IPL 2023: ಗುಜರಾತ್ ಟೈಟಾನ್ಸ್ ಚಾಲೆಂಜ್ ಗೆಲ್ಲುತ್ತಾ ಡೆಲ್ಲಿ ಕ್ಯಾಪಿಟಲ್ಸ್‌..?

Published : Apr 04, 2023, 11:14 AM IST
IPL 2023: ಗುಜರಾತ್ ಟೈಟಾನ್ಸ್ ಚಾಲೆಂಜ್ ಗೆಲ್ಲುತ್ತಾ ಡೆಲ್ಲಿ ಕ್ಯಾಪಿಟಲ್ಸ್‌..?

ಸಾರಾಂಶ

ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್‌ ಡೆಲ್ಲಿಗೆ ತವರಿನಲ್ಲಿ ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ ಸವಾಲು ಗುಜರಾತ್ ಸವಾಲು ಮೆಟ್ಟಿ ನಿಲ್ಲುತ್ತಾ ಡೇವಿಡ್ ವಾರ್ನರ್ ಪಡೆ?

ನವ​ದೆ​ಹ​ಲಿ(ಏ.04): ಚೆನ್ನೈ ವಿರುದ್ಧದ ಗೆಲು​ವಿ​ನೊಂದಿಗೆ 16ನೇ ಆವೃತ್ತಿ ಐಪಿ​ಎ​ಲ್‌ಗೆ ಕಾಲಿ​ಟ್ಟಿ​ರುವ ಹಾಲಿ ಚಾಂಪಿ​ಯನ್‌ ಗುಜ​ರಾತ್‌ ಟೈಟಾನ್ಸ್‌ ಮಂಗ​ಳ​ವಾರ ಡೆಲ್ಲಿ ಕ್ಯಾಪಿ​ಟಲ್ಸ್‌ ವಿರುದ್ಧ ಸೆಣ​ಸಾ​ಡ​ಲಿದ್ದು, ಮತ್ತೊಂದು ಜಯ​ದೊಂದಿಗೆ ಅಂಕ​ಪ​ಟ್ಟಿ​ಯಲ್ಲಿ ಅಗ್ರ​ಸ್ಥಾನ ಕಾಯ್ದು​ಕೊ​ಳ್ಳುವ ನಿರೀ​ಕ್ಷೆ​ಯ​ಲ್ಲಿದೆ. ಇನ್ನೊಂದೆಡೆ ಡೆಲ್ಲಿ ತಂಡ ಲಖನೌ ಸೂಪರ್ ಜೈಂಟ್ಸ್ ವಿರು​ದ್ಧದ ಹೀನಾಯ ಸೋಲಿನ ಆಘಾ​ತ​ದಿಂದ ಹೊರ​ಬಂದು ಜಯದ ಖಾತೆ ತೆರೆ​ಯುವ ಗುರಿ ಇಟ್ಟು​ಕೊಂಡಿ​ದೆ.

ರಿಷಭ್‌ ಪಂತ್‌ ಅನು​ಪ​ಸ್ಥಿ​ತಿ​ಯಲ್ಲಿ ಕಣ​ಕ್ಕಿ​ಳಿ​ಯು​ತ್ತಿ​ರುವ ಡೆಲ್ಲಿಗೆ ಅನು​ಭವಿ ಭಾರ​ತೀಯ ವೇಗಿ​ಗಳ ಅನು​ಪ​ಸ್ಥಿ​ತಿಯೂ ಕಾಡು​ತ್ತಿದೆ. ದಕ್ಷಿಣ ಆ​ಫ್ರಿಕಾದ ಏನ್ರಿಚ್‌ ನೋಕಿಯಾ, ಲುಂಗಿ ಎನ್‌​ಗಿಡಿ ತಂಡಕ್ಕೆ ಸೇರಿ​ಸಿ​ಕೊಂಡಿ​ದ್ದರೂ ಈ ಪಂದ್ಯ​ದಲ್ಲಿ ಆಡು​ತ್ತಾರೋ ಇಲ್ಲವೋ ಎಂಬುದು ಇನ್ನಷ್ಟೇ ಸ್ಪಷ್ಟ​ವಾ​ಗ​ಬೇ​ಕಿದೆ. ವೇಗಿ​ಗ​ಳಾದ ಖಲೀಲ್‌ ಅಹ್ಮದ್‌, ಚೇತನ್‌ ಸಕಾ​ರಿಯಾ, ಮುಕೇಶ್‌ ಕುಮಾ​ರ್‌ ನಿರೀಕ್ಷಿತ ಪ್ರದ​ರ್ಶನ ನೀಡದ ಹೊರತು ತಂಡಕ್ಕೆ ಗೆಲುವು ಕಷ್ಟ​ವಿದೆ. ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌ ಮೇಲೆ ತಂಡ ಹೆಚ್ಚಿನ ನಿರೀ​ಕ್ಷೆ​ ಇಟ್ಟಿದೆ.

