IPL 2023 ಡೆಲ್ಲಿಯ ಡಗೌ​ಟ್‌​ನಲ್ಲಿ ರಿಷಭ್‌ ಪಂತ್‌ ಜೆರ್ಸಿ! ಫೋಟೋ ವೈರಲ್

Published : Apr 02, 2023, 11:03 AM IST
IPL 2023 ಡೆಲ್ಲಿಯ ಡಗೌ​ಟ್‌​ನಲ್ಲಿ ರಿಷಭ್‌ ಪಂತ್‌ ಜೆರ್ಸಿ! ಫೋಟೋ ವೈರಲ್

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಡಗೌಟ್‌ನಲ್ಲಿ ಗಮನ ಸೆಳೆದ ರಿಷಭ್‌ ಪಂತ್ ಜೆರ್ಸಿ ಅಪಘಾತದಿಂದಾಗಿ 16ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿರುವ ಪಂತ್ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಡೇವಿಡ್‌ ವಾರ್ನರ್‌

ಲಖನೌ(ಏ.02): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.  ಭೀಕರ ಕಾರು ಅಪ​ಘಾ​ತ​ಕ್ಕೀ​ಡಾಗಿ ಚಿಕಿತ್ಸೆ ಪಡೆ​ಯು​ತ್ತಿ​ರುವ ಡೆಲ್ಲಿ ಕ್ಯಾಪಿ​ಟಲ್ಸ್‌ ನಾಯಕ ರಿಷಭ್‌ ಪಂತ್‌ ಅವರ ಹೆಸ​ರಿನ ಜೆರ್ಸಿ​ಯನ್ನು ಶನಿ​ವಾರ ಲಖನೌ ಸೂಪರ್‌ ಜೈಂಟ್ಸ್‌ ವಿರು​ದ್ಧದ ಪಂದ್ಯ​ದಲ್ಲಿ ಡೆಲ್ಲಿ ತಂಡ ತನ್ನ ಡಗ್‌ ​ಔ​ಟ್‌ ಮೇಲೆ ತೂಗು ​ಹಾ​ಕಿತ್ತು. ಡೆಲ್ಲಿ ಫ್ರಾಂಚೈಸಿಯ ಈ ನಡೆಗೆ ಸಾಮಾ​ಜಿಕ ತಾಣ​ಗ​ಳಲ್ಲಿ ಭಾರೀ ಪ್ರಶಂಸೆ ವ್ಯಕ್ತ​ವಾ​ಗಿ​ದೆ.

ಕಳೆದ ತಿಂಗಳಷ್ಟೇ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ರಿಷಭ್ ಪಂತ್, ಮುಂಬರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದಷ್ಟೇ ಅಲ್ಲದೇ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಸದ್ಯದ ಚೇತರಿಸಿಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ಆದಷ್ಟು ಬೇಗ ಭಾರತ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

ಕಳೆದ ವರ್ಷದ ಕೊನೆಯಲ್ಲಿ ತಮ್ಮ ಮರ್ಸಿಡೀಸ್‌ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಇದಾದ ಬಳಿಕ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದುಕೊಂಡು ಮನೆಗೆ ಡಿಸ್ಚಾರ್ಜ್ ಆಗಿದ್ದಾರೆ.

ವುಡ್‌ ದಾಳಿಗೆ ಡೆಲ್ಲಿ ದಂಗು!

ಲಖ​ನೌ: ಕೈಲ್‌ ಮೇಯ​ರ್ಸ್‌ ಬ್ಯಾಟಿಂಗ್‌ ಅಬ್ಬರ ಹಾಗೂ ಮಾರ್ಕ್ ವುಡ್‌ ಮಾರ​ಕ ದಾಳಿ ನೆರ​ವಿ​ನಿಂದ ಡೆಲ್ಲಿ ಕ್ಯಾಪಿ​ಟಲ್ಸ್‌ ವಿರು​ದ್ಧದ ಪಂದ್ಯ​ದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ 50 ರನ್‌ ಗೆಲುವು ಸಾಧಿ​ಸಿ 16ನೇ ಆವೃತ್ತಿ ಐಪಿ​ಎಲ್‌ನಲ್ಲಿ ಶುಭಾ​ರಂಭ ಮಾಡಿದೆ. ರಿಷಭ್‌ ಪಂತ್‌ ಅನು​ಪ​ಸ್ಥಿ​ತಿ​ಯಲ್ಲಿ ಬ್ಯಾಟಿಂಗ್‌​ನಲ್ಲಿ ದುರ್ಬ​ಲ​ವಾ​ದಂತೆ ಕಂಡು​ಬಂದ ಡೆಲ್ಲಿ ಯಾವುದೇ ಹೋರಾಟ ನಡೆ​ಸದೆ ಪಂದ್ಯ ಬಿಟ್ಟು​ಕೊ​ಟ್ಟಿ​ತು.

