವೃತ್ತಿಯ ಐಪಿಎಲ್‌ನಲ್ಲಿ ದಿಗ್ಗಜ ಕ್ರಿಕೆಟಿಗರಾದ ಎಬಿ ಡಿ ವಿಲಿಯ​ರ್ಸ್‌ ಹಾಗೂ ಕ್ರಿಸ್‌ ಗೇಲ್‌ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಜಿಯೋ ಸಿನಿಮಾ ವೆಬ್‌/ಆ್ಯಪ್‌ನಲ್ಲಿ ಈ ಬಾರಿ 11 ಭಾಷೆಗಳಲ್ಲಿ ವೀಕ್ಷಕ ವಿವರಣೆಯೊಂದಿಗೆ ಐಪಿಎಲ್‌ ಪಂದ್ಯಗಳನ್ನು ವೀಕ್ಷಿಸಬಹುದಾಗಿದ್ದು, ಕ್ರಿಸ್ ಗೇಲ್‌ ಹಾಗೂ ಎಬಿ ಡಿವಿಲಿಯರ್ಸ್‌, ಅನಿಲ್ ಕುಂಬ್ಳೆ, ಜಹೀರ್ ಖಾನ್ ಸೇರಿದಂತೆ ಹಲವು ತಾರೆಯರು ಇಂಗ್ಲಿಷ್‌ ಕಾಮೆಂಟ್ರಿ ತಂಡದಲ್ಲಿದ್ದಾರೆ. 

ಇನ್ನು ಇದೇ ವೇಳೆ ಕರ್ನಾಟಕದ ಮಾಜಿ ಆಟಗಾರರಾದ ಎಸ್‌.ಅರವಿಂದ್‌, ಅಮಿತ್‌ ವರ್ಮಾ, ದೀಪಕ್‌ ಚೌಗಲೆ, ಎಚ್‌.ಎಸ್‌.ಶರತ್‌ ಕನ್ನಡ ಕಾಮೆಂಟ್ರಿಗೆ ಪಾದಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಟೀವಿ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲೂ ಕನ್ನಡದಲ್ಲಿ ಕಾಮೆಂಟ್ರಿ ಕೇಳಬಹುದಾಗಿದೆ. ವಿಜಯ್‌ ಭಾರದ್ವಾಜ್‌, ಶ್ರೀನಿವಾಸ್‌ ಮೂರ್ತಿ ಸೇರಿ ಇನ್ನೂ ಕೆಲ ಮಾಜಿ ಕ್ರಿಕೆಟಿಗರು ವೀಕ್ಷಕ ವಿವರಣೆ ನೀಡಲಿದ್ದಾರೆ.

16ನೇ ಆವೃತ್ತಿಯ ಇಂಡಿ​ಯನ್‌ ಪ್ರೀಮಿ​ಯರ್‌ ಲೀಗ್‌​(​ಐ​ಪಿ​ಎ​ಲ್‌​)ಗೆ ದಿನ​ಗ​ಣನೆ ಆರಂಭ​ವಾ​ಗಿದ್ದು, ಎಲ್ಲಾ ಹತ್ತೂ ತಂಡ​ಗಳು ಟೂರ್ನಿಗೆ ಸಜ್ಜು​ಗೊ​ಳ್ಳು​ತ್ತಿವೆ. ಮಾ.31ರಂದು ಅಹ​ಮ​ದಾ​ಬಾ​ದ್‌ನ ನರೇಂದ್ರ ಮೋದಿ ಕ್ರೀಡಾಂಗ​ಣ​ದಲ್ಲಿ ನಡೆ​ಯ​ಲಿ​ರುವ ಹಾಲಿ ಚಾಂಪಿ​ಯನ್‌ ಗುಜ​ರಾತ್‌ ಜೈಂಟ್ಸ್‌ ಹಾಗೂ ಮಾಜಿ ಚಾಂಪಿ​ಯನ್‌ ಚೆನ್ನೈ ಸೂಪರ್‌ ಕಿಂಗ್‌್ಸ ನಡು​ವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗ​ಲಿದೆ.