ಬ್ಯಾಟಿಂಗ್‌ ವಿಭಾ​ಗ​ದಲ್ಲಿ ನಾಯಕ ಡೇವಿಡ್‌ ವಾರ್ನ​ರ್‌ಗೆ ಸೂಕ್ತ ಬೆಂಬ​ಲದ ಅಗ​ತ್ಯ​ವಿದ್ದು, ಮಿಚೆಲ್‌ ಮಾರ್ಷ್ ಆಲ್ರೌಂಡ್‌ ಪ್ರದ​ರ್ಶನ ಟ್ರಂಪ್‌ ಕಾರ್ಡ್‌ ಎನಿ​ಸ​ಬ​ಹುದು. ಯುವ ಬ್ಯಾಟ​ರ್‌​ಗ​ಳಾದ ಪೃಥ್ವಿ ಶಾ, ಸರ್ಫ​ರಾಜ್‌ ಖಾನ್‌ ಜವಾ​ಬ್ದಾ​ರಿ​ಯುತ ಆಟವಾ​ಡ​ಬೇ​ಕಿದೆ. ಮನೀಶ್‌ ಪಾಂಡೆ ಕೂಡಾ ಅವ​ಕಾ​ಶದ ನಿರೀ​ಕ್ಷೆ​ಯ​ಲ್ಲಿ​ದ್ದಾ​ರೆ.

ಮತ್ತೊಂದೆ​ಡೆ ಚೆನ್ನೈ ವಿರು​ದ್ಧದ ಅಭೂ​ತ​ಪೂರ್ವ ಪ್ರದ​ರ್ಶ​ನದ ಹುಮ್ಮ​ಸ್ಸಿ​ನ​ಲ್ಲಿ​ರುವ ಗುಜ​ರಾತ್‌ ಟೈಟಾನ್ಸ್‌ ಮತ್ತೊಮ್ಮೆ ಚಾಂಪಿ​ಯನ್‌ ಆಟ ಪ್ರದ​ರ್ಶಿ​ಸಲು ಕಾಯು​ತ್ತಿದೆ. ಶುಭ್‌ಮನ್‌ ಗಿಲ್‌ ಉತ್ತಮ ಫಾರ್ಮ್‌ನಲ್ಲಿದ್ದು, ರಶೀದ್‌ ಖಾನ್‌ ತಂಡದ ಟ್ರಂಪ್‌ಕಾರ್ಡ್‌ ಎನಿ​ಸಿ​ದ್ದಾರೆ. ಬೌಲಿಂಗ್‌​ ಪಡೆ​ಯ​ನ್ನು ಮೊಹ​ಮದ್‌ ಶಮಿ ಮುನ್ನ​ಡೆ​ಸ​ಲಿ​ದ್ದು, ಅಲ್ಜಾರಿ ಜೋಸೆಫ್‌ರನ್ನು ಡೆತ್‌ ಓವರ್‌ಗಳಲ್ಲಿ ಎದುರಿಸುವುದು ಡೆಲ್ಲಿಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು.

ಡೇವಿಡ್‌ ಮಿಲ್ಲರ್‌ ತಂಡ ಸೇರ್ಪ​ಡೆ​ಗೊಂಡಿದ್ದರೂ ಈ ಪಂದ್ಯಕ್ಕೆ ಲಭ್ಯವಿರುವ ಬಗ್ಗೆ ಖಚಿ​ತ​ತೆ​ಯಿಲ್ಲ. ಕೊನೆ ಕ್ಷಣ​ದಲ್ಲಿ ಅಬ್ಬ​ರಿಸಿ ಹಲವು ಪಂದ್ಯ​ಗ​ಳನ್ನು ಗೆಲ್ಲಿ​ಸಿ​ರುವ ರಾಹುಲ್‌ ತೆವಾ​ಟಿಯಾ ಉಪಸ್ಥಿತಿ ತಂಡಕ್ಕೆ ಪ್ಲಸ್‌ ಪಾಯಿಂಟ್‌. ಹಾರ್ದಿಕ್‌ ಪಾಂಡ್ಯ ನಾಯ​ಕ​ತ್ವದ ಜೊತೆ ಉತ್ತಮ ಪ್ರದ​ರ್ಶನ ತೋರ​ಬೇ​ಕಾದ ಒತ್ತ​ಡ​ದ​ಲ್ಲಿದ್ದು, ಕೇನ್ ವಿಲಿ​ಯ​ಮ್ಸನ್‌ ಬದಲು ಮ್ಯಾಥ್ಯೂ ವೇಡ್‌ ಆಡುವ ಹನ್ನೊಂದರ ಬಳ​ಗ​ದಲ್ಲಿ ಸ್ಥಾನ ಗಿಟ್ಟಿ​ಸ​ಬ​ಹು​ದು.

IPL 2023: ಜಯದ ಖಾತೆ ತೆರೆದ ಚೆನ್ನೈ ಸೂಪರ್‌ ಕಿಂಗ್ಸ್‌, ಲಖನೌ ಹೋರಾಟ ವ್ಯರ್ಥ

ಐಪಿಎಲ್ ಇತಿಹಾಸದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೇವಲ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಗುಜರಾತ್ ಟೈಟಾನ್ಸ್‌ ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ಟೈಟಾನ್ಸ್ ಎದುರು ಗೆದ್ದು, ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಗುಜರಾತ್‌ ಟೈಟಾನ್ಸ್: ಶುಭ್‌ಮನ್ ಗಿಲ್‌, ವೃದ್ದಿಮಾನ್ ಸಾಹ, ಮ್ಯಾಥ್ಯೂ ವೇಡ್‌, ಹಾರ್ದಿಕ್‌ ಪಾಂಡ್ಯ(ನಾಯಕ), ವಿಜಯ್‌ ಶಂಕರ್, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ಮೊಹಮ್ಮದ್ ಶಮಿ, ಜೋಶ್ ಲಿಟ್ಲ್, ಯಶ್‌ ದಯಾಳ್‌, ಅಲ್ಜಾರಿ ಜೋಸೆಫ್‌.

ಡೆಲ್ಲಿ: ಡೇವಿಡ್ ವಾರ್ನರ್‌(ನಾಯಕ), ಪೃಥ್ವಿ ಶಾ, ಮಿಚೆಲ್‌ ಮಾರ್ಷ್‌, ರಿಲೇ ರುಸ್ಸೌ, ಸರ್ಫರಾಜ್‌ ಖಾನ್, ರೋವ್ಮನ್ ಪೋವೆಲ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ಚೇತನ್ ಸಕಾರಿಯಾ, ಖಲೀಲ್‌ ಅಹಮ್ಮದ್, ಮುಕೇ​ಶ್‌ ಚೌಧರಿ.

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಹಾಗೂ ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಅರುಣ್‌ ಜೇಟ್ಲಿ ಕ್ರೀಡಾಂಗ​ಣದ ಪಿಚ್‌ ಸ್ಪಿನ್‌ ಸ್ನೇಹಿ​ಯಾ​ಗಿದ್ದು, ಇಲ್ಲಿ ದೊಡ್ಡ ಮೊತ್ತ ದಾಖ​ಲಾದ ಉದಾ​ಹ​ರಣೆ ಕಡಿಮೆ. ಮೊದಲು ಬ್ಯಾಟ್‌ ಮಾಡಿದ ತಂಡ 170+ ರನ್‌ ಕಲೆ ಹಾಕಿ​ದರೆ ಚೇಸಿಂಗ್‌ ಕಷ್ಟ​ವಾ​ಗ​ಬ​ಹುದು. ಟಾಸ್‌ ಗೆಲ್ಲುವ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿದರೆ ಅಚ್ಚ​ರಿ​ಯಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