IPL 2023 ಸಾಕಾಗಲಿಲ್ಲ ವಾರ್ನರ್ ಹೋರಾಟ, ಲಖನೌ ವಿರುದ್ಧ ಮುಗ್ಗರಿಸಿದ ಡೆಲ್ಲಿ ಕ್ಯಾಪಿಟಲ್ಸ್!

ಮೊದಲು ಬ್ಯಾಟಿಂಗ್‌ಗೆ ಇಳಿ​ಸ​ಲ್ಪಟ್ಟ ಲಖನೌ ಸೂಪರ್ ಜೈಂಟ್ಸ್‌ 6 ವಿಕೆ​ಟ್‌ಗೆ 193 ರನ್‌ ಕಲೆ​ಹಾ​ಕಿತು. ದೊಡ್ಡ ಮೊತ್ತ ನೋಡಿಯೇ ಕಂಗಾ​ಲಾದ ಡೆಲ್ಲಿ 9 ವಿಕೆ​ಟ್‌ಗೆ 143 ರನ್‌ ಗಳಿಸಿ ಸೋಲೊ​ಪ್ಪಿ​ಕೊಂಡಿತು.

ಟರ್ನಿಂಗ್‌ ಪಾಯಿಂಟ್‌

14 ರನ್‌ ಗಳಿ​ಸಿ​ದ್ದಾಗ ಜೀವ​ದಾನ ಪಡೆದ ಮೇಯ​ರ್‍ಸ್ 73 ರನ್‌ ಸಿಡಿಸಿ ಲಖನೌ ದೊಡ್ಡ ಮೊತ್ತ ಕಲೆ​ಹಾ​ಕ​ಲು ಕಾರ​ಣ​ರಾ​ದರು. ಬಳಿಕ ಡೆಲ್ಲಿ ಮೊದಲ 4 ಓವ​ರಲ್ಲಿ 40 ರನ್‌ ಸಿಡಿ​ಸಿ​ದರೂ ನಂತ​ರ​ದ 5 ಓವ​ರಲ್ಲಿ ಕೇವಲ 18 ರನ್‌ಗೆ 3 ಪ್ರಮುಖ ವಿಕೆಟ್‌ ಕಳೆ​ದು​ಕೊಂಡಿತು. ಇದು ತಂಡ​ದ ಸೋಲಿಗೆ ಪ್ರಮುಖ ಕಾರಣ.

ಐಪಿಎಲ್‌: ಶಕೀಬ್‌, ಲಿಟನ್‌ ಆಗಮನ ಇನ್ನಷ್ಟು ವಿಳಂಬ!

ಢಾಕಾ: ಕೋಲ್ಕತಾ ನೈಟ್‌ರೈಡ​ರ್ಸ್‌ಗೆ ಇನ್ನೂ ಕೆಲ ಪಂದ್ಯಗಳಿಗೆ ಶಕೀಬ್‌ ಅಲ್‌ ಹಸನ್‌ ಹಾಗೂ ಲಿಟನ್‌ ದಾಸ್‌ರ ಸೇವೆ ಲಭ್ಯವಾಗುವುದಿಲ್ಲ. ಐರ್ಲೆಂಡ್‌ ವಿರುದ್ಧದ ಟಿ20 ಸರಣಿ ಶುಕ್ರವಾರ ಮುಕ್ತಾಯಗೊಂಡ ಬಳಿಕ ಇವರಿಬ್ಬರು ಭಾರತಕ್ಕೆ ಪ್ರಯಾಣಿಸಬೇಕಿತ್ತು. ಆದರೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ(ಬಿಸಿಬಿ) ಇವರಿಬ್ಬರನ್ನು ಐರ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯಕ್ಕೂ ಆಯ್ಕೆ ಮಾಡಿದೆ. ಪಂದ್ಯ ಏಪ್ರಿಲ್ 4ರಿಂದ ಆರಂಭಗೊಳ್ಳಲಿದೆ. ಶಕೀಬ್‌ ಅಲ್ ಹಸನ್ ಹಾಗೂ ಲಿಟನ್‌ ದಾಸ್ ಏಪ್ರಿಲ್ 10ರ ವೇಳೆಗೆ ಕೆಕೆಆರ್‌ ತಂಡ ಕೂಡಿಕೊಳ್ಳುವ ನಿರೀಕ್ಷೆ ಇದೆ.

ಜಸ್ಪ್ರೀತ್ ಬುಮ್ರಾ ಬದಲಿಗೆ ಮುಂಬೈಗೆ ಸಂದೀಪ್‌ ವಾರಿಯರ್‌

ಮುಂಬೈ: ಇತ್ತೀಚೆಗೆ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ, ಐಪಿಎಲ್‌ನಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಅವರ ಬದಲು ಮುಂಬೈ ಇಂಡಿಯನ್ಸ್‌, ಕೇರಳ ವೇಗಿ ಸಂದೀಪ್‌ ವಾರಿಯರ್‌ರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. 2021ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಸಂದೀಪ್‌, 69 ದೇಸಿ ಟಿ20 ಪಂದ್ಯಗಳನ್ನಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!