ಆ​ರ್‌​ಸಿಬಿ ಅಭಿ​ಮಾ​ನಿ​ಗ​ಳಿಗೆ ಎಬಿಡಿ ಭಾವ​ನಾ​ತ್ಮಕ ಪತ್ರ

ಬೆಂಗ​ಳೂ​ರು: ದ.ಆ​ಫ್ರಿಕಾ ಹಾಗೂ ಐಪಿ​ಎ​ಲ್‌ನ ಆರ್‌​ಸಿಬಿ ಮಾಜಿ ಆಟ​ಗಾರ ಎಬಿ ಡಿವಿಲಿ​ಯ​ರ್ಸ್‌ ಬೆಂಗ​ಳೂ​ರಿನ ಅಭಿ​ಮಾ​ನಿ​ಗಳು, ವಿರಾಟ್‌ ಕೊಹ್ಲಿ ಹಾಗೂ ಆರ್‌​ಸಿಬಿ ಸಹ ಆಟ​ಗಾ​ರರ ಬಗ್ಗೆ ಭಾವ​ನಾ​ತ್ಮಕ ಪತ್ರ ಬರೆ​ದಿ​ದ್ದಾರೆ. 

ಈ ಬಗ್ಗೆ ಇನ್‌​ಸ್ಟಾ​ಗ್ರಾಂನಲ್ಲಿ ಸಂದೇಶ ಹಂಚಿ​ಕೊಂಡಿ​ರುವ ಅವರು, ಅಭಿ​ಮಾ​ನಿ​ಗ​ಳಿಂದ ತುಂಬಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಾಲ್ಕ​ನಿಗೆ ಬಂದಾಗ ನನ್ನ ಕಣ್ಣಲ್ಲಿ ನೀರು ತುಂಬಿತ್ತು. ಎಬಿಡಿ ಎಬಿಡಿ ಎಂಬ ಅಭಿ​ಮಾ​ನಿ​ಗಳ ಜೈಕಾರ ವಿಭಿನ್ನವಾಗಿ ಕೇಳಿಸಿತು. ಇದರಿಂದಾಗಿ ನಾನು ತುಂಬಾ ಭಾವುಕನಾದೆ. ಇಂತಹ ಅದ್ಭುತ ನಗ​ರ ಹಾಗೂ ಫ್ರಾಂಚೈ​ಸಿ​ಯನ್ನು ಪ್ರತಿ​ನಿ​ಧಿ​ಸಿದ್ದಕ್ಕೆ ಹೆಮ್ಮೆ ಇದೆ ಎಂದಿ​ದ್ದಾರೆ. 2003ರಿಂದ ಇಲ್ಲಿಯವರೆಗೂ ಭಾರತದಲ್ಲಿ ಕಳೆ​ದಿ​ರುವ ಕ್ಷಣ​ಗಳು ನನ್ನ ಪಾಲಿಗೆ ವಿಶೇಷ. ಈ ದೇಶ ಹಾಗೂ ಜನ​ತೆಯ ಜೊತೆ ಆಳ​ವಾದ ಸಂಬಂಧ ಹೊಂದಿ​ದ್ದೇನೆ. ಆರ್‌​ಸಿಬಿ, ಬೆಂಗ​ಳೂ​ರಿನ ನನ್ನೆಲ್ಲಾ ಅಭಿ​ಮಾ​ನಿ​ಗಳು, ವಿಶೇಷವಾಗಿ ವಿರಾಟ್‌ ಕೊಹ್ಲಿಗೆ ಧನ್ಯ​ವಾ​ದ’ ಎಂದು ಬರೆ​ದಿ​ದ್ದಾರೆ.

16ನೇ ಐಪಿಎಲ್‌ಗೆ ಕ್ಷಣಗಣನೆ; ಅಭಿಮಾನಿಗಳಲ್ಲಿ ಜೋರಾಯ್ತು ಐಪಿಎಲ್ ಜ್ವರ

ಆಧುನಿಕ ಕ್ರಿಕೆಟ್‌ನ ಸೂಪರ್‌ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್‌ 2011ರಿಂದ 2021ರವರೆಗೆ ಒಟ್ಟು 11 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆರ್‌ಸಿಬಿ ಪರ ಒಟ್ಟು 156 ಪಂದ್ಯಗಳನ್ನಾಡಿರುವ ಎಬಿ ಡಿವಿಲಿಯರ್ಸ್‌ 37 ಅರ್ಧ ಶತಕ ಹಾಗೂ 2 ಶತಕ ಸಹಿತ ಒಟ್ಟಾರೆ 4,491 ರನ್‌ ಬಾರಿಸಿ ಮಿಂಚಿದ್ದಾರೆ. ಎಬಿ ಡಿವಿಲಿಯರ್ಸ್‌ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಎಬಿ ಡಿವಿಲಿಯರ್ಸ್‌ ಆಡಿದ ಹಲವು ಟಿ20 ಇನಿಂಗ್ಸ್‌ಗಳು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಎಬಿ ಡಿವಿಲಿಯರ್ಸ್‌, 2021ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆರ್‌ಸಿಬಿ ಪರ 150+ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದರು ಎನ್ನುವುದು ಮತ್ತೊಂದು ವಿಶೇಷ. 

click me